October 13, 2012

ದೊಡ್ಡವರ ದಾರಿ ..........................6



              ಥಾಮಸ್ ಅಲ್ವಾ ಎಡಿಸನ್ ಹೆಸರು ಯಾರಿಗೆ ಗೊತ್ತಿಲ್ಲ? ವೈಜ್ಞಾನಿಕ ಸಂಶೋದನೆಗಳಲ್ಲಿ ಮಹಾನ್ ಎತ್ತರದ ಸರಳ ಜೀವಿ. ಇವರು ಹೇಳುತ್ತಿದ್ದ ಮಾತೆಂದರೆ " ಬದುಕಿನಲ್ಲಿ ತೊಂದರೆ ಎಲ್ಲರಿಗೂ ಬರುತ್ತದೆ, ಆದರೆ ಅದನ್ನು ಎದುರಿಸಿ ನಿಲ್ಲಬೇಕಾದರೆ ತೊಂದರೆಗೆ  ಕಾರಣ, ಅದಕ್ಕೆ ಪರಿಹಾರ ಮತ್ತು ಅದು ಪುನಃ ಬಾರದಂತೆ ಎಚ್ಚರಿಕೆ ವಹಿಸುವುದು. ಇಷ್ಟು ಸಾಕು ಯಶಸ್ವಿ ವ್ಯಕ್ತಿಗಳಾಗಲು."  
              ಥಾಮಸ್ ಅಲ್ವಾ ಎಡಿಸನ್ ಅವರ ಸಂಶೋಧನಾ ಕೇಂದ್ರಕ್ಕೆ ಒಮ್ಮೆ ಬೆಂಕಿ ಬಿದ್ದಿತು.  ಸಂಶೋದನಾ ಕಾರ್ಯದಲ್ಲಿ ತೊಡಗಿಕೊಂಡಿದ್ದ ಇವರ ಸಂಗಾತಿಗಳು ತಲೆಯ ಮೇಲೆ ಕೈ ಹೊತ್ತು ಕೂತುಬಿಟ್ಟರು. ಮುಂದೇನು ಮಾಡಬೇಕೆಂದು ತೋಚದೆ ಕೂತಿರುವಾಗ ಎಡಿಸನ್ನರು ನಿರ್ವಿಕಾರ ಭಾವದಿಂದ ತಮ್ಮ ಸಂಗಾತಿಗಳನ್ನು ಉದ್ದೇಶಿಸಿ " ನಮ್ಮ ಎಲ್ಲಾ ತಪ್ಪುಗಳು ಸುಟ್ಟು ಬೂದಿಯಾಗಿವೆ.  ನಾವು ಮತ್ತೆ ಹೊಸದಾಗಿ ನಮ್ಮ ಕಾರ್ಯವನ್ನು  ಉತ್ಸಾಹದಿಂದ ಪ್ರಾರಂಭ ಮಾಡುವ ದಿನ ಈಗ ಬಂದಿದೆ. ಬನ್ನಿ! ಕೆಲಸಕ್ಕೆ ತೊಡಗೋಣ!" ಎಂದು ನಗುನಗುತ್ತಲೇ ಹೇಳಿ ನಿರ್ಮಾಣ ಕಾರ್ಯ ಆರಂಭಿಸಿದರು.

4 comments:

  1. "ಆದದ್ದೆಲ್ಲಾ ಒಳಿತೇ ಆಯಿತು..." ಎಂದು ದಾಸರ ಭಾವವೂ ಇದೆಯೇ ಅಲ್ಲವೇ!

    ದೇವರು ನೀಡಿರುವ ಮರೆವೆಂಬ ವರವನ್ನ, ಎಲ್ಲವನ್ನೂ SAVE ಮಾಡಿಡುವ ಇಂದಿನ ಕಂಪ್ಯೂಟರುಗಳು ಶಾಪವಾಗಿಸುತ್ತಿರಬಹುದೆ!

    ReplyDelete
    Replies
    1. ಆತ್ಮೀಯ ರಜನೀಶ,
      ಕಂಡ ಕಂಡಿದ್ದನ್ನೆಲ್ಲ ಸೇವ್ ಮಾಡಿ ಮಾಡಿ, ಬೇಕಾದ್ದನ್ನ ಬಿಟ್ಟು ಪರದಾಡೋ ಈ computer ಯುಗದಲ್ಲಿ ಮರೆವು ವರ ಅನ್ನೋ ಅರಿವು ಮರೆಯಾಗಿದೆ!!!!!!! ಆದದ್ದೆಲ್ಲ ಒಳಿತೆ ಆಯಿತು ಎನ್ನುವ ಭಾವ ಇಲ್ಲದಹಾಗೆ ಆಗಿದೆ. ಆಗೋದಾದ್ರೆ, ನನ್ನೊಬ್ಬನಿಗೆ ಒಳಿತು ಆಗಲಿ ಎನ್ನುವ ಭಾವ ಜಾಸ್ತಿ ಆಗಿರುವ ಈ ಕಾಲದಲ್ಲಿ ದೊಡ್ಡವರ ದಾರಿ ಏನಾದರು ಕಿಂಚಿತ್ ಪ್ರಯೋಜನಕಾರಿ ಅನಿಸಿದರೆ ಸಾಕು ಎನ್ನುವ ಪ್ರಯತ್ನ.
      ಧನ್ಯವಾದಗಳು

      Delete

  2. Umesha KP
    9:52 AM (25 minutes ago)

    to me
    Dear Prakash

    Doddavaradaari chennagi baruttide.
    Niyamithavaagi ashtella bareyuva nimma vyavadaana mattu samayada sadbalekege abhinandanegalu.

    Inthi

    Umesha KP
    DARE
    PB 9366, C V Raman Nagar
    Bangalore - 560093
    Tel (Office): 080 25047510
    Mo: 9448733603

    ReplyDelete
    Replies
    1. ಆತ್ಮೀಯ ಉಮೇಶರೇ,
      ನಮಸ್ಕಾರ. ನಿಮ್ಮ ಉತ್ತರ ನೋಡಿ ಬಹಳ ಖುಷಿಯಾಯಿತು. ಬಹಳ ದಿನಗಳ ನಂತರ ನಿಮ್ಮ ಪತ್ರ ಬಂದಿದೆ, ಹೀಗೆ ಬರೆಯುತ್ತಾ ಇರಿ.
      ಧನ್ಯವಾದಗಳು
      ಪ್ರಕಾಶ್

      Delete