July 30, 2012

ಇಂದು ಮಾಡುವ ಕೆಲಸ ಈಗಲೇ ಮಾಡು




ಇಂದು ಮಾಡುವ ಕೆಲಸ ಈಗಲೇ ಮಾಡು

ದಲೈ ಲಾಮಾರನ್ನು ಒಬ್ಬ ಪತ್ರಕರ್ತ ಕೇಳಿದ " ಇಂದಿನ ಸಮಾಜದಲ್ಲಿ  ಅತ್ಯಂತ ಆಶ್ಚರ್ಯದ  ಸಂಗತಿ ಯಾವುದೆಂದು ನಿಮಗನ್ನಿಸುತ್ತದೆ ?" 
ದಲೈ ಲಾಮಾರು ನಸುನಗುತ್ತ " ಮನುಷ್ಯನಿಗಿಂತ ಇನ್ಯಾರು  ಇರಲು ಸಾಧ್ಯ ಹೇಳಿ! "
ಪತ್ರಕರ್ತ ತಕ್ಷಣ " ಅದು ಹೇಗೆ? " ಎಂದ. 
" ಹೇಗೆಂದರೆ, ಮನುಷ್ಯ ಹಣ ಸಂಪಾದನೆಗೊಸ್ಕರ ತನ್ನ ಆರೋಗ್ಯವನ್ನು ತ್ಯಾಗ ಮಾಡುತ್ತಾನೆ.  ಅಪಾರ ಹಣವನ್ನು ತನ್ನ ಆರೋಗ್ಯವನ್ನು ಪುನಃ ಪಡೆಯಲು ಖರ್ಚುಮಾಡುತ್ತಾನೆ.  ಇಂದಿನ ಸುಖದ ಕ್ಷಣಗಳನ್ನೆಲ್ಲ  ಅನುಭವಿಸದೇ, ನಾಳಿನ ಮತ್ತಷ್ಟು ಸುಂದರ ಸುಖದ ಕನಸಿಗಾಗಿ ಕಾಯ್ತ್ತಾನೆ.  ಭವಿಷ್ಯದಲ್ಲಿ ಅರಸುವ  ಇವನ ಸುಖದ ಆ  ನಾಳೆಗಳು ,  ಇವನಿಗೆ ಜೀವನ ಪೂರ್ತಿ ಸಿಗುವುದೇ ಇಲ್ಲ.  ಸುಂದರವಾದ ಈ ಕ್ಷಣಗಳನ್ನು ಅನುಭವಿಸಲಿಲ್ಲ, ಕನಸಿನ ಆ ನಾಳೆಗಳು ಸಿಗಲಿಲ್ಲ.  ಬದುಕಿರುವಷ್ಟು ಸಮಯ ನಾಳಿನ ಪ್ರತೀಕ್ಷೆಯಲ್ಲಿ ಕಳೆದು, ಕೊನೆಗೊಂದು ದಿನ ಏನನ್ನು ಪಡೆಯದೇ, ಸಾಧಿಸದೆ ಸೊನ್ನೆಯಾಗಿ ಸತ್ತು ಬಿಡುತ್ತಾನೆ." ಎಂದು ಮಾರ್ಮಿಕವಾಗಿ ನುಡಿದರು.

ಹೌದು,  ಸುಂದರ ಕನಸಿನ ನಾಳೆಗಳು, ಪುನಃ ನಾಳೆಗಳಾಗದೆ ಇಂದಾದಾಗ ಬದುಕು ಸಂತಸಮಯವಾಗುತ್ತದೆ.     
" ನಿನ್ನೆ ಸತ್ತಿಹುದು, ನಾಳೆ ಬರದಿರಬಹುದು ಆದರೆ ಇಂದು ನಿನ್ನ ಕೈಯಲ್ಲೇ ಇಹುದು " ಎನ್ನುತಾರೆ ಡಿ ವಿ ಜಿ.  
"  one in hand, worth two in bush."  ಎನ್ನುವುದೂ ಇದನ್ನೇ. 

 ಈ ಕ್ಷಣಗಳನು ಹಾಳು ಮಾಡುವವನು ಭವಿಷ್ಯದಲ್ಲಿ ಏನೂ ಮಾಡಲಾರ.  ನಾಳಿನ ಕನಸು ಇಂದಿನ ಕ್ಷಣಗಳ ಸಮರ್ಥ ಬಳಕೆಯ ಮೇಲೆ ನಿಲ್ಲುತ್ತದೆ. ಸುಂದರ ಭವಿಷ್ಯಕ್ಕೆ ಈ ಕ್ಷಣದ  ತಯಾರಿಯೇ ಗಟ್ಟಿ ಅಡಿಪಾಯ.  ಇದನ್ನೇ ಹಿರಿಯರು " ನಾಳೆ ಮಾಡುವ ಕೆಲಸ ಇಂದು ಮಾಡು,  ಇಂದು ಮಾಡುವ ಕೆಲಸ ಈಗಲೇ ಮಾಡು " ಎಂದಿರುವುದು. 
ನೀವೇನು ಹೇಳುತ್ತಿರಿ ?

ಹೆಚ್ ಏನ್ ಪ್ರಕಾಶ್ 
30 07 2012

5 comments:

  1. ನಿನ್ನೆ ಹಳಸು... ನಾಳೆ ಕನಸು... ಇಂದು ಬಳಸು!

    ReplyDelete
    Replies
    1. ಆತ್ಮೀಯ ರಜನೀಶನಿಗೆ,
      ನಿನ್ನ ಹೊಸತನದ ಬರಹವನ್ನು ಹಳಸಲು ಬಿಡದೆ, ನಾಳೆಗೆ ಕಳಿಸದೆ, ಇಂದೇ ಬಳಸಿ ಬೆಳೆಸು.

      Delete
    2. ಹಳಸದೆಯೇ ಹೊಸ ಹುಟ್ಟೆಲ್ಲಿದೆ?

      Delete
  2. Replies
    1. ಆತ್ಮೀಯ ಶ್ರೀಕಾಂತನಿಗೆ
      ಧನ್ಯವಾದಗಳು

      Delete