August 25, 2012

ರಾಜಕೀಯ ಎಂದರೆ ಇದೇನೇ ??????????



           ಒಮ್ಮೆ ಅಮೆರಿಕಾದ ಅಧ್ಯಕ್ಷ ಬುಶ್ ಶಾಲೆಯೊಂದಕ್ಕೆ ಹೋಗಿ ಚಿಕ್ಕದೊಂದು ಭಾಷಣ ಮಾಡಿ ಪ್ರಶ್ನೆಗಳೆನಾದರು ಇದ್ದಲ್ಲಿ ಕೇಳಬಹುದು ಎಂದು ಹೇಳಿದ.

ಒಬ್ಬ ಹುಡುಗ ತನ್ನ ಕೈ ಎತ್ತಿದ 
ಬುಶ್ : ನಿನ್ನ ಹೆಸರೆನು?
ಜಾನ್ :  ಜಾನ್ 
ಬುಶ್ : ನಿನ್ನ ಪ್ರಶ್ನೆಗಳೇನು?
ಜಾನ್ :  1.  UNO  ಅನುಮತಿಯಿಲ್ಲದೆ ಇರಾಕಿನ ಮೇಲೆ ಅಮೆರಿಕ ಧಾಳಿ ಮಾಡಿದ್ದು ಏಕೆ?
            2.  ಒಸಾಮಾ ಎಲ್ಲಿದ್ದಾನೆ?
            3.   ಅಮೆರಿಕ ಪಾಕಿಸ್ತಾನಕ್ಕೆ ಏಕೆ ಅಷ್ಟೊಂದು ಬೆಂಬಲ ಕೊಡುತ್ತದೆ?
ಬುಶ್ :  ನೀನು ತುಂಬಾ ಬುದ್ಧಿವಂತ ವಿದ್ಯಾರ್ಥಿ ಜಾನ್ ......( ಅವಧಿ ಮುಗಿದ ಘಂಟೆ ಬಾರಿಸುತ್ತದೆ )
ಪ್ರಿಯ ವಿಧ್ಯಾರ್ಥಿಗಳೇ, ಮುಂದಿನ ಅವಧಿಯಲ್ಲಿ ನಮ್ಮ ಚರ್ಚೆ ಮುಂದುವರೆಸೋಣ.

ಮುಂದಿನ ಅವಧಿಯಲ್ಲಿ ....
ಬುಶ್ :  ಆಯಿತು ಮಕ್ಕಳೇ ನಾವು ಎಲ್ಲಿಗೋ  ನಿಲ್ಲಿಸಿದ್ದೆವು , ಈಗ ಪ್ರಾರಂಭಿಸೋಣ. ನಿಮ್ಮ ಪ್ರಶ್ನೆ ಕೇಳಿ.

ಪೀಟರ್ ಕೈ ಎತ್ತಿದ, ನಾನು ಪೀಟರ್. ನನ್ನದು 5 ಪಶ್ನೆಗಳಿವೆ.
           1. UNO  ಅನುಮತಿಯಿಲ್ಲದೆ ಇರಾಕಿನ ಮೇಲೆ ಅಮೆರಿಕ ಧಾಳಿ ಮಾಡಿದ್ದು ಏಕೆ?
           2.  ಒಸಾಮಾ ಎಲ್ಲಿದ್ದಾನೆ?
           3.   ಅಮೆರಿಕ ಪಾಕಿಸ್ತಾನಕ್ಕೆ ಏಕೆ ಅಷ್ಟೊಂದು ಬೆಂಬಲ ಕೊಡುತ್ತದೆ?
           4.  ನಿಗಧಿತ ಅವಧಿಗಿಂತ 20 ನಿಮಿಷ ಮುಂಚೆಯ ಘಂಟೆ ಹೊಡೆದದ್ದು ಯಾಕೆ?
           5.   ಜಾನ್ ಎಲ್ಲಿ?

( ಅವಧಿ ಮುಗಿದ ಘಂಟೆ ಬಾರಿಸುತ್ತದೆ )

No comments:

Post a Comment