March 29, 2012

ಸ್ಮರಣೆ

                               ಸ್ಮರಣೆ 

                 ಸ್ಮರಿಸು ...........
                 ಆ ದಿವ್ಯ ಚೈತನ್ಯದ  ಶಕ್ತಿಯ .....ಒಮ್ಮೆ ಸ್ಮರಿಸು.

                ಭೂಮಿಗಿಳಿದ ಆ ದಿನದಿಂದ ಈ  ತನಕ
                ಸಲಹುತಿರುವ ಆ ದಿವ್ಯ ಚೇತನವ
                ದೃಡದಲಿ ನಂಬಿ  .......ಒಮ್ಮೆ ಸ್ಮರಿಸು.

                ಅಡಗಿರುವ ಸೃಜನಶೀಲ ನವೀನ ಚಿಂತನೆಯ ಹೊರಗೆಳೆದು
                ನಿತ್ಯಕರ್ಮದಲಿ  ವಿವೇಕ ಬೆರೆಸು.
                ಕಷ್ಟ ಇದೆನ್ನುವ  ನೂರು ಕಾರಣವ ಗಾಳಿಗೆ ತೂರಿ
                ಸಾಧ್ಯಮಾಡುವ  ಸಾವಿರಾರು ಅವಕಾಶಗಳ ಹೆಕ್ಕಿ ತೆಗಿ,
                ಪ್ರೀತಿ ಪ್ರೇಮ, ಶ್ರದ್ಧೆ ವಿಶ್ವಾಸದಲಿ ಈ  ದಿನದ
                ಬದುಕಿಗೆ ವಿದಾಯ ಹೇಳಿ ಶುಭ್ರ  ನಾಳೆಯ
                ಎದುರುಗೊಳ್ಳುವ ಮುನ್ನ........ ಒಮ್ಮೆ ಸ್ಮರಿಸು.

                ನಿನ್ನೆಯ ಕಹಿ ಸಿಹಿ ನೆನಪು ನಿನ್ನೆಗೆ  ಕೊನೆ.
                ನಾಳೆ,  ಅರಿವಿರದ ರಹಸ್ಯದ  ಗಂಟು,
                ಇಂದು ಮಾತ್ರ ನಿನ್ನ ಕೈಯೊಳು ಸಿದ್ದವಿಹುದು
                ನಿನ್ನೊಳಗಿನ ಶಕ್ತಿಯ ನಂಬು, ಶಂಕೆಯ ಜಾಡಿಸು
                ಬಾಳು ರಹಸ್ಯವಲ್ಲ ತೆರೆದ ಪುಸ್ತಕ
                ಸಾಲುಗಳು ಕಠಿಣವಿರೆ ಅರ್ಥ ತಿಳಿಯಲು ......ಒಮ್ಮೆ ಸ್ಮರಿಸು.

                ಉದಯವಾದರೆ  ರವಿ, ನಿನ್ನಾಯುಷ್ಯದ ಒಂದು ದಿನವ  ಕಳೆವ
                ಹೋದ ಮಾನ , ಬಿಟ್ಟ ಬಾಣ,ಕೊಟ್ಟ ಮಾತು
                ಹಿಂದೆ ಪಡೆವ   ವ್ಯರ್ಥಸಾಹಸಕೆ ಮನಸು ಬೇಡ.
                ಇಂದಿನಾ ದಿನದ ಬಾಳಿನಲಿ ಅಂಟು ಇರದ ಕರ್ಮದಲಿ
                ಧನ್ಯತೆಯ ಸವಿ ಬೆರೆಸಿ ಸಂತೃಪ್ತಿಯ ಭಾವದಲಿ
                ನಿದ್ದೆಗೆ ಜಾರುವ ಮುನ್ನ ..........ಒಮ್ಮೆ .ಸ್ಮರಿಸು.

                ಹೆಚ್  ಏನ್  ಪ್ರಕಾಶ್
                29 03 2012

March 22, 2012

ಉಗಾದಿ ಹಬ್ಬದ ಶುಭ ಕಾಮನೆಗಳು

                                                      ಹೆಚ್ ಏನ್ ಪ್ರಕಾಶ್ March 16, 2012

ಸತ್ಯವೂ, ಮುಕ್ತವೂ ಸುಂದರವೂ

                     ಸತ್ಯವೂ,   ಮುಕ್ತವೂ   ಸುಂದರವೂ  


          ಒಂದು ದಿನದ ಬದುಕೇ ಬಾಳಲ್ಲ
          ಪ್ರತಿಕ್ಷಣವು ಬದುಕು ಅಮೂಲ್ಯ
          ಕಳೆದ ನಿನ್ನೆ ಇಂದಿಗೆ ಪ್ರಸ್ತುತ
          ಇಂದಿನ ಘಳಿಗೆ ರಸಮಯವೆಂತಾದರೆ
          ಕಾಣುವ ನಾಳೆ ವೈವಿಧ್ಯಮಯ.


          ಬಾಳು   ಭರವಸೆಯ ಪ್ರತೀಕ
          ನಿರಾಸೆಯ ಗೂಡಲ್ಲ.  ನಡೆವ ಹಾದಿ
          ಹೂವಿನ ಹಾಸಿಗೆಯಲ್ಲ....ಸರಿ.
          ಮುಳ್ಳಿನ ಹಾದಿಯೇ ಎಲ್ಲವು ಅಲ್ಲ.
          ದಾರಿಗುಂಟ ಕಲ್ಲುಮುಳ್ಳುಗಳ ಮಧ್ಯೆ
          ಸುಂದರ ಕಾಡು ಹೂವು, ಹುಲ್ಲಿನ ಹಾಸೂ
          ಮುದನೀದಲು ಕಾದಿದೆ,  ಗಮನಿಸಬೇಕು...ಅಷ್ಟೇ


          ನಾಮಪದದಷ್ಟೇ ಕ್ರಿಯಾಪದವು ಮುಖ್ಯ ನೆಮ್ಮದಿಗೆ.
          ನಾನು ಬೆಳೆದೆ, ಓದಿದೆ, ಕಲಿತೆ, ದುಡಿದೆ ಎನ್ನುವ
          ಗತಕಾಲದ ವೈಭವಕಿಂತ ........  ನಾನು
          ಬೆಳೆಯುತ್ತಿದ್ದೇನೆ, ಓದುತ್ತಿದ್ದೇನೆ, ಕಲಿಯುತ್ತಿದ್ದೇನೆ,
          ದುಡಿಯುತ್ತಿದ್ದೇನೆ ಎನ್ನುವ  ವಿನಯ
          ಸುಪ್ತ ಅಹಂಕಾರದ ಪ್ರತಿಷ್ಠೆಯನ್ನು ಮೆಟ್ಟಿ ನಿಲ್ಲುತ್ತದೆ


          ಒಂದು ಹಂತದಲಿ......ಬದುಕಿಗೆ ಇಷ್ಟು ಸಾಕು ಎನಿಸಬೇಕು
          ಲಭ್ಯವಾದುದರಲ್ಲೇ  ಸಂತೋಷವ ತುಂಬಿ,
          ಬಾರದುದಕೆ ಕಾಯದೆ , ಸಿಗದುದಕೆ ವಿಷಾದಿಸದೆ,
          ಸಂತಸದೆ ಬದುಕುವ ಬಗೆಯೇ ತೃಪ್ತಿ.
          ಪದೋನ್ನತಿ ಬೇಡವೆಂದೇನೋ ಅಲ್ಲ ಅದಕಾಗಿ
          ಕೋಪ ತಾಪಗಳಿಲ್ಲ,  ಬೇಡದ ಗೊಣಗಾಟವಿಲ್ಲ.


          ಸಮೃದ್ಧವಾದ ಈ  ಜಗತ್ತಿನಲಿ
          ವಿಶಾಲತೆ,  ಗಹನತೆಗಳು ಅನೇಕವಿದೆ.
          ಕೊರತೆಗಳು ನಮ್ಮ ದೃಷ್ಟಿ ದೋಷ.
          ಎಲ್ಲವೂ ಇಲ್ಲೇ ಇದೆಯೆನ್ನುವ ಪ್ರಯತ್ನಕ್ಕೆ
          ಸುಲಭದ   ದಾರಿ ಹತ್ತಾರು.


         ಭಗವಂತನ ದಿವ್ಯಾನುಗ್ರಹ ಈ ದೇಹ.
         ಮನಸಿನ ಆರೋಗ್ಯ ದೇಹದ ಪ್ರತಿರೂಪ,
         ದಿನನಿತ್ಯದ ಬದುಕು ನಾವು ಬೆಳೆಯುವ ಪರಿ.
         ಪ್ರೀತಿಯ ಸಸಿಗೆ ನೀರೆರೆದಾಗ  ಸಮೃದ್ದಿಯಫಲ
         ಪವಿತ್ರ ಬದುಕಿಗೆ, ಮುಕ್ತ ಮನಸಿನ
         ನಿರ್ಮಲ ಭಾವ....... ಸಂತೃಪ್ತಿ.


         ಮನಸು, ದೇಹ ಸಂಯಮದಲಿ ಸ್ಪಂದಿಸಿದರೆ
         ತಾಪ ಪರಿತಾಪಗಳ ಹೊಯ್ದಾಟವಿಲ್ಲ.
         ವಿಶ್ವಾತ್ಮ ಭಾವ ಮನದಲುದಯಿಸಿದಾಗ
         ಸಹಜ ಶಾಂತಿಯ, ದಿವ್ಯಾನುಭೂತಿಯ
         ಮಧುರ ಬದುಕಿನ ಕ್ಷಣಗಳು
         ಸತ್ಯವೂ,   ಮುಕ್ತವೂ   ಸುಂದರವೂ ಹೌದು.

         ಹೆಚ್  ಏನ್  ಪ್ರಕಾಶ್ 
         16 03 2012

March 14, 2012

HEALTHY EATING HABITS


HEALTHY EATING HABITS


EASY TIPS FOR PLANNING A HEALTHY DIET AND STICKING TO IT

Tip 1
 Set yourself up for success

To set yourself up for success, think about planning a healthy diet as a number of small, manageable steps rather than one big drastic change. If you approach the changes gradually and with commitment, you will have a healthy diet sooner than you think.
v  Simplify. Instead of being overly concerned with counting calories or measuring portion sizes, think of your diet in terms of color, variety, and freshness. This way it should be easier to make healthy choices. Focus on finding foods you love and easy recipes that incorporate a few fresh ingredients. Gradually, your diet will become healthier and more delicious.
v  Start slow and make changes to your eating habits over time. Trying to make your diet healthy overnight isn’t realistic or smart. Changing everything at once usually leads to cheating or giving up on your new eating plan. Make small steps, like adding a salad (full of different color vegetables) to your diet once a day or switching from butter to olive oil when cooking.  As your small changes become habit, you can continue to add more healthy choices to your diet.
v  Every change you make to improve your diet matters. You don’t have to be perfect and you don’t have to completely eliminate foods you enjoy to have a healthy diet. The long term goal is to feel good, have more energy, and reduce the risk of cancer and disease. Don’t let your missteps derail you—every healthy food choice you make counts.

Think of water and exercise as food groups in your diet.

Water:  Water helps flush our systems of waste products and toxins, yet many people go through life dehydrated—causing tiredness, low energy, and headaches. It’s common to mistake thirst for hunger, so staying well hydrated will also help you make healthier food choices.
Exercise: Find something active that you like to do and add it to your day, just like you would add healthy greens.    The benefits of lifelong exercise are abundant and regular exercise may even motivate you to make healthy food choices a habit.

Tip 2
 Moderation is key 

People often think of healthy eating as an all or nothing proposition, but a key foundation for any healthy diet is moderation.  Despite what certain fad diets would have you believe, we all need a balance of carbohydrates, protein, fat, fiber, vitamins, and minerals to sustain a healthy body.
v  Try not to think of certain foods as “off-limits.” When you ban certain foods or food groups, it is natural to want those foods more, and then feel like a failure if you give in to temptation. If you are drawn towards sweet, salty, or unhealthy foods, start by reducing portion sizes and not eating them as often. Later you may find yourself craving them less or thinking of them as only occasional indulgences.
v  Think smaller portions. Serving sizes have ballooned recently, particularly in restaurants. When dining out, choose a starter instead of an entrée, split a dish with a friend, and don’t order supersized anything. At home, use smaller plates, think about serving sizes in realistic terms, and start small.  Visual cues can help with portion sizes—your serving of meat, fish, or chicken should be the size of a deck of cards. A teaspoon of oil or salad dressing is about the size of a matchbook and your slice of bread should be the size of a CD case.

Tip 3
It's not just what you eat, it's how you eat

Healthy eating is about more than the food on your plate—it is also about how you think about food. Healthy eating habits can be learned and it is important to slow down and think about food as nourishment rather than just something to gulp down in between meetings or on the way to pick up the kids.
v  Eat with others whenever possible. Eating with other people has numerous social and emotional benefits—particularly for children—and allows you to model healthy eating habits. Eating in front of the TV or computer often leads to mindless overeating.
v  Take time to chew your food and enjoy mealtimes. Chew your food slowly, savoring every bite. We tend to rush though our meals, forgetting to actually taste the flavors and feel the textures of our food. Reconnect with the joy of eating.
v  Listen to your body. Ask yourself if you are really hungry, or have a glass of water to see if you are thirsty instead of hungry. During a meal, stop eating before you feel full. It actually takes a few minutes for your brain to tell your body that it has had enough food, so eat slowly.
v  Eat breakfast, and eat smaller meals throughout the day. A healthy breakfast can jumpstart your metabolism, and eating small, healthy meals throughout the day (rather than the standard three large meals) keeps your energy up and your metabolism going.

Tip 4
Fill up on colorful fruits and vegetables 

Fruits and vegetables are the foundation of a healthy diet. They are low in calories and nutrient dense, which means they are packed with vitamins, minerals, antioxidants, and fiber.
Try to eat a rainbow of fruits and vegetables every day and with every meal—the brighter the better. Colorful, deeply colored fruits and vegetables contain higher concentrations of vitamins, minerals, and antioxidants—and different colors provide different benefits, so eat a variety. Aim for a minimum of five portions each day.
Some great choices include:
v  Greens. Branch out beyond bright and dark green lettuce. Kale, mustard greens, broccoli, and Chinese cabbage are just a few of the options—all packed with calcium, magnesium, iron, potassium, zinc, and vitamins A, C, E, and K.
v  Sweet vegetables. Naturally sweet vegetables—such as corn, carrots, beets, sweet potatoes, yams, onions, and squash—add healthy sweetness to your meals and reduce your cravings for other sweets.
v  Fruit. Fruit is a tasty, satisfying way to fill up on fiber, vitamins, and antioxidants. Berries are cancer-fighting, apples provide fiber, oranges and mangos offer vitamin C, and so on.
The importance of getting vitamins from food—not pills
The antioxidants and other nutrients in fruits and vegetables help protect against certain types of cancer and other diseases. And while advertisements abound for supplements promising to deliver the nutritional benefits of fruits and vegetables in pill or powder form, research suggests that it’s just not the same.
A daily regimen of nutritional supplements is not going to have the same impact of eating right. That’s because the benefits of fruits and vegetables don’t come from a single vitamin or an isolated antioxidant.
The health benefits of fruits and vegetables come from numerous vitamins, minerals, and phytochemicals working together synergistically. They can’t be broken down into the sum of their parts or replicated in pill form.

Tip 5
Eat more healthy carbohydrates and whole grains

Choose healthy carbohydrates and fiber sources, especially whole grains, for long lasting energy. In addition to being delicious and satisfying, whole grains are rich in phytochemicals and antioxidants, which help to protect against coronary heart disease, certain cancers, and diabetes. Studies have shown people who eat more whole grains tend to have a healthier heart.
A quick definition of healthy carbohydrates and unhealthy carbohydrates
Healthy carbohydrates (sometimes known as good carbohydrates) include whole grains, beans, fruits, and vegetables. Healthy carbohydrates are digested slowly, helping you feel full longer and keeping blood sugar and insulin levels stable.
Unhealthy carbohydrates (or bad carbohydrates) are foods such as white flour, refined sugar, and white rice that have been stripped of all bran, fiber, and nutrients. Unhealthy carbohydrates digest quickly and cause spikes in blood sugar levels and energy.
Tips for eating more healthy carbohydrates
v  Include a variety of whole grains in your healthy diet, including whole wheat, brown rice, millet, quinoa, and barley. Experiment with different grains to find your favorites.
v  Make sure you're really getting whole grains. Be aware that the words stone-ground, multi-grain, 100% wheat, or bran can be deceptive. Look for the words “whole grain” or “100% whole wheat” at the beginning of the ingredient list.
v  Try mixing grains as a first step to switching to whole grains. If whole grains like brown rice and whole wheat pasta don’t sound good at first, start by mixing what you normally use with the whole grains. You can gradually increase the whole grain to 100%.
Avoid: Refined foods such as breads, pastas, and breakfast cereals that are not whole grain.

Tip 6
Enjoy healthy fats & avoid unhealthy fats

Good sources of healthy fat are needed to nourish your brain, heart, and cells, as well as your hair, skin, and nails.  Foods rich in certain omega-3 fats called EPA and DHA are particularly important and can reduce cardiovascular disease, improve your mood, and help prevent dementia.
Add to your healthy diet:
v  Monounsaturated fats, from plant oils like canola oil, peanut oil, and olive oil, as well as avocados, nuts (like almonds, hazelnuts, and pecans), and seeds (such as pumpkin, sesame).
v  Polyunsaturated fats, including Omega-3 and Omega-6 fatty acids, found in fatty fish such as salmon, herring, mackerel, anchovies, sardines, and some cold water fish oil supplements. Other sources of polyunsaturated fats are unheated sunflower, corn, soybean, flaxseed oils, and walnuts.

Reduce or eliminate from your diet:
v  Saturated fats, found primarily in animal sources including red meat and whole milk dairy products.
v  Trans fats, found in vegetable shortenings, some margarines, crackers, candies, cookies, snack foods, fried foods, baked goods, and other processed foods made with partially hydrogenated vegetable oils.

Tip 7
Put protein in perspective

Protein gives us the energy to get up and go—and keep going. Protein in food is broken down into the 20 amino acids that are the body’s basic building blocks for growth and energy, and essential for maintaining cells, tissues, and organs. A lack of protein in our diet can slow growth, reduce muscle mass, lower immunity, and weaken the heart and respiratory system. Protein is particularly important for children, whose bodies are growing and changing daily.
Here are some guidelines for including protein in your healthy diet:
Try different types of protein. Whether or not you are a vegetarian, trying different protein sources—such as beans, nuts, seeds, peas, tofu, and soy products—will open up new options for healthy mealtimes.
v  Beans:  Black beans, navy beans, garbanzos, and lentils are good options.
v  Nuts: Almonds, walnuts, pistachios, and pecans are great choices.
v  Soy products: Try tofu, soy milk, tempeh, and veggie burgers for a change.
v  Avoid salted or sugary nuts and refried beans.
Downsize your portions of protein. Many people in the West eat too much protein. Try to move away from protein being the center of your meal. Focus on equal servings of protein, whole grains, and vegetables.
Focus on quality sources of protein, like fresh fish, chicken or turkey, tofu, eggs, beans, or nuts. When you are having meat, chicken, or turkey, buy meat that is free of hormones and antibiotics.

Tip 8
 Add calcium for strong bones

Calcium is one of the key nutrients that your body needs in order to stay strong and healthy. It is an essential building block for lifelong bone health in both men and women, as well as many other important functions.
You and your bones will benefit from eating plenty of calcium-rich foods, limiting foods that deplete your body’s calcium stores, and getting your daily dose of magnesium and vitamins D and K—nutrients that help calcium do its job.
Recommended calcium levels are 1000 mg per day, 1200 mg if you are over 50 years old. Take a vitamin D and calcium supplement if you don’t get enough of these nutrients from your diet.
Good sources of calcium include:
v  Dairy: Dairy products are rich in calcium in a form that is easily digested and absorbed by the body. Sources include milk, yogurt, and cheese.
v  Vegetables and greens: Many vegetables, especially leafy green ones, are rich sources of calcium. Try turnip greens, mustard greens, collard greens, kale, romaine lettuce, celery, broccoli, fennel, cabbage, summer squash, green beans, Brussels sprouts, asparagus, and crimini mushrooms.
v  Beans: For another rich source of calcium, try black beans, pinto beans, kidney beans, white beans, black-eyed peas, or baked beans.

