ಸ್ವವಿಮರ್ಶೆ.......................ಒಂದಷ್ಟು ಚಿಂತನೆ
ನೀವೇನು ಹೇಳುತ್ತೀರಿ ?
ಹೆಚ್ ಏನ್ ಪ್ರಕಾಶ್
24 07 2012
ನಾವೆಂದುಕೊಂಡಿರುವ ಚುರುಕುತನ ಮತ್ತೊಬ್ಬರಲ್ಲಿ ಕಂಡರೆ ಅದು ಅವಸರದ ಬುದ್ಧಿಯಾಗುತದೆ. ನಮಗೆ ಮಿತವ್ಯಯ ಎನಿಸಿದ್ದು ಮತ್ತೊಬ್ಬರಲ್ಲಿ ಕಂಡರೆ ಜಿಪುಣತನ ಎನಿಸುತ್ತದೆ. ನಮ್ಮ ಮಕ್ಕಳು ಹೆಚ್ಚು ಮಾತನಾಡದೆ ಇದ್ದರೆ ಶಾಂತಸ್ವರೂಪಿಗಳು ಅದೇ ಬೇರೆಯವರ ಮಕ್ಕಳಾದರೆ ಅಳುಮುಂಜಿಗಳು. ತಮ್ಮ ಹೆಣ್ಣು ಮಕ್ಕಳು ನಾಲ್ಕು ಮಂದಿಯೊಂದಿಗೆ ನಗುನಗುತ್ತಾ ಮಾತನಾಡಿದರೆ ಸೋಶಿಯಲ್ಲೂ, ಅದೇ ಪಕ್ಕದ ಮನೆಯವರ ಮಗಳು ಹಾಗಿದ್ದರೆ ಚಲ್ಲು ಚಲ್ಲು. ನಮ್ಮ ಅಳತೆಗೋಲೇ ಬೇರೆ, ಬೇರೆಯವರನ್ನು ಅಳೆಯುವ ಅಳತೆಗೋಲೇ ಬೇರೆ. ಈ ರೀತಿಯ ಅಳತೆಗೋಲುಗಳು ಒಬ್ಬೊಬ್ಬರಿಗೆ ಒಂದೊಂದುರೀತಿ.
ತನ್ನ ಹೆಂಡತಿಯ ಬಂಗಾರದ ಬಳೆಗಳನ್ನು ಕದ್ದಿರಬಹುದೆಂಬ ಅನುಮಾನದಿಂದ ಮನೆ ಕೆಲಸದವನಿಗೆ ಪೋಲಿಸರಿಂದ ಕೊಡಿಸಿದ ಏಟುಗಳು, ಬಳೆಗಳು ಹಾಸಿಗೆ ದಿಂಬಿನ ಕೆಳಗೆ ಸಿಕ್ಕಾಗ ಆತನಿಗಾದ ಶಿಕ್ಷೆ ವಾಪಸ್ಸು ಪಡೆಯುವುದು ಹೇಗೆ? ಪರೀಕ್ಷಾ ಕೊಟಡಿಯಲ್ಲಿ ನಕಲು ಮಾಡುತ್ತಿದ್ದ ವಿಧ್ಯಾರ್ಥಿಗೆ ಪರೀಕ್ಷೆಯಿಂದ ಡಿಬಾರ್, ಅದೇ ಅಧ್ಯಾಪಕ ಹಲವು ಪುಸ್ತಕಗಳಿಂದ ಕಾಪಿ ಹೊಡೆದು ಬರೆದ ಥೀಸೀಸಿಗೆ ಡಾಕ್ಟರೆಟ್ ಪ್ರಶಸ್ತಿ. ತಮಗಾದರೆ ಒಂದು ರೀತಿಯ ