August 28, 2012

ನಕ್ಕು ಬಿಡಿ .............3


ಊಟ ಹಾಕಿ !

" ಅಮ್ಮಾ ,  ಊಟ ಹಾಕಿ ತಾಯಿ!" ಎಂದು ಕೆಟ್ಟದಾಗಿ ಮನೆಮುಂದೆ ಬಿಕ್ಷುಕ ಅರಚಿದ.
" ಆಯ್ತು , ಅಕ್ಕಿ, ಬೆಳೆ, ತರಕಾರಿ ತಂದುಕೊಡು ಬೇಯಿಸಿ ಹಾಕ್ತೀನಿ " ಎಂದು ಅದಕ್ಕಿಂತ ಜೋರಾಗಿ ಕಿರುಚಿದಳು
 ಬಿಕ್ಷುಕ ನಾಪತ್ತೆ

ಬುದ್ಧಿ ಬರೋದು ?

ಗಂಡ ಹೆಂಡತಿ ಜಗಳ ತಾರಕಕ್ಕೆ ಏರಿತ್ತು.
" ನಾನು ಸತ್ತಮೇಲೆ ಕಣ್ರೀ ನಿಮಗೆ ಬುದ್ಧಿ  ಬರೋದು!  ಅಲ್ಲಿವರೆಗೆ ನಿಮಗೆ ಬುದ್ಧಿ ಬರೋಲ್ಲ. "  ಎಂದು ಮಡದಿ ಎಂದಿನಂತೆ ಕಿರುಚಾಡಿದಳು. 
" ನಿತ್ಯಾನು  ಇದೆ ಮಾತು ಹೇಳ್ತಾನೆ ಇದಿಯಾ." ಎಂದು ಗಂಡ ನಿರಾಶೆಯಿಂದ ಹೇಳಿದ
" ಮತ್ತಿನ್ನೇನು ಹೇಳೋದು ಹೇಳಿ? " ಎಂದು ಹೆಂಡತಿ ಕೂಗಿದಳು
" ನನಗೆ ಯಾವಾಗ ಬುದ್ಧಿ ಬರುತ್ತೆ ? ಅಂತ ಒಂದು ದಿನ ಅಥವಾ ತಾರೀಖಾದರು ಹೇಳಬಾರದೇನೆ? "  ಎಂದು ಕಾತುರನಾಗಿ ಪ್ರಶ್ನಿಸಿದ ಪತಿ ಮಹಾರಾಯ.


No comments:

Post a Comment