Tip 9
Limit sugar and salt

If you succeed in planning your diet around fiber-rich fruits, vegetables, whole grains, lean protein, and good fats, you may find yourself naturally cutting back on foods that can get in the way of your healthy diet—sugar and salt.
Sugar
Sugar causes energy ups and downs and can add to health and weight problems. Unfortunately, reducing the amount of candy, cakes, and desserts we eat is only part of the solution. Often you may not even be aware of the amount of sugar you’re consuming each day. Large amounts of added sugar can be hidden in foods such as bread, canned soups and vegetables, pasta sauce, margarine, instant mashed potatoes, frozen dinners, fast food, soy sauce, and ketchup. Here are some tips:
v  Avoid sugary drinks. One 12-oz soda has about 10 teaspoons of sugar in it, more than the daily recommended limit! Try sparkling water with lemon or a splash of fruit juice.
v  Eat naturally sweet food such as fruit, peppers, or natural peanut butter to satisfy your sweet tooth.

How sugar is hidden on food labels
Check food labels carefully. Sugar is often disguised using terms such as:
ü  cane sugar or maple syrup
ü  corn sweetener or corn syrup
ü  honey or molasses
ü  brown rice syrup
ü  crystallized or evaporated cane juice
ü  fruit juice concentrates, such as apple or pear
ü  maltodextrin (or dextrin)
ü  Dextrose, Fructose, Glucose, Maltose, or Sucrose
Salt
Most of us consume too much salt in our diets. Eating too much salt can cause high blood pressure and lead to other health problems. Try to limit sodium intake to 1,500 to 2,300 mg per day, the equivalent of one teaspoon of salt.
v  Avoid processed or pre-packaged foods. Processed foods like canned soups or frozen dinners contain hidden sodium that quickly surpasses the recommended limit.
v  Be careful when eating out. Most restaurant and fast food meals are loaded with sodium.
v  Opt for fresh or frozen vegetables instead of canned vegetables.
v  Cut back on salty snacks such as potato chips, nuts, and pretzels.
v  Choose low-salt or reduced-sodium products.
v  Try slowly reducing the salt in your diet to give your taste buds time to adjust.March 8, 2012

ಪ್ರಾರ್ಥನೆ

ಪ್ರಾರ್ಥನೆ

                    ಈ ಜಗತ್ತಿನಲ್ಲಿ ಕಲ್ಪಿಸಿಕೊಳ್ಳುವುದಕ್ಕಿಂತ ಹೆಚ್ಚಿನ  ಸಂಗತಿಗಳು ಪ್ರಾರ್ಥನೆಯಿಂದ ಸಾದ್ಯವಾಗುತ್ತದೆ."ನಮ್ಮ  ಯಾವ  ಪ್ರಾರ್ಥನೆಯು  ವ್ಯರ್ಥವಾಗುವುದಿಲ್ಲ,  ಅದು  ಫಲ  ನೀಡೆ  ನೀಡುತ್ತದೆ" ಎಂಬುದು  ದಾರ್ಶನಿಕರನೇಕರ  ಆಶ್ವಾಸನೆ . ಜಾನಪದದಲ್ಲಿ ಒಂದು ಹಾಡು ಹೀಗಿದೆ."  ನರ ಮಾನವ ಬೇಡಿದ್ದೆಲ್ಲ ಕೊಡೋದಿಲ್ಲ, ಆ ಮಹಾದೇವ ಕೊಡಬೇಕು ಮನಸ್ಸು ತಣಿಯಬೇಕು||   ಬೇಡೋದೇ  ಆದರೆ ಮಹಾದೇವನ್ನ ಬೇಡಿಕೊಂಡು ಪಡಕೊಬೇಕು."          " ಕೇಳಿ, ಕೊಡಲ್ಪಡುತ್ತದೆ. ಹುಡುಕಿ, ಸಿಗಲ್ಪಡುತ್ತದೆ. ಕದ ತಟ್ಟಿ, ತೆರೆದುಕೊಳ್ಳುತ್ತದೆ." ಇದು ಏಸು ಕ್ರಿಸ್ತನ ಆಶ್ವಾಸನೆ.
                     ಇಂದು ಬೇಡಿಕೆಯು ವ್ಯಾಪಾರೀ ದೃಷ್ಟಿಯಲ್ಲಿ ನಡೆಯುತ್ತಿದೆ.  ನನಗೆ ಇದನ್ನು ಕೊಟ್ಟರೆ ನಾನು ನಿನಗೆ ಈ ಸೇವೆ ಮಾಡಿಸುತ್ತೇನೆ, ಇಂತಹುದನ್ನು ಕೊಡುತ್ತೇನೆ ಎಂಬೆಲ್ಲ ಹರಕೆ ಬೇರೆ!    ಭಗವಂತನು ನಾವು  ಕೇಳಿದ್ದೆಲ್ಲವನ್ನು ನೀಡುವ ಯಂತ್ರವೆಂದು ಭಾವಿಸಿದಂತಿದೆ. ಲೌಕಿಕ ಲಾಭ, ದೈಹಿಕ ಶಕ್ತಿ, ಅಭಿಲಾಷೆಗಳ ಪೂರೈಕೆ ಇತ್ಯಾದಿಗಳು ದಿನನಿತ್ಯದ ಬೇಡಿಕೆಗಳು.      ಆದರೆ, ಅಲ್ಪವಾದುದನ್ನೇ ಬೇಡಿ, ಅಷ್ಟು ಬೇಡಿದರೂ  ಇಷ್ಟೇ ಸಿಕ್ಕಿದ್ದು. ಅವನಿಗಾದರೆ ಅಷ್ಟು ಕೊಟ್ಟ,  ನನಗಾದರೆ ಇಷ್ಟೇ  ಎಂದು ಪರಿತಾಪ.  ಅದು ಕೊಡು, ಇದು ಕೊಡು ಎಂಬ ನಮ್ಮ ಬೇಡಿಕೆಯ ಪಟ್ಟಿ ಮುಗಿಯುವುದೇ ಇಲ್ಲ. ಎಷ್ಟು ಕೊಟ್ಟರು ಸಾಲದು. ಇಷ್ಟಾದರೂ,  ನನಗೇನು ಸರಿಯಾಗಿ ಕೊಟ್ಟಿಲ್ಲವೆಂಬ  ಆಪಾದನೆ ಬೇರೆ!  ನಾವು ಎಂದಿಗೂ ನಮ್ಮ ಅರ್ಹತೆಯ ಬಗ್ಗೆ ಚಿಂತಿಸುವುದೇ ಇಲ್ಲ.  ಬೇಡುವವನಿಗೆ ಬೇಡಲು ಕನಿಷ್ಠ ಅರ್ಹತೆಯಾದರೂ  ಇರಬೇಕೆಂಬ ವಿಚಾರ ತಿಳಿದೇ ಇಲ್ಲ.
                    ಬೇಡುವುದೇ ಒಂದು ಕೆಲಸವಾದರೆ ಪ್ರಯತ್ನಕ್ಕೆ ಜಾಗ ಎಲ್ಲಿ? ಬೇಡಿಕೆಯ ಜೊತೆ ಜೊತೆಗೆ ನಿರಂತರ ಪ್ರಯತ್ನವು ಇದ್ದರೆ ಪೂರ್ಣ ಫಲಕಾರಿಯಾಗಿ ಈಡೇರುತ್ತದೆ.ನಾವು ಬೇಡುವುದೇ ಆದರೆ ಅತಿ ಉನ್ನತವಾದುದನ್ನೇ ಬೇಡಬಹುದು, ಹೌದು, ಈ ಜಗತ್ತಿನಲ್ಲಿ ಯಾವ ಪ್ರಾರ್ಥನೆಯು ನಿಷ್ಪ್ರಯೋಜಕವಾಗಿಲ್ಲ.  ಅದು ಫಲ ನೀಡೆ ನೀಡುತ್ತದೆ. ಆದರೆ ಬೇಡುವವನು ನಾನೇನು ಬೇಡಬೇಕೆಂದು, ಬೇಡುವ ಮುಂಚೆ ಸರಿಯಾದ ನಿರ್ಧಾರ ಮಾಡಬೇಕಾಗುತ್ತದೆ.  ಇಲ್ಲವಾದಲ್ಲಿ,   ಬೇಡಿದ್ದು   ದೊರೆತಾಗ ಅದರಿಂದ ಆಗಬಹುದಾದ ಪರಿಣಾಮದ ಬಗ್ಗೆ ನಮಗೆ  ಯಾವ ನಿಯಂತ್ರಣವು ಇರದು, ಒಮ್ಮೆ ಬಿಟ್ಟ ಬಾಣದ ಹಾಗೆ.
                      ಶ್ರೀ ರಾಮಕೃಷ್ಣರು ಹೇಳುತ್ತಾರೆ " ಪ್ರಾರ್ಥನೆ  ತೀವ್ರತರವಾದರೆ ತಪಸ್ಸು. ತಪಸ್ಸು ಎಲ್ಲರಿಗು ಸಾಧ್ಯವಾಗದು. ಪ್ರಾರ್ಥನೆಯೆಂದರೆ  ಪ್ರೀತಿಯಿಂದ ಹೃದಯದ ತುಡಿತವನ್ನು ಬಯಲುಗೊಳಿಸುವುದು. ನಿಜವಾಗಿಯೂ ಅದು ಭಗವಂತನೊಡನೆ ನಡೆಸುವ ಆಪ್ತ ಸಂವಾದ. ಇದು ವಾದವಾಗಬಾರದು, ವಿವಾದವಾಗಬಾರದು, ಸಂವಾದವಾಗಬೇಕು. ಆಗಲೇ ಭಗವಂತನ ಆಶೀರ್ವಾದ." 

