ಮನೆ ಬಾಗಿಲ ಮುಂದೆ ಹಾವಾಡಿಗ ಪುಂಗಿ ಉದುತ್ತ ಹಾವನ್ನು ಚನ್ನಾಗಿ ಆಡಿಸುತ್ತಿದ್ದ. ಹೆಡೆ ಬಿಚ್ಚಿ ಹಾವು ತಲೆ ಅಲ್ಲಾಡಿಸುತ್ತಿದ್ದುದನ್ನು ಕಂಡು ಜನರಿಗೆ ಒಂದು ರೀತಿ ಖುಷಿ. ಜೇಬಿಂದ ದುಡ್ಡು ತೆಗೆದು ಹಾಕುತ್ತಿದ್ದರು. ಗುಂಡನ ಹೆಂಡತಿಗೊಂದು ಸಂಶಯ ಬಂತು. ನಿವಾರಣೆಗೊಸ್ಕರ ದುಡ್ಡು ಹಾಕುವಾಗ " ಈ ಹಾವು ಗಂಡೋ ಹೆಣ್ಣೋ?" ಎಂದು ಕೇಳಿಯೇ ಬಿಟ್ಟಳು. ಗುಂಡನಿಗೆ ನಗು ಬಂತು. " ನಿನಗ್ಯಾಕೆ ಅದು ? ಇನ್ನೊಂದು ಹಾವು ಅದನ್ನ ವಿಚಾರಿಸಿಕೊಳ್ಳುತ್ತೆ" ಎಂದು ಬಾಗಿಲು ಹಾಕಿಕೊಂಡ.
hahahahaha allu jaati prashne...(hennu jaati...gandu jaathi)
ReplyDeleteಆತ್ಮೀಯ ಶ್ರೀಕಾಂತ
Deleteಜಾತಿ ಕೇಳೋಕ್ಕೆ ಜಾಗ ಯಾಕಪ್ಪ ?
ಅದು ಗಂಡು ಹಾವೇ. ಸಂಶಯವೇ ಇಲ್ಲ!
ReplyDeleteಹೆಂಡತಿ ಊದೋ ಊದುಕೊಳವೇಗೂ ತಲೇ ತೂಗೋನು "ಗಂಡನೇ" ಅಲ್ವೇ!
ಆತ್ಮೀಯ ರಜನೀಶ,
Deleteಆ ಹೆಣ್ಣಿನ ಸಂಶಯ ಏನೂಂದ್ರೆ, ಗಂಡಸು ಪುಂಗಿ ಉದುತ್ತಿರುವಾಗ ಗಂಡು ಹಾವೇ ಇಷ್ಟು ಚೆನ್ನಾಗಿ ತಲೆತೂಗಿದ್ದು ನೋಡಿದರೆ ಸಂಶಯ ಬರದಲೇ ಇರುತ್ತಾ? ಇಲ್ಲೇನೋ ಎಡವಟ್ಟು ಇರಬಹುದೇ ಎಂಬ ಸಂಶಯ. ಉದುಗೊಳವೆಗೆ ತಲೆ ಆಡಿಸುವ ಗಂಡಸು, ಇನ್ನು ಪುಂಗಿಗೆ?.......................