December 19, 2012

ದೊಡ್ಡವರ ದಾರಿ ..........................16


26  11  2008  ರ ದಿನವನ್ನು ನೆನಸಿಕೊಂಡರೆ ಭಯವಾಗುತ್ತೆ. ಮನಸ್ಸಿಗೆ ಒಂದು ರೀತಿಯ ಹಿಂಸೆಯಾಗುತ್ತೆ. ಅಸಹಾಯಕರ  ಮತ್ತು  ಅಮಾಯಕರ ಮೇಲೆ ತಮ್ಮ ಪೌರುಷ ತೋರಿ, ಗುಂಡಿನ ಸುರಿಮಳೆಗೈದ ಆತಂಕವಾದಿಗಳ ಘೋರ ಕೃತ್ಯದ ಮೇಲೆ ಸಹಿಸಲಾಗದ ಸಿಟ್ಟು ಬರುತ್ತದೆ.  ನಮ್ಮ ಕೈಯಲ್ಲಿ ಏನೂ ಮಾಡಲಾಗದ ಸ್ತಿತಿ ಕಂಡು ಜಿಗುಪ್ಸೆಯೂ ಕಾಡುತ್ತದೆ. ಈ ಪಾಶವೀ ಕೃತ್ಯ ಎಸಗಿ ಕೊನೆಗೆ ಸಿಕ್ಕಿಬಿದ್ದ ಏಕೈಕ ಆತಂಕವಾದಿ 'ಕಸಬ' ನನ್ನು ವಿಚಾರಣೆಗೆ ಒಳಪಡಿಸಿ ಕೋಟ್ಯಾಂತರ ರುಪಾಯಿ ಅವನ ರಕ್ಷಣೆಗೆ   ಖರ್ಚುಮಾಡಿ ನಂತರ ಗಲ್ಲಿಗೆ ಏರಿಸಿದ್ದು ಈಗ ಇತಿಹಾಸವಾಗಿದೆ.

ಕಸಬನನ್ನು ಗಲ್ಲಿಗೇರಿಸಿದ ದಿನ ತುಂಬಾ ಜನ ಸಂತೋಷ ಪಟ್ಟರು, ಸಿಹಿ ವಿತರಣೆ ಮಾಡಿದರು, ರಾಜಕಾರಣಿಗಳು ತಮ್ಮ ಪಕ್ಷದ ಸಾಧನೆಯೆಂದು ಕೊಚ್ಚಿಕೊಂದವು, ಪ್ರಚಾರ ಮಾಧ್ಯಮವಂತು ತಲೆಚಿಟ್ಟು ಹಿಡಿಸಿಬಿಟ್ಟವು.  ಪತ್ರಿಕೆಯವರಂತು ಕಸಬನನ್ನು ಹೀರೋ ತರಹ ಬಿಂಬಿಸಿ ಪೂರ್ಣ ಪುಟದ ಲೇಖನ ಮತ್ತು ಫೋಟೋಗಳೊಂದಿಗೆ ಪ್ರಕಟ ಮಾಡಿಬಿಟ್ಟವು.  ಇದರಿಂದ ಆದ ಪ್ರಯೋಜನದ ಬಗ್ಗೆ ಮಾತನಾಡುವುದಕ್ಕಿಂತ ಸುಮ್ಮನಿರುವುದೇ ಲೇಸು.  ಏಕೆಂದರೆ ಸಾರ್ವಜನಿಕರ  ಜ್ಞಾಪಕಶಕ್ತಿ ಬಹಳ ಕಡಿಮೆ. ಇಷ್ಟೊಂದು ಪ್ರಚಾರ ನೀಡುವ ಬದಲಿಗೆ,ಈ ಸಮಯದಲ್ಲಿ ಸರಕಾರ ಮಾಡಿದ ಕೆಲಸವನ್ನಾಗಲಿ,   ನೀಡಿದ ಪರಿಹಾರವನ್ನಾಗಲಿ,  ಮೃತರ ಕುಟುಂಬಗಳಿಗೆ  ನೀಡುತ್ತಿರುವ ಸವಲತ್ತನ್ನಾಗಲಿ ಜನತೆಗೆ ತಿಳಿಸುವ ಕೆಲಸ ಮಾಡಿದ್ದರೆ ಹೆಚ್ಚು ಪ್ರಯೋಜನವಾಗುತ್ತಿತ್ತು.  ಆ ಬಗ್ಗೆ ಯಾವೊಂದು ಈ ತನಕ ತಿಳಿದಿಲ್ಲ.

ಸರಕಾರ ಮಾಡಲಿ, ಮಾಡದೆ ಹೊಗಲಿ "ಟಾಟ ಸಂಸ್ಥೆ "ಮಾತ್ರ ಆತಂಕವಾದಕ್ಕೆ ಗುರಿಯಾಗಿ ಮೃತರಾದವರ ಕುಟುಂಬಕ್ಕೆ, ಗಾಯಗೊಂಡವರಿಗೆ ಮತ್ತು ಅವರ ಕುಟುಂಬಕ್ಕೆ ನೀಡಿದ ಪರಿಹಾರ, ಸಹಾಯ, ತೋರಿದ ಅನುಕಂಪ ಮಾತ್ರ ಅವಿಸ್ಮರಣೀಯ.  ಶ್ರೀ ರತನ್ ಟಾಟಾರವರು ಎಲ್ಲ ರೀತಿಯ ಪ್ರಶಂಸೆಗೆ ಅರ್ಹರು.  ಭಗವಂತ ಮೆಚ್ಚುವ ಕೆಲಸವನ್ನು ಮಾಡಿ, ಎಲೆಮರೆ ಕಾಯಂತೆ ಇರುವವುದು ಇವರ ದೊಡ್ಡತನವನ್ನು ತೋರಿಸುತ್ತದೆ.  ಕೇವಲ ಶ್ರೀಮಂತರಾದರೆ ಸಾಲದು, ಹೃದಯ ಶ್ರೀಮಂತಿಕೆಯು ಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹಣವಿದ್ದರೆ ಸಾಲದು ಅದರ ಸದ್ವಿನಿಯೋಗವು ಆಗಬೇಕು ಎಂಬುದನ್ನು ಸಿದ್ದಮಾಡಿ ತೋರಿಸಿದ್ದಾರೆ.

 ಟಾಟ ಸಂಸ್ಥೆ ಕೈಗೊಂಡ ಪರಿಹಾರ ಕಾರ್ಯದ ವರದಿ ಇಲ್ಲಿದೆ.

1     ತಾಜ್ ಹೋಟೆಲ್ಲಿನಲ್ಲಿ ದುರ್ಘಟನೆ ನಡೆದ ದಿನ, ಕೇವಲ ಒಂದು ದಿನ ಕೆಲಸ ನಿರ್ವಹಿಸಿದ ದಿನಗೂಲಿ ನೌಕರನಿಂದ ಹಿಡಿದು ಎಲ್ಲ ವರ್ಗದ ನೌಕರರರನ್ನು ಸಂಸ್ತೆಯ ನೌಕರರೆಂದು ಘೋಷಣೆ ಮಾಡಿತು.
2     ತನ್ನ ಸಂಸ್ಥೆಯಲ್ಲಿದ್ದ ನೌಕರರು, ಹತ್ತಿರದಲ್ಲಿದ್ದ ಪಾನ್ ಬೀಡ ಅಂಗಡಿಯವರು, ಪಾವಭಾಜಿ ಅಂಗಡಿಯವರು, ರೈಲ್ವೆ ಸಿಬ್ಬಂದಿಗಳು, ಪೋಲಿಸ್ ಸಿಬ್ಬಂದಿಗಳು ಮತ್ತು ಪಾದಚಾರಿಗಳನ್ನೆಲ್ಲ ಪರಿಹಾರದ ಚೌಕಟ್ಟಿಗೆ ಸೇರಿಸಿಕೊಂಡು ಸೂಕ್ತ ಪರಿಹಾರವನ್ನು ನೀಡಿದರು.
3     ತಾಜ್ ಹೋಟೆಲ್ಲಿನ ನೌಕರರ ಸಂಬಳವನ್ನು ( ಹೋಟೆಲ್ ಮುಚ್ಚಿದ ಸಮಯದಲ್ಲಿ ) ಎಂ ಓ ಮೂಲಕ ಅವರ ಮನೆ ಬಾಗಿಲಿಗೆ ಕಳುಹಿಸಿಕೊಟ್ಟರು.
4     ದಿಗ್ಬ್ರಮೆಗೊಂಡ ಸಿಬ್ಬಂದಿಗಳಿಗೆ, ಹತ್ತಿರದ ನಿವಾಸಿಗಳಿಗೆ  ಮನೋವೈದ್ಯರ ಸಹಯೋಗ ಪಡೆದು ಟಾಟ ಸಮಾಜ ವಿಜ್ಞಾನ ಶಾಸ್ತ್ರ ವಿಭಾಗವು ಸೂಕ್ತ ಸಲಹೆ ಮತ್ತು ಸಾಂತ್ವನ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿತು.
5     ದುರ್ಘಟನೆಯಲ್ಲಿ ಮೃತರಾದ ವ್ಯಕ್ತಿಗಳ ಸಂಬಂಧಿಗಳ ಸೌಕರ್ಯಕ್ಕಾಗಿ ಅಗತ್ಯ ಆಹಾರ, ನೀರು ಮತ್ತು ಶೌಚಾಲಯ ಸೌಲಭ್ಯವನ್ನು ಒದಗಿಸಲಾಯಿತು.  ಇಲ್ಲಿ 1600 ಜನ ನೌಕರ ಮತ್ತು ಸಂಬಂಧಿಕರಿಗೆ ಈ ಪ್ರಯೋಜನ ದೊರೆಯಿತು.
6     ಪ್ರತಿ ವ್ಯಕ್ತಿಯ ಕುಟುಂಬದವರ ಕಷ್ಟಗಳನ್ನು ವಿಚಾರಿಸಲು ಮತ್ತು ಸೂಕ್ತ ಪರಿಹಾರವನ್ನು ಸಕಾಲದಲ್ಲಿ ನೀಡಲು, ಒಬ್ಬೊಬ್ಬ ಮೇಲ್ವಿಚಾರಕರನ್ನು ನಿಯುಕ್ತಿ ಮಾಡಲಾಗಿತ್ತು.
7     ಶ್ರೀ ರತನ್ ಟಾಟ ರವರೆ ಸುಮಾರು 80 ಕುಟುಂಬಗಳಿಗೆ ಖುದ್ದು ಭೇಟಿನೀಡಿ ಸಾಂತ್ವನ ಹೇಳಿದರು.
8     ನೌಕರರ ಆಶ್ರಿತರು ಮುಂಬೈಗೆ ಬೇಟಿ ನೀಡಿದ ಸಂಧರ್ಭದಲ್ಲಿ ಅವರಿಗೆ ಮಾನಸಿಕ ಶಾಂತಿ ಮತ್ತು ನೆಮ್ಮದಿ ಸಿಗುವಂತೆ ನೋಡಿಕೊಳ್ಳಲಾಯಿತು.  ಅವರೆಲ್ಲರಿಗೂ ಮೂರು ವಾರಗಳವರೆಗೆ  ಪ್ರಸಿಡೆನ್ಸಿ ಹೋಟೆಲ್ನಲ್ಲಿ ಎಲ್ಲಾ  ವ್ಯವಸ್ಥೆ ಮಾಡಲಾಗಿತ್ತು.
9     ಶ್ರೀ  ರತನ್ ಟಾಟ ರವರೆ ಖುದ್ದು ನಿಂತು ಪರಿಹಾರ ಕಾರ್ಯದ  ಮೇಲ್ವಿಚಾರಣೆ ನಡೆಸುತ್ತಿದ್ದರು,  ಮತ್ತೆ ಇನ್ನೇನು ಆಗಬೇಕೆಂದು ಕುಟುಂಬದವರನ್ನು ಮತ್ತು ಆಶ್ರಿತರನ್ನು ಕೇಳುತ್ತಿದ್ದರು.
10   ಕೇವಲ 20  ದಿನಗಳಲ್ಲಿ ಪರಿಹಾರದ ಟ್ರಸ್ಟ್ ಸ್ತಾಪಿಸಿ, ಪರಿಹಾರ ಕಾರ್ಯ ಕೈಗೊಳ್ಳುವಂತೆ ಮಾಡಲಾಯಿತು.
11   ರೈಲ್ವೆ ಸಿಬ್ಬಂದಿಗಳು, ಪೋಲಿಸ್ ಸಿಬ್ಬಂದಿಗಳು ಮತ್ತು ಪಾದಚಾರಿಗಳು ಟಾಟ ಸಮೂಹಕ್ಕೆ ಸೇರದೆ ಇದ್ದರು, ಅವರಿಗೂ ಪರಿಹಾರ ನೀಡುವುದರ ಜೊತೆಗೆ ಪ್ರತಿಯೊಬ್ಬ ಆಶ್ರಿತ ಕುಟುಂಬಕ್ಕೆ 10000 ರುಪಾಯಿಯಂತೆ, ಆರು ತಿಂಗಳ ಕಾಲ ನಿರ್ವಹಣಾ ವೆಚ್ಚವನ್ನು ನೀಡಲಾಯಿತು.
12   ಹತ್ತಿರದ ಅಂಗಡಿಯನ ನಾಲ್ಕು ವರ್ಷದ ಮಗುವಿಗೆ, ದುರ್ಘಟನೆಯಲ್ಲಿ  ನಾಲ್ಕು ಗುಂಡುಗಳು ದೇಹಕ್ಕೆ ಹೊಕ್ಕಿ ಜೀವನ್ಮರಣದಲ್ಲಿ ಆ ಮಗು ನರಳುತ್ತಿದ್ದಾಗ ಲಕ್ಷಾಂತರ ರುಪಾಯಿಗಳನ್ನು ಖರ್ಚುಮಾಡಿದ ಟಾಟ ಸಂಸ್ಥೆ ಆ ಮಗುವನ್ನು ಉಳಿಸಿಕೊಟ್ಟಿತು.
13   ಜೀವನಕ್ಕೆ ಆಧಾರವಾಗಿದ್ದ ತಳ್ಳು ಗಾಡಿಗಳನ್ನು ಕಳೆದುಕೊಂಡಿದ್ದ  ಹತ್ತಿರದ ವ್ಯಾಪಾರಿಗಳಿಗೆ, ಹೊಸದಾದ ತಳ್ಳುವ ಗಾಡಿಗಳನ್ನು ಉಚಿತವಾಗಿ ನೀಡಲಾಯಿತು.
14   ಈ ದುರ್ಘಟನೆಗೆ ಒಳಗಾದ ನೌಕರರ ಕುಟುಂಬದ 46 ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ಟಾಟ ಸಂಸ್ಥೆ ಹೊತ್ತುಕೊಂಡಿತು.
15    ಈ ದುರ್ಘಟನೆಯಲ್ಲಿ ಮೃತರಾದವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಶ್ರೀ ರತನ್ ಟಾಟ ಮತ್ತು ಅವರ ಹಿರಿಯ ಸಿಬ್ಬಂದಿವರ್ಗದವರು ಪಾಲ್ಗೊಂಡು ತಮ್ಮ ಸಂತಾಪ ವ್ಯಕ್ತಪಡಿಸಿದರು.  ಈ ಪ್ರಕ್ರಿಯೆ ಸತತ ಮೂರು ದಿನ ನಡೆಯಿತು. ಇದು ಟಾಟ ರವರ ಜೀವನದಲ್ಲಿ ಅತ್ಯಂತ ದುಃಖದ ಕ್ಷಣಗಳು.
16     ಮುವ್ವತೈದು ಲಕ್ಷ ರುಪಾಯಿಯಿಂದ ಹಿಡಿದು ಎಂಬತ್ತೈದು ಲಕ್ಷ ರುಪಾಯಿಯವರೆಗೆ ಪರಿಹಾರವನ್ನು ಮೃತರ ಪ್ರತಿ ಕುಟುಂಬಕ್ಕೆ ಅವರವರ ಹುದ್ದೆಗೆ ಅನುಸಾರ ನೀಡಲಾಯಿತು.  ಜೊತೆಗೆ ಈ ಕೆಳಗಿನ ಸವಲತ್ತನ್ನು ಅವರ ಕುಟುಂಬಕ್ಕೆ ನೀಡಲಾಗಿದೆ.
          1.   ನೌಕರ ಕೊನೆಯ ತಿಂಗಳು ಪಡೆದ ಸಂಬಳದ ಮೊತ್ತವನ್ನು ನೌಕರನ ಪತ್ನಿ ಅಥವಾ ಆಶ್ರಿತರಿಗೆ ಬದುಕಿರುವವರೆಗೆ ನೀಡಲಾಗುತ್ತದೆ.
             2.   ಮಕ್ಕಳ ಮತ್ತು ಅವಲಂಬಿತರ ವಿದ್ಯಾಭ್ಯಾಸ ಪ್ರಪಂಚದಲ್ಲಿ  ಎಲ್ಲೇ ಮಾಡಿದರು ಟಾಟ ಸಂಸ್ಥೆ ಸಂಪೂರ್ಣ ಖರ್ಚನ್ನು ಭರಿಸುತ್ತದೆ.
            3.   ಮೃತರ ಪತ್ನಿ ಮತ್ತು ಆಶ್ರಿತರ ವೈದ್ಯಕೀಯ ಸೌಲಭ್ಯವನ್ನು ಉಚಿತವಾಗಿ ಉಳಿದ ಜೀವಮಾನದವರೆಗೆ  ಟಾಟ ಸಂಸ್ಥೆ  ನೋಡಿಕೊಳ್ಳುತ್ತದೆ.
              4.    ನೌಕರಿಯಲ್ಲಿದ್ದಾಗ ಪಡೆದ ಎಲ್ಲಾ ಬಗೆಯ ಸಾಲವನ್ನು ಸಂಸ್ತೆ ಮನ್ನಾ  ಮಾಡಿದೆ.
              5.    ಹೆಚ್ಚಿನ ಸೂಕ್ತ ಸಲಹೆ ಏನಾದರು ಬೇಕಾದಲ್ಲಿ ಉಚಿತವಾಗಿ ಸಂಸ್ತೆ ನೀಡುತ್ತದೆ.

ಇಷ್ಟೆಲ್ಲಾ ವ್ಯವಸ್ತೆಯನ್ನು ಅಚ್ಚುಕಟ್ಟಾಗಿ ಯಾವ ನಿರೀಕ್ಷೆಯು ಇಲ್ಲದೆ  ನಿಷ್ಕಲ್ಮಶ ಭಾವದಿಂದ ಭಗವಂತನ ಸೇವೆಯೆಂದು ಮಾಡಿ ಎಲ್ಲಾ ಪ್ರಚಾರದಿಂದ ದೂರ ಉಳಿದ ಶ್ರೀ ರತನ್ ಟಾಟ ಮತ್ತು ಅವರ ಸಿಬ್ಬಂದಿಗಳ ಸೇವೆ ಅವಿಸ್ಮರಣೀಯವಲ್ಲವೇ?  ಇಂತಹ ದೊಡ್ಡವರ ದಾರಿ ನಮಗೆ ಆದರ್ಶವಲ್ಲವೇ?

ಚಿತ್ರ ಮತ್ತು ಲೇಖನ: ಇಂಟರ್ನೆಟ್ 

December 14, 2012

ಕರ್ಪೂರ ..............ಒಂದು ಸಮರ್ಥ ಸೊಳ್ಳೆ ನಿವಾರಕ.