ಹೆಚ್ ಏನ್ ಪ್ರಕಾಶ್ 


March 6, 2012

ಸ್ವ ಸ್ವರೂಪದ ಅರಿವು

ಸ್ವ  ಸ್ವರೂಪದ ಅರಿವು


                     ಶ್ರೀಮದ್ಭಾಗವತದ ಒಂದು ಶ್ಲೋಕದಲ್ಲಿ ಹೇಳಿರುವ ಭಾವಾರ್ಥ ಈ ರೀತಿ ಇದೆ.    " ಈ ಜಗತ್ತಿನಲ್ಲಿ ಎರಡು ರೀತಿಯ ಜನರಿಗೆ ಮಾತ್ರ ಯಾವಾಗಲು ಸುಖವುಂಟು. ಒಬ್ಬ ಪರಮ ಮುಢ,    ಮತ್ತೊಬ್ಬ ತನ್ನನ್ನು ತಾನೇ ಮೀರಿದವನು ಅಂದರೆ, ತನ್ನ ಮತಿಯನ್ನು ಮೀರಿ ಪರಮಹಂಸ  ಸ್ಥಿತಿಯನ್ನು ಮುಟ್ಟಿದವನು.  ಇವೆರೆಡರ ಮಧ್ಯದಲ್ಲಿ ಇರುವ ಎಲ್ಲ ಬಗೆಯ ಜನರೂ ಬಗೆ ಬಗೆಯ ಹೊಯ್ದಾಟವನ್ನು, ದುಃಖವನ್ನು ಅನುಭವಿಸುತ್ತಲೇ ಇರುತ್ತಾರೆ."
         
                        ಉತ್ಕ್ರುಷ್ಟನು ಪರಮಸುಖಿ. ಉನ್ಮಾದದ  ಸ್ಥಿತಿಯಲ್ಲಿ ಭಗವಂತನ ಚಿಂತನೆಮಾಡುತ್ತಾ, ಭಗವಂತನಲ್ಲಿ ಒಂದಾಗಿ ಆನಂದಾನುಭೂತಿಯಲ್ಲಿ ವಿಹರಿಸುತ್ತಾನೆ. ಈತ ಪ್ರಪಂಚರಹಿತನಾಗಿ, ಅಂಟಿಕೊಂಡಿದ್ದರು ಅಂಟದಂತೆ, ಇದ್ದರು ಇರದಂತೆ ಪ್ರತಿಕ್ಷಣವನ್ನು ಪರಮಾನಂದದಲ್ಲಿ ಅನುಭವಿಸುತ್ತಾನೆ. ಈತನಿಗೆ ಯಾವ ಬೇಕು ಬೇಡಗಳು, ಸುಖ ದುಃಖಗಳು ಏನೂ ಪ್ರಭಾವ ಬೀರಲಾರವು.ಬಂದದ್ದೆಲ್ಲ ಆತನ ದಿವ್ಯ ಪ್ರಸಾದವಾಗುತ್ತದೆ, ಹೀಗಾಗಿ ಈತ ನಿತ್ಯಾನಂದ .   ಇನ್ನು ನಿಕ್ರುಷ್ಟನೆನ್ನುವ ವ್ಯಕ್ತಿಗೆ ತನ್ನ ಬಗ್ಗೆ ಏನೂ ಅರಿವಿಲ್ಲ,  ಈ ಜಗತ್ತಿನಲ್ಲಿ ಹೇಗೆ ಆಯಿತೋ ಹಾಗೆ ಬದುಕುವುದು,  ಏನೇನು ಬಂತೋ ಅದನ್ನು ಪೂರ್ವಾಗ್ರಹವಿಲ್ಲದೆ ಯಥಾವತ್ತಾಗಿ ಸ್ವೀಕರಿಸಿ ಅನುಭವಿಸಿಬಿಡುತ್ತಾರೆ.  ಅಂದಿಗೆ ಆದರೆ ಆಯಿತು, ನಿನ್ನೆ ಮತ್ತು  ನಾಳೆಯ ಚಿಂತೆಯ ಗೋಜಿಗೆ ಹೋಗದೆ ಎಲ್ಲಾದರೆ ಅಲ್ಲಿ, ಹೇಗಾದರೆ ಹಾಗೆ  ಬದುಕಿ ಬಿಡುತ್ತಾರೆ.  ಸುಖ ದುಃಖಗಳ  ಗೊಡವೆಗೆ ಹೋಗದೆ ನಗುವಾಗ ನಕ್ಕು ಅಳುವಾಗ ಅತ್ತು ಸುಮ್ಮನಾಗಿಬಿಡುತ್ತಾರೆ.

