August 22, 2012


ಬಾಯಿ ತೆರೆಯೋ ಹಾಗಿಲ್ಲ !!!!!!!!!!!

ಒಬ್ಬಾತ ಇಸ್ಲಾಮಬಾದಿನಿಂದ  ಕರಾಚಿಗೆ ಬಂದು ಅಲ್ಲಿನ   ದಂತ ವೈದ್ಯರ ಬಳಿಗೆ ಹೋದ.  ಪರೀಕ್ಷೆ ಮಾಡಿದ ದಂತ ವೈದ್ಯ
 " ಇಸ್ಲಾಮಾಬಾದ್ನಿಂದ  ಕರಾಚಿತನಕ ಹಲ್ಲು ಕೀಳಿಸಲು  ಬಂದಿರುವಂತೆ ಕಾಣುತ್ತದೆ, ಏಕೆ?  ಅಲ್ಲಿ ಒಳ್ಳೆ ದಂತ ವೈದ್ಯರಿಲ್ಲವೋ?" ಎಂದು ಪ್ರಶ್ನಿಸಿದ. 
 " ಹೌದು, ದಂತ ವೈದ್ಯರೆನೋ ಇದ್ದಾರೆ , ಆದರೆ.........  ಇಸ್ಲಾಮಾಬಾದಿನಲ್ಲಿ ಯಾವುದಕ್ಕೂ ಬಾಯಿ ತೆರೆಯೋ ಹಾಗಿಲ್ಲ." ಎಂದ 



ವರ ಬೇಕು? 

   ಗುಂಡ ತನ್ನ ಮಗಳ ಮದುವೆ ಮಾಡಲು ವರಾನ್ವೇಷಣೆ ಪ್ರಾರಂಭ ಮಾಡಿದ.  ಸುಮಾರು ವರಗಳೇನೋ  ಬಂದರೂ, ಅವರಿಗೆ ಒಪ್ಪಿಗೆಯಾದರೆ ಇವರಿಗಿಲ್ಲ,  ಇವರಿಗಾದರೆ ಅವರಿಗಿಲ್ಲ .  ಹೀಗಾಗಿ ಕಂಕಣಭಾಗ್ಯ ದೊರೆಯಲೇ ಇಲ್ಲ. ಗುಂಡ ಬೇಸತ್ತು ಹೋದ .  ಮನೆಯವರ ಕಾಟ ತಡೆಯಲಾರದೆ ಕಾಡಿಗೆ ಹೋಗಿ ತಪಸ್ಸಿಗೆ ಕುಳಿತ.  ಧೀರ್ಘ ತಪಸ್ಸಿನ ಬಳಿಕ ದೇವರು ಪ್ರತ್ಯಕ್ಷವಾಗಿ " ನಿನಗೇನೂ ವರ ಬೇಕು? ಕೇಳು ಗುಂಡಾ." ಎಂದ. " ಅಯ್ಯೋ ,  ವರ ಬೇಕಾಗಿರುವುದು ನನಗಲ್ಲ, ನನ್ನ ಮಗಳಿಗೆ.  ಅದನ್ನ ಕೊಡು ಮಾರಾಯ, ನೆಮ್ಮದಿಯಾಗಿ ಮನೆಗೆ ಹೋಗುತ್ತೇನೆ " ಎಂದ. 

3 comments:

  1. ಹಲ್ಲು ಕೀಳಿಸಲು ಕರಾಚಿವರೆಗೆ ಬರೋ ಬದಲು ಇಸ್ಲಾಮಾಬಾದಿನಲ್ಲೇ ಬಾಯಿ ಬಿಟ್ಟಿದ್ರೆ ರೈಲಿನ ಖರ್ಚೂ ಉಳೀತಿರಲಿಲ್ವೇ!!!

    ReplyDelete
    Replies
    1. ಆತ್ಮೀಯ ರಜನೀಶ,
      ಒಂದು ಹಲ್ಲಿನ ಬದಲು ಎಲ್ಲ ಹಲ್ಲುಗಳು ಹೋದೀತೆಂಬ ಭಯ ಅಲ್ಲವೇ?

      Delete