               ಇತ್ತೀಚಿನ ದಿನಗಳಲ್ಲಿ ಸೊಳ್ಳೆ ಇಲ್ಲದ ಸ್ಥಳವೆ ಇಲ್ಲ.  ಸ್ವಲ್ಪ ಹಸಿರು ಇದ್ದರೆ ಮುಗಿಯಿತು, ಸೊಳ್ಳೆಗಳ ಧಾಂದಲೆ ಹೇಳ ತೀರದು.  ಸಂಜೆಯಾಗುತ್ತಿದ್ದಂತೆ ಎಲ್ಲಾ ಕಿಟಕಿ ಬಾಗಿಲು ಬಂದ್ ಆದರೆ ಬಚಾವ್, ಇಲ್ಲಾಂದ್ರೆ ಸೊಳ್ಳೆಗಳ ಹಾವಳಿ ತಡೆಯಲಸಾಧ್ಯ.   ಇವುಗಳ ಕಾಟ ತಡೆಯಲಾರದೆ ಬೇವಿನ ಸೊಪ್ಪಿನ ಹೊಗೆ, ಬೆರಣಿ ಹೊಗೆ, ಸಾಮ್ರಾಣಿ ಹೊಗೆ ಇತ್ಯಾದಿ ಬಳಕೆಯಾಗುತ್ತಿತ್ತು.  ನಂತರದಲ್ಲಿ ಕೆಲವು ಕಂಪನಿಯವರು ಈ ಮೂಲವಸ್ತುಗಳನ್ನು ಇಟ್ಟುಕೊಂಡು ಕಾಯಿಲ್ ತರಹ ಮಾಡಿ ಮಾರುಕಟ್ಟೆಗೆ ತಂದರು.  ಸ್ವಲ್ಪ ದಿನ  ಸಹಿಸಿಕೊಂಡ ಜನ ಇದರ ಹೊಗೆ ಕೆಲವರಿಗೆ ಅಲರ್ಜಿಯಾಯಿತು.  ಕೆಮ್ಮು ದಮ್ಮು ಇದ್ದವರಿಗಂತೂ ಇದರ ವಾಸನೆಯೇ ಇವರ ರಾತ್ರಿ ನಿದ್ದೆ ಕೆಡಿಸುತ್ತಿತ್ತು. ಇದನ್ನು ಮನಗಂಡ ಕೆಲವು ಕಂಪನಿಗಳು ಸ್ವಲ್ಪ ಸುಧಾರಿತ ಮಾದರಿಯಲ್ಲಿ ರಾಸಾಯನಿಕ ಬಳಸಿ ಬಿಲ್ಲೆ ಮತ್ತು ರಸವಿರುವ ರಿಪಲ್ಲೆಂಟ್ ಗಳನ್ನೂ  ಬೆಳಕಿಗೆ ತಂದರು.   ಇದರ ವಾಸನೆಯಂತು  ಘಾಟಿನದಾಗಿದ್ದು  ಇದು ಸಹಾ ಕೆಮ್ಮು ,ದಮ್ಮು , ಹೃದಯ ರೋಗಿಗಳಿಗೆ ಆಗಬರಲಿಲ್ಲ.  ಇವರು ಕೊನೆಗೆ ಸೊಳ್ಳೆ ಪರದೆಗೆ ಅಂಟಿಕೊಂಡರು.   ಮಲಗುವಾಗಲೇನೋ ಪರವಾಗಿಲ್ಲ. ಇನ್ನು ಮಿಕ್ಕ ಸಮಯದಲ್ಲಿ ಈ ಸೊಳ್ಳೆ ಹಾವಳಿಯಿಂದ ತಪ್ಪಿಸಿಕೊಳ್ಳುವುದು ಒಂದು ಸಮಸ್ಯೆಯೇ  ಆಗಿದೆ.   ಹೆಚ್ಚಾಗಿ ವಯಸ್ಸಾದವರು, ಹೆಂಗಸರು ಮತ್ತು ಮಕ್ಕಳು ಸಂಜೆಯ ಸಮಯದಲ್ಲಿ  ಮನೆಯಲ್ಲಿರುವುದರಿಂದ ಸೊಳ್ಳೆಯಿಂದ ವಿಮುಕ್ತಿ  ಅನಿವಾರ್ಯವೇ ಆಗಿದೆ. 
                  ಇತ್ತೀಚಿನ ದಿನಗಳಲ್ಲಿ ಡೆಂಗ್ಯು ಮತ್ತು ಮಲೇರಿಯ ರೋಗಗಳು ಮಾರಣಾಂತಿಕ ಸೊಳ್ಳೆಗಳಿಂದ ಹರಡುತ್ತಿವೆ.  ಇದಕ್ಕೆ ಮುಖ್ಯ ಕಾರಣ ಪರಿಸರದ ನೈರ್ಮಲ್ಯ ಹಾಳಾಗಿರುವುದಾಗಿದೆ.   ಎಲ್ಲಿ ನೋಡಿದರು ಕಸ, ಪ್ಲಾಸ್ಟಿಕ್, ತರಕಾರಿ ಸಿಪ್ಪೆಯಿಂದ ಹಿಡಿದು ಎಲ್ಲ ರೀತಿಯ ತ್ಯಾಜ್ಯಗಳು ರಸ್ತೆ ಬದಿಯಲ್ಲೇ ಬಿದ್ದು ಸೊಳ್ಳೆ ಮತ್ತು ಇನ್ನಿತರ ಕ್ರಿಮಿಕೀಟಗಳಿಗೆ  ಹಬ್ಬವಾಗಿದೆ.
                ಇಂತಹ ಒಂದು ಸಂದರ್ಭದಲ್ಲಿ  ಸೊಳ್ಳೆಯಿಂದ ವಿಮುಕ್ತಿ ಪಡೆಯಲು ಸರಳವಾದ, ಮಿತವ್ಯಯದ ಮತ್ತು ಯಾವುದೇ ಅಡ್ಡ ಪರಿಣಾಮವಿಲ್ಲದ  ಒಂದು ಪರಿಣಾಮಕಾರಿ ಔಷಧವನ್ನಾಗಿ  ಕೆಲವರು ಸಂಶೋಧಿಸಿ ಬಳಕೆ ಮಾಡಿದ್ದಾರೆ. ದಿನನಿತ್ಯದಲ್ಲಿ ಬಳಕೆ ಮಾಡುವ ಕರ್ಪೂರವೇ ಸೊಳ್ಳೆ ನಿವಾರಕವಾಗಿ ಕೆಲಸ ಮಾಡುವ ಒಂದು ಔಷಧಿ ಎಂದು ಹೇಳಲಾಗಿದೆ.  ಕರ್ಪೂರ, ಇದು ನಿನ್ನೆ ಇಂದಿನದೇನೂ ಅಲ್ಲ.  ಶತ ಶತಮಾನಗಳಿಂದಲೂ ಔಷಧಿಯಾಗಿ ಆಯುರ್ವೇದದಲ್ಲಿ ಬಳಸಲಾಗುತ್ತಿದೆ.  ಕಟ್ಟಿದ ಮೂಗು ತೆರೆಯಲು, ಸ್ನಾಯು ಸೆಳೆತಕ್ಕೆ, ಮೂಳೆ ನೋವು ನಿವಾರಿಸಲು, ತಲೆನೋವು, ಕೆಮ್ಮು ಮತ್ತು ಶೀತ ನಿವಾರಿಸಲು ಕರ್ಪೂರವನ್ನು ಬಳಸಲಾಗುತ್ತಿದೆ. ಜೊತೆಗೆ ಪ್ರತಿನಿತ್ಯ ಕೆಲವರಮನೆಯಲ್ಲಿ ಮಂಗಳ ನೀರಾಜನೆಗೆ
 ( ಮಂಗಳಾರತಿಗೆ ) ಕರ್ಪೂರವನ್ನು ಬಳಸುತ್ತಾರೆ. ದೇವಸ್ತಾನಗಲ್ಲಂತೂ ಕರ್ಪೂರ ನಿತ್ಯಬಳಕೆಯಾಗುತ್ತದೆ.
                 ಇಂತಹ ನಿತ್ಯಬಳಕೆಯ ಕರ್ಪೂರವನ್ನು  ಒಂದು ಅಗಲ ಬಾಯಿ ಇರುವ ಒಂದು ಚಿಕ್ಕ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಅದರಲ್ಲಿ ಎರಡು ಮಾತ್ರೆ ಕರ್ಪೂರ ಹಾಕಿ ರೂಮಿನಲ್ಲಿ ಇಟ್ಟರಾಯಿತು.   ಇದರ ಸುವಾಸನೆಗೆ ಸೊಳ್ಳೆ ಹತ್ತಿರ ಸುಳಿಯದು.  ರೂಮಿನ ಗಾತ್ರದ ಮೇಲೆ ಕರ್ಪೂರದ ಬಳಕೆಯನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ.   ನಿಧಾನವಾಗಿ ಕರಗುವ ಕರ್ಪೂರ ನೀರಿನಲ್ಲಿ ಆವಿಯಾಗಿ ಇಡಿ ಮನೆಯನ್ನು ಪಸರಿಸುತ್ತದೆ.  ತುರ್ತಾಗಿ ಪರಿಣಾಮ ಆಗಬೇಕೆಂದು ಬಯಸುವವರು ಸ್ವಲ್ಪ ಬಿಸಿನೀರನ್ನು ಹಾಕಬಹುದು. 
              ಸೊಳ್ಳೆ ನಿವಾರಕಕ್ಕೆ ಬಳಸುವ ರಿಪಲ್ಲೆಂಟ್ ನಲ್ಲೆ  ಮ್ಯಾಟ್ ಅಥವಾ ಲಿಕ್ವಿಡ್ ಬದಲಿಗೆ ಎರಡು ಬಿಲ್ಲೆ ಕರ್ಪೂರವನ್ನು ಇರಿಸಿ ಸ್ವಿಚ್ ಹಾಕಿ ಅರ್ಧ ಘಂಟೆ ಬಿಟ್ಟರೆ ಸಾಕು ಎಂದು ಹೇಳುತ್ತಾರೆ. ಇದನ್ನು ಬೆಳಿಗ್ಗೆ ಮತ್ತು ಸಂಜೆ ಅರ್ಧ ಘಂಟೆ ಬಳಸಿದರೆ ಸಾಕು ಸೊಳ್ಳೆಯಿಂದ ವಿಮುಕ್ತಿ ಪಡೆಯಬಹುದೆಂದು ಅನುಭವಿಗಳು ಹೇಳುತ್ತಾರೆ.
                   ಒಮ್ಮೆ ಇದರ ಬಳಕೆ ಮಾಡಿನೋಡಿ ನಿಮಗೆ ತಿಳಿಸುತ್ತಿದ್ದೇನೆ.   ನಿಮಗೂ  ಉಪಯುಕ್ತವೆನಿಸಿದರೆ ಯಾಕೆ ಉಪಯೋಗ ಮಾಡಬಾರದು? ನಮಗೆ ಇದು ಸಾಧ್ಯ ಎಂದು ಖಾತ್ರಿಯಾದಮೇಲೆ ಮತ್ತೊಬ್ಬರಿಗೂ ಈ ವಿಚಾರ ತಿಳಿಸಬಹುದಲ್ಲವೇ?  ಅದಕ್ಕಾಗಿ ಈ ಮಾಹಿತಿಯನ್ನು ತಮ್ಮೊಡನೆ ಹಂಚಿಕೊಂಡಿದ್ದೇನೆ.  ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ.  

December 13, 2012

CAMPHOR………………. The effective & healthy mosquito repellent.










3. Take a wide opened cup or plate with water. Drop 2 tablets of Camphor into the water. Keep the cup with water and camphor in your sleeping room. The quantity of water and camphor may differ from room size. Water evaporates at normal temperature. Camphor slowly started dissolving in water. The water evaporates with Camphor smell. Adding little bit hot water gives instant action.


You will be amazed at the results! Do experience it and help spread these healthy tips!  

December 11, 2012

RICHEST MAN'S SIMPLE PHILOSOPHY


What World's Second RICHEST Man Said
"I always knew I was going to be rich.
I don't think I ever doubted it for a minute"
- Warren Buffett
image012.jpg
image013.jpg
image014.jpg
image015.jpg
image016.jpg
image017.jpg
image018.jpg
image019.jpg
image020.jpg
image021.jpg
image022.jpg
 
 

December 6, 2012

I want to buy a miracle.



A little girl went to her bedroom and pulled a glass jelly jar from its hiding place in the closet.

She poured the change out on the floor and counted it carefully. Three times, even.. The total had to be exactly perfect.. No chance here for mistakes.

Carefully placing the coins back in the jar and twisting on the cap, she slipped out the back door and made her way 6 blocks to Rexall's Drug Store with the big red Indian Chief sign above the door.

She waited patiently for the pharmacist to give her some attention, but he was too busy at this moment.  Tess twisted her feet to make a scuffing noise. Nothing. She cleared her throat with the most disgusting sound she could muster. No good. Finally she took a quarter from her jar and banged it on the glass counter. That did it!

'And what do you want?' the pharmacist asked in an annoyed tone of voice.. I'm talking to my brother from Chicago whom I haven't seen in ages,' he said without waiting for a reply to his question.

'Well, I want to talk to you about my brother,' Tess answered back in the same annoyed tone. 'He's really, really sick....and I want to buy a miracle.'

'I beg your pardon?' said the pharmacist.

'His name is Andrew and he has something bad growing inside his head and my Daddy says only a miracle can save him now. So how much does a miracle cost?'

'We don't sell miracles here, little girl. I'm sorry but I can't help you,' the pharmacist said, softening a little.

'Listen, I have the money to pay for it. If it isn't enough, I will get the rest. Just tell me how much it costs.'

The pharmacist's brother was a well dressed man. He stooped down and asked the little girl, 'What kind of a miracle does your brother need?'

'I don't know,' Tess replied with her eyes welling up. I just know he's really sick and Mommy says he needs an operation. But my Daddy can't pay for it, so I want to use my money..'

'How much do you have?' asked the man from Chicago .

'One dollar and eleven cents,' Tess answered barely audible.

'And it's all the money I have, but I can get some more if I need to.'

'Well, what a coincidence,' smiled the man. 'A dollar and eleven cents---the exact price of a miracle for little brothers..'

He took her money in one hand and with the other hand he grasped her mitten and said 'Take me to where you live. I want to see your brother and meet your parents. Let's see if I have the miracle you need.'

That well-dressed man was Dr. Carlton Armstrong, a surgeon, specializing in neuro-surgery. The operation was completed free of charge and it wasn't long until Andrew was home again and doing well.

Mom and Dad were happily talking about the chain of events that had led them to this place.

'That surgery,' her Mom whispered. 'was a real miracle. I wonder how much it would have cost?'

Tess smiled. She knew exactly how much a miracle cost....one dollar and eleven cents...plus the faith of a little child.

In our lives, we never know how many miracles we will need.  A miracle is not the suspension of natural law, but the operation of a higher law. I know you'll keep the ball moving!

Here it goes. Throw it back to someone who means something to you!

A ball is a circle, no beginning, no end. It keeps us together like our Circle of Friends. But the treasure inside for you to see is the treasure of friendship you've granted to me.

Today I pass the friendship ball to you.

Pass it on to someone who is a friend to you. 

MY OATH TO YOU...

When you are sad.....I will dry your tears.
When you are scared.....I will comfort your fears.
When you are worried......I will give you hope.
When you are confused.....I will help you cope.
And when you are lost...and can't see the light, I shall be your beacon...shining ever so bright.

This is my oath.....I pledge till the end.
Why you may ask?.... Because you're my friend. 

 

ದೊಡ್ಡವರ ದಾರಿ ...........15


ರಾಜೇಂದ್ರ ಆಗರ್ಭ ಶ್ರೀಮಂತರು. ಯಾವುದಕ್ಕೂ ದೇವರು ಕಡಿಮೆ ಮಾಡಿರಲಿಲ್ಲ. ಸಣ್ಣ ಕುಟುಂಬ ವಾದರೂ ಬಳಗ ಮಾತ್ರ ಯಾವಾಗಲು ಜಾಸ್ತಿಯೇ. ಮಗ ಶ್ರೀನಿವಾಸನಿಗೆ ಮಾಡುವೆ ಮಾಡಿದರು. ಸಂಸ್ಕಾರವಂತ ಹೆಣ್ಣುಮಗಳು ಲಕ್ಷ್ಮಿ ಈ ಮನೆ ತುಂಬಿಸಿಕೊಂಡಳು. ಈ ಕುಟುಂಬಕ್ಕೆ ದೃಷ್ಟಿಯಾಗುವುದೇನೋ ಅನ್ನುವಂತಹ ರೀತಿಯಲ್ಲಿ ಈ ಮನೆಯ ಕಾರ್ಯ ಚಟುವಟಿಕೆಗಳು ನಡೆಯುತ್ತಿದ್ದವು.

ಸೊಸೆ ಲಕ್ಷ್ಮಿ ಒಂದು ದಿನ ತಲೆನೋವೆಂದು, ತಡೆಯಲು ಸಾಧ್ಯವಿಲ್ಲವೆಂದು ಅಳಲು ಪ್ರಾರಂಭ ಮಾಡಿದಾಗ ಮನೆಯವರಿಗೆಲ್ಲ ಗಾಭರಿ. ತಕ್ಷಣ ನುರಿತ ವೈದ್ಯರಲ್ಲಿಗೆ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿ ಚಿಕಿತ್ಸೆ ಕೊಡಿಸಲಾಯಿತು.ತಕ್ಷಣಕ್ಕೆ ತಲೆನೋವು ಕಡಿಮೆಯಾದಂತೆ ಭಾಸವಾದರೂ, ತಲೆನೋವು ಮತ್ತೆ ಮರುಕಳಿಸಿತು. ದಿನದ ಸೂರ್ಯ ಉದಯವಾದರೆ ಸಾಕು ಈಕೆಯ ತಲೆನೋವೂ ಪ್ರಾರಂಭ. ಸೂರ್ಯ ಮುಳುಗಿದ ನಂತರ ತಲೆನೋವು ಮಾಯ. ಇದೊಂದು ಬಿಡಿಸಲಾರದ ಸಮಸ್ಯೆಯಾಯಿತು. ಶ್ರೀನಿವಾಸ ಎಲ್ಲ ರೀತಿಯ ಚಿಕಿತ್ಸೆ ಕೊಡಿಸಿದ. ಹಲವಾರು ನಗರದ ಪ್ರತಿಷ್ಟಿತ ಆಸ್ಪತ್ರೆಗಳಲ್ಲೂ ತಪಾಸಣೆ ಮಾಡಿಸಿದ.  ಆದರೆ ಯಾವುದೇ ಪ್ರಯೋಜನವಾಗಲಿಲ್ಲ.  ದಿನ ಕಳೆದಂತೆ ಲಕ್ಷ್ಮಿಯು ಕ್ರುಶವಾಗುತ್ತ ಬಂದಳು. ಎಲ್ಲರಿಗು ಒಂದೇ ಚಿಂತೆ, ಮುಂದೇನು? ಲಕ್ಷ್ಮಿಗಂತೂ ಸೂರ್ಯ ಉದಯವಾಗದಿದ್ದರೆ ಸಾಕು ಎನಿಸುವಂತೆ ಆಗುತ್ತಿತ್ತು. ಆದರೆ ಅದು ಸಾಧ್ಯವಾಗುವ ಮಾತೆ?  ರಾಜೇಂದ್ರರ ಸಂಸಾರದಲ್ಲಿ ಇದೊಂದು ದೊಡ್ಡ ಸಮಸ್ಯಯಾಯಿತು. ಯಾರು ಏನು ಹೇಳುತ್ತಾರೋ ಅದೆಲ್ಲವನ್ನು ಮಾಡಿದರು, ಒಂದು ಚೂರು ಗುಣ ಕಾಣದೆ ಈ ಸಂಸಾರ ನಲುಗಿತು. ಲಕ್ಷ್ಮಿಯಂತು ಹಗಲಲ್ಲಿ ಮನೆಯ ಹೊರಗೆ ಬರುತ್ತಲೇ ಇರಲಿಲ್ಲ.

ಇಂತಹ ಒಂದು ಪರಿಸ್ತಿತಿಯಲ್ಲಿ ರಾಜೇಂದ್ರ ಅವರ ಸ್ನೇಹಿತರು  ಬಂದು ಸಕಲೇಶಪುರದ ಹತ್ತಿರದ ಒಂದು ಕಾಫಿ ತೋಟಕ್ಕೆ ಒಬ್ಬರು ಸನ್ಯಾಸಿಗಳು ಬಂದಿದ್ದಾರೆ, ಅವರು ಮಹಾನ್ ಸಾಧಕರು. ಅವರಲ್ಲಿ ಏಕೆ ಒಮ್ಮೆ ಪ್ರಯತ್ನ ಮಾಡಬಾರದು?ಎಂಬ ವಿಚಾರವನ್ನು ರಾಜೇಂದ್ರ ಅವರ ಮುಂದೆ ಇಟ್ಟರು. ರಾಜೇಂದ್ರ ಬಹಳ ನಿರ್ಲಿಪ್ತರಾಗಿಯೇ  "ಈಗಾಗಲೇ ಸಾಕಷ್ಟು ಇಂತಹ ಪ್ರಯತ್ನ ಸಾಗಿದೆ, ಯಾವುದು ಪ್ರಯೋಜನಕ್ಕೆ ಬರಲಿಲ್ಲ. ಆಯಿತು ನೋಡೋಣ, " ಎಂದರು. ಆದರು ಮನಸಿನಲ್ಲಿ ಒಂದು ಆಸೆ ಚಿಗುರಿತು. ವಿಳಾಸವನ್ನು ಪಡೆದರು. ಈ ಪ್ರಸ್ತಾಪವನ್ನು ಸೊಸೆಯ ಮುಂದೆ ಇಟ್ಟಾಗ ಆಕೆಯು ಮಾವನ ಮಾತಿಗೆ ನಯವಾಗಿ ತಿರಸ್ಕಾರ ಮಾಡಿ " ನಿಮಗೆ ಗೊತ್ತು ಅದೆಷ್ಟು ಸಾರಿ ಇಂತಹ ಪ್ರಯತ್ನ ಮಾಡಿಲ್ಲಾ? ಮತ್ತೆ ಮತ್ತೆ ಈ ರೀತಿ ಮಾಡುವುದು ಬೇಡ ಮಾವ. ನನ್ನ ಹಣೆಯಲ್ಲಿ ಏನು ಬರೆದಿದೆಯೋ ಅದೇ ಆಗಲಿ." ಎಂದು ಕಣ್ಣೀರು ಹಾಕಿದಳು. ಆದರೆ, ಅತ್ತೆ, ಮಾವ ಮತ್ತು ಗಂಡ ಶ್ರೀನಿವಾಸ " ಇದೊಂದು ಪ್ರಯತ್ನ ಮಾಡಿಬಿಡೋಣ. ಇದೆ ಕೊನೆಯ ಪ್ರಯತ್ನ, ಇನ್ನು ಮುಂದೆ ಈ ರೀತಿಯದುಕ್ಕೆ ನಿನಗೆ ಬಲವಂತ ಮಾಡುವುದಿಲ್ಲ." ಎಂದು ಲಕ್ಷ್ಮಿಯನ್ನು ಒಪ್ಪಿಸಿದರು.

ಮಾರನೆ ದಿನ ಬೆಳಗಿನ ಮುಂಚೆಯೇ ಸಕಲೇಶಪುರಕ್ಕೆ ಬಂದು ತಲುಪಿದರು. ಮುಂಜಾವಿನ ಚಳಿಯಲ್ಲಿ ಈ ಸಾಧಕರನ್ನು ನೋಡಲು ಅವರು ಉಳಿದುಕೊಂಡಿದ್ದ ಮನೆಯಹತ್ತಿರ ಹೋದರು. ಆಗಷ್ಟೇ ನಿತ್ಯ ಅನುಷ್ಥಾನ  ಮುಗಿಸಿ ಯಾರನ್ನೋ ಕಾಯುತ್ತಿರುವಂತೆ ಈಚಿನ ವರಾಂಡಾದಲ್ಲಿ ಆರಾಮ ಕುರ್ಚಿಯಮೇಲೆ ಆಸೀನರಾಗಿದ್ದರು. ಈ ನಾಲ್ಕೂ ಜನ ಅವರಲ್ಲಿ ಹೋಗಿ ಪಾದಕ್ಕೆ ನಮಸ್ಕರಿಸಿದರು. ಆ ಸಾಧಕರು ಆತ್ಮೀಯವಾಗಿ ಬರಮಾಡಿಕೊಂಡು ಉಭಯಕುಶಲೋಪರಿ ವಿಚಾರಿಸಿದ ನಂತರ ಬಂದ ವಿಚಾರವೇನೆಂದು ಕೇಳಿದರು. ಎಲ್ಲವನ್ನು ವಿವರವಾಗಿ ವಿವರಿಸಿ ಈ ಸಮಸ್ಯೆಗೆ ಪರಿಹಾರ ಮಾಡಿಕೊಡಬೇಕೆಂದು ಬೇಡಿಕೊಂಡರು. ಇವರ ಸಮಸ್ಯೆಯನ್ನು ಸಮಾಧಾನವಾಗಿ ಆಲಿಸಿದ ನಂತರ ಲಕ್ಷ್ಮಿಯನ್ನು ಒಮ್ಮೆ ದಿಟ್ಟಿಸಿ ನೋಡುತ್ತಾ ಹಾಗೆ ಧ್ಯಾನಸ್ತರಾದರು.