                      ಇವರಿಬ್ಬರ ಮಧ್ಯದಲ್ಲಿರುವ ಮಂದಿಯೇ ಶ್ರೀಸಾಮಾನ್ಯರು, ಅರ್ಥಾತ್ ನಮ್ಮಂತಹವರು.  ಹೌದು, ನಮ್ಮ  ಸ್ಥಿತಿ  ಉತ್ಕ್ರುಷ್ಟವೂ ಅಲ್ಲ, ನಿಕ್ರಿಷ್ಟವೂ ಅಲ್ಲ ಮಧ್ಯೆ ಇರುವ ಒಂದು ರೀತಿಯ ಅತಂತ್ರ ಸ್ಥಿತಿ,   ತ್ರಿಶಂಕು. ಅತ್ತಲೂ ಹೋಗಲಾರದೆ ಇತ್ತಲೂ ಇರಲಾರದೆ ಪರಿತಪಿಸುತ್ತಾ ಹೆಣಗಾಡುವವರು.  ಅಲ್ಪ ಸುಖದ ಬೆನ್ನು ಹತ್ತಿ ಬೆಟ್ಟದಷ್ಟು ಕಷ್ಟ ತಂದುಕೊಳ್ಳುವವರು.  ಶ್ರೀ ರಾಮಕೃಷ್ಣರು ಒಂದು ಉದಾಹರಣೆ ಕೊಡುತ್ತಾರೆ  " ಹಲಸಿನ ಹಣ್ಣಿನ ಸುವಾಸನೆಗೆ ಮಾರುಹೋಗಿ ಅಂಟಿನ ಮೇಲೆ ಕೂತ ನೊಣದ ಹಾಗೆ."  ಎಂತಹ ದುಃಸ್ತಿತಿ?  ಹಲಸಿನ ಹಣ್ಣಿನ ರುಚಿಯು ಸಿಗಲಿಲ್ಲ,  ಮೇಲೆದ್ದು ಬರಲೂ  ಸಾಧ್ಯವಿಲ್ಲ.  ಕೇವಲ ಸುವಾಸನೆಯ  ಮೋಹಕ್ಕೆ ಬಿದ್ದು ಜೀವ ಕಳೆದುಕೊಂಡ ನೂಣದಂತೆ  ಜೀವನ. ವಿವೇಕವಿಲ್ಲದೇ  ಇಂದ್ರೀಯ ಸುಖದ ಆಸೆಗೆ ಹೋದಲ್ಲಿ ಈ ರೀತಿಯ ದುರಂತಕ್ಕೆ ಈಡಾಗಬೇಕಾಗುತ್ತದೆ.  ಇಂದ್ರೀಯ ಅಲ್ಪಸುಖದಲ್ಲಿ ತೃಪ್ತರಾಗಿಬಿಡಬಹುದೆಂದು  ಭ್ರಮಿಸುತ್ತೇವೆ  .   ಆದರೆ,  ಅಲ್ಪ ಸುಖದ ಹಿಂದೆ ಇರಬಹುದಾದ ಬೆಟ್ಟದಷ್ಟು ಕಷ್ಟ ಇರುವ ವಿಚಾರ ಮನಸ್ಸಿಗೆ ಬರುವುದೇ ಇಲ್ಲ. ವೇದಾಂತ ಇಂತಹ ಅಲ್ಪ ವಿಚಾರಮತಿಗಳಿಗೆ " ನಿಂತಲ್ಲೇ ನಿಲ್ಲುವ ಜೀವಿಗಳು " ಎನ್ನುತ್ತದೆ,  ವಿವೇಕವನ್ನು ಪಡೆಯಲಿಚ್ಚಿಸುವ ಮಂದಿಗೆ ಸಂಸಾರಿಗಳು ಎನ್ನುತ್ತದೆ. 

                       ಶ್ರೀ ರಾಮಕೃಷ್ಣರು ಇಂತಹ ಸಂಸಾರಿಗಳಿಗೆ ಒಂದು ಮಾತು ಹೇಳುತ್ತಾರೆ " ಸಂಸಾರ ಎಂದರೆ ಪ್ರಪಂಚ ಮತ್ತು ಪ್ರಾಪಂಚಿಕತೆ. ನಮ್ಮಲ್ಲಿ ಪ್ರತಿಯೊಬ್ಬರೂ ಈ ಸಂಸಾರದಲ್ಲಿ ನಾಮ ರೂಪ ಜಗತ್ತಿನಲ್ಲಿ ಇದ್ದೇವೆ. ಮನುಷ್ಯನಾಗಿ  ಅವತರಿಸಿದಾಗ ಭಗವಂತನೂ ಸಹ ಈ ಸಂಸಾರದಲ್ಲಿ ಇರುತ್ತಾನೆ. ಆದರೆ........ ಸಂಸಾರಿಗಳು ಯಾವಾಗಲು ಒಂದು ವಿಚಾರವನ್ನು ಮರೆಯಬಾರದು.   ನಾವು ಸಂಸಾರದಲ್ಲಿ ಇರಬೇಕು,  ಸಂಸಾರ ಮಾತ್ರ ನಮ್ಮೊಳಗೇ ಇರಬಾರದು.  ದೋಣಿ ನೀರಿನಲ್ಲಿ ಇರಬೇಕು,  ಆದರೆ ದೋಣಿಯೊಳಗೆ ನೀರಿರಬಾರದು. ಈ  ಮಾತನ್ನು  ಚನ್ನಾಗಿ ನೆನಪಿಟ್ಟುಕೊಳ್ಳಿ, ಸಂಸಾರದಲ್ಲಿದ್ದ ಮಾತ್ರಕ್ಕೆ ಮನುಷ್ಯ ಸಂಸಾರಿಯಾಗುವುದಿಲ್ಲ.  ಸಂಸಾರ ಅಥವಾ ಪ್ರಾಪಂಚಿಕತೆಯು ನಮ್ಮನ್ನು ಹೊಕ್ಕಾಗ  ಮಾತ್ರ ,  ಈ ನಾಮ ರೂಪಗಳ ಜಗತ್ತೇ ಸಮಸ್ತವೂ  ಎಂದು ಭಾವಿಸಿದಾಗ ನಾವು, ನೀವು ಕೊಳೆತು  ನಾರುತ್ತೇವೆ.   ಬೆಳೆಯಲು,  ಪ್ರಗತಿ ಹೊಂದಲು ಸ್ವಲ್ಪವೂ ಇಚ್ಚಿಸುವುದಿಲ್ಲ.   ಇದೇ  ಮಾನವ ಜೀವನದಲ್ಲಿ ಇರುವ ಅಪಾಯ. ಎಷ್ಟೇ ಕಷ್ಟವಾದರೂ ಸಹಾ ಇಂತಹ ನಾಮ ರೂಪಗಳ  ವಿಚಾರವನ್ನು  ದೂರ ಮಾಡಲೇಬೇಕು. ಅಧ್ಯಾತ್ಮಿಕ ಶ್ರದ್ದೆ ಮತ್ತು ಎಚ್ಚರಗಳೇ ನಮ್ಮ ರಕ್ಷಾ ಕವಚ,  ಈ ಕವಚ ಹೊಂದಲು ಸಾಧನೆ ಮಾಡಬೇಕು. "         ಈ ನಾಮ ರೂಪಗಳ  ವಿಚಾರವನ್ನು  ದೂರ ಮಾಡಬೇಕಾದರೆ ವಿವೇಕ ಅಥವಾ ಅರಿವು ಬೇಕು.

                          ಪ್ರಕೃತಿ ನಮಗೆ ಈ ಅರಿವನ್ನು ದಾನವಾಗಿ ಕೊಡುವುದಿಲ್ಲ.  ಅದು  ಬೇರೆಲ್ಲಿಂದಲೋ  ಬರಬೇಕಾಗಿಲ್ಲ . ಅದು ನಮ್ಮೊಳಗೇ ಇತ್ತು  ಇದೆ ,  ಮತ್ತು  ಇರುತ್ತದೆ.  ಇದನ್ನು ನಾವು ಗುರುತಿಸಿಕೊಳ್ಳಬೇಕಾಗಿದೆ.  ಇದಕ್ಕೆ ಒಂದು ದೃಷ್ಟಾಂತ ಏನೆಂದರೆ,   "ರಾಜಸ್ವವನ್ನು ಮರೆತ ರಾಜಕುಮಾರ ತನಗೇನೂ ಗತಿ ಇಲ್ಲವೆಂದು ಭಿಕ್ಷೆ ಬೇಡಿದಂತೆ.  ಆದರೆ,  ತನ್ನ ನಿಜ ಸ್ಥಿತಿ ಅರಿತಮೇಲೆ ಭಿಕ್ಷೆಯ ಮಾತೆಲ್ಲಿ ? "  ಇದನ್ನೇ ವೇದಾಂತ 'ಅರಿವು' ಎನ್ನುತ್ತದೆ.  ಈ  ಅರಿವು,  ಅಧ್ಯಾತ್ಮ  ದೃಷ್ಟಿಯಿಂದ  ನಮ್ಮ  ಒಳಗಣ್ಣನ್ನು   ತೆರೆದು ನೋಡಲು ಸಹಾಯಮಾಡುತ್ತದೆ.  ಆಗ  ಒಳಗೆ  ನಿರಂತರವಾಗಿರುವ  ಪೂರ್ಣತೆಯನ್ನು ಕಾಣಲು ಸಾಧ್ಯವಾಗುತ್ತದೆ.   ಇದೆ ನಮ್ಮಸಹಜ ಸ್ವಭಾವ. ಇದನ್ನೇ ಶ್ರೀ ರಮಣರು  ' ಸ್ವ ಸ್ವರೂಪ ' ಎನ್ನುತ್ತಿದ್ದರು.  ಆಗ ನಮ್ಮ ಗಮನ ಉನ್ನತವಾದ , ಪರಿಪೂರ್ಣವಾದ ಮತ್ತು ಅನಂತ ಸುಖದ ಕಡೆಗೆ ಮುಖ ಮಾಡುತ್ತದೆ.


                       ಇದು ಏಕಾತ್ಮವಾದ ಪರಿಪೂರ್ಣ ಆತ್ಮಜ್ಞಾನ.  ಈ  ಅರಿವು " ನಾವು ಬಾಳುವುದು, ಚಲಿಸುವುದು, ನಮ್ಮ ಅಸ್ತಿತ್ವವನ್ನು ಹೊಂದಿರುವುದು ಭಗವಂತನಿಗಾಗಿ  ಮಾತ್ರ " ಎಂಬ ಮಾರ್ಗವನ್ನು  ತೋರುತ್ತದೆ. ಈ  ಅರಿವನ್ನು ಪಡೆಯಬೇಕಾದರೆ ನಮ್ಮ ನಿಜ ಸ್ವರೂಪವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.  ಮರೆತಿರುವುದನ್ನು ಜ್ಞಾಪಿಸಿಕೊಳ್ಳಬೇಕಾಗಿದೆ.  ಜಗತ್ತಿನ ಗೊಜಲಿನಲ್ಲಿ ದಾರಿ ತಪ್ಪಿರುವ ನಾವು ನಮ್ಮ ' ಸ್ವ ಸ್ವರೂಪ ' ದ ದಿವ್ಯ ರಾಜಮಾರ್ಗವನ್ನು ಕಂಡು ಕೊಳ್ಳಬೇಕಾಗಿದೆ.  ಉಪನಿಷತ್ತು ಹೇಳುತ್ತದೆ . " ಬದ್ಧ ಜೀವಿಗಳಿಗೆ  ಮೋಕ್ಷದ ಮಾರ್ಗ ಸದಾ ಕಾಲ ತೆರದೆ ಇರುತ್ತದೆ.  ಅದಕ್ಕಾಗಿ ಸಾಧನೆ ಬೇಕಾಗಿದೆ.  ಈ ಮಾರ್ಗವನ್ನು ತಿಳಿದು ಹೊರಡಬೇಕಾಗಿದೆ."   ಇದನ್ನು ಬೈಬಲಿನಲ್ಲೂ ಕೂಡ ಹೇಳಲಾಗಿದೆ.  " ಕೇಳು, ನಿನಗದು ದೊರೆಯುತ್ತದೆ.  ಹುಡುಕು ನಿನಗದು ಸಿಗುತ್ತದೆ.  ಬಾಗಿಲು ತಟ್ಟು ತೆಗದೇ ತೆಗೆಯುತ್ತದೆ.  ಏಕೆಂದರೆ, ಕೇಳುವ ಪ್ರತಿಯೊಬ್ಬನಿಗೂ ದೊರೆಯುತ್ತದೆ.  ಹುಡುಕುವ ಪ್ರತಿಯೊಬ್ಬನಿಗೂ ಸಿಗುತ್ತದೆ.  ಬಾಗಿಲು ತಟ್ಟುವ ಪ್ರತಿಯೊಬ್ಬನಿಗೂ ಅದು ತೆರೆದುಕೊಳ್ಳುತ್ತದೆ. "  ನಾವು ಕೇಳುವ, ಹುಡುಕುವ ಮತ್ತು ಬಾಗಿಲನ್ನು ತೆರೆಯುವ ಪ್ರಯತ್ನ ಮಾಡಬೇಕಾಗಿದೆ. ನಿತ್ಯ ಜೀವನದಲ್ಲಿ ಅನುಷ್ಠಾನ ಬೇಕಾಗಿದೆ.ಛಲಬಿಡದ ತ್ರಿವಿಕ್ರಮನಾಗಬೇಕಾಗಿದೆ.


