August 11, 2012

ಶೀಟಿ ಹೊಡೆಯೋದು.



               ಬಸ್ಸಿನಿಂದ ಇಳಿಯುವಾಗ ತಡಮಾಡಿದ ಇಳಿವಯಸ್ಸಿನ ಮುದುಕಿಗೆ  ಕಂಡಕ್ಟರ್ ಜೋರು ಮಾಡುತ್ತಾ " ಅದೆಷ್ಟು ಹೊತ್ತು ಇಳಿತಿಯಾ?  ನಾನು ಶೀಟಿ ಹೊಡೆದದ್ದು ಕೇಳಲ್ಲಿಲ್ಲವೇನು? ಇಳಿ ಬೇಗ. "
               ಇಳಿದ ಮುದುಕಿ, ಕಂಡಕ್ಟರ್ನನ್ನು  ದುರುಗುಟ್ಟಿ ನೋಡಿ " ಶೀಟಿ ಹೊಡೆದರೆ ತಿರುಗಿನೋಡೋ ಕಾಲಎಲ್ಲ ಆಗಲೇ ಮುಗಿದು ಹೋಯಿತು. ಈಗ ಏನಿದ್ದರು ಶೀಟಿ ಹೊಡೆಯೋದು ಅಷ್ಟೇ ಬಾಕಿ ಇರೋದು " ಎಂದು ತೋರು ಬೆರಳನ್ನು ಮೇಲಕ್ಕೆ ತೋರಿಸಿದಳು.
                ತನ್ನ ತಪ್ಪಿನ ಅರಿವಾಗಿದ್ದರು ಏನೂ ಮಾಡಲು ಸಾಧ್ಯವಿರಲಿಲ್ಲ, ಕಾಲ ಮಿಂಚಿ ಹೋಗಿತ್ತು. ಬಾಯಿಂದ ತಪ್ಪು ಮಾತು ಉದುರಿತ್ತು. ತಲೆ ತಗ್ಗಿಸಿ ರೈಟ್ .......ಎಂದು ಬಾಗಿಲು ಎಳೆದುಕೊಂಡ ಕಂಡಕ್ಟರ್.

2 comments:

  1. ಬಂದೋರೆಲ್ಲಾ ಶೀಟಿ ಹೊಡೀಲೇಬೇಕು.

    ಫ್ರುಂಯ್...ಫ್ರೂಂಯ್... ರ್‍ರಯ್ಯಾ!!!

    ReplyDelete
    Replies
    1. ಶೀಟಿ ಹೇಗೆ ಹೊಡೆಯುತ್ತಾರೆ? ಎನ್ನುವುದೇ ಈಗಿನ ಸಮಸ್ಯೆ............

      Delete