August 22, 2012

ರೈಲು ಬಿಡೋದು



             ಸೋಲೊಪ್ಪದ ಪಕ್ಕದ ಮನೆ ಹೆಂಗಸು ಏನು ಹೇಳಿದರು ಅದಕ್ಕೊಂದು ಪ್ರತಿಯಾಗಿ ಹೇಳುತ್ತಿದ್ದಳು.  ಇದನ್ನು ಕಂಡ ಗುಂಡನ ಹೆಂಡತಿ " ನೆಮ್ಮೆಜಮಾನರಿಗೆ ಡ್ರೈವಿಂಗ್ ಅಂದರೆ ಮಹಾ ಪ್ರಾಣ.  ಒಂದು ಸಾರಿ ನೋಡಿದರೆ ಸಾಕು ಮಾರನೆ ಕ್ಷಣ ಅದನ್ನು ಡ್ರೈವ್ ಮಾಡಿಯೇ ಸಿದ್ದ." ಎಂದು ಕೊಚ್ಚಿಕೊಂಡಳು.  ಇದನ್ನು ಕೇಳಿ ಸುಮ್ಮನಿರಲಾದಿತೆ? ಆ ಪಕ್ಕದ ಹೆಂಗಸು ಒಂದು ಸವಾಲು ಎಸೆದಳು " ರಿಕ್ಷಾ, ಕಾರು, ಸ್ಕೂಟರ್ ಎಲ್ಲಾನು ಓಡಿಸಬಹುದು ಅದೇನು ದೊಡ್ದವಿಚಾರ ಅಲ್ಲ, ಆದರೆ......" ಎಂದು ಹೇಳುವಷ್ಟರಲ್ಲಿ ಗುಂಡನ ಹೆಂಡತಿ " ಅಯ್ಯೋ ನೆಮ್ಮೆಜಮಾನರು ಹೆಲಿಕಾಪ್ತೆರ್ ಕೊಡಾ ಒಡೋಸೋದು ಹೇಗೆ ಅಂತ ತಿಳಿಕೊಂಡು ಅದನ್ನು ಓಡಿಸಿದ್ದಾರೆ ಗೊತ್ತಾ? " ಎಂದು ಬಡಬಡಿಸಿದಳು.  ಪಕ್ಕದ ಮನೆ ಹೆಂಗಸಿಗೆ ರೇಗಿ ಹೋಯಿತು " ವಿಮಾನ ಓಡಿಸಿದಾರಾ? " ಎಂದಳು.  " ಇದಾದ  ಮೇಲೆ ವಿಮಾನನೆ ಅಂತ ಹೇಳ್ತಾ ಇದ್ರೂ." ಎಂದು ಗುಂಡನ ಹೆಂಡತಿ ಬೀಗಿದಳು  ಸೋಲೊಪ್ಪದ ಪಕ್ಕದ ಮನೆಯಾಕೆ " ಇನ್ನು ರೈಲು ಯಾವಾಗಲೋ?' ಎಂದು ಕುಕ್ಕಿದಳು.  ಇದನ್ನು ಕೇಳಿದ ಗುಂಡನ ಹೆಂಡತಿ ನಗುತ್ತ " ಯಾವಾಗೇನು?  ನಮ್ಮೆಜೆಮಾನರು ಬಗ್ಗೆ ಈತನಕ ರೈಲನ್ನೇ ಬಿಟ್ಟಿದ್ದು " ಎಂದಳು. ಪಕ್ಕದಮನೆಯಾಕೆ "ಹೂಂ " ಎಂದು ಕೆಂಡ ಕಾರಿದಳು.

No comments:

Post a Comment