ಮುಂಬೈ ದಾಳಿಯಲ್ಲಿ 161 ಸಾವಿಗೆ ಕಾರಣನಾದವರಲ್ಲಿ ಒಬ್ಬನಾದ ಉಗ್ರವಾದಿ ಕಸಬನನ್ನು ಎಂದೋ ಸಾಯಿಸಬೇಕಾಗಿದ್ದು, ಅವನಿಗೆ ನಿನ್ನೆ ಗಲ್ಲು ಶಿಕ್ಷೆ ನೀಡಿರುವ ವಿಚಾರವನ್ನು ನಮ್ಮ ನಾಡಿನ ಪ್ರಮುಖಪತ್ರಿಕೆಗಳು ಮುಖ್ಯಪುಟದಲ್ಲಿ ದಪ್ಪ ದಪ್ಪ ಅಕ್ಷರಗಳಲ್ಲಿ, ದೊಡ್ಡ ಫೋಟೋ ಸಮೇತ ಇಡೀ ಪುಟದಲ್ಲಿ ಹುತಾತ್ಮನೇನೋ ಎಂಬುವಂತೆ ಬಿಂಬಿಸಿದ್ದಾರೆ. ಪ್ರತಿಕ್ಷಣದ ನಡವಳಿಕೆಯನ್ನು ದಾಖಲಿಸಿದ್ದಾರೆ. ಒಬ್ಬ ಉಗ್ರವಾದಿಯನ್ನು ಗಲ್ಲಿಗೇರಿಸಿದರ ಬಗ್ಗೆ ಇಷ್ಟೊಂದು ವೈಭವೀಕರಣ ಬೇಕೇ? ಗಲ್ಲಿಗೆರಿಸುದರ ಬಗ್ಗೆ ಒಂದು ಚಿಕ್ಕ ಸುದ್ದಿ ವಿಭಾಗದ ವರದಿ ಸಾಕೆನಿಸಿತಿತ್ತು. ಬೇಕಿದ್ದರೆ ಸಂಪಾದಕರ ಕಾಲಂನಲ್ಲಿ ಅವನ ಬಗ್ಗೆ ಎಷ್ಟು ವಿವರ ಬೇಕಾದರೂ ವರದಿ ಬರೆಯಲಿ. ಅದು ಬಿಟ್ಟು ಇವನಿಗೆ ಭಾರತರತ್ನ ಪ್ರಶಸ್ತಿ ಕೊಟ್ಟಂತೆ ವೈಭವಿಕರಿಸಲಾಗಿದೆ. ಇಷ್ಟೊಂದು ಪ್ರಚಾರದ ಅವಶ್ಯಕತೆ ಏನಿದೆ?
ರಾಷ್ಟ್ರದ ಗೃಹ ಮಂತ್ರಿಗಳು ಪ್ರಧಾನಿಗೆ ಮತ್ತು ಸೋನಿಯಾ ಗಾಂಧಿಗೆ ಈ ವಿಚಾರ ತಿಳಿಸಿರಲಿಲ್ಲವೆಂದು ಹೇಳಿಕೆ ಕೊಟ್ಟಂತಹ ಸಂದರ್ಭದಲ್ಲಿ ಪ್ರಚಾರ ಮಾಧ್ಯಮದವರು ಇಷ್ಟೊಂದು ವೈಭವಿಕರಿಸಿದ್ದು ಸರಿಯೇ?
ಏನೇ ಆದರೂ ಒಬ್ಬ ಉಗನಿಗೆ ಸಲ್ಲಬೇಕಾದ ಗೌರವ ಇದಲ್ಲ.
ನೀವೇನು ಹೇಳುತ್ತೀರಿ?
ರಾಜಕೀಯ ಏನೇ ಇದ್ರೂ..ವೈಭವೀಕರಣ ತಪ್ಪು ಎನ್ನುವ ನಿಮ್ಮ ಮಾತು ಸರಿ..ಮಾಧ್ಯಮಗಳಿಗೆ ಹರಿದು ತಿನ್ನಲು ಒಂದು ವಿಷಯ ಸಿಕ್ಕಿತು..ಈ ಗಲ್ಲು ರಾಜಕೀಯವಾಗಿ ಬೇಳೆ ಬೇಯಿಸಿಕೊಳ್ಳುವುದಕ್ಕೆ ಉಪಯೋಗಿ ಮಾಡಿಕೊಳ್ಳುವ ಕೆಟ್ಟ ಮನಸ್ಥಿತಿಯಲ್ಲಿರುವ ನಮ್ಮ ಮಾಧ್ಯಮಗಳು, ರಾಜಕೀಯ "ನಾಯಿ"ಕರು ಇವರಿಗೆಲ್ಲ ದಿಕ್ಕಾರ..ಮನನೊಂದ ಹುತಾತ್ಮರ ಕುಟುಂಬಕ್ಕೆ ಎಷ್ಟು ದುಖವಾಗುತ್ತದೆ ಈ ಬೆಳವಣಿಗೆಯ ವೈಭವೀಕರಣ ನೋಡಿದಾಗ..ಸುಂದರ ಲೇಖನ
ReplyDeleteಆತ್ಮೀಯ ಶ್ರೀಕಾಂತ್ ,
Deleteನಮ್ಮಂತಹವರಿಗೆ ಏನೂ ಮಾಡಲಾಗದೆ ಇದ್ದಾಗ ಕೇವಲ ಮಾತನಾಡಿ ಅಥವಾ ಒಂದು ಲೇಖನ ಬರೆದು ಚಟ ತೀರಿಸಿಕೊಳ್ಳುವವರು ನಾವು . ಆದರೆ ಒಂದೇ ಒಂದು ಸಮಾಧಾನ ಅಂದರೆ, ನಮ್ಮ ಒಳಗಿನ ಬೇಗುದಿಯನ್ನು ಸ್ವಲ್ಪ ಶಾಂತ ಗೊಳಿಸಬಹುದು.
ನಿಮ್ಮಂತಹ ಅಭಿಮಾನಿಗಳು ಓದಿದಾಗ ಇನ್ನಷ್ಟು ಶಾಂತಿ ಸಿಗುತ್ತದೆ........ಏನನ್ನುತ್ತೀಯಾ ?
ಧನ್ಯವಾದಗಳು.
ಕಸಬ್ ಅಂದರೆ ಏನು??
ReplyDelete.
.
.
.
.
.
.
.
.
.
.
.
.
ಎರಡು ಪ್ಯಾರಾ ಬರೆದದ್ದೂ ಅಯೋಗ್ಯನೊಬ್ಬನ ಸ್ಮರಣೆಯೇ ಆದಂತಾಯಿತಲ್ಲ... ನಿಂದಾ ಸ್ತುತಿ ಎನ್ನುವುದು ಇದನ್ನೇ ಅಲ್ಲವೇ!!!
ಇದು ನಿಜವೇ ಹೌದು! ಆದರೆ ಅನಿವಾರ್ಯ ಅಲ್ಲವೇ? ಧನ್ಯವಾದಗಳು.
Delete