ಕೆಲವು ಕ್ಷಣಗಳ ನಂತರ ಲಕ್ಷ್ಮಿಯನ್ನು ಉದ್ದೇಶಿಸಿ " ನೀನು ಧರಿಸಿರುವ ಆ ವಜ್ರದ ಮೂಗುತಿಯನ್ನು ಕೆಲಕಾಲ ನಂಗೆ ಕೊಡಲು ಸಾಧ್ಯವೇ? "ಎಂದು ಪ್ರಶ್ನಿಸಿದರು. ತಕ್ಷಣದಲ್ಲಿ ಎಲ್ಲರಿಗು ಒಂದು ರೀತಿಯ ಆಶ್ಚರ್ಯ ವಾಯಿತು. ಏನು ಹೇಳಬೇಕೆಂದು ತಿಳಿಯದಾಯಿತು. ಇದನ್ನು ಗಮನಿಸಿದ ಸಾಧಕರು ಎಲ್ಲರ ಮುಖವನ್ನು ನೋಡಿ " ಚಿಂತೆ ಬೇಡ. ಈ ಮೂಗುತಿಯನ್ನು ಇನ್ನೊಂದು ಘಂಟೆಯಲ್ಲಿ ನಿಮಗೆ ವಾಪಸ್ಸು ಕೊಡುತ್ತೇನೆ. ಅಲ್ಲಿಯ ತನಕ ನೀವು ನಾಲ್ಕೂ ಜನ ಹತ್ತಿರದಲ್ಲಿರುವ  ಗಣೇಶನ  ದೇವಸ್ತಾನಕ್ಕೆ ಹೋಗಿ ಅಲ್ಲಿರುವ ನೀರಿನ ಝರಿಯಲ್ಲಿ ಸ್ನಾನ ಮಾಡಿ ಪೂಜೆ ಮುಗಿಸಿ ಬನ್ನಿ. ನಿಮ್ಮ ಸಮಸ್ಯೆಗೆ ನಂತರದಲ್ಲಿ ಪರಿಹಾರ ಹುಡುಕೋಣ." ಎಂದರು. ಏನೂ ತೋಚದೆ ಲಕ್ಷ್ಮಿ ಮೂಗುತಿಯನ್ನು ಬಿಚ್ಚಿ ಸಾಧಕರ ಕೈಯಲ್ಲಿ ಇತ್ತು,ದೇವಸ್ತಾನದ ಕಡೆಗೆ ನಾಲ್ವರು ಹೊರಟರು. 

ಅಷ್ಟುಹೊತ್ತಿಗಾಗಲೇ ನಿಧಾನವಾಗಿ ಸೂರ್ಯ ಮೇಲೇರುತ್ತಿದ್ದ. ಲಕ್ಷ್ಮಿಯ ಮನಸ್ಸಿನಲ್ಲಿ ಒಂದುರೀತಿಯ ತಳಮಳವಿತ್ತು. ಆ ಸಾಧಕರು ನನ್ನ ಮೂಗುತಿಯನ್ನೇಕೆ ಕೇಳಿದರು ?ಎಂಬುದೇ ಆಕೆಯನ್ನು ಕೊರೆಯುತ್ತಾ ಇತ್ತು. ಆ ಯೋಚನೆ ಅದೆಷ್ಟು ಆಳಕ್ಕೆ ಹೋಗಿತ್ತು ಎಂದರೆ ದೇವಸ್ತಾನ ಬಂದುದೇ ತಿಳಿಯಲಿಲ್ಲ. ಶ್ರೀನಿವಾಸನಿಗೆ ತನ್ನ ಹೆಂಡತಿಯ ಮೌನವನ್ನು ತಲೆನೋವೆಂದು ಭಾವಿಸಿ " ಏನು? ಮೌನವಾಗಿಬಿಟ್ಟೆ ? ಎಲ್ಲಾ ಸರಿಹೋಗುತ್ತೆ, ಚಿಂತಿಸಬೇಡ." ಎಂದು ಸಮಾಧಾನ ಮಾಡಿದ. ಝರಿಯಲ್ಲಿ ಸ್ನಾನಕ್ಕೆ ಹೋಗುವ ಮುಂಚೆ ರಾಜೇಂದ್ರ ಮತ್ತು ಅವರ ಪತ್ನಿ ಸೊಸೆಗೆ " ನಿನ್ನ ತಲೆನೋವು ಜಾಸ್ತಿಯಾಗುವುದಾದರೆ ತಲೆಗೆ ಸ್ನಾನ ಮಾಡಬೇಡ. ಪರವಾಗಿಲ್ಲ." ಎಂದರು. ಅಲ್ಲಿಯತನಕ ಲಕ್ಷ್ಮಿ ಯಾವುದೋ ಲೋಕದಲ್ಲಿ ಮುಳುಗಿಹೊಗಿದ್ದವಳು ತಲೆನೋವು ಎಂದ ತಕ್ಷಣ ಒಮ್ಮೆ ಎಚ್ಚೆತ್ತು ಕೊಂಡಳು. " ಹೌದು ನನಗೆ ತಲೆ ನೋವೆ ಇಲ್ಲ!!!!!!!!!" ಎಂದುಕೊಂಡಳು. ಏನೂ ಮಾತನಾಡದೆ, ತಲೆಗೆ ಸ್ನಾನ ಮಾಡಿದಳು, ದೇವಸ್ತಾನದ ಪೂಜಾ ಕಾರ್ಯಕ್ಕೆ ಕೈಜೋಡಿಸಿದಳು. ಎಲ್ಲ ಕಾರ್ಯಗಳನ್ನು ಅತ್ಯಂತ ಉತ್ಸಾಹದಿಂದ ಮಾಡಿದಳು.  ಲಕ್ಷ್ಮಿಗೆ ಆಶ್ಚರ್ಯ, ತಲೆನೋವು ಕಾಣಿಸುತ್ತಿಲ್ಲ.  ಇವಳ ಉತ್ಸಾಹ ನೋಡಿದ ಶ್ರೀನಿವಾಸ ಬೆರಗಾದ. ತನ್ನ ತಂದೆತಾಯಿಯಲ್ಲಿ ಆಶ್ಚರ್ಯ ವ್ಯಕ್ತಪಡಿಸಿದ.

ಲಕ್ಷ್ಮಿಯನ್ನು ಏನೊಂದು ಕೇಳದೆ ಪೂಜಾಕಾರ್ಯ ಮುಗಿಸಿ ಸಾಧಕರಲ್ಲಿ ಬಂದರು.  ಹಸನ್ಮುಖರಾಗಿಯೇ ಇವರನ್ನು ಸ್ವಾಗತಿಸಿದರು.  ಅಲ್ಲಿಯ ಪರಿಸರದ ಬಗ್ಗೆ ಕೇಳಿದರು.  ಪೂಜಕಾರ್ಯದ ಬಗ್ಗೆ ಕೇಳಿದರು. ನಂತರ ಲಕ್ಷ್ಮಿಯ ಕಡೆಗೆ ತಿರುಗಿ "ಈಗ ನಿನ್ನ ತಲೆನೋವು ಹೇಗಿದೆ ಮಗು? " ಎಂದು ಪ್ರಶ್ನಿಸಿದರು.  ಲಕ್ಷ್ಮಿ " ನನಗೆ ಈಗ ಒಂದು ಚೂರು ತಲೆ ನೋವಿಲ್ಲ!" ಎಂದಳು. ಎಲ್ಲರಿಗೂ ಆಶ್ಚರ್ಯ.  " ಸೂರ್ಯನ ಬೆಳಕಿನ ಜೊತೆಗೆ ನಿನ್ನ ತಲೆನೋವು ಇಂದು ಬರಲಿಲ್ಲ , ಆಲ್ಲವೇ ? " ಎಂದು ಸಾಧಕರು ಮರುಪ್ರಶ್ನೆ ಹಾಕಿದರು.  " ಹೌದು!  ನಂಗೆ ಆಶ್ಚರ್ಯವಾಗುತ್ತಿದೆ.    ನಿಮ್ಮ ಕೃಪೆಯಿಂದ ನನಗೆ ಈ ತಲೆನೋವಿನಿಂದ ಮುಕ್ತಿ  ಸಿಕ್ಕರೆ ಸಾಕು. ಹೀಗೆಯೇ  ನನಗೆ  ತಲೆನೋವು ಇಲ್ಲದ ಹಾಗೆ ಮಾಡಿಬಿಡಿ. ನಂಗೆ ಅಷ್ಟು ಸಾಕು ನಾನು ಇನ್ನೇನನ್ನು ಕೇಳುವುದಿಲ್ಲ. " ಎನ್ನುತ್ತಾ ಸಾಧಕರ ಕಾಲಿಗೆ ಎರಗಿದಳು ಲಕ್ಷ್ಮಿ.  " ಏಳು ಮಗು , ಏಳು. ದೇವರು ಮನಸ್ಸು ಮಾಡಿದರೆ ಎಷ್ಟು ಹೊತ್ತಿನ ಕೆಲಸ? " ಎಂದು ಬೆನ್ನು ಸವರುತ್ತಾ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡರು.   ಲಕ್ಷ್ಮಿಯ ತಲೆಯ ಮೇಲೆ ಕೈ ಇಟ್ಟು " ಇಂದಿಗೆ ನಿನ್ನ ತಲೆನೋವು ಹೋಯಿತು, ಆದರೆ ನೀನು ಮಾತ್ರ ಇನ್ನು ಎಂದಿಗೂ ಈ ವಜ್ರದ ಮೂಗುತಿಯನ್ನು ಮಾತ್ರ ಧರಿಸಬೇಡ. ಈ ವಜ್ರದ ಮುಗುತಿಯ ಪ್ರಭಾವದಿಂದ ನಿನಗೆ ತಲೆನೋವು ಬರುತ್ತಿತ್ತು,  ಅಷ್ಟೇ.   ನಿನಗೆ ವಜ್ರದ ಯಾವುದೇ ಆಭರಣ ಆಗಿಬರುವುದಿಲ್ಲ "  ಎಂದು ಲಕ್ಷ್ಮಿಯ ಕೈಯಿಂದ ಪಡೆದ ಆ ವಜ್ರದ ಮೂಗುತಿಯನ್ನು  ವಾಪಸ್ಸು ಕೊಟ್ಟರು.

ಅತ್ಯಂತ ಸಂತೋಷದಿಂದ ರಾಜೇಂದ್ರ ಮತ್ತು ಕುಟುಂಬದವರು ಸಾಧಕರ ಕಾಲಿಗೆ ಎರಗಿದರು.  ಅವರ ಸಂತೋಷ ಹೇಳತೀರದು.  ನಾಲ್ಕೂ ಜನರು ಸಾಧಕರ ಮುಂದೆ ಕೈ ಜೋಡಿಸಿ ನಿಂತರು.  ಲಕ್ಷ್ಮಿಗೆ ಆನಂದಬಾಷ್ಪ ಧಾರಾಕಾರವಾಗಿ ಹರಿಯುತ್ತಿತ್ತು.   ಏನು ಮಾಡಬೇಕೆಂದು ತೋಚದೆ ಸುಮ್ಮನೆ ನಿಂತಿದ್ದರು.  ಸಾಧಕರು ಮಾತನ್ನು ಮುಂದುವರೆಸಿ " ಇನ್ನ್ಯಾಕೆ ಚಿಂತೆ?  ನಿಮ್ಮ ಮನೋಕಾಮನೆ ಪೂರೈಸಿತಲ್ಲಾ!  ಸಂತೋಷವಾಗಿ ಹೋಗಿಬನ್ನಿ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ. " ಎಂದರು.  ಸಾವಧಾನವಾಗಿ ರಾಜೇಂದ್ರ ಅವರು ತಮ್ಮ ಕಿಸೆಯಿಂದ ೫೦೦೦ ರುಪಾಯಿಗಳನ್ನು ಹಣ್ಣಿನ ಸಮೇತ ಸಾಧಕರಿಗೆ ಅರ್ಪಿಸಲು ಮುಂದಾದರು.  ನಸುನಕ್ಕು ಸಾಧಕರು ಒಂದು ಹಣ್ಣನ್ನು ತೆಗೆದುಕೊಂಡು ನಯವಾಗಿ ಮಿಕ್ಕೆಲ್ಲವನ್ನು ತಿರಸ್ಕರಿಸಿದರು.  ಏನೂ ಹೇಳಿದರು ಒಪ್ಪಲಿಲ್ಲ.  ನಂತರದಲ್ಲಿ ಸಾಧಕರು ಎಲ್ಲಿ ಸಿಗುತ್ತಾರೆ? ಅವರನ್ನು ನೋಡಬೇಕೆನಿಸಿದರೆ ಎಲ್ಲಿ ಬಂದು ಕಾಣಬೇಕು ?  ಎನ್ನುವ ವಿವರಕ್ಕಾಗಿ ಕೇಳಿದರು.  ಸಾಧಕರು ಮಾತ್ರ ನಸುನಗುತ್ತಾ " ದೈವಕೃಪೆ ಇದ್ದಲ್ಲಿ ಮತ್ತೆ ಬೇಟಿ ಯಾಗೋಣ.   ಸನ್ಯಾಸಿಗೆಲ್ಲಿ  ಮನೆ ಮಠ? " ಎಂದು ಹೇಳುತ್ತಾ ಆತ್ಮೀಯವಾಗಿ ಬೀಳ್ಕೊಟ್ಟರು.

ಈಗ ಎರಡು ಮಕ್ಕಳ ತಾಯಿಯಾಗಿರುವ ಲಕ್ಷ್ಮಿಗೆ ಮತ್ತೆಂದು ತಲೆನೋವು ಭಾಧಿಸಿಲ್ಲ.  ಅತ್ಯಂತ ಸುಖಿ ಕುಟುಂಬದಲ್ಲಿ ಇರುವ ಇವರಿಗೆ   ಪುನಃ ಎಂದಾದರು ಈ ಸಾಧಕರ ಬೇಟಿ ಆಗಬಹುದೇನೋ ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ. 



(ಈಗ್ಗೆ ಸುಮಾರು 10 ವರ್ಷಗಳ ಹಿಂದೆ ನನ್ನ ಸ್ನೇಹಿತರು ಹೇಳಿದ ನೈಜ ಘಟನೆಯನ್ನು ನಿಮ್ಮ ಮುಂದೆ ಇಟ್ಟಿದ್ದೇನೆ.)



November 25, 2012

ನಾರದ ಭಕ್ತಿ ಸೂತ್ರ.


    ನಾರದ   ಭಕ್ತಿ ಸೂತ್ರ.

                       ಜ್ಞಾನವೇ ಆಗಲಿ ಭಕ್ತಿಯೇ ಆಗಲಿ,  ಒಂದು ಬಿಟ್ಟು ಇನ್ನೊಂದು ಇಲ್ಲ.  ಕೆಲವು ಕಡೆ ಭಕ್ತಿ ಮುಂದಾದರೆ,            ಕೆಲವು ಕಡೆ ಜ್ಞಾನ ಮುಂದಾಗಬಹುದು.  ಒಂದರ ಹಿಂದೆ ಇನ್ನೊಂದು ಇದ್ದೇ  ಇರುತ್ತದೆ. ಒಂದರಲ್ಲಿ ನಾವು ಮುಂದುವರೆದರೆ ಇನ್ನೊಂದು ನಮ್ಮ ಅರಿವಿಗೆ ಬಾರದಂತೆ ಹಿಂಬಾಲಿಸಿರುತ್ತದೆ.  ಅದ್ವೈತವಾದಿಗಳು ಸಗುಣ ಉಪಾಸನೆಯನ್ನು ಮಾಡದಿದ್ದರೂ ಎಲ್ಲಿಯವರೆಗೆ ಜೀವ - ಜಗತ್ತನ್ನು ನೋಡುತ್ತಾರೋ ಅಲ್ಲಿಯವರೆಗೆ ಈಶ್ವರನನ್ನು ಒಪ್ಪುತ್ತಾರೆ.  ಇನ್ನು ಅದ್ವೈತ ವೇದಾಂತಿಗಳು ಗುರುವಿನ ಮೇಲೆ ಶ್ರದ್ಧಾ ಭಕ್ತಿ ಇರಿಸುವುದು ಅವಶ್ಯಕ ಎನ್ನುತ್ತಾರೆ.
                    ಭಕ್ತಿಯ ಮಾರ್ಗದಲ್ಲಿ ಸಾಗಬೇಕಾದರೆ ಜ್ಞಾನದ ಗಿಡಕ್ಕೆ  ಗೊಬ್ಬರ ಹಾಕಬೇಕು.  ದೇವನೊಬ್ಬನಿರುವನೆಂಬ ಅರಿವು ಬೇಕಾದರೆ ಜ್ಞಾನದ ಕೃಷಿ ಆಗಲೇಬೇಕು. ಭಗವಂತನ ಅನನ್ಯ ಪ್ರಾರ್ಥನೆಗೆ ಜ್ಞಾನ ಮತ್ತು ಭಕ್ತಿ ಅನ್ಯೋನ್ಯವಾಗಿ ಆಶ್ರಯ ಪಡದೆ ಇರುತ್ತವೆ.   ( ಸೂತ್ರ 29 )

