August 31, 2012

ನಕ್ಕು ಬಿಡಿ................5


ಸರ್ದಾರ್ಜಿಗಳು  ಯಾಕೆ ದಡ್ಡರು ?

 ಸರ್ದಾರ್ಜಿಗೆ ಒಂದು ಪ್ರಶ್ನೆಗೆ ಉತ್ತರ ಬೇಕಾಗಿತ್ತು.  ಹತ್ತಿರದ ಬೀಡಿ ಅಂಗಡಿಯವನಲ್ಲಿ ವಿಚಾರಿಸಿದ.
" ಎಲ್ಲರು ಸರ್ದಾರ್ಜಿನ ದಡ್ಡರು ಅಂತಾರೆ, ಯಾಕೆ?"
" ಹಾಗೇನಿಲ್ಲ,  ನೀವು ಕೇಳಿದ ಪ್ರಶ್ನೆಗೆ ಸರಿ ಉತ್ತರ ಕೊಟ್ಟರೆ ಯಾರು ನಿಮ್ಮನ್ನ ದಡ್ಡರು ಅನ್ನೋಲ್ಲ" ಎಂದ ಅಂಗಡಿಯವ.
" ಹಾಗಾದರೆ ಪ್ರಶ್ನೆ ಕೇಳು ಉತ್ತರ ಕೊಡ್ತೀನಿ." ಎಂದ ಸರ್ದಾರ್ಜಿ.
" ತುಂಬಾ ಸಿಂಪಲ್ಲು. ನಮ್ಮ ತಂದೆಗೆ ಇಬ್ಬರು ಮಕ್ಕಳು, ಒಬ್ಬ ಡೆಲ್ಲಿಲಿ ಇದಾನೆ. ಹಾಗಾದರೆ ಇನ್ನೊಬ್ಬ ಯಾರು?" ಎಂದ.
ತುಂಬಾ ಹೊತ್ತು ಯೋಚಿಸಿ  "ಗೊತ್ತಾಗಲಿಲ್ಲ " ಎಂದ.
" ನೋಡು ಅದಕ್ಕೆ ನಿಮ್ಮನ್ನ ದಡ್ಡರು ಅನ್ನೋದು, ಒಬ್ಬ ಡೆಲ್ಲಿ ನಲ್ಲಿ ಇದ್ದರೆ ಮತ್ತೊಬ್ಬ ನಾನೇ ಅಲ್ಲವೇ? " ಎಂದು ನಕ್ಕ.
ಸರ್ದಾರ್ಜಿಗೆ ಬಹಳ ಬೇಜಾರಾಯಿತು. ಪೆಚ್ಚುಮೋರೆ ಹಾಕಿ ಹೋರಟ. ದಾರಿಯಲ್ಲಿ  ಮತ್ತೊಬ್ಬ ಸರ್ದಾಜಿ ಸಿಕ್ಕ. ತಕ್ಷಣ ಮೊದಲನೇ ಸರ್ದಾರ್ಜಿಗೆ ಖುಷಿಯಾಯಿತು. ಅವನನ್ನ ನಿಲ್ಲಿಸಿ " ನಾನೊಂದು ಸಿಂಪಲ್ ಪ್ರಶ್ನೆ ಕೇಳುತ್ತಿನಿ, ಉತ್ತರ ಹೇಳುತ್ತಿಯಾ ? " ಎಂದ.  "ಆಗಲಿ " ಎಂದು ತಲೆ ಆಡಿಸಿದ
"ತುಂಬಾ ಸಿಂಪಲ್ಲು. ನಮ್ಮ ತಂದೆಗೆ ಇಬ್ಬರು ಮಕ್ಕಳು, ಒಬ್ಬ ಡೆಲ್ಲಿಲಿ ಇದಾನೆ. ಹಾಗಾದರೆ ಇನ್ನೊಬ್ಬ ಯಾರು?"  ಎಂದ
ಅವನು ತುಂಬಾ ಹೊತ್ತು ಯೋಚಿಸಿ  " ಗೊತ್ತಾಗಲಿಲ್ಲ " ಎಂದು ತಲೆ ಆಡಿಸಿದ.
" ಇಷ್ಟು ಗೊತ್ತಾಗಲಿಲ್ಲವ! ಅದಕ್ಕೆ ಸರದಾರ್ಜಿಗಳನ್ನ ದಡ್ಡರು ಅನ್ನೋದು! ಆ ಇನ್ನೊಬ್ಬ ಯಾರು ಗೊತ್ತ ?  ಅದೇ ಬೀಡಿ  ಅಂಗಡಿಯವನು."  ಎಂದು ಬೀಗಿದ.




2 comments:

  1. ಒಳ್ಳೆಯ ನಗೆ ಟಾನಿಕ್.. ಲೇಖನ ಓದಲಿ.... ನಗು ನಗುತಾ ನಲಿ ನಲಿ.

    ReplyDelete
  2. ಆತ್ಮೀಯ ಶ್ರೀಕಾಂತ
    ನಗುನಗುತಾ ನಲಿನಲಿ ಏನೇ ಆಗಲಿ, ನಗಿಸುತ್ತಾ ನಲಿನಲಿ ಎನೇಬರಲಿ. ಇದೆ ಅಲ್ಲವೇ ಜೀವನ, ಧನ್ಯವಾದ

    ReplyDelete