ಈಗ್ಗೆ 40 ವರ್ಷಗಳ ಹಿಂದೆಯೇ ಒಂದು ಅತ್ಯುತ್ತಮ ಕೃತಿಯನ್ನು ರಚಿಸಿ ಅದರಲ್ಲಿ ಜ್ಞಾನ, ಲೋಕಾನುಭವ ಇವೆರಡನ್ನೂ ಹದವಾಗಿ ಮಿಶ್ರಮಾಡಿ ನಮ್ಮಂತಹವರಿಗೆ ಬಿಟ್ಟು ಹೋಗಿದ್ದಾರೆ. ಅದೇ ಅಂದನಾ ತಿಮ್ಮ. ಬೀ Chi ಯವರ ಮಾತಿನಲ್ಲೇ ಹೇಳಬೇಕೆಂದರೆ ಈ ಕೃತಿ ಇವರ 51 ನೆ ಅಪರಾಧ! ಈ ಪುಸ್ತಕದ ಮುನ್ನುಡಿಯಲ್ಲಿ ಬೀ Chi ಯವರು " ನಡೆಯುವವನಿಗೆ ಕಾಲು ಮತ್ತು ಗುರಿ ಎರಡೇ ಇದ್ದರೆ ಸಾಲದು, ಮುಖ್ಯವಾಗಿ ಇನ್ನೊಂದು ಬೇಕು--ಕಣ್ಣು . ಅಷ್ಟು ದೂರ ಸಾಗಿಬಂದ ನಂತರ ಕೊಂಚ ನಿಂತು, ವಿಶ್ರಮಿಸಿ, ಒಂದು ಬಾರಿ ಹಿಂದೆ ತಿರುಗಿ ನೋಡುವುದು ಜಾಣ ದಾರಿಹೋಕನ ಲಕ್ಷಣ. ಎಷ್ಟು ದೂರ ನಡೆದಿದ್ದೇನೆ, ನಡೆದು ಬಂದ ದಾರಿ ಸರಿಯೇ ಎಂಬುದು ಹೆಚ್ಚು ಮುಖ್ಯ. ಇದನ್ನರಿಯಬೇಡವೆ ? ಆತ್ಮವಿಮರ್ಶೆ ಅವಶ್ಯ. ಒಂದು ಸಮಗ್ರ ಚಿತ್ರ ಕಣ್ ಮುಂದು ಇರಲೆಂದು ಈ ಪ್ರಯತ್ನ." ಹೇಳಿದ್ದಾರೆ .
ಇಂತಹ ಸುಂದರ ಕವನಗಳ ಸಾಲಿನ ಆಯ್ದ ಭಾಗಗಳನ್ನು ಸಂಪದ ಓದುಗರೊಂದಿಗೆ ನಿಯಮಿತವಾಗಿ ಹಂಚಿಕೊಳ್ಳಲು ತುಂಬಾ ಸಂತೋಷ ಪಡುತ್ತೇನೆ.
ಸಿಹಿ ಬೇಕು ನಾಲಿಗೆಗೆ, ಕಹಿ ಒಲ್ಲೆನೆಂಬುವುದು |
ಇಹವೆರಡು ಬಾಳಿನಲಿ ಹಗಲು ರಾತ್ರಿಗಳಂತೆ||
ಕಹಿಉಂಡು ಸಿಹಿ ಉಣ್ಣು, ಹೇಗಿದೀಗ?|
ಬಹು ಉಪಕಾರಿ ಕಹಿ, ರುಚಿ ನೋಡು ತಿಂಮ||
ದೊಡ್ಡ ಜೇಬಿದೆ ಇವಗೆ ಹೃದಯ ಬಹುಚಿಕ್ಕದು|
ದೊಡ್ಡ ಹೃದಯದವಗೆ ಚಿಕ್ಕ ಜೇಬು ||
ನೋಡಲ್ಲಿ, ಬರಿ ಜೇಬಿನ ಮುಂದು ಹೃದಯ ಹೀನನು |
ಕೈಯೊಡ್ಡಿ ನಿಂತಿಹನು, ವಿಧಿವಿಲಾಸವಿದು ಕೇಳೋ ತಿಂಮ ||
(ಮುಂದಿನ ದಿನಕ್ಕೆ ಇನ್ನಷ್ಟು)
No comments:
Post a Comment