               ಭಕ್ತಿಪರಮ ಪ್ರೇಮ ಸ್ವರೂಪವೇ! ಭಕ್ತ ಭಗವಂತನಿಗಾಗಿ, ಭಗವಂತನಿಗೊಸ್ಕರ ತನ್ನ ಭಕ್ತಿಯನ್ನು ಸಮರ್ಪಿಸುತ್ತಾನೆಯೇ ಹೊರತು ಯಾವ ಬೇಡಿಕೆಯನ್ನು ಇಡಲಾರ. ಭಗವಂತ ಭಕ್ತ ಪರಾದೀನ. ಭಗವಂತ,  ಭಕ್ತ ಬೇಡದೆಯೇ ಜ್ಞಾನ,  ಮುಕ್ತಿಯನ್ನು ದಯಪಾಲಿಸುತ್ತಾನೆ. ಆದರೆ, ಭಕ್ತನಿಗೆ ಅದ್ಯಾವುದು ಬೇಡ. ಹೇಗೆಂದರೆ,ತನ್ನ ತಾಯಿಯನ್ನು ಬಿಟ್ಟು ಮಗುವಿಗೆ ಬೇರೇನೂ ಆಮಿಷ ಒಡ್ಡಿದರೂ  ಅದನ್ನು ಸಾರಾಸಗಟಾಗಿ ತಿರಸ್ಕರಿಸುತ್ತದೆ.  ತಾತ್ಕಾಲಿಕವಾಗಿ ಮಗು ಬೇರೆಬೇರೆ ಆಟದ ಸಾಮಾನುಗಳಿಗೆ, ಸಿಹಿತಿಂಡಿಗೆ, ಹೊರಗಿನ ವಾತಾವರಣಕ್ಕೆ ಒಗ್ಗಿಕೊಂಡರೂ, ತಾಯಿಯನ್ನು ಕಂಡಕೂಡಲೇ ಎಲ್ಲವನ್ನು ಬಿಸಾಕಿ ತಾಯಿಯ ಮಡಿಲು ಸೇರುವಂತೆ,  ಭಕ್ತ ಭಗವಂತನಲ್ಲಿ  ಸೇರುತ್ತಾನೆ.
                       ಭಗವಂತನು ಸಹ ಭಕ್ತನಿಗೆ ಆಸ್ತಿ, ಅಂತಸ್ತು, ಯಶಸ್ಸು, ಪದವಿ, ಇತ್ಯಾದಿಗಳನ್ನು ನೀಡಿ,  ಪ್ರಾಪಂಚಿಕ ವಸ್ತುಗಳ  ಮೇಲಿನ ವ್ಯಾಮೋಹವನ್ನು ಕೊಟ್ಟು,  ಭ್ರಮೆಯಲ್ಲಿ ಮುಳುಗುವಂತೆ ಮಾಡಿಬಿಡುತ್ತಾನೆ. ಇವುಗಳೇ ಶಾಶ್ವತ ಎನ್ನುವಂತೆ ಭಕ್ತನು ಭ್ರಮೆಯಲ್ಲಿ ತೇಲಾಡಲು ಪ್ರಾರಂಭ ಮಾಡಿದರೆ,  ಲೌಕಿಕದ ಸಾಗರ ದಲ್ಲಿ ಕೊಚ್ಚಿಕೊಂಡು ಹೋಗಿಬಿಡುತ್ತಾನೆ .  ಆದರೆ, ನಿಜ ಭಕ್ತನಾದವನಿಗೆ ಇದು ತಾತ್ಕಾಲಿಕ, ಶಾಶ್ವತವೆಂದರೆ ಕೇವಲ ಭಗವಂತ   ಮಾತ್ರ ಎಂದು ಅರಿವಾಗಿ, ಭ್ರಮೆಗೆ ಒಳಗಾಗದೆ ಕಮಲದ ಎಲೆಯ ಮೇಲಿನ  ನೀರಿನಂತೆ ಇರುತ್ತಾನೆ. ಆಗಲೇ ಅವನಿಗೆ ಪರಭಕ್ತಿಯು ಪ್ರಾಪ್ತವಾಗುತ್ತದೆ.
               ಈ ಪರಭಕ್ತಿಯು ಪ್ರಾಪ್ತವಾದ ಮೇಲೆ ಭಕ್ತನು ಮುಂಚಿನ ಹಾಗೆಯೇ  ಇರುತ್ತಾನೆ. ಆದರೆ, ಇವನ ದೃಷ್ಟಿಕೋನ ಮಾತ್ರ  ಬದಲಾಗಿಬಿಡುತ್ತದೆ. ಜಗತ್ತನ್ನು ಇತರರಿಗಿಂತ ಬೇರೆಯಾಗಿಯೇ     ನೋಡುತ್ತಾನೆ. ಇವನಿಗಿದ್ದ ಆತಂಕ, ಭಯ, ಸಂಶಯ ಎಲ್ಲವು ದೂರಾಗಿ ಎಲ್ಲರಲ್ಲೂ, ಎಲ್ಲರದರಲ್ಲೂ ಪ್ರೀತಿ, ಪ್ರೇಮ ಹುಟ್ಟುತ್ತದೆ.  ಇದು ಇವನಿಗೆ ಹೊಸತಾಗಿ ಬಂದುದಲ್ಲ. ಇವನೊಳಗೆ ಇದ್ದದ್ದು ಪ್ರಕಟವಾಯಿತು ಅಷ್ಟೇ. ಇದಕ್ಕೆ ನಾರದರು ಹಲವು ದೃಷ್ಟಾಂತಗಳನ್ನು ಕೊಡುತ್ತಾರೆ.
               ಒಬ್ಬ ರಾಜನ ಮಗ, ಚಿಕ್ಕ ಮಗುವಾಗಿದ್ದಾಗಲೇ ತಪ್ಪಿಸಿಕೊಂಡು ಬಿಡುತ್ತಾನೆ. ಆ ಮಗುವು ಕಾಡಿನಲ್ಲಿ ಬೇಡರ ಆಶ್ರಯದಲ್ಲಿ ಬೆಳೆದು ದೊಡ್ಡವನಾಗುತ್ತಾನೆ. ನಂತರ ಅವನು ಬೇಡರ ಮಗನಲ್ಲ, ಮಹಾರಾಜನ  ಮಗ ಎಂದು ತಿಳಿಯುತ್ತದೆ.  ಅವನು ರಾಜ್ಯಕ್ಕೆ ಮರಳಿ ಬರುತ್ತಾನೆ. ಸಿಂಹಾಸನಾರೂಡನಾಗುತ್ತಾನೆ.  ಇಲ್ಲಿ ರಾಜಕುಮಾರನಿಗೆ ಹೊಸತೇನೂ ದೊರೆಯಲಿಲ್ಲ. ಅವನಿಗೆ ನಿಜವಾಗಿ ದೊರೆಯಬೇಕಾದದ್ದು ದೊರೆಯಿತು. ಸ್ವಲ್ಪ ನಿಧಾನವಾಗಿ ದೊರೆಯಿತು ಅಷ್ಟೇ. 
               ಸೂರ್ಯ ಪ್ರಖರವಾಗಿ ಬೆಳಗುವ   ಸಮಯದಲ್ಲಿ ಒಂದು ಕಪ್ಪನೆಯ ಮೋಡ ಅಡ್ಡ ಬಂದಂತೆ.  ಆ ಕೆಲವು ನಿಮಿಷಗಳ ಕಾಲ ಸೂರ್ಯ ಮರೆಯಾಗುತ್ತಾನೆ. ನಿಜ. ಆದರೆ, ಮೋಡ ಕರಗಿದ ಕೂಡಲೇ ಮತ್ತೆ ಸೂರ್ಯನ ಪ್ರಖರ ಕಿರಣಗಳು ಭೂಮಿಗೆ ಬೀಳುತ್ತವೆ. ಇಲ್ಲಿ ಹೊಸತನವೇನು ಇಲ್ಲ. ಅದೇ ಸೂರ್ಯ, ಅದೇ ಕಿರಣ.
              ಹೀಗೆ ಭಗವಂತನನ್ನು ಅರಿಯುವ ಮುಂಚೆ ಭಕ್ತ,  ನಾನು ಬೇರೆ,  ಭಗವಂತ ಬೇರೆ ಎಂದು ತಿಳಿದಿರುತ್ತಾನೆ. ಆದರೆ ಪರಭಕ್ತಿಯು ಪ್ರಾಪ್ತವಾದ ಮೇಲೆ, ಭಗವಂತನ ಮೇಲಿನ ಪ್ರೇಮವು ಅಪಾರವಾದ ಮೇಲೆ,  ನಾನು ಭಗವಂತನಿಗೆ ಸೇರಿದವನು.  ನಾನು ಬೇರೆ ಅಲ್ಲ ಭಗವಂತ ಬೇರೆ ಅಲ್ಲ ಎನ್ನುವ ಭಾವ ಬರುತ್ತದೆ. ಇದು ಎಲ್ಲಿಂದಲೋ ಬಂದುದಲ್ಲ ಅದು ಈ ಸಮಯದಲ್ಲಿ ಪ್ರಕಟವಾದದ್ದು.    (ಸೂತ್ರ 30 31 32 33 )
               ಹೀಗೆ ಇನ್ನು ಹಲವಾರು ಉದಾಹರೆಣೆಗಳನ್ನು ನಾರದರು ಕೊಡುತ್ತಾರೆ.
               ಒಟ್ಟು ಸಾರಂಶವೆಂದರೆ.......... ನಾವು ಭಗವಂತನ ಮೇಲಿನ ಭಕ್ತಿಯನ್ನು ಮರೆತು ಪ್ರಾಪಂಚಿಕ ಸುಖಗಳ ಭೋಗಗಳಲ್ಲಿ ಮೈಮರೆತು ಭ್ರಾಂತಿಗೊಳಗಾಗಿದ್ದೇವೆ. ಆದರೆ, ನಮ್ಮ ನಿಜ ಸ್ತಿತಿ ನಮಗೆ ತಿಳಿಯಲೇ ಇಲ್ಲ. ಒಂದು ದಿನ ತಿಳಿಯಿತು, ನಾವೆಲ್ಲಾ ಈ ಪ್ರಪಂಚದ ನಾಟಕರಂಗದ ಪಾತ್ರಧಾರಿಗಳು.  ನಮ್ಮ ನಮ್ಮ ಪಾತ್ರ ಮುಗಿದ ನಂತರ ನಾವು ನಮ್ಮ ಮನೆಗೆ ಹೋಗಲೇ ಬೇಕು. ಆದ್ದರಿಂದಲೇ ದಾಸರು ಹಾಡಿರುವುದು " ಅಲ್ಲಿದೆ ನಮ್ಮನೆ , ಇಲ್ಲಿ ಬಂದೆ ಸುಮ್ಮನೆ." ನಮ್ಮ ಪಾತ್ರಧಾರಣೆ, ಪೋಷಾಕು, ಸೇವಕರು, ಸಿಂಹಾಸನ, ರಥ ಇತ್ಯಾದಿಗಳು ಕೇವಲ ನಾಟಕ ಮುಗಿಯುವತನಕ ಮಾತ್ರ .  ಈ ವೇಷ ತಾತ್ಕಾಲಿಕ,ಅವಸ್ತೆ. ಸೂತ್ರಧಾರನ ನಿರ್ದೇಶನದಂತೆ ಆಡುವವರು. ಈ ಜ್ಞಾನ ಪ್ರಾಪ್ತಿಯೇ ಪರಭಕ್ತಿ. ಈ ಜ್ಞಾನ ಸಂಪಾದನೆಯಾದ ಕ್ಷಣವೇ ಭಗವಂತ ಮುಕ್ತ ಸ್ತಿತಿಯನ್ನು ನೀಡುತ್ತಾನೆ. ಆದರೆ ಭಕ್ತನ ಮನಸ್ತಿತಿಯು ಮುಕ್ತಿಯ ಕಡೆಗಲ್ಲ.....ಭಗವಂತನ ಕಡೆಗೆ,  ಕೇವಲ ಭಗವಂತನ ಪ್ರೇಮದ ಕಡೆಗೆ.
               ಓಂ ತತ್ಸತ್ .......................  .                                      
ಹೆಚ್ ಏನ್ ಪ್ರಕಾಶ್ 
೨೫ ೧೧ ೨೦೧೨              

November 22, 2012

ಉಗ್ರನಿಗೆ ಸಲ್ಲುವ ಗೌರವವಲ್ಲ


    

                   ಮುಂಬೈ ದಾಳಿಯಲ್ಲಿ 161 ಸಾವಿಗೆ ಕಾರಣನಾದವರಲ್ಲಿ ಒಬ್ಬನಾದ ಉಗ್ರವಾದಿ ಕಸಬನನ್ನು ಎಂದೋ ಸಾಯಿಸಬೇಕಾಗಿದ್ದು, ಅವನಿಗೆ   ನಿನ್ನೆ ಗಲ್ಲು ಶಿಕ್ಷೆ ನೀಡಿರುವ ವಿಚಾರವನ್ನು ನಮ್ಮ ನಾಡಿನ ಪ್ರಮುಖಪತ್ರಿಕೆಗಳು ಮುಖ್ಯಪುಟದಲ್ಲಿ ದಪ್ಪ ದಪ್ಪ ಅಕ್ಷರಗಳಲ್ಲಿ, ದೊಡ್ಡ ಫೋಟೋ ಸಮೇತ ಇಡೀ ಪುಟದಲ್ಲಿ ಹುತಾತ್ಮನೇನೋ ಎಂಬುವಂತೆ ಬಿಂಬಿಸಿದ್ದಾರೆ. ಪ್ರತಿಕ್ಷಣದ ನಡವಳಿಕೆಯನ್ನು ದಾಖಲಿಸಿದ್ದಾರೆ.   ಒಬ್ಬ ಉಗ್ರವಾದಿಯನ್ನು ಗಲ್ಲಿಗೇರಿಸಿದರ ಬಗ್ಗೆ ಇಷ್ಟೊಂದು ವೈಭವೀಕರಣ ಬೇಕೇ? ಗಲ್ಲಿಗೆರಿಸುದರ ಬಗ್ಗೆ ಒಂದು ಚಿಕ್ಕ ಸುದ್ದಿ ವಿಭಾಗದ ವರದಿ ಸಾಕೆನಿಸಿತಿತ್ತು. ಬೇಕಿದ್ದರೆ ಸಂಪಾದಕರ ಕಾಲಂನಲ್ಲಿ ಅವನ ಬಗ್ಗೆ ಎಷ್ಟು ವಿವರ ಬೇಕಾದರೂ ವರದಿ ಬರೆಯಲಿ.   ಅದು ಬಿಟ್ಟು ಇವನಿಗೆ  ಭಾರತರತ್ನ ಪ್ರಶಸ್ತಿ ಕೊಟ್ಟಂತೆ ವೈಭವಿಕರಿಸಲಾಗಿದೆ. ಇಷ್ಟೊಂದು ಪ್ರಚಾರದ ಅವಶ್ಯಕತೆ ಏನಿದೆ? 
                  ರಾಷ್ಟ್ರದ ಗೃಹ ಮಂತ್ರಿಗಳು ಪ್ರಧಾನಿಗೆ ಮತ್ತು ಸೋನಿಯಾ ಗಾಂಧಿಗೆ ಈ ವಿಚಾರ ತಿಳಿಸಿರಲಿಲ್ಲವೆಂದು ಹೇಳಿಕೆ ಕೊಟ್ಟಂತಹ ಸಂದರ್ಭದಲ್ಲಿ ಪ್ರಚಾರ ಮಾಧ್ಯಮದವರು ಇಷ್ಟೊಂದು ವೈಭವಿಕರಿಸಿದ್ದು ಸರಿಯೇ?
                   ಏನೇ ಆದರೂ ಒಬ್ಬ ಉಗನಿಗೆ ಸಲ್ಲಬೇಕಾದ ಗೌರವ ಇದಲ್ಲ. 
                   ನೀವೇನು ಹೇಳುತ್ತೀರಿ?

November 15, 2012

ದೊಡ್ಡವರ ದಾರಿ ......14



ದೊಡ್ಡವರ ದಾರಿ ......14 
          
             
        ನಮ್ಮ ಗುರುನಾಥರು ಯಾವಾಗಲು ಈ ಮಾತನ್ನು ಹೇಳುತ್ತಿದ್ದರು.  ಜೀವನದಲ್ಲಿ ಮೂರು                                               "ಮ"ಗಳನ್ನು  ಜ್ಞಾಪಕದಲ್ಲಿ ಇಟ್ಟುಕೊಂಡಿರಬೇಕು.  ಇದು ನಮಗೆ ಸರಿದಾರಿಯಲ್ಲಿ ನಡೆಯಲು ಮಾರ್ಗದರ್ಶಿಯಾಗುತ್ತದೆ.
                             ಆ ಮೂರು " ಮ "ಗಳೆಂದರೆ, " ಮರೆಯಬಾರದು ,ಮೆರೆಯಬಾರದು ಮತ್ತು ಮುರಿಯಬಾರದು. "
                         ನಮ್ಮ ಜೀವನವನ್ನು ಸುಗಮಗೊಳಿಸಲು ಶೈಶವದಿಂದ ನಮಗಾಗಿ ಅದೆಷ್ಟೋ ಜೀವಗಳು ಶ್ರಮಿಸುತ್ತವೆ. ಪ್ರತಿ ಕ್ಷಣದಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ನಮಗೆ ಮತ್ತೊಬ್ಬರ ಸಹಾಯ ಸಹಕಾರ ಇದ್ದೆe  ಇರುತ್ತದೆ . ನಾವೇ ಎಲ್ಲವನ್ನು ಮಾಡಲಾಗುವುದಿಲ್ಲ.   ಎಲ್ಲರ ಪರಿಶ್ರಮದ ಸಹಕಾರದಿಂದ ನಾವು ನಮ್ಮ ಬದುಕನ್ನು ಸಾಗಿಸುತ್ತೇವೆ, ಸುಂದರವಾಗಿಸಿಕೊಂಡಿ ರುತ್ತೇವೆ.  ಆದರೆ ಈ ರೀತಿ ಸಹಾಯ ಮತ್ತು ಸಹಕಾರ ನೀಡಿದ ಮಹನೀಯರುಗಳನ್ನು  ನಮ್ಮ ಕೆಲಸವಾದ ನಂತರ ಮರೆತು ಬಿಡುತ್ತೇವೆ.  ಇಲ್ಲಿ ತಂದೆ, ತಾಯಿ, ಅಣ್ಣ ತಮ್ಮ, ಅಕ್ಕ ತಂಗಿ, ಗುರುಜನ, ನೆರೆಹೊರೆಯವರು, ಸ್ನೇಹಿತರು, ಬಂಧುಗಳು , ಹಾಲು ತರಕಾರಿ ದಿನಸಿ ಮುಂತಾದವನ್ನು ಕೊಡುವ ಮಂದಿ ಮತ್ತು ಮನೆ ಕೆಲಸದವರನ್ನು ಸೇರಿಸಿಕೊಂಡು ಇನ್ನು ಹಲವು ಮಂದಿ  ಎಲ್ಲರೂ  ನಮ್ಮ ಜೀವನವನ್ನು ಸುಗಮಗೊಳಿಸಲು ಪರಿಶ್ರಮ ಹಾಕಿದವರೇ!  ಇವರ ಶ್ರಮವನ್ನು ಗೌರವಿಸು. ಇವರನ್ನು ಎಂದಿಗೂ ಮರೆಯಬಾರದು.

                    ಎಲ್ಲರ ಪರಿಶ್ರಮದ  ಜೊತೆಗೆ  ನಮ್ಮ  ಪರಿಶ್ರಮವೂ  ಸೇರಿಕೊಂಡು ನಾವು  ಸಮಾಜದಲ್ಲಿ   ಒಂದು ಜವಾಬ್ದಾರಿಯುತ ಸ್ಥಾನ ಅಲಂಕರಿಸಿದಾಗ ಹೆಸರು, ಐಶ್ವರ್ಯ, ಯಶಸ್ಸು ಇತ್ಯಾದಿಗಳು ಲಭ್ಯವಾಗುತ್ತದೆ.  ಇಂತಹ ಸಮಯದಲ್ಲಿ ಅಹಂಕಾರ, ಮದ ನಮ್ಮೊಳಗೇ ನಮ್ಮ ಅರಿವಿಗೆ ಬಾರದಂತೆ ನುಸುಳಿಬಿಡುತ್ತದೆ.  ಇದು ಅವನತಿಯ ಹಾದಿ ಎಂದು ತಿಳಿಯುವುದೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಮದೋನ್ಮತ್ತ ರಾಗಬಾರದು.   ಈ  ಅವಕಾಶ ದೇವರು ನನಗೆ ದಯಪಾಲಿಸಿರುವ ಭಿಕ್ಷೆ.   ಇಲ್ಲಿ ನನ್ನಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ಅವಶ್ಯಕತೆ ಇರುವವರಿಗೆ ಮಾಡುತ್ತೇನೆ ಎಂಬ ವಿನಮ್ರ ಭಾವನೆ ಹೊಂದಬೇಕೆ ವಿನಃ ಮೆರೆಯಬಾರದು.

                        ನಾವೆಲ್ಲರೂ ಭಾವನ ಜೀವಿಗಳು.  ನಮ್ಮೆಲ್ಲರಿಗೂ ಒಂದೊಂದು ರೀತಿಯಲ್ಲಿ ಬೇರೆ ಬೇರೆ ಭಾವನೆಗಳು ಇರುತ್ತವೆ.  ಎಲ್ಲವು ಒಂದೇ ರೀತಿ ಇರಲು ಸಾಧ್ಯವಿಲ್ಲ, ಒಂದೇ ರೀತಿಯಲ್ಲಿ ಇರಬೇಕಾಗಿಯು ಇಲ್ಲ. ನನಗೆ ಸರಿಯೆನಿಸಿದ ಭಾವನೆಗಳು ನಿಮಗೆ ಬೇಡವೆನಿಸಬಹುದು.  ಬೇಕು ಬೇಡಗಳಿಗೆ ಅವರದೇ ಆದ ಕಾರಣಗಳು ಇದ್ದೆ ಇರುತ್ತವೆ.  ಈ ಎಲ್ಲಾ  ಕಾರಣಗಳು ಅವರವರಿಗೆ ಸರಿಯೆಂದೇ ಅನಿಸಿರುತ್ತದೆ.   ಇಂತಹ ಸಮಯದಲ್ಲಿ ಪ್ರತಿಯೊಬ್ಬರ ಭಾವನೆಯನ್ನು ಗೌರವಿಸಬೇಕು.  ಸರಿ ತಪ್ಪು ನಿರ್ಣಯ ನಮಗೆ ಬೇಡ. ಸರಿ ಎನಿಸಿದ್ದನ್ನು ಮಾಡು, ತಪ್ಪೆಂದು ನಿನಗನಿಸಿದ್ದನ್ನು ಬಿಟ್ಟು ಬಿಡು. ಆದರೆ, ಇನ್ನೊಬ್ಬರ ಭಾವನೆಯನ್ನು ಘಾಸಿಗೊಳಿಸ ಬಾರದು . ಇನ್ನೊಬ್ಬರ ಭಾವನೆಯನ್ನು ಮುರಿಯಬಾರದು.

                             ಇಷ್ಟು ಸಾಕಲ್ಲವೇ ಉತ್ತಮ ಜೀವ ನಡೆಸಲು.  ಹೇಳಿದಂತೆ ಮಾಡಿ ತೋರಿದ ಗುರುವಿನ ಪಾದಾರವಿನ್ದಕ್ಕೆ ಶ್ರದ್ಧೆಯ ನಮನಗಳು.

ಹೆಚ್ ಏನ್ ಪ್ರಕಾಶ್
15 11 2012
                                   

                                                             

November 12, 2012

ಬೇಡಿಕೆ



                        ಭಗವಂತ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ   ಉಡುಗೊರೆಗಳನ್ನು ನೀಡುತ್ತಾನೆ.  ಕೆಲವು ಕಣ್ಣಿಗೆ                   ಕಾಣುವಂತದ್ದು,  ಮತ್ತೆ ಕೆಲವು ಕಣ್ಣಿಗೆ ಕಾಣದ್ದು.     ಕಾಣುವ ವಸ್ತುಗಳು ತಾತ್ಕಾಲಿಕ ಹಾಗೂ ಮತ್ತೂ ಮತ್ತೂ  ಬೇಕೆಂದು ಅನಿಸುವವು.   ಆದರೆ, ಕಣ್ಣಿಗೆ ಕಾಣದ್ದು ಮಾತ್ರ ಶಾಶ್ವತ.   ಇದನ್ನು ಅದೃಶ್ಯ ಉಡುಗೊರೆ ಎಂದು ಹೇಳುತ್ತಾರೆ.
                  ಲೌಕಿಕವಾಗಿ ಸಿಗುವ ಸಂಪತ್ತು, ಆಸ್ತಿ, ರೂಪ, ಇತ್ಯಾದಿಗಳು ಕಣ್ಣಿಗೆ ಕಾಣುವ ಉಡುಗೊರೆಗಳು.  ಒಳ್ಳೆಯಬುದ್ಧಿ, ನಡವಳಿಕೆ, ಆರೋಗ್ಯ , ಒಳ್ಳೆಯ ತಂದೆತಾಯಿ , ಒಳ್ಳೆಯ ಮಕ್ಕಳು, ಸಮಾಜದಲ್ಲಿ ಮಾನ್ಯತೆ ಮತ್ತೂ ಭಗವಂತನಲ್ಲಿ ಅನನ್ಯ ಭಕ್ತಿ ಮತ್ತು ಶ್ರದ್ಧೆ ಇವೆಲ್ಲವೂ ಕಣ್ಣಿಗೆ ಕಾಣದ ಶಾಶ್ವತ ಉಡುಗೊರೆಗಳು. 
                ಭಗವಂತ ನೀಡುವಾಗಲೂ ಬಹಳ ವಿಶೇಷತೆಯಿಂದ ನೀಡುತ್ತಾನೆ. ಅವನಿಗೊಂದು ಸೂತ್ರವಿದೆ. ಯಾವಯಾವ ಉಡುಗೊರೆಗಳನ್ನು ಯಾರು ಯಾರು ಬೇಡುತ್ತಾರೋ ಅವರಿಗೆ ಆಯಾಯ ಉಡುಗೊರೆಗಳನ್ನು ಸರಿಯಾದ ಸಮಯದಲ್ಲೇ ನೀಡುತ್ತಾನೆ.  ಬೇಡಿದ್ದನ್ನು ಮಾತ್ರ ನೀಡುವ ಸೂತ್ರಧಾರಿ.  ಎಂದೂ ನಾವು ಬೇಡದ್ದನ್ನು ಭಗವಂತ ನೀಡುವುದಿಲ್ಲ. ಸುಪ್ತಮನಸ್ಸಿನಲ್ಲೇ ಇರಬಹುದು, ಬಹಿರಂಗದಲ್ಲೇ ಇರಬಹುದು  ನಮ್ಮ ನಮ್ಮ ಬೇಡಿಕೆಗಳನ್ನು ನಮ್ಮ ಇಷ್ಟಾನುಸಾರ ಈಡೆರಿಸುತ್ತಾನೆ. ಯಾರು ಬೇಕಾದರೂ, ಯಾವಾಗ ,ಹೇಗೆ ಮತ್ತು ಏನು  ಬೇಕಾದರೂ ಬೇಡಿಕೆ ಸಲ್ಲಿಸಲಿ, ಆ ಬೇಡಿಕೆಗಳನ್ನು ಭಗವಂತ ನಿರಾಕರಿಸಲಾರ. ನಮ್ಮ ನಮ್ಮ ಸರದಿ ಬಂದಾಗ,  ನಮ್ಮ ನಮ್ಮ  ಅರ್ಹತೆಗೆ ತಕ್ಕಂತೆ ಭಗವಂತ ನೀಡುತ್ತಾ ಹೋಗುತ್ತಾನೆ. ತಕ್ಷಣಕ್ಕೆ ಸಿಗದಿದ್ದರೂ ಅರ್ಹತೆ ಬಂದಾಗ ಖಂಡಿತಾ ಸಿಕ್ಕೇ ಸಿಗುತ್ತದೆ.  ಇಲ್ಲಿ ನಿರಾಕರಣೆಯ ಪ್ರಶ್ನೆಯೇ ಇಲ್ಲ. ಆದರೆ, ಕಾರಣ ಪರಿಣಾಮಗಳ ಬಗ್ಗೆ ಭಗವಂತ ಜವಾಬ್ದಾರಿ ಹೊರುವುದಿಲ್ಲ. ಪರಿಣಾಮಗಳ ಬಗ್ಗೆ ಚಿಂತಿಸ ಬೇಕಾದ   ಜವಾಬ್ದಾರಿ ಮಾತ್ರ ನಮ್ಮದೇ .
                   ಆದ್ದರಿಂದ, ಭಗವಂತನಲ್ಲಿ ನಾವು ಬೇಡುವಾಗ ಸರಿಯಾದುದನ್ನೇ ಚಿಂತಿಸಿ ಬೇಡಬೇಕು. ಬೇಡಿದ್ದನ್ನು ಪಡೆಯುವ ಅರ್ಹತೆಯನ್ನು ಜೊತೆಜೊತೆಯಲ್ಲೇ ಗಳಿಸಿಕೊಳ್ಳಬೇಕು.
                          ಎಲ್ಲಾ ಓದುಗರಿಗೆ ದೀಪದ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.   