                  ಇಲ್ಲಿ ಶ್ರೀ ಶಂಕರರ ಶ್ಲೋಕ  ಅತ್ಯಂತ    ಅಗತ್ಯ      ಎನಿಸುತ್ತದೆ.      " ಮೂಢ ಜಹೀಹಿ ಧನಾಗಮ........ವಿನೋದಯ ಚಿತ್ತಂ "
" ಮೂಢ, ಧನದ ವಿಷಯದಲ್ಲಿ ದುರಾಸೆಯನ್ನು ಬಿಟ್ಟುಬಿಡು. ನಿನ್ನ ಮನಸನ್ನು ನಿಜವಾದದ್ದು, ಒಳ್ಳೆಯದು  ಇವುಗಳಲ್ಲಿ ಇಡು. ನಿರ್ಲಿಪ್ತತೆಯನ್ನು ಸಾಧಿಸಿಕೊ.  ಪ್ರಾಮಾಣಿಕವಾದ ಪರಿಶ್ರಮದಿಂದ ಏನನ್ನು ಪಡೆಯುತ್ತಿಯೋ ಅದರಿಂದ ಚಿತ್ತ ಮತ್ತು ಹೃದಯಗಳಲ್ಲಿ ಆನಂದವನ್ನು ಅನುಭವಿಸುವುದನ್ನು ಕಲಿ."


ಇಲ್ಲಿ ಒಂದು ಪ್ರಶ್ನೆ ಏಳುತ್ತದೆ.  "ಧನ ಕೆಟ್ಟದ್ದೇ? ಇಲ್ಲ...  ನಾವು ಭಿಕ್ಷುಕರಾಗಬೇಕೆ?"  ಶಂಕರರು ತುಂಬಾ ಸುಂದರವಾಗಿ ಹೇಳುತ್ತಾರೆ.  " ನಿಮ್ಮ ಮನಸನ್ನು ಧರ್ಮದಲ್ಲಿ ನೆಲೆಸುವಂತೆ ಮಾಡಿ. ರಾಗರಹಿತೆಯನ್ನು ಬೆಳೆಸಿಕೊಳ್ಳಿ.  ಯಾವುದು ನಿಮ್ಮದಲ್ಲವೋ, ಯಾವುದನ್ನು ನೀವು ಸಂಪಾದಿಸಿಲ್ಲವೋ, ಅದರಿಂದ ನಿಮ್ಮ ಮನಸ್ಸನ್ನು ಹಿಂದಕ್ಕೆ ತೆಗೆದುಕೊಳ್ಳಿ.  ನಿಮ್ಮದೇ ಪ್ರಾಮಾಣಿಕ ಪರಿಶ್ರಮದಿಂದ ದೊರೆತ ಫಲದಿಂದ ಬದುಕನ್ನು ಉತ್ಸಾಹದಿಂದ ಭೋಗಿಸಿ.  ದುರಾಸೆಯನ್ನು ದೂರಮಾಡಿ.  ಏಕೆಂದರೆ, ದುರಾಸೆಯು  ಎಲ್ಲವನ್ನು ಸ್ವಪ್ರಯೋಜನಕ್ಕೆ ಬಳಸುವಂತೆ ಮಾಡುತ್ತದೆ.  ಪರಿಣಾಮದಲ್ಲಿ ಅದು ಹಾಗೆ ಬಳಸಿಕೊಳ್ಳುವವನನ್ನೂ,  ಬಳಸಿಕೊಳ್ಳುವುದಕ್ಕೆ  ಕಾರಣರಾದವರನ್ನು ನಾಶಗೊಳಿಸುತ್ತದೆ. ಅಧ್ಯಾತ್ಮಿಕ ಸ್ವಭಾವವನ್ನು, ನೈತಿಕ ಸ್ವಭಾವವನ್ನು ಬೆಳೆಸಿಕೊಳ್ಳುವುದೇ ನಿಜವಾದ ಜೀವನದ ಗುರಿಯಷ್ಟೇ. ಅದನ್ನು ಸಾಧಿಸಿಕೊಳ್ಳಬೇಕಾದರೆ ಯಾವುದೇ ರೂಪದಲ್ಲೂ ಇನ್ನೊಬ್ಬರನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವುದನ್ನು ಬಿಡಬೇಕು. ಪರಸ್ಪರ ವಿರೋಧ ತತ್ವಗಳಾದ ಇತಿ ನೇತಿಗಳ ಸೂತ್ರದಿಂದಲೇ ಬದುಕಿನ ನಿಜವಾದ ಆನಂದ ಸಾಧಿತವಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ನಾವು ಅಹಂಭಾವವನ್ನೂ ಅದು ಕಟ್ಟುವ ಬೆಲೆಯನ್ನು ತ್ಯಜಿಸಿ ಬ್ರಹ್ಮದ ಸಾರ್ವತ್ರಿಕ ಮೌಲ್ಯಗಳನ್ನು ಒಪ್ಪಿಕೊಂಡು ಸಂಪತ್ತನ್ನು ಅರ್ಪಣೆಯ ಮನೋಭಾವದಿಂದ ನೋಡಿ.  ಜಗತ್ತು ಆನಂದಮಯವಾದ ಬ್ರಹ್ಮವಲ್ಲದೆ ಬೇರೇನೂ ಅಲ್ಲ.  ನಾವಿರುವುದು ಅದನ್ನು ಅನುಭವಿಸುವುದಕ್ಕೆ.  ನಮ್ಮ ಕಣ್ಣುಗಳು ತ್ಯಾಗದಿಂದ ಶುದ್ದಿಗೊಂಡಾಗಲೇ  ಜಗತ್ತು ಅದರ ನಿಜ ಸ್ವರೂಪದಲ್ಲಿ,  ಬ್ರಹ್ಮಾನಂದದ ಅನಂತ ತರಂಗಗಳಾಗಿ ನಮಗೆ ಕಾಣುವುದು.  ಅದೇ ಬದುಕಿನ ಆನಂದ.   ಅದೇ ವಿಕಾಸ.  ಅದೇ ಬೆಳವಣಿಗೆ. ಅದೇ ಮಾನವನಿಗೆ ಸಾಕ್ಷಾತ್ಕಾರ. ವಿಕಾಸದ ಪರಮಗುರಿಯಾದ ಪೂರ್ಣತಾ ಸಿದ್ದಿಯು ಅದೇ.  ಅದೇ ಧನ್ಯತೆ."


ಹೆಚ್  ಏನ್  ಪ್ರಕಾಶ್
06 03 2012