August 31, 2012

ನಕ್ಕು ಬಿಡಿ ...............4


ನಾನಿನ್ನು ಬದುಕಿದ್ದಿನಾ?
 
ರಂಗಪ್ಪ ಜೇವನದಲ್ಲಿ ಜಿಗುಪ್ಸೆಯಾಗಿ ದೊಡ್ಡ ಕಟ್ಟಡದ 5 ನೆ ಅಂತಸ್ತಿನಿಂದ ಕೆಳಗೆ ಹಾರಿಬಿಟ್ಟ. ಮರುದಿನ ಆಸ್ಪತ್ರೆಯಲ್ಲಿ ಎಚ್ಚರವಾದಾಗ ಆಶ್ಚರ್ಯದಿಂದ ದಾದಿಯನ್ನು ರಂಗಪ್ಪ ಕೇಳಿದ " ನಾನಿನ್ನು ಬದುಕಿದ್ದೇನೆಯೇ? "
" ನೀನು ಬದುಕಿದ್ದಿಯಪ್ಪಾ! ಹೆಚ್ಚು ತೊಂದರೆ ಏನೂ ಆಗಿಲ್ಲ.  ಆದರೆ ಕೆಳಗಿದ್ದ ನಾಲ್ಕು ಜನರ ಮೇಲೆ ನೀನು ಬಿದ್ದ ಕಾರಣ, ನಾಲ್ಕೂ ಜನರು ಸ್ತಳದಲ್ಲೇ ಮೃತ ಪಟ್ಟಿದ್ದಾರೆ!" 

ಈಗ ಸತ್ಯಾನೆ ಹೇಳ್ತೀನಿ  
" ಮದುವೆಗೆ ಮುಂಚೆ ನನ್ನನ್ನ ರಂಭೆ, ಊರ್ವಶಿ, ಮೇನಕೆ ಎಂತೆಲ್ಲಹೊಗಳಿ ಅಟ್ಟಕ್ಕೆ ಏರಿಸುತ್ತಾ ಇದ್ರಿ.  ಈಗ ಆ ಮಾತೆಲ್ಲ   ಎಲ್ಲಿ ಹೋಯ್ತು ? " ಎಂದು ಹೆಂಡತಿ ಗಂಡನ್ನ ಕೇಳಿದಳು.
" ಮದುವೆ ಆದಮೇಲೆ ಸುಳ್ಳು ಹೇಳೋದನ್ನ ಬಿಟ್ಟು ಬಿಟ್ಟಿದ್ದೇನೆ."
ನಾನು ಅಲ್ಲೂ ಇದ್ದೇರಿ !!!!!!!!!!

" ಲಂಡನ್, ಪ್ಯಾರಿಸ್, ನ್ಯೂಯಾರ್ಕ್ ,ನೋಡಿ ಬಂದ ಸರ್ದಾರ್ಜಿ ಚೆನ್ನಾಗಿ ಕೊಚ್ಚಿಕೊಳ್ಳುತ್ತಿದ್ದ.
" ಹಾಗಾದರೆ ನಿಮಗೆ ಭೋಗೋಳ ಚೆನ್ನಾಗಿ ಗೊತ್ತು ಅನಿಸುತ್ತೆ " ಎಂದ ಅವನ ಸ್ನೇಹಿತ.
" ಸುಮ್ಮನೆ ಇರ್ರಿ, ಅಲ್ಲೂ ಎರಡು ದಿನ ಇದ್ದು ಮಜಾ ಮಾಡಿ ಬಂದಿದೀನಿ ಗೊತ್ತಾ? " ಎಂದಾಗ ಸ್ನೇಹಿತ ಬೇಹೋಶ್.

ಗಣಿತದಲ್ಲೂ ವೀಕು

ಕನ್ನಡದಲ್ಲಿ ಕಡಿಮೆ ನಂಬರ್ ಪಡೆದ ಗುಂಡನಿಗೆ ನೂರು ಸಲ ಪಾಠ ಬರೆಯಲು ಹೇಳಿದರು ಮೇಷ್ಟ್ರು.  ಬರೆದದ್ದನ್ನ ಗುಂಡ ಮೇಷ್ಟರಿಗೆ ತೋರಿಸಿದ.
"  ಅಲ್ವೋ ಗುಂಡ, ನಾನು ನೂರುಸಾರಿ ಬರೆಯೋಕ್ಕೆ ಹೇಳಿದರೆ ನೀನು ನಲವತ್ತೆ ಸಾರಿ ಬರೆದ್ದಿದ್ದೀಯಲ್ಲಾ? "
"  ನಾನೇನು ಮಾಡ್ಲಿ ಸಾರ್,  ನಾನು ಗಣಿತದಲ್ಲೂ ವೀಕು!" ಎಂದ.


1 comment:

  1. ನೀವು ಬರದಿರುವುದು ಚೆನ್ನಾಗಿದೆ

    ReplyDelete