November 3, 2012

ದೊಡ್ಡವರ ದಾರಿ................13


ದೊಡ್ಡವರ ದಾರಿ................13 

            ಈಗ್ಗೆ 30 ವರ್ಷಗಳ ಹಿಂದಿನ ಮಾತು. ಆಗ ಇಂಜಿನೀಯರಿಂಗ್ ಮಾಡುತ್ತಿದ್ದ ಸಮಯ. ಮದರಾಸಿನ ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿದ್ದ ಒಬ್ಬ ಹಿರಿಯ ವಿಧ್ಯಾರ್ಥಿ ನೆನಪಿನ ಗಂಟನ್ನು ಬಿಚ್ಚಿ ಹಂಚಿಕೊಂಡ ಸ್ವಾರಸ್ಯಕರ ಪ್ರಸಂಗ ಇದು. 

           ಆಗ ಮದರಾಸಿನಲ್ಲಿ ನೀರಿಗೆ ಬಹಳ ಪರದಾಡುತ್ತಿದ್ದ ಒಂದು ಬೇಸುಗೆಯ ತಿಂಗಳು. ಆ ದಿನಗಳಲ್ಲಿ ನಾವಿದ್ದ ಹಾಸ್ಟೆಲ್ಲಿನಲ್ಲಿ ನೀರಿನ ಸಮರ್ಪಕ ಸರಬರಾಜು ಇಲ್ಲದೆ ಕಷ್ಟವಾಗುತ್ತಿತ್ತು. ಇದಕ್ಕೆ ಬೇರೆ ಏನು ಉಪಾಯವಿರಲಿಲ್ಲ. ಪರ್ಯಾಯ ವ್ಯವಸ್ಥೆಯೊಂದೆ ಉಳಿದ ಮಾರ್ಗವಾಗಿತ್ತು.  ಈ ಬಗ್ಗೆ ಕಾಲೇಜಿನ ಆಡಳಿತ ಮಂಡಳಿಯು ಚಿಂತನೆ ನಡೆಸಿತ್ತು. ಆದರೆ, ನಮ್ಮ ಯುವಕ ಮನಸ್ಸು ಇದನ್ನೆಲ್ಲಾ ಯೋಚಿಸುವ ಗೊಡವೆಗೆ ಹೋಗದೆ, " ನೀರು ಇಲ್ಲ, ಕೊಡಿ ಅಷ್ಟೇ" ಎನ್ನುವ ಧೋರಣೆಯಲ್ಲಿ ಮಾತನಾಡುತ್ತಿದ್ದೆವು.  ಆದರು ಹಾಸ್ಟೆಲ್ಲಿನವರು ಹೇಗೋ ನೀರನ್ನು ಒದಗಿಸುತ್ತಿದ್ದರು. 

           ಒಂದು ದಿನ ನೀರಿಗೆ ಬಹಳ ತಾಪತ್ರಯವಾಗಿ ಬೆಳಗಿನಿಂದಲೂ ನೀರು ಇಲ್ಲವಾಯಿತು.  ಹುಡುಗರಿಗೆ ನೀರಿಲ್ಲದೆ ಕಷ್ಟವಾಯಿತು.  ಎಲ್ಲ ಹುಡುಗರು ಒಂದು ಕಡೆ ಸೇರಿ ಎಲ್ಲರು ಟವೆಲ್ ಉಟ್ಟು ಬರಿ ಬನಿಯನ್ ತೊಟ್ಟು ಚಳುವಳಿ ಮಾಡಲು ಘೋಷಣೆ ಕೂಗುತ್ತಾ ಇಡೀ ಕಾಲೇಜಿನ ಆವರಣದಲ್ಲಿ " we want water........we want water......." ಎಂದು ಎಲ್ಲರು ಕೂಗುತ್ತಾ ಸಾಗಿದೆವು.   ನಮ್ಮ ಮೆರವಣಿಗೆ ಆ ಕಾಲೇಜಿನ ನಿರ್ದೇಶಕರ ಮನೆಯ ಮುಂದೆ ಬರುತ್ತಿದ್ದಂತೆ ಘೋಷಣೆ ಜೋರಾಯಿತು.  ಆ ಹುಡುಗರಲ್ಲಿ ಒಬ್ಬ " water......water.....or your daughter........" ಎಂದುಬಿಟ್ಟ. ಇದು ಆ ನಿರ್ದೇಶಕರ ಕಿವಿಗೂ ಬಿತ್ತು.  

          ಮನೆಯಿಂದ ಈಚೆ ಬಂದ ನಿರ್ದೇಶಕರು ಘೋಷಣೆ ಕೂಗುತ್ತಿದ್ದ ಹುಡುಗರ ಕಡೆಗೆ ಎರಡೂ ಕೈ ಎತ್ತಿ ಸ್ವಲ್ಪ ನಿಲ್ಲಿಸಿ ಎನ್ನುವಂತೆ ಸನ್ನೆ ಮಾಡಿದರು.  ಅಲ್ಲಿದ್ದ  ಹುಡುಗರು,  ಈಗ ಕೆಲ ಹುಡುಗರಿಗೆ ಏನೋ ಕಾದಿದೆ !ಅಂದುಕೊಂಡು ಘೋಷಣೆ ತಕ್ಷಣ ನಿಲ್ಲಿಸಿದರು.  ನಾವು ಓದುತ್ತಿದ್ದ ಕಾಲೇಜು ಸ್ವಾಯತ್ತೆ ಪಡೆದ ಕಾಲೇಜು.  ಆದದ್ದರಿಂದ ವಿಧ್ಯಾರ್ಥಿಗಳ ಸಮಸ್ತ ಭವಿಷ್ಯವೂ ಕಾಲೇಜಿನ ಕೈಯಲ್ಲೇ ಇರುತ್ತದೆ .  ಇವತ್ತು ಯಾವಯಾವ ಹುಡುಗರಿಗೆ ಏನೇನು ಕಾದಿದೆಯೋ, ಸಾಲದ್ದಕ್ಕೆ  daughter  ಎಂದು ಬೇರೆ ಕೂಗಿದ್ದು ಅವರ ಕಿವಿಗೆ ಬೇರೆ ಬಿದ್ದಿದೆ, ಮುಂದೇನು ಎಂದು ಯೋಚಿಸುವ ಹೊತ್ತಿಗೆ, ನಿರ್ದೇಶಕರು ಗಂಟಲು ಸರಿಮಾಡಿಕೊಂಡು " The first thing you have asked for,  is some what difficult, but the second one is O K for me. Who will come forward?"  ಎಂದು ಕೇಳಿದರು.  ನಿರ್ದೇಶಕರ ಮಾತಿನಲ್ಲಿ ಸಿಟ್ಟಾಗಲಿ, ದ್ವೇಷವಾಗಲಿ ಇರಲಿಲ್ಲ.  ಬಹಳ ಸಾಮಾನ್ಯವಾಗಿ ಮತ್ತು ಹಾಸ್ಯ ಮಿಶ್ರಿತ ದ್ವನಿಯಲ್ಲಿ ಈ ಮಾತು ಹೇಳಿದಾಗ ಅಲ್ಲಿ ನೆರದಿದ್ದ ಎಲ್ಲಾ   ಹುಡುಗರು ತಲೆ ತಗ್ಗಿಸಿ ನಿಂತುಬಿಟ್ಟರು. ಅವರಿಗೆ ತಮ್ಮ ತಪ್ಪಿನ ಅರಿವಾಗಿತ್ತು. ಆದರೂ, ಆ ಸ್ತಿತಿಯಲ್ಲಿ ಏನೂ ಮಾಡುವ ಹಾಗಿರಲಿಲ್ಲ. 

           ಒಂದೆರಡು ನಿಮಿಷದ ನಂತರ ನಿರ್ದೇಶಕರೇ ಮಾತನಾಡಿ " ನಿಮ್ಮ ತೊಂದರೆ ನಂಗೆ ಗೊತ್ತಿದೆ. ಇದಕ್ಕೆ ಒಂದು ಪರಿಹಾರ ಸಧ್ಯದಲ್ಲೇ ಮಾಡುತ್ತೇವೆ.  ದಯವಿಟ್ಟು ಸಹಕರಿಸಿ " ಎಂದು ನಗುಮೊಗದಿಂದ ನಮ್ಮನ್ನು ಕಳುಹಿಸಿದರು.  ಸಧ್ಯ " ಬದುಕಿದೆಯಾ ಬಡ ಜೀವ"  ಎನ್ನುವಂತೆ  ಎಲ್ಲರು ಜಾಗ ಖಾಲಿ ಮಾಡಿದೆವು. 

               ಉನ್ನತ ಹುದ್ದೆಯಲ್ಲಿದ್ದ ನಿರ್ದೇಶಕರು ಮನಸ್ಸು ಮಾಡಿದ್ದರೆ ನಮ್ಮಂತಹ ಹೆಚ್ಚಿನ ವಿಧ್ಯಾರ್ಥಿಗಳಿಗೆ, ಹೆಚ್ಚಿನ ಶಿಕ್ಷೆ ನೀಡಿ ಜೀವಮಾನವೆಲ್ಲ ನೆನಪಿಸಿಕೊಳ್ಳುವಂತೆ ಮಾಡಬಹುದಿತ್ತು.  ಆದರೆ, ಇವರು ಮಾತ್ರ ನಮ್ಮ ಹುಡುಗು ಬುದ್ಧಿಯನ್ನು ಕ್ಷಮಿಸಿಬಿಟ್ಟರು.  ಅಂದಿನ ಅವರ ಹಿರಿತನ ನಮಗೆ  ಜ್ಞಾಪಕಕ್ಕೆ ಬಂದಾಗ ಇಂದೂ ಅವರ ಬಗ್ಗೆ ಗೌರವ ಭಾವನೆ ಉಕ್ಕುತ್ತದೆ.

( ಆತ್ಮೀಯರೊಬ್ಬರು ಹೇಳಿದ ಪ್ರಸಂಗವನ್ನು  ಇಲ್ಲಿ  ಯಥಾವತ್ತಾಗಿ ಧಾಖಲಿಸಿದ್ದೇನೆ )


November 1, 2012

ಬೀ Chi ಯವರ ಅಂದನಾ ತಿಮ್ಮ...........5



           
               ಬತ್ತಲೆ ಬಂದರು ಬತ್ತಲೆ ಹೋದರು|
               ಬತ್ತಲೆ ಇರುವಾಗ ಎಲ್ಲರೂ ಒಂದೇ ||
               ಸುತ್ತ ಜಗ ಬೇಸತ್ತ ಜನ ಇವರ್ಗೆಲ್ಲೇ |
               ತ್ತೆತ್ತ ಏನಿದೆ ಹೇಳೋ ತಿಂಮ ||

ಶವ ಕಂಡ ಗೌತಮ ಬುದ್ಧನಾದ, ಕೇ |
ಶವಾಚಾರಿ ಹೆಣ ಹೊತ್ತೇ ಜಗಜಟ್ಟಿಯಾದ ||
ಅವನ ಕಸುಬೇ ಅದು, ಅದರಿಂದಲೇ ಅನ್ನ |
ಅವರವರ ಕರ್ಮಕ್ಕೆ ಅವರುಂಟು ತಿಂಮ ||

               ಕಾಯಕವೇ ಕೈಲಾಸ ಎಂದಂದ ಬಸವಣ್ಣ |
               ಬಾಯಿ ಮಾತಾಗಿಹುದು ಭಾಷಣಕಷ್ಟೇ ಚಂದ ||
               ಕಾಯ ಸಮಕಳೆ ಮಾಡಿ ಬಾಳುವರು ಬಹು ಕಡಿಮೆ |
               ಮೈಯ ಜಂಗು ಹಿಡಿಸಿ ಸತ್ತವರೇ ಹೆಚ್ಚೋ ತಿಂಮ ||

ನಿನ್ನಂತೆ ನೀನಾಗು ನಿನ್ನ ನೀ ಅರಿ ಮೊದಲು |
ಚೆನ್ನೆಂದು ದೊಡ್ಡವರ ಅನುಕರಿಸಬೇಡ ||
ಏನಾಯ್ತು ಮರಿಕತ್ತೆ ?  ಚೆಲುವಿತ್ತು ಮುದ್ದಿತ್ತು |
ತನ್ನಪ್ಪ ನಂತಾಗಿ ಹಾಳಾಯ್ತು ತಿಂಮ ||

                                                                              ( ಮತ್ತಷ್ಟು ಮುಂದಿನ ದಿನಕ್ಕೆ )

October 30, 2012

ದೊಡ್ಡವರ ದಾರಿ......................12







                 ಒಮ್ಮೆ ಭಾರತದ ರಾಷ್ಟ್ರಪತಿಗಳಾದ ಡಾ.ಎ ಪಿ ಜೆ ಅಬ್ದುಲ್ ಕಲಾಂರವರನ್ನು ಒಂದು ಪ್ರಶ್ನೆಯನ್ನು ಕೇಳಲಾಯಿತು. " ಸಾರ್,  ನಿಮಗೆ ಬದುಕಿನಲ್ಲಿ ಅತ್ಯಂತ ಸಂತಸ ನೀಡಿದ ಮತ್ತು ಸಾರ್ಥಕ ಎಣಿಸಿದ ಕ್ಷಣ ಯಾವುದು? "

                 ಕಲಾಮ್ ರವರು ಗಂಟಲು ಸರಿಮಾಡಿಕೊಂಡು ತಮ್ಮ ಅನುಭವದ ಗಂಟನ್ನು ಬಿಚ್ಚಿ ಎಲ್ಲರ ಮುಂದೆ ಇಟ್ಟ  " ಒಮ್ಮೆ ನಾನು ಹೈದರಾಬಾದಿನ ನಿಜಾಂ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿ ಪೋಲಿಯೋಪೀಡಿತ ಮಕ್ಕಳ ವಿಭಾಗಕ್ಕೂ ಹೋದೆ. ಆ ಮಕ್ಕಳು ತಮ್ಮ ನಿರ್ಬಲವಾದ ಕಾಲುಗಳಿಗೆ ಹಾಕಲಾಗಿದ್ದ ಲೋಹದ ಕ್ಯಾಲಿಪರ್ಸ್ ಸಹಾಯದಿಂದ ನಡೆಯುವುದಕ್ಕೆ ಬಹಳ ಕಷ್ಟ ಪಡುತ್ತಿದ್ದರು. ಈ ಕ್ಯಾಲಿಪರ್ಸ್ 3 ಕೆ ಜಿ ತೂಕದ್ದಾಗಿದ್ದು ಈ ಮಕ್ಕಳ ಕಾಲಿಗೆ ಹೆಚ್ಚು ಭಾರದ್ದಾಗಿತ್ತು. ಮಕ್ಕಳು ತಮ್ಮ ಕಾಲುಗಳನ್ನು ಎಳೆಯಲು ವಿಶೇಷ ಬಲ ಹಾಕಬೇಕಾಗಿತ್ತು.  ಇದು ಮಕ್ಕಳಿಗೆ ಕಷ್ಟವಾಗಿತ್ತು. ಅಲ್ಲಿನ ವೈದ್ಯಾದಿಕಾರಿಗಳು ಈ ವಿಚಾರವನ್ನು ಪ್ರಸ್ತಾಪಿಸುತ್ತಾ, ಈ ವಿಚಾರದಲ್ಲಿ ಮಕ್ಕಳ ನೋವನ್ನು ಮತ್ತು ಕಷ್ಟವನ್ನು ಕಡಿಮೆ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು."  

               " ನನಗೆ ಈ ವಿಚಾರ ಕೊರೆಯಲು ಪ್ರಾರಂಭವಾಯಿತು.  ನಾನು ನೇರವಾಗಿ ಇಸ್ರೋದ ಪ್ರಯೋಗಾಲಯಕ್ಕೆ ಬಂದು ನನ್ನ ಸಹ ತಂತ್ರಜ್ಞರಿಗೆ ಈ ಸಮಸ್ಯೆಯನ್ನು ವಿವರಿಸಿ, ಇದಕ್ಕೆ ಏನಾದರು ಮಾಡಲು ಸಾಧ್ಯವೇ? ಎಂದು ಸಮಾಲೋಚನೆ ಮಾಡಿದೆ.ನಮ್ಮ ತಂಡ  ಈ ವಿಚಾರದಲ್ಲಿ ತಲೆ ಕೆಡಿಸಿಕೊಂಡು ರಾಕೆಟ್ ತಯಾರಿಸಲು ಉಪಯೋಗಿಸುವ ಒಂದು ವಿಶಿಷ್ಟ ಪದಾರ್ಥದಿಂದ ಮಕ್ಕಳಿಗೆ  ಕಾಲಿಪರ್ಸ್ ತಯಾರು ಮಾಡಿತು . ಈ ಕ್ಯಾಲಿಪರ್ಸ್ ಲೋಹಕ್ಕಿಂತ ಹೆಚ್ಚು ಬಲಿಷ್ಠ ವಾಗಿತ್ತು.  ಆದರೆ ತೂಕ ಮಾತ್ರ ಹತ್ತು ಪಟ್ಟು ಕಡಿಮೆ ಇತ್ತು, ಅಂದರೆ ಕೇವಲ 300 ಗ್ರಾಂ ತೂಗುತ್ತಿತ್ತು."

              " ಈ ಕ್ಯಾಲಿಪರ್ಸ್ ಗಳನ್ನು ಮಕ್ಕಳ ಕಾಲಿಗೆ ತೊಡಿಸಲಾಯಿತು.  ಮೂರು ಕೆ ಜಿ ತೂಕದ ಕ್ಯಾಲಿಪರ್ಸ್ ಜಾಗದಲ್ಲಿ 300 ಗ್ರಾಂ ತೂಕದ ಕ್ಯಾಲಿಪರ್ಸ್ ಹಾಕಿಕೊಂಡ ಮಕ್ಕಳ ಸಂತೋಷ ವಿವರಿಸಲಾರೆ.  ಆ ಮಕ್ಕಳಿಗೆ ಆನಂದವೋ ಆನಂದ. ಈ ಆನಂದ ಕಂಡ ಮಕ್ಕಳ ತಂದೆತಾಯಿಯರಿಗೆ, ವೈದ್ಯಾದಿಕಾರಿಗಳಿಗೆ ಹೇಳಲು ಏನೂ ಇಲ್ಲದೆ ಕಣ್ಣೀರು ಸುರಿಸಿದರು.  ನಾವೆಲ್ಲರೂ ಆನಂದ ಭಾಷ್ಪ ಸುರಿಸಿದೆವು. ನನಗೆ ಇದಕ್ಕಿಂತ ಸಂತಸದ ಕ್ಷಣ ಇನ್ನ್ಯಾವುದು ಇಲ್ಲ. ನನ್ನ  ಬದುಕಿನಲ್ಲಿ ದೊಡ್ಡ ಸಾರ್ಥಕದ ಕ್ಷಣ ಇದೊಂದೇ ಎಂದು ಭಾವಿಸುತ್ತೇನೆ."

               ಹೌದು! ಇಂತಹ ಅವಿಸ್ಮರಣೀಯ ಕ್ಷಣಗಳನ್ನು ಅನುಭವಿಸಿದಾಗ  ಬದುಕು ಸಾರ್ಥಕ ಎನಿಸುತ್ತದೆ.


October 26, 2012

ದೊಡ್ಡವರ ದಾರಿ ....................11



                      ತಮಿಳು ನಾಡಿನ ಕಂಚಿ ಕಾಮಾಕ್ಷಿ ದೇವಸ್ಥಾನ ಯಾರಿಗೆ ಗೊತ್ತಿಲ್ಲ ಹೇಳಿ?       ಅದೇ ಕಾಮಾಕ್ಷಿ ದೇವಸ್ಥಾನದ    ಸಮೀಪವಿರುವ ಕಂಚಿಮಠದ ಶ್ರೀ ಶ್ರೀ ಚಂದ್ರಶೇಖರೆಂದ್ರ ಸರಸ್ವತಿ ಮಹಾಸ್ವಾಮಿಗಳು, ಕಂಚಿ ಪರಮಾಚಾರ್ಯರೆಂದೆ ಪ್ರಸಿದ್ಧಿಯಾದವರು.  100 ವರ್ಷಗಳ ಕಾಲದ ಇವರ  ಜೀವಿತಾವಧಿಯಲ್ಲಿ 90 ವರ್ಷಗಳ ಕಾಲ  ಭಗವನ್ನಾಮ ಚಿಂತನೆಯಲ್ಲಿ ಸಾಧನೆಮಾಡಿದ ಮಹಾ ಪುರುಷರು. ಜಾತಿ, ಮತ, ಪಂಥಗಳ ಜಿಜ್ಞಾಸೆಗಳಿಂದ ಆಚೆ ಉಳಿದು ಮಾನವೀಯತೆಯಲ್ಲಿ ದೇವರನ್ನು ಕಂಡ ಪ್ರತ್ಯಕ್ಷದರ್ಶಿಗಳು.  ಇವರು ಮೌನಧಾರಣೆಯಲ್ಲೇ  ಹೆಚ್ಚು ವರ್ಷಗಳ ಕಾಲ ಇದ್ದವರು. ಈ ಸಮಯದಲ್ಲಿ ಹಲವಾರು ಗಣ್ಯರು ಬಂದು ಇವರ ದರ್ಶನಮಾತ್ರದಿಂದಲೇ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.   ಇವರ ದರ್ಶನಕ್ಕಾಗಿಯೇ ಭಕ್ತರು ದೇಶವಿದೇಶಗಳಿಂದ ಬರುತ್ತಿದ್ದರು.

                 ಕಂಚಿ ಮಠದ ಪಕ್ಕದಲ್ಲೇ ಸುಮಾರು 300 ಕ್ಕೂ ಹೆಚ್ಚು ವರ್ಷ ಹಳೆಯ ಮಸೀದಿ ಇದೆ.  ಮಠಕ್ಕೂ, ಮಸೀದಿಗೂ ಪ್ರತಿ ನಿತ್ಯ ಸಹಸ್ರಾರು ಮಂದಿ ಬರುತ್ತಿದ್ದರು. ವಾಹನ ನಿಯಂತ್ರಿಸುವುದೇ ದಿನ ನಿತ್ಯದ ಸಮಸ್ಯೆಯಾಗಿತ್ತು.  ಎರಡು ಧರ್ಮಾನುಯಾಯಿಗಳಿಗೆ ಕಿರಿಕಿರಿಯಾಗುತ್ತಿತ್ತು. ಎರಡೂ ಧರ್ಮದವರಿಗೆ  ಒಂದು ಪರಿಹಾರದ ಅವಶ್ಯಕತೆ ಇತ್ತು. ಇದಕ್ಕೆ ಮಠವು ಹೊಸ ಜಾಗದಲ್ಲಿ ಮಸೀದಿಯನ್ನು ಪುನರ್ನಿರ್ಮಿಸಿ ಕೊಡಬೇಕೆಂಬ ಪ್ರಸ್ತಾಪವೂ  ಬಂತು.  ಈ ವಿಚಾರ ಕಂಚಿ ಪರಮಾಚಾರ್ಯರ ಕಿವಿಗೂ  ಮುಟ್ಟಿತು.  ಪರಮಾಚಾರ್ಯರು ಇದನ್ನು ತೀರ್ವವಾಗಿ ವಿರೋಧಿಸುತ್ತಾ " ನಿಜ ಹೇಳಬೇಕೆಂದರೆ ಬೆಳಗಿನಜಾವದ ಮಸೀದಿಯ ನಮಾಜ್ ಕರೆ,  ನನ್ನ ದೈನಂದಿನ ಪ್ರಾರ್ಥನೆಗೂ ಎಚ್ಚರಗೊಳಿಸುವ ಕರೆಯೇ ಆಗಿದೆ. ಅದು ಇದ್ದಲ್ಲೇ ಇರಲಿ  " ಎಂದರು. ಮಸೀದಿಯ ಸ್ಥಳಾಂತರಕ್ಕೆ ಪರಮಾಚಾರ್ಯರು  ಸುತರಾಂ ಒಪ್ಪಲೇ ಇಲ್ಲ.  ಮೌನವ್ರತವನ್ನು ಕೈಗೊಂಡುಬಿಟ್ಟರು.  ಕೊನೆಗೆ ಮಸೀದಿ ಸ್ಥಳಾಂತರದ ನಿರ್ಧಾರವನ್ನೇ ಕೈಬಿಡಲಾಯಿತು.




October 23, 2012

ದೊಡ್ಡವರ ದಾರಿ ...................10












                 " ಈಗ್ಗೆ 25 ವರ್ಷಗಳ ಹಿಂದಿನ ಮಾತು. ಒಂದು ದಿನ ಕೊಲ್ಕೊತ್ತ ನಗರದ ಒಂದು ದಾರಿಯಲ್ಲಿ   ಒಬ್ಬನೇ ನಡೆದು ಹೋಗುತಿದ್ದೆ, ನನ್ನ ಎದುರು ಬದಿಯಿಂದ ಒಂದು ಬಾಲಕಿಯೊಬ್ಬಳು ಬರುತ್ತಿದ್ದಳು. ಅವಳು ಏಕೋ ನನ್ನ ಸೆಳೆದಳು.  ಅವಳ ಮುಖ ನಿಸ್ತೆಜವಾಗಿತ್ತು, ಬಹಳ ಬಳಲಿದ್ದಳು, ಪ್ರಾಯಶಃ ತುಂಬಾ ಹಸಿದಿರಬೇಕೆಂದು ನನಗೆ ಅನ್ನಿಸತೊಡಗಿತು. ಈಗ ಈ ಬಾಲಕಿಗೆ ಏನಾದರು ಕೊಡಬೇಕೆಂದು ಅನ್ನಿಸತೊಡಗಿತು.  ನನ್ನ ಕೋಟಿನ ಜೇಬಿಗೆ ಕೈ ಇಳಿಬಿಟ್ಟೆ, ಒಂದು ಬಿಸ್ಕುತ್ತ್ ಇತ್ತು.  ಅದನ್ನೇ ಆ ಬಾಲಕಿಗೆ ಕೊಟ್ಟೆ. ಅವಳು ತಕ್ಷಣ ತಿನ್ನಲಿಲ್ಲ, ಅವಳು ಬಂದ ದಾರಿಯಲ್ಲೇ ಹಿಂದೆ ನಡೆದಳು.  ಇವಳ ನಡತೆ ಆಶ್ಚರ್ಯ ತರಿಸಿತು.  ಅವಳನ್ನೇ ನೋಡುತ್ತಾ ನಾನು ನಿಧಾನ ನಡೆದೆ.  ಸ್ವಲ್ಪ ದೂರ ಸಾಗಿದ ಮೇಲೆ ಒಂದು ಬಡಕಲು ನಾಯಿಯ ಹತ್ತಿರ ಹೋಗಿ ಇದ್ದ ಒಂದು ಬಿಸ್ಕುತ್ತ್ನಲ್ಲಿ ಅರ್ಧವನ್ನು ಆ ನಾಯಿಗೆ  ಕೊಟ್ಟು ಇನ್ನರ್ಧವನ್ನು ತಾನು ತಿಂದಳು. " 
      
               ಈ ಘಟನೆ ನನ್ನ ಜೀವನದ ದಿಕ್ಕನ್ನೇ ಬದಲಿಸಿತು ಎಂದು ಪ್ರಸಿದ್ದ ಕಾದಂಬರಿಕಾರ ಫ್ರಾನ್ಸಿನ ಡಾಮಿನಿಕ್ ಲಾಪಿಯರ್ " A Thousand Suns " ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ.  " ಒಂದು ಪುಟ್ಟ ಬಾಲಕಿ ತನ್ನ ಹಸಿವಿನ ನಡುವೆಯೂ ತನ್ನ ನಾಯಿಯನ್ನು ತನ್ನಂತೆ ಬಗೆದ ಈ ಘಟನೆ ನನ್ನ ಹೃದಯ ಕಲಕಿತು. ಪ್ರತಿಕೂಲ ಪರಿಸ್ತಿತಿಯಲ್ಲೂ ಧಾರಾಳತನ ತೋರುವ ಭಾರತೀಯರ ಬಗ್ಗೆ ನನಗೆ ಗೌರವ ಭಾವನೆ ಮೂಡಿತು.  ಈ ಘಟನೆ ನನ್ನನ್ನು ವಿಶಾಲವಾಗಿ ಚಿಂತಿಸುವಂತೆ   ಮಾಡಿತು."  ಎನ್ನುತ್ತಾರೆ.

                  ಈ ಪುಸ್ತಕ ಮಾರಾಟದಿಂದ ಬಂದ ಗೌರವ ಧನ ಸುಮಾರು ಏಳು ಕೋಟಿ ರೂಪಾಯಿಗಳು. ಈ ಹಣವನ್ನು ಪಶ್ಚಿಮ ಬಂಗಾಳದ ಸುಂದರ ಬನ್ಸ್ ದ್ವೀಪದ ಜನರ ಉಪಯೋಗಕ್ಕಾಗಿ ಬಳಸಿದರು. ಈ ದ್ವೀಪ ಸಮೂಹದಲ್ಲಿ 57 ಸಣ್ಣ ಸಣ್ಣ ದ್ವೀಪಗಲ್ಲಿ ಸುಮಾರು 10 ಲಕ್ಷ ಜನ ವಾಸಿಸುತ್ತಾರೆ.  ಇಲ್ಲಿನ ಜನಕ್ಕೆ ಸರಿಯಾದ ವೈದ್ಯಕೀಯ ಚಿಕಿತ್ಸೆಯ ಅವಶ್ಯಕತೆಯನ್ನು ಮನಗೊಂಡ ಲಾಪಿಯರ್ ಒಂದು ದೊಡ್ಡ ದೋಣಿಯನ್ನು ಕೊಂಡು ಅದರಲ್ಲಿ ನಾಲ್ಕಾರು ವೈದ್ಯರು, ಆರೆಂಟು ದಾದಿಯರು ಇರುವ ಒಂದು 25  ಜನರ ತಂಡವನ್ನು ಸಜ್ಜುಗೊಳಿಸಿದರು. ಈ ತಂಡ ದ್ವೀಪದಿಂದ ದ್ವೀಪಕ್ಕೆ ಸಂಚರಿಸಿ, ಬೇಕಾದ ವೈದ್ಯಕೀಯ ಸೌಲಭ್ಯವನ್ನು ಒದಗಿಸುತ್ತಿದ್ದಾರೆ. ಈವರೆಗೆ 50000 ಕ್ಕೂ ಹೆಚ್ಚು ರೋಗಿಗಳಿಗೆ ಔಷದೊಪಚಾರ ಕೊಟ್ಟಿದೆ, ಸಾವಿರಾರು ಶಸ್ತ್ರ ಚಿಕಿತ್ಸೆ ನಡೆಸಿದೆ.  ಒಂದು ಸಾರ್ಥಕ  ಮಾನವೀಯ ಸೇವೆ ಮಾಡುತ್ತಿದೆ.               

                ಇಂತಹ ಮಹನೀಯರ ಸೇವೆಯನ್ನು ಗುರುತಿಸುವ ಜವಾಬ್ದಾರಿ ಸರ್ಕಾರ ಮಾಡಬೇಕು.  ಲಾಪಿಯರ್ ಮಾತ್ರ ಯಾವುದಕ್ಕೂ ತಲೆಕೆಡೆಸಿ ಕೊಳ್ಳದೆ ದಕ್ಷಿಣ ಫ್ರಾನ್ಸ್ ನಲ್ಲಿ ತನ್ನ ಚಿಕ್ಕ ಸಂಸಾರದೊಂದಿಗೆ ಬದುಕುತ್ತಿದ್ದಾರೆ.  ಇಂತಹವರ  ದಾರಿ ವಿಶಾಲ ಮತ್ತು ನೇರ. 


                  

October 18, 2012

ದೊಡ್ಡವರ ದಾರಿ...................................9




              ಈ ಜಗತಿನಲ್ಲಿ ಹಲವಾರು ವೈದ್ಯ ಪದ್ದತಿಗಳಿವೆ.  ಅಲೋಪತಿ, ಆಯುರ್ವೇದ, ಯುನಾನಿ, ಹೋಮಿಯೋಪತಿ, ನಿಸರ್ಗ ಚಿಕಿತ್ಸೆ, ಹೀಗೆ ಇನು ಹಲವಾರು ನಾಟಿ ಪದ್ದತಿಗಳು ಚಾಲ್ತಿಯಲ್ಲಿವೆ. ಆದರೆ,  ಒಂದು ವಿಶೇಷವಾದ, ವಿನೂತನವಾದ ಚಿಕಿತ್ಸಾ ಪದ್ದತಿಯಿಂದ ಮೃತ್ಯುವನ್ನು ಹಿಮ್ಮೆಟಿಸಿದ  ಮಹಾವೀರನ ಅನುಭವ ಕಥನ ರೋಚಕವಾಗಿದೆ.  

              ನಾರ್ಮನ್ ಕಸಿನ್ಸ್ ಎಂಬುವವರು ಒಬ್ಬ ಪ್ರಸಿದ್ಧ ಮತ್ತು ಯಶಸ್ವೀ ಪತ್ರಕರ್ತ ಹಾಗೂ  ಬರಹಗಾರರಾಗಿದ್ದರು.   "ಲಾಫ್ಟರ್ ಈಸ್ ದಿ ಬೆಸ್ಟ್ ಮೆಡಿಸನ್ " ಎಂಬ ಒಂದು ವಿನೂತನ ಚಿಕಿತ್ಸಾ ವಿಧಾನಕ್ಕೆ ಅಡಿಗಲ್ಲು ಹಾಕಿದರು.  ಇವರ ಈ ಹೊಸ ಆವಿಷ್ಕಾರಕ್ಕೆ ಮೊದಲ ರೋಗಿಯೆಂದರೆ ಸ್ವಯಂ ನಾರ್ಮನ್ ಕಸಿನ್ಸ್ ರವರೆ!! ಇವರ ಹಾಸ್ಯ ಪ್ರವೃತ್ತಿಯಿಂದ ಹಲವರನ್ನು  ನಗೆಗಡಲಿನಿಂದ ಮುಳುಗಿಸುತ್ತಿದ್ದರು. ಇವರು ಹಾಸ್ಯ ಚಟಾಕಿಗಳನ್ನು ಹಾರಿಸುವುದರಲ್ಲಿ ನಿಸ್ಸೀಮರಾಗಿದ್ದರು.

              ಇಂತಹ ಹಾಸ್ಯ ಕವಿಯು ಒಮ್ಮೆ ತೀರ್ವ ಕಾಯಿಲೆಗೆ ತುತ್ತಾದರು.    ಹಲವಾರು ಪರೀಕ್ಷೆಗಳನ್ನು ಮಾಡಿದ ವೈದ್ಯರು ಇವರಿಗೆ " ನಾರ್ಮನ್, ಈ ಮಾತು ಹೇಳಲು ನನಗೆ ಅತೀವ ಬೇಸರವೆನಿಸುತ್ತಿದೆ. ನೀವು ಆರು ತಿಂಗಳಿಗಿಂತ ಹೆಚ್ಚಿಗೆ ಕಾಲ ಬದುಕಲಾರಿರಿ.  ನಿಮ್ಮ ಉಳಿಕೆ ಜೀವನವನ್ನು ಜೋಪಾನ ಮಾಡಿಕೊಳ್ಳಿ " ಎಂದು ಹೇಳಿ ಕೈ ತೊಳೆದುಕೊಂಡರು. ನಾರ್ಮನ್ ರವರಿಗೆ ಏನೂ ತೋಚದ ಹಾಗಾಯಿತು.  ಅಸಾಧ್ಯ ನೋವಿನಿಂದ ಬಳಲುತ್ತಿದ್ದ ಇವರಿಗೆ ಯಾವ ನೋವು ನಿವಾರಕಗಳು ಹೆಚ್ಚಿಗೆ ಉಪಯೋಗಕ್ಕೆ ಬರಲಿಲ್ಲ.  ನೋವಿನ ತೀವ್ರತೆಯಿಂದ ನಿದ್ದೆ ಹಾರಿಹೋಯಿತು.  ದೇಹವು ಬಳಲಿತು.  ಇಂತಹ ಸಮಯದಲ್ಲಿ ಒಂದು ಹಾಸ್ಯ ಚಲನಚಿತ್ರವನ್ನು ನೋಡಿದರು.  ಆ ಚಿತ್ರ ನೋಡುತ್ತಾ ಹೊಟ್ಟೆ ಹುಣ್ಣಾಗುವಂತೆ ನಕ್ಕರು.  ಏನು ಆಶ್ಚರ್ಯವೋ ಏನೋ, ನಾರ್ಮನ್ನರಿಗೆ ಎರಡು ಗಂಟೆಗಳಿಗೂ ಅಧಿಕ ನಿದ್ದೆ ಬಂತು.  ಇದರಿಂದ ಪ್ರೇರಿತರಾದ ಇವರು ಹಲವಾರು ಹಾಸ್ಯ ಭರಿತ ಚಲನಚಿತ್ರಗಳನ್ನು ನೋಡುವ ಅಭ್ಯಾಸ ಮಾಡಿಕೊಂಡರು.  ಹಲವಾರು ಹಾಸ್ಯದ ಪುಸ್ತಕಗಳನ್ನು ಓದುವ ಹವ್ಯಾಸ ರೂಡಿ ಸಿಕೊಂಡರು.  ಇದು ಇವರ ದೇಹದ ಮೇಲೆ ಉತ್ತಮ ಪರಿಣಾಮ ಬೀರಿತು.  ಆರೋಗ್ಯ ಸುಧಾರಿಸಿತು.  ಆರು ತಿಂಗಳಿನಲ್ಲಿ ಸಾಯುತ್ತೀರೆಂದು ಹೇಳಿದ ಈ ವ್ಯಕ್ತಿ ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಕಾಲ ಬದುಕಿದ್ದು, ಕೊನೆಗೆ ಹೃದಯಾಘಾತದಿಂದ  ತೀರಿಕೊಂಡರು.  ಆಶ್ಚರ್ಯವೆಂದರೆ ಅವರಿಗಿದ್ದ ಕಾಯಿಲೆಯಿಂದ ಅವರು ಸಾಯಲೇ ಇಲ್ಲ.
               
              " ನಗು ನಗುತಾ ನಲಿ ನಲಿ ಏನೇ ಆಗಲಿ " ಎಂದು ಇವರನ್ನು ನೋಡಿಯೇ ಬರೆದಿರಬೇಕು 


October 17, 2012

ದೊಡ್ಡವರ ದಾರಿ ..............................8

      

                  ಡಿ .ವಿ .ಗುಂಡಪ್ಪನವರ ಅನುಭವದ ಕಂತೆ ಬಲು ದೊಡ್ಡದು. ಅವರ ಕಂತೆಯಲ್ಲಿ ಅದೆಷ್ಟು ಅನುಭವದ ವಿಚಾರಗಳು ಹುದುಗಿತ್ತೋ ಆ ಭಗವಂತನಿಗೆ ಗೊತ್ತು.  ಎಷ್ಟೊಂದನ್ನು ಬರೆದು ನಮ್ಮಂತಹ ಪಾಮರರಿಗೆ ತಿಳಿಸಿಹೊಗಿದ್ದಾರೆ.  ಅರಿತು ಬಾಳುವುದಷ್ಟೇ ನಮ್ಮ ಪಾಲಿಗೆ ಉಳಿದಿರುವುದು. ಒಂದು ಅಪರೂಪದ ಪ್ರಸಂಗ ಡಿ.ವಿ.ಜಿ ಮಾತುಗಳಲ್ಲೇ ತಿಳಿಸಿದ್ದೇನೆ.
                     " ನಂಗೆ ಪರಿಚಿತನಾದ ಮುತ್ತ ಎಂಬಾತನಿದ್ದ. ಆತ ನಾವು ಈಗ ಹರಿಜನವೆಂದು ಗೌರವಿಸುವ ಜನಾಂಗಕ್ಕೆ ಸೇರಿದವನು.  ಆತ  ಅಕ್ಷರ ಗಂಧ ಕಾಣದವನು.  ಅವನಿಗಿದ್ದ ಹುದ್ದೆ ಒಂದು ಸಣ್ಣ ಹಳ್ಳಿಯ ತಳವಾರಿಕೆ. ಆದರೆ ಅವನು ಗ್ರಾಮಕ್ಕೆಲ್ಲ ಇಷ್ಟವಾಗಿದ್ದವನು.  ಅವನದು ಯಾವಾಗಲು ನಗುತ್ತಾ ನಗಿಸುತ್ತಿರುವ ಸ್ವಭಾವ.  ಮಧುಸೇವನೆಯಿಂದ ಅವನ ಮಾತಿನಲ್ಲಿ ಮತ್ತಷ್ಟು ಹಾಸ್ಯ ತೋರುತ್ತಿತ್ತು.  ಒಂದು ದಿನ ಆತ  ನನ್ನಲ್ಲಿಗೆ ಬಂದು ನಾಲ್ಕು ರೂಪಾಯಿ ಬೇಡಿದ.  ನಾನು ಅವನನ್ನು  " ಏನು ನಾಲ್ಕಾಣೆಯಿಂದ ನಾಲ್ಕು ರೂಪಾಯಿಗೆ ಬಡ್ತಿ ಮಾಡಿಕೊಂಡಿದ್ದಿ ?  ಇನ್ನು ಮೇಲೆ ವಿಲಾಯಿತಿ ಪಾನಕವೋ? " ಎಂದು ಕೇಳಿದೆ.  ಅವನು  " ಇಲ್ಲಾ ಬುದ್ಧಿ.  ಒಂದು ಧರ್ಮ ಮಾಡೋಕೆ ಹಣಬೇಕು .  ಆ ಪುಣ್ಯ ನಿಮಗೆ ಬರತೈತಿ." ಎಂದು ಹೇಳಿದ.  ನಾನು " ಹಿಡಿ ಇದನ್ನು, ಆ ಪುಣ್ಯ ನಿನಗೆ ಇರಲಿ " ಎಂದು ಹೇಳಿ ಕಳುಹಿಸಿದೆ.
                      ಒಂದುವಾರ ಕಳೆದ ಮೇಲೆ ಮತ್ತೆ ತಿರುಗಿ ಬಂದು " ಜಮೀನ್ತಾವಿಗೆ ನೀವು ಬರಬೇಕು ಬುದ್ಧಿ " ಎಂದು ಕರೆದ. ಒಂದು ದಿವಸ ನಾನು ಅಲ್ಲಿಗೆ ಹೋದಾಗ ಕಂಡದ್ದೇನು ? ಒಂದು ಆನುಗಲ್ಲು ಕಟ್ಟಡ.  ಆಳೆತ್ತರದ ಮೂರು ನಿಲುಗಲ್ಲುಗಳನ್ನು ನೆಲದಲ್ಲಿ ನೆಟ್ಟು ನಿಲ್ಲಿಸಿದ್ದಾನೆ. ಅವುಗಳ ಮೇಲೆ ಒಂದು ಉದ್ದವಾದ ಕಲ್ಲಿನ ಅಡ್ಡದೂಲವನ್ನು ಹಾಸಿದ್ದಾನೆ !  ಅದೇನೆಂದು ನಾನು ಕೇಳಲು " ಇದೆ ಬುದ್ಧಿ ನಿಮ್ಮ ಧರ್ಮ. ಈ ಜಾಗ ತಿಟ್ಟು. ಈ ಕಡೆಯಿಂದ ಹಳ್ಳಿಗಳವರು ಸೌದೆ ಹೊರೆಹೊತ್ತು ಹತ್ತಿ ಬರ್ತಾರೆ. ಇಲ್ಲಿಗೆ ಬರೋಹೊತ್ಗೆ ಸುಸ್ತುಬಿದ್ದು ಹೋಗಿರ್ತಾರೆ.  ಇನ್ನುಮೇಲೆ ಈ ಅನುಗಲ್ಲಿಗೆ ಸೌದೆ ಒರಗಿಸಿ, ಧಣಿವಾರಿಸಿಕೊಂಡು, ಒಂದು ಚಣ ಇಲ್ಲಿ ಕೂತು ಬಾವಿಯಿಂದ ಒಂದು ಗುಟುಕು ನೀರು ಕುಡಿದು, ತಿರುಗಿ ಹೊರೆ ಹೊತ್ತುಕೊಂಡು ಪೇಟೆಗೆ ಹೋಯ್ತಾರೆ." 
                   ಇದು ಮುತ್ತನ  ಪಾರಮಾರ್ಥಿಕತೆ.  ಅವನು ನಿರಕ್ಷರಕುಕ್ಷಿ, ಹೆಂಡಕುಡುಕ, ಹೊಟ್ಟೆಗಿಲ್ಲದ ಬಡವ, ಮುದುಕ.  ಆದರೆ ಅವನ ಹೃದಯಸಂಪತ್ತು! ಮೈಮುರಿದುಕೊಂಡು ಹಳ್ಳಗಳೆನ್ನದೆ ಕಲ್ಲುಗಳನ್ನು  ಎತ್ತಿ ನೆಟ್ಟ.  ಆ ಕಲ್ಲು  ಸಾಗಿಸುವುದು ತನ್ನ ಕೈಯಿಂದಾಗದ ಕೆಲಸವಾದ ಕಾರಣ ಬಾಡಿಗೆಗೆ ಹಣ ಬೇಡಿದ.  ಅವನ ಶ್ರದ್ಧೆ ಪರಿಶ್ರಮಗಳ ಪಕ್ಕದಲ್ಲಿ ಆ ಹಣ ತರಗೆಲೆ.  ಅವನಿಗೆ ಬಂದ ಲಾಭವೇನು?  ಹಳ್ಳಿಯ ಜನ ಅಲ್ಲಿ ಹೊರೆಯಿಳಿಸಿ ಉಸ್ಸಪ್ಪಾ! ಎಂದು ಆಯಾಸ ಕಳೆದಾಗ, ಮುತ್ತನ  ಮುಖ ಆತ್ಮತೃಪ್ತಿಯ ಪ್ರತಿಬಿಂಬವಾಗುತ್ತದೆ.  ಮುತ್ತನು ಈ ತೃಪ್ತಿಗಾಗಿ ಬಹು ವರ್ಷಗಳ ಕಾಲ ಚಿಂತಿಸಿ ತಾಳ್ಮೆಯಿಂದ ದುಡಿದ.
                      ಇದು ಮಹನೀಯ ಗುಣ.
ಹೆಚ್ ಏನ್ ಪ್ರಕಾಶ್ 17 10 2012

October 16, 2012

ಬೀ Chi ಯವರ ಅಂದನಾ ತಿಮ್ಮ...........4



                 ಗೆಳೆಯನೊಬ್ಬ ಸತ್ತ ನಾನಿಷ್ಟು ಸತ್ತೆ |
                 ಬಾಳ ಕೊಂಡಿ ಅದೊಂದು ಕಳಚಿದಾಗ ||
                 ಎಳೆಯ ಮಗ ಸತ್ತ ಮತ್ತಷ್ಟು ಸತ್ತೆ | 
                 ನಾಳಿಷ್ಟು ಇಂತಿಷ್ಟು ಕಂತಿನಾ ಸಾವು ಕೇಳೋ ತಿಂಮ ||

ಇದ್ದಕಿದ್ದಂತೆ ಒಮ್ಮೆಲೇ ಸಾಯುವುದು |
ಎದ್ದು ಎದೆಗೊದ್ದಂತೆ ಬಹು ಕಷ್ಟ ಕಾಣೋ  ||
ಬಿದ್ದಾಗ ಎದ್ದಾಗ ಅಷ್ಟಿಷ್ಟು ಸಾಯುವುದು | 
ಒದ್ದಾಟವಿಲ್ಲ , ಬಾಳು ಸುಖ ,ಸಾವು ಸುಲಭವೋ ತಿಂಮ ||

                 ಬದುಕು ಇದಿರಿಸಲಾರ ಬಾಳುವುದು ಕಷ್ಟ |
                 ಎದೆ ಕಲ್ಲು ಮಾಡಿ ಆತ್ಮಹತ್ಯೆಯಗೈದ ||
                 ಇದು ಬೇರೆ ಜಾತಿ, ಸಾವು ಇದಿರಿಸಲಾರ |
                 ಅದಕಾಗಿ ಬದುಕಿಹೆನು, ಈ ಬಾಳು ಬಾಳೆನೋ ತಿಂಮ ||

ಅಲ್ಲಲ್ಲಿ ಕಂಡದ್ದು ಕೇಳಿದ್ದು ತಿಳಿದಿದು |
ಎಲ್ಲವು ಸೇರಿ ಒಂದು ನಾನಾದೆ ||
ಬಲ್ಲೆನೇ ಹಿಂದಿನದು ಏನೇನು ತಂದಿಹೇನೋ?|
ಬಾಳೊಂದು ನಡುಗಡ್ಡೆ ಅಲ್ಲವೋ ತಿಂಮ ||
          
                                                                                            (ಮತ್ತಷ್ಟು ಮುಂದಿನ ದಿನಕ್ಕೆ)

ದೊಡ್ಡವರ ದಾರಿ..............7

      
              ನಮ್ಮೆಲ್ಲರ ಬದುಕಿನಲ್ಲಿ ತೊಂದರೆ ತಾಪತ್ರಯಗಳು ಕಾಡಿದಾಗ, ಎಲ್ಲ ಕಷ್ಟಗಳು ನಮ್ಮೊಬ್ಬರನ್ನೇ ಕಾಡುತ್ತವೆ ಎಂದುಕೊಳ್ಳುತ್ತೇವೆ.  ಬೇರೆಯರ ಕಷ್ಟಗಳು ನಮ್ಮ ಕಣ್ಣಿಗೆ ಬೀಳುವುದೇ ಇಲ್ಲ.  ಎಲ್ಲರ ಕಷ್ಟಕ್ಕಿಂತ ನಮ್ಮ ಕಷ್ಟವೇ ದೊಡ್ಡದೆಂದು ಭಾವಿಸಿ ಗೊಣಗುತ್ತ, ಶಪಿಸುತ್ತ   ಬಂದಿರುವ ಕಷ್ಟವನ್ನು ನೀಸುತ್ತೇವೆ.  ಇಂತಹ ಕಷ್ಟದ ಸಮಯದಲ್ಲಿ ಸಮಾಧಾನ ಪರಿಹಾರ ಎಲ್ಲಿ ಸಿಗಬಹುದೆಂದು ಕೆಲವರು ಬೇರೆ ಬೇರೆ ದಾರಿ ಹುಡುಕಾಡುತ್ತಾ ತಮ್ಮ ಶಕ್ತಿ ಸಾಮರ್ಥ್ಯವನ್ನು ನಷ್ಟ ಮಾಡಿಕೊಳ್ಳುತ್ತಾ ಇನ್ನಷ್ಟು ಕಷ್ಟಗಳನ್ನು ತಲೆಯ ಮೇಲೆ ಎಳೆದುಕೊಳ್ಳುತ್ತಾರೆ.

                    ಇಂತಹ ಒಂದು ಸಂದರ್ಭದಲ್ಲಿ ಓರ್ವ,  ಭಕ್ತ ಭಗವಾನ್ ರಮಣ ಮಹರ್ಷಿಗಳಲ್ಲಿ ಹೋಗಿ ತನಗಿರುವ ಕಷ್ಟ, ಸಮಸ್ಯೆಗಳನ್ನೆಲ್ಲಾ ನಿವೇದಿಸಿಕೊಂಡು "ದೇವರಿಗೆ ನನ್ನ ಮೇಲೇಕೆ ಇಷ್ಟೊಂದು ಸಿಟ್ಟು ? " ಎಂದು ಪ್ರಶ್ನಿಸಿದ.  ಭಗವಾನರು ನಸುನಕ್ಕು " ನಿಮ್ಮ ಊರಿನಲ್ಲಿ ಮಡಿವಾಳರು ಇದ್ದಾರೆಯೇ? " ಎಂದು ಪ್ರಶ್ನಿಸಿದರು." ಖಂಡಿತ ಇದ್ದಾರೆ " ಎಂದು ಆ ಭಕ್ತ ಹೇಳಿದ. " ನೀವು ಎಂದಾದರು ಮಡಿವಾಳರು ಬಟ್ಟೆ ಶುಭ್ರ ಮಾಡುವುದನ್ನು ನೋಡಿದ್ದಿರಾ? "    ಎಂದು ಮರು ಪ್ರಶ್ನೆ ಹಾಕಿದರು. " ಖಂಡಿತ ನೋಡಿದ್ದೇನೆ " ಎಂದು ಉತ್ತರಿಸಿದ  " ಮಡಿವಾಳ ಬಟ್ಟೆಯನ್ನು ಶುಭ್ರ ಮಾಡಲು, ಬಂಡೆಯ ಮೇಲೆ ಎತ್ತಿ ಎತ್ತಿ ಬಡಿದು, ನೀರಿನಲ್ಲಿ ಅದ್ದಿ ಅದ್ದಿ, ಮತ್ತೆ ಬಡಿದು ಶುಭ್ರ ಮಾಡುತ್ತಾನೆ.  ಶುಭ್ರವಾಗಿಲ್ಲವೆಂದು ತಿಳಿದರೆ ಮತ್ತೆ ಬಂಡೆಯಮೇಲೆ ಬಡಿಯುತ್ತಾನೆ. ಹೌದಲ್ಲವೇ? " ಎಂದು ಮಹರ್ಷಿಗಳು ಪ್ರಶ್ನಿಸಿದರು.  " ಹೌದು , ಹೌದು " ಎಂದು    ಗೋಣು   ಆಡಿಸುತ್ತ ನಿಂತ. " ಮಡಿವಾಳನಿಗೆ ನಿಮ್ಮ ಬಟ್ಟೆಯ ಮೇಲೋ ಅಥವಾ ನಿಮ್ಮ ಮೇಲೋ ಇರುವ ಸಿಟ್ಟಿನಿಂದ ಬಡಿಯುತ್ತಾನೆಯೇ ? ಇಲ್ಲ ತಾನೇ? ಹಾಗೆ ಬಡಿಯದೇ ಹೋದರೆ ಬಟ್ಟೆ ಶುಭ್ರವಾಗದು. ಭಗವಂತನು ಹೀಗೆ ನಿಮಗೆ ಕಷ್ಟ ಕೊಟ್ಟಿರುವುದು ನಿಮ್ಮನ್ನು ಗಟ್ಟಿಗೊಳಿಸಲು ಮತ್ತು ನಿಮ್ಮನ್ನು ಪರಿಶುದ್ದರನ್ನಾಗಿ ಮಾಡಲುಮಾತ್ರ!! ಇದು ಭಗವಂತ  ನೀಡಿರುವ ತಾತ್ಕಾಲಿಕ ಕಷ್ಟವೇ ಹೊರತು ನಿಮ್ಮ ಮೇಲಿನ ಸಿಟ್ಟಿನಿಂದಲ್ಲ." ಎಂದು ಸಮಾಧಾನ ಮಾಡಿದರು.  

October 13, 2012

ದೊಡ್ಡವರ ದಾರಿ ..........................6



              ಥಾಮಸ್ ಅಲ್ವಾ ಎಡಿಸನ್ ಹೆಸರು ಯಾರಿಗೆ ಗೊತ್ತಿಲ್ಲ? ವೈಜ್ಞಾನಿಕ ಸಂಶೋದನೆಗಳಲ್ಲಿ ಮಹಾನ್ ಎತ್ತರದ ಸರಳ ಜೀವಿ. ಇವರು ಹೇಳುತ್ತಿದ್ದ ಮಾತೆಂದರೆ " ಬದುಕಿನಲ್ಲಿ ತೊಂದರೆ ಎಲ್ಲರಿಗೂ ಬರುತ್ತದೆ, ಆದರೆ ಅದನ್ನು ಎದುರಿಸಿ ನಿಲ್ಲಬೇಕಾದರೆ ತೊಂದರೆಗೆ  ಕಾರಣ, ಅದಕ್ಕೆ ಪರಿಹಾರ ಮತ್ತು ಅದು ಪುನಃ ಬಾರದಂತೆ ಎಚ್ಚರಿಕೆ ವಹಿಸುವುದು. ಇಷ್ಟು ಸಾಕು ಯಶಸ್ವಿ ವ್ಯಕ್ತಿಗಳಾಗಲು."  
              ಥಾಮಸ್ ಅಲ್ವಾ ಎಡಿಸನ್ ಅವರ ಸಂಶೋಧನಾ ಕೇಂದ್ರಕ್ಕೆ ಒಮ್ಮೆ ಬೆಂಕಿ ಬಿದ್ದಿತು.  ಸಂಶೋದನಾ ಕಾರ್ಯದಲ್ಲಿ ತೊಡಗಿಕೊಂಡಿದ್ದ ಇವರ ಸಂಗಾತಿಗಳು ತಲೆಯ ಮೇಲೆ ಕೈ ಹೊತ್ತು ಕೂತುಬಿಟ್ಟರು. ಮುಂದೇನು ಮಾಡಬೇಕೆಂದು ತೋಚದೆ ಕೂತಿರುವಾಗ ಎಡಿಸನ್ನರು ನಿರ್ವಿಕಾರ ಭಾವದಿಂದ ತಮ್ಮ ಸಂಗಾತಿಗಳನ್ನು ಉದ್ದೇಶಿಸಿ " ನಮ್ಮ ಎಲ್ಲಾ ತಪ್ಪುಗಳು ಸುಟ್ಟು ಬೂದಿಯಾಗಿವೆ.  ನಾವು ಮತ್ತೆ ಹೊಸದಾಗಿ ನಮ್ಮ ಕಾರ್ಯವನ್ನು  ಉತ್ಸಾಹದಿಂದ ಪ್ರಾರಂಭ ಮಾಡುವ ದಿನ ಈಗ ಬಂದಿದೆ. ಬನ್ನಿ! ಕೆಲಸಕ್ಕೆ ತೊಡಗೋಣ!" ಎಂದು ನಗುನಗುತ್ತಲೇ ಹೇಳಿ ನಿರ್ಮಾಣ ಕಾರ್ಯ ಆರಂಭಿಸಿದರು.

October 12, 2012

ದೊಡ್ಡವರ ದಾರಿ.........5



           ನನ್ನ ಸ್ನೇಹಿತರ  ವೃದ್ಧ ತಂದೆ ತಾಯಿ ೯೦ ಮತ್ತು ೮೫ ರ ಆಸು ಪಾಸಿನವರು.  ತಾತ ಅಜ್ಜಿ ಅಂದ್ರೆ ಮೊಮ್ಮಕ್ಕಳಿಗೆ ಪ್ರಾಣ. ಅಪ್ಪ ಅಮ್ಮ ಅಂದ್ರೆ ನನ್ನ ಸ್ನೇಹಿತರ ಕುಟುಂಬಕ್ಕೂ ಅಷ್ಟೇ ಗೌರವ.
           ಒಮ್ಮೆ ಕಾಲು ಜಾರಿ ಬಿದ್ದ ತಾತ ಹಾಸಿಗೆ ಹಿಡಿದರು. ಅಜ್ಜಿ ಯಾರಿಗೂ ಬಿಡದೆ ತಾತನ ಸೇವೆಯನ್ನು ಮಾಡುತ್ತಿದ್ದರು. ತಾತ ಒಮ್ಮೆಯೂ ನರಳದೆ, ಬಂದವರ ಜೊತೆ ಮಾತನಾಡಿಕೊಂಡು ಎಲ್ಲರನ್ನು ವಿಚಾರಿಸುತ್ತಿದ್ದರು. ಹಾಸ್ಯ ಮಾಡುತ್ತಿದ್ದರು.  ಮನೆ ತುಂಬಾ ನೆಂಟರು ಇದ್ದ ಒಂದು ದಿನ ಇದ್ದಕ್ಕೆ ಇದ್ದಹಾಗೆ ಗಟ್ಟಿಮುಟ್ಟ ಆಗಿದ್ದ ಅಜ್ಜಿ ಬೆಳಗ್ಗೆ ಹಾಸಿಗೆಯಿಂದ ಏಳಲೇ ಇಲ್ಲ.  ಸುಖವಾಗಿ ನಿದ್ದೆಯಲ್ಲೇ ಸಾವನಪ್ಪಿತ್ತು. ಮನೆಯವರಿಗೆಲ್ಲ ಆಘಾತ. ಏನು ಮಾಡಲು ತಿಳಿಯದ ಸ್ನೇಹಿತ ಇರುವ ವಿಚಾರ ತೋಡಿಕೊಂಡು ಗದ್ಗದಿತನಾದ.  ಪಾಪ ತಾತನಿಗೆ ಈ ವಿಚಾರ ಗೊತ್ತಿಲ್ಲ. ಮಲಗಿದ ಜಾಗದಿಂದಲೇ ಅಜ್ಜಿಯ ಬರುವಿಕೆಗಾಗಿ ಕಾಯುತ್ತಿತ್ತು.  ಸುಮಾರು  ಹೊತ್ತಾದರೂ ಅಜ್ಜಿ ಬರದಿರುವುದ ಕಂಡು ಮಗನಲ್ಲಿ ವಿಚಾರಿಸಿತು " ನನ್ನ ಬಿಟ್ಟು ಎಲ್ಲಿ ಹೋದಳು? ಬೆಳಗ್ಗೆಯಿಂದ ಮುಖವೇ ತೋರಿಸಿಲ್ಲ ! "ಅಂತ ಹಲುಬಿದರು. ಮಗನಿಗೆ ಹೇಗೆ ಅಮ್ಮನ ಸಾವಿನ ಸುದ್ದಿ ತಿಳಿಸುವುದು ಅಂತ ಹಿಂಜರಿಕೆಯಾಗಿ ಹಾರಿಕೆ ಉತ್ತರ ಕೊಟ್ಟು ರೂಮಿನಿಂದ ಹೊರಕ್ಕೆ ಬಂದ.
           ಇರುವ ವಿಚಾರ ತಾತನಿಗೆ ತಿಳಿಸುವ ಬಗ್ಗೆ ಎಲ್ಲ ಯೋಚಿಸಿ ನಾವು ತಾತನ ಹತ್ತಿರ ಹೋಗಿ " ತಾತ, ನಿಮಗೊಂದು ವಿಚಾರ ಹೇಳಬೇಕೆಂದು  ಬಂದೆ " ಎಂದು  ಪೀಠಿಕೆ    ಹಾಕಿದೆ.  ಬೆಳಗಿನ ಇಷ್ಟು ಮುಂಚೆ ಬಂದಿರುವ ಬಗ್ಗೆ ವಿಚಾರಿಸಿದರು.  ನಿಧಾನವಾಗಿ ಅವರ  ಮೊಮ್ಮೊಕ್ಕಳು ಬಂದು ಕೂಡಿಕೊಂಡರು. ಎಲ್ಲರ ಮನಸ್ಸು ಬಾಡಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ತಾತ " ಏನೋ ಹೇಳಬೇಕೂನ್ದೆ?' ಎಂದು ಪ್ರಶ್ನಿಸಿದರು.  ಗಂಟಲು ಸರಿಮಾಡಿಕೊಂಡು ಅಜ್ಜಿ ವಿಧಿವಶರಾದ ವಿಚಾರ ತಿಳಿಸಿದೆ.  " ಅಯ್ಯೋ  ನನ್ನನ್ನು   ಬಿಟ್ಟು ಹೊರತು ಹೋದಳೆ? " ಎಂದು ಅವರ ಕಣ್ಣಲ್ಲಿ ಎರಡು ಹನಿ ನೀರು ಉದುರಿತು.  ಒಂದೆರಡು ಕ್ಷಣದಲ್ಲಿ  ಸಾವರಿಸಿಕೊಂಡು " ಇನ್ನೇನು ಮಾಡೋಕ್ಕೆ ಆಗುತ್ತೆ?  ಅವಳ ಭಾಗ್ಯ ಅವಳು ತಗೊಂಡು ಹೋದಳು.  ನೀವು ನನಗೆ ಬೇರೊಂದು ಹೆಣ್ಣು ನೋಡಿ, ಮದುವೆಗೆ!!!!!!! " ಎಂದರು, ಅಲ್ಲಿದ್ದವರಿಗೆ ಆಶ್ಚರ್ಯ. ಸಹಜವಾಗಿ ಸಾವನ್ನು ತೆಗೆದುಕೊಂಡ ತಾತ ಮುಖವನ್ನು  ಗೋಡೆ ಕಡೆಗೆ ತಿರುಗಿಸಿದರು.
            ಮಧ್ಯಾನ್ಹದ ಹೊತಿಗೆ ಅಜ್ಜಿಯ ಪಾರ್ಥಿವ ಶರೀರವನ್ನು ತೆಗೆಲಾಯಿತು. ತಾತ ಮೌನವಾಗಿ ಕಣ್ಣೇರು ಹಾಕಿ ವಿದಾಯ ಹೇಳಿದರು.  ಸ್ಮಶಾನದಲ್ಲಿ  ಅಜ್ಜಿಯ  ಅಂತ್ಯ ಸಂಸ್ಕಾರಕ್ಕೆ ವಿಧಿ ನಡೆಸುತ್ತಿರುವಾಗಲೇ, ಮನೆಯಿಂದ ಒಬ್ಬ ಹಿರಿಯರು ಬಂದು ತಾತ ಕೊನೆಯುಸಿರೆಳೆದರೆಂದು ತಿಳಿಸಿದರು.  ನಮಗೆಲ್ಲ ಆಶ್ಚರ್ಯ.   ಅಜ್ಜಿಯ ಪಾರ್ಥಿವ ಶರೀರ ತೆಗೆದುಕೊಂಡು ಹೋರಟ ಐದು ಹತ್ತು ನಿಮಿಷದಲ್ಲೇ ತಾತ ಬಿಕ್ಕಳಿಸಲು ಪ್ರಾರಂಭ ಮಾಡಿ, ಈಗ ಅರ್ಧ ಗಂಟೆಯ ಹಿಂದೆ ಜೀವ ಬಿಟ್ಟರು ಎಂದು ಆ ಹಿರಿಯರು ಹೇಳಿದರು.  ಎಂತಹ ಸುಖವಾದ ಸಾವು!
         ಇದ್ದಾಗಲೂ ಒಂದು ಕ್ಷಣವೂ ಅಜ್ಜಿಯನ್ನು ಬಿಡದ ತಾತ ಸಾವಿನಲ್ಲೂ ಬಿಡಲು ತಯಾರಿರಲಿಲ್ಲ. ಅಜ್ಜಿಯ ಜೊತೆ ಸಾವಿನಲ್ಲೂ ಒಂದಾದರು.  ನಂತರದಲ್ಲಿ ಇಬ್ಬರ ಪಾರ್ಥಿವ ಶರೀರಗಳನ್ನು ಒಟ್ಟಿಗೆ ಸಂಸ್ಕಾರ ಮಾಡಲಾಯಿತು. ಇಂದಿಗೆ ಹತ್ತಾರು ವರ್ಷಗಳೇ ಕಳೆದಿದ್ದರು ಇವರ ಆದರ್ಶ ಜೀವನ ಎಂದಿಗೂ ನಮಗೆ ಮಾದರಿಯೇ!

October 10, 2012

ಬೀ Chi ಯವರ ಅಂದನಾ ತಿಮ್ಮ...........3



ಯಾತ್ರೆಗೆ ಬಂದಿರುವೆ ಧರ್ಮಶಾಲೆಯಲಿರು|
ರಾತ್ರಿ ಮೂರು ಕಳೆ, ಮುಂದು ಸಾಗು | 
ಪಾತ್ರೆ ಪಡುಗ ಕೊಡು, ಧರ್ಮಶಾಲೆಯ ಬಿಡು|
ಯಾತ್ರಿಕ ನೀನಿಲ್ಲಿ , ಅರಿತು ಬಾಳೋ ತಿಂಮ ||

ಎಳೆರವಿಯ ದಿಟ್ಟಿಸುತ ಅಜ್ಜ ಕುಳಿತಿದ್ದ|
ಕೇಳಿದ ಗೀಬ್ರಾನ್ ಏನ ನೋಡುವಿ ತಾತ? |
ಬಾಳು ಎಂದಜ್ಜ ,  ಅಷ್ಟೇನೇ ? ಅಂದ ಗೀಬ್ರಾನ್ |
ಸಾಲದೇ? ಕೇಳಿದನಾ  ಅಜ್ಜಾ , ತಿಳಿಯಿತೇ ತಿಮ್ಮ?||

ಜೀವನದಿ ಬೇಸತ್ತು ಒಮ್ಮೆ ಸಾಯಲು ಹೊರಟೆ|
ಬಾವಿ ಕಂಡೆನು ಒಂದ , ನೀರಿಗಿಳಿದೆ|
ಹಾವು!!!! ಒಂದೇ ಓಟ.....ಸಾವಿಗೆ ಹಾವೇನು?|
ಬಾವೇನು?...ಬಾಳು ಸೋಜಿಗ ತಿಂಮ ||

ಬಾಳು ಗೋಳಾಯಿತೆಂದು ಅಳುವುದು ಹೊಲ್ಲ |
ಗೋಳು ಅಳುವವಗಷ್ಟೇ ಮೀಸಲುಂಟು |
ಬಾಳ ಗುಟ್ಟರಿತು ಬದುಕುವವಗೆ ಆತ್ಮದ ಹಸಿವಿದು |
ಬಾಳು ಹಬ್ಬವೂ ಹೌದು, ಬಾಳು ತಿಂಮ ||

                                                                                        (ಮತ್ತಷ್ಟು ನಾಳೆಗೆ)

October 9, 2012

ದೊಡ್ಡವರ ದಾರಿ..........4





                 ತಾ ರಾ ಸು ಕನ್ನಡದ ಹೆಸರಾಂತ ಬರಹಗಾರರಲ್ಲಿ ಒಬ್ಬರು.  ಇವರು ತಮ್ಮ ಯೌವನದಲ್ಲಿ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ್ದರಂತೆ.  ಇವರ ಸ್ನೇಹಿತರ ಬಳಗ ದೊಡ್ಡದು. ಇವರ ಅನೇಕ ಸ್ನೇಹಿತರು ಸ್ವತಂತ್ರ ಭಾರತದ ಸರಕಾರದಲ್ಲಿ ಮಂತ್ರಿ ಮಹೋದಯರಾಗಿದ್ದರು.  ತಾ ರಾ ಸು ಬರಹಗಾರರಾಗಿಯೇ ಉಳಿದರು. ಎಂದಿನಂತೆ ಜನಪ್ರಿಯತೆ ಬಂತೆ ಹೊರತು ಇವರ ಬದುಕು ಕಷ್ಟದಲ್ಲಿಯೇ ಇತ್ತು.  ಹಲವಾರು ಪುಸ್ತಕಗಳನ್ನು ಹೊರತಂದರೂ, ಇವರ ಹಣಕಾಸಿನ ಸ್ತಿತಿ ಅಷ್ಟೇನೂ ಸುಧಾರಿಸಲಿಲ್ಲ.  ಆದರೆ, ಇದಾವುದರ ಪರಿವೆಯೂ ಈ ಕವಿಮಾನ್ಯರಿಗೆ  ಇರಲಿಲ್ಲ. 
                 ಒಮ್ಮೆ ತಾ ರಾ ಸು ರವರು ಒಂದು ಸಭೆಗೆ ಆಹ್ವಾನಿತರಾಗಿ ಹೋಗಿದ್ದರು.  ಅಲ್ಲಿಗೆ ಇವರ ಮಿತ್ರರಲ್ಲೊಬ್ಬರಾದ ಮಂತ್ರಿ ಮಹೋದಯರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.  ಕಾರ್ಯಕ್ರಮ ಮುಗಿದ ನಂತರ ಲೋಕಾಭಿರಾಮವಾಗಿ ಮಾತನಾಡುತ್ತ ಸಂಸಾರದ ವಿಚಾರ, ಆರ್ಥಿಕ ಸ್ಥಿತಿ ಗತಿ, ಇತ್ಯಾದಿಗಳು ಬಂದವು.  ಸೂಕ್ಷ್ಮವಾಗಿ ಇವರ ಪರಿಸ್ಥಿತಿ ಗಮನಿಸಿದ ಮಂತ್ರಿ ಮಹೋದಯರು ತಾ ರಾ ಸು ರವರಿಗೆ " ಸ್ವಾಮೀ, ನೀವು ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ ಬಗ್ಗೆ ಒಂದು ಪ್ರಮಾಣಪತ್ರ ಲಗತ್ತಿಸಿ ಒಂದು ಅರ್ಜಿಕೊಡಿ.  ನಿಮಗೆ ಮಂಡ್ಯ ಹತ್ತಿರ ಒಂದೆರಡು ಎಕರೆ ದರಖಾಸ್ತು ಜಮೀನನ್ನು ಉಚಿತವಾಗಿ ಕೊಡಲು ಶಿಫಾರಸ್ಸು ಮಾಡುತ್ತೇನೆ. ನಿಮಗೆ ಖಂಡಿತ ಸಿಗುತ್ತದೆ " ಎಂದು ಹೇಳಿದರು.  ಆಗಲಿ ಎಂದು ಹೇಳಿ ತಾ ರಾ ಸು ಮನೆಗೆ ಬಂದರು.
                 ಒಂದೆರಡು ದಿನ ಕಳೆದ ನಂತರ ಅರ್ಜಿಯನ್ನು ತಯಾರು ಮಾಡಿದರು.  ಈ ಅರ್ಜಿಯನ್ನು ತಾ ರಾ ಸು ರವರ  ಪತ್ನಿ ಅಂಬುಜಮ್ಮ ನವರು ನೋಡಿದರು.  ಈ ಅರ್ಜಿ ಕೊಡೊ ವಿಚಾರ ಈಕೆಗೆ ಏಕೋ ಹಿಡಿಸಲಿಲ್ಲ. ಅವರು ನೇರ ಬಂದು ತಮ್ಮ ಪತಿಯಲ್ಲಿ " ನೀವು ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ದು ದೇಶಕ್ಕಾಗೋ ಅಥವಾ ಜಮೀನಿಗಾಗೋ? " ಎಂದು ಪ್ರಶ್ನಿಸಿಯೇ ಬಿಟ್ಟರು.      ಈ ಅನಿರೀಕ್ಷಿತ ಪ್ರಶ್ನೆಯಿಂದ ಕ್ಷಣಕಾಲ ತಬ್ಬಿಬ್ಬಾದರೂ ಸಾವರಿಸಿಕೊಂಡು " ದೇಶಕಾಗಿಯೇ " ಎನ್ನುತ್ತಾ   ಆ ಅರ್ಜಿಯನ್ನು ಹರಿದು ಬಿಸಾಕಿದರು.
                 ಇಂತಹ ನಿಸ್ಪೃಹ  ದಂಪತಿಗಳು  ನಮಗೆ ಆದರ್ಶವಲ್ಲವೇ?


ಬೀ Chi ಯವರ ಅಂದನಾ ತಿಮ್ಮ...........2



              ಗಾಯತಾ ಮಾಯುವುದು ಗಾಯಕೌಷಧಿ ಉಂಟು|
              ಮಾಯದದು ಗಾಯದ ಕಪ್ಪು ಕಲೆಯು|
              ಸಾಯುವರು ಮಿತ್ರರು ಕಾಲ ನುಂಗಿತು ದುಃಖ |
              ಹೋಯಿತೇನೋ ನೆನಪು? ಹೇಳು ತಿಂಮ ||

             ಎಲ್ಲದಕು ಕಾರಣವ ಹುಡುಕದಿರು ಮನುಜ|
             ಬೆಲ್ಲವದು ಸಿಹಿ ಇದೆ ನೊಣ ಬಂತು ಅಂದ |
             ಬಲ್ಲವರು ಉಂಟೆ ಪ್ರೀತಿಗೆ ಕಾರಣವನು ?|
             ಇಲ್ಲ ಕಾರಣ, ಇದ್ದರದು ಪ್ರೀತಿಯೇ ಅಲ್ಲ ತಿಂಮ ||

             ಎಲ್ಲ ಕಾಲದಿ ಯಾರು ಚೆನ್ನ ಇದ್ದದ್ದು ಉಂಟು?|
             ಕೆಲಕಾಲ ಚೆನ್ನ, ಕೆಲಕಾಲ ಸಪ್ಪೆ, ಇನ್ನು |
             ಕೆಲಕಾಲ ಬರೀ ಸಿಪ್ಪೆ ಆಗಿಹೆನು |
             ನೆಲವಿರುವವರೆಗೂ ಅಂತೂ ಇರುವೆ, ಕೇಳೋ ತಿಂಮ ||

             ಸರಿ ಅಲ್ಲ ಈ ಜಗವು ಮತಿ ಇಲ್ಲ ಈ ಜನಕೆ|
             ಹಿರಿದು ಆಗಲು ಬೇಕು ನಮ್ಮ ಬಾಳು |
             ಕಿರಿ ಕಿರಿ ದುಸು ಮುಸು ವ್ಯರ್ಥವಾದುದೇ ಇಲ್ಲ|
             ಸಿರಿವಂತ ಆತ್ಮದ ಗೊಣಗಾಟವಿದು ತಿಂಮ || 

                                                                                      (ಮತ್ತಷ್ಟು ನಾಳೆಗೆ)

October 8, 2012

ಬೀ Chi ಯವರ ಅಂದನಾ ತಿಮ್ಮ


            ಈಗ್ಗೆ 40 ವರ್ಷಗಳ ಹಿಂದೆಯೇ ಒಂದು ಅತ್ಯುತ್ತಮ ಕೃತಿಯನ್ನು ರಚಿಸಿ ಅದರಲ್ಲಿ ಜ್ಞಾನ, ಲೋಕಾನುಭವ ಇವೆರಡನ್ನೂ  ಹದವಾಗಿ ಮಿಶ್ರಮಾಡಿ ನಮ್ಮಂತಹವರಿಗೆ ಬಿಟ್ಟು ಹೋಗಿದ್ದಾರೆ.   ಅದೇ ಅಂದನಾ ತಿಮ್ಮ. ಬೀ Chi ಯವರ ಮಾತಿನಲ್ಲೇ   ಹೇಳಬೇಕೆಂದರೆ ಈ ಕೃತಿ  ಇವರ 51 ನೆ   ಅಪರಾಧ!                  ಈ ಪುಸ್ತಕದ ಮುನ್ನುಡಿಯಲ್ಲಿ ಬೀ Chi ಯವರು " ನಡೆಯುವವನಿಗೆ ಕಾಲು ಮತ್ತು ಗುರಿ ಎರಡೇ ಇದ್ದರೆ ಸಾಲದು, ಮುಖ್ಯವಾಗಿ ಇನ್ನೊಂದು ಬೇಕು--ಕಣ್ಣು . ಅಷ್ಟು ದೂರ ಸಾಗಿಬಂದ ನಂತರ ಕೊಂಚ ನಿಂತು, ವಿಶ್ರಮಿಸಿ, ಒಂದು ಬಾರಿ ಹಿಂದೆ  ತಿರುಗಿ ನೋಡುವುದು ಜಾಣ ದಾರಿಹೋಕನ ಲಕ್ಷಣ. ಎಷ್ಟು ದೂರ ನಡೆದಿದ್ದೇನೆ, ನಡೆದು ಬಂದ ದಾರಿ ಸರಿಯೇ ಎಂಬುದು ಹೆಚ್ಚು ಮುಖ್ಯ. ಇದನ್ನರಿಯಬೇಡವೆ ?  ಆತ್ಮವಿಮರ್ಶೆ ಅವಶ್ಯ.  ಒಂದು ಸಮಗ್ರ ಚಿತ್ರ ಕಣ್ ಮುಂದು ಇರಲೆಂದು ಈ ಪ್ರಯತ್ನ."  ಹೇಳಿದ್ದಾರೆ .
           ಇಂತಹ ಸುಂದರ ಕವನಗಳ ಸಾಲಿನ ಆಯ್ದ ಭಾಗಗಳನ್ನು ಸಂಪದ ಓದುಗರೊಂದಿಗೆ ನಿಯಮಿತವಾಗಿ ಹಂಚಿಕೊಳ್ಳಲು ತುಂಬಾ ಸಂತೋಷ ಪಡುತ್ತೇನೆ.

ಸಿಹಿ ಬೇಕು ನಾಲಿಗೆಗೆ, ಕಹಿ ಒಲ್ಲೆನೆಂಬುವುದು |
ಇಹವೆರಡು   ಬಾಳಿನಲಿ ಹಗಲು ರಾತ್ರಿಗಳಂತೆ||
ಕಹಿಉಂಡು ಸಿಹಿ ಉಣ್ಣು,   ಹೇಗಿದೀಗ?|
ಬಹು ಉಪಕಾರಿ ಕಹಿ,  ರುಚಿ ನೋಡು ತಿಂಮ||

ದೊಡ್ಡ ಜೇಬಿದೆ ಇವಗೆ ಹೃದಯ ಬಹುಚಿಕ್ಕದು|
ದೊಡ್ಡ ಹೃದಯದವಗೆ ಚಿಕ್ಕ ಜೇಬು ||
ನೋಡಲ್ಲಿ, ಬರಿ ಜೇಬಿನ ಮುಂದು ಹೃದಯ ಹೀನನು |
ಕೈಯೊಡ್ಡಿ ನಿಂತಿಹನು,  ವಿಧಿವಿಲಾಸವಿದು ಕೇಳೋ ತಿಂಮ ||

                                                                                                           (ಮುಂದಿನ ದಿನಕ್ಕೆ ಇನ್ನಷ್ಟು)

ದೊಡ್ಡವರ ದಾರಿ..........3




          T P ಕೈಲಾಸಂರವರು  ಒಮ್ಮೆ Y C M A  ಗ್ರೌಂಡ್ಸ್ ನಲ್ಲಿ ಅವರ ಗುರುಗಳ ಭಾಷಣ ಕೇಳುತ್ತಿದ್ದರು.  ಅಂದಿನ ದಿನಗಳಲ್ಲಿ ಲೌಡ್ ಸ್ಪೀಕರ್ ಗಳು  ಇರಲಿಲ್ಲವಾದ ಕಾರಣ ಎಲ್ಲರು ನಿಶಬ್ದವಾಗಿ ಭಾಷಣ ಕೇಳುತ್ತಿದ್ದರು. ಇದಕ್ಕೆ ಕೈಲಾಸಂ ಹೇಳುತ್ತಿದ್ದರು " ಲೌಡ್ ಸ್ಪೀಕರ್ ಗಳಿಲ್ಲದೆ ಇದ್ದಾಗ ಜನಗಳ ಸೈಲೆನ್ಸೆ ಆಮ್ಪ್ಲಿಫೈಯರುಗಳು. "   ಎಲ್ಲರು ಭಾಷಣಕಾರರ ಕಡೆಗೆ ಮುಖ ತಿರುಗಿಸಿಕೊಂಡು ಕುಳಿತಿದ್ದರೆ, ಕೈಲಾಸಂ ಮಾತ್ರ ದೂರದಲ್ಲಿನ ಮರದ ಕಾಂಡ ಒಂದಕ್ಕೆ ಕಿವಿ ಇರಿಸಿ ನಿಂತಿದ್ದರು.  ಗುರುವಿನ ವಾಣಿ ಗಾಳಿಯಲ್ಲಿ ತೇಲಿ ಬಂದು ಮರದ ಕಾಂಡಕ್ಕೆ ಅಪ್ಪಳಿಸುವ ಮತ್ತು ಪ್ರತಿಫಲಿಸುವ  ಬಿಂದುವಿಗೆ ಸರಿಯಾಗಿ ಇವರ ಕಿವಿ. 
         ಹೀಗೆ ನಿಂತಿದ್ದನ್ನು ನೋಡಿ ಯಾರೋ ಕೇಳಿದರು " ಏನು ಹೀಗೆ?" 
         ತಕ್ಷಣ ಅವರನ್ನು ಕರೆದು "ನಿಮಗೆ Laws of Reflection ಗೊತ್ತೇ?"  ಎಂದು ಪ್ರಶ್ನಿಸಿದರು.         
         ಅವರು ತಕ್ಷಣ ಬಂದ ಪ್ರಶ್ನೆಯಿಂದ ತಬ್ಬಿಬ್ಬಾದರು ಸಾವರಿಸಿಕೊಂಡು " ಗೊತ್ತಿಲ್ಲದೇ ಏನು?  ಮಕ್ಕಳಿಗೆ ನಿತ್ಯ ಪಾಠ          ಮಾಡಬೇಕಲ್ಲ !"  ಎಂದರು.  
         ತಕ್ಷಣ ಕೈಲಾಸಂರವರು " ಇದು Angle of incidence is equal to the angle of reflection.  ನೀವು ಪ್ರತಿನಿತ್ಯ ಹೇಳಿದ್ದನ್ನ ನಾನು ಪ್ರಾಕ್ಟಿಕಲ್ಲಾಗಿ ಮಾಡಿದೆ ಅಷ್ಟೇ. ಕೇಳಬೇಕು, ಕಲಿಯಬೇಕು ಎಂಬ ಮಾತಿನೊಂದಿಗೆ LAWS ಗಳು LOSS ಆಗದಂತೆ ಕರಗತ ಮಾಡಿಕೊಂಡಿದ್ದೇನೆ ಅಷ್ಟೇ " ಎಂದರು.  ಆ ಮೇಷ್ಟ್ರು ಸುಸ್ತು!!!!!!!!!!!.

                                                           ************************

October 4, 2012

Dedication





I salute him for his love, faith in his daughter, his efforts and perseverance. 
I salute her for her hard work, determination, dedication, faith and love.
Such stories uplift the spirits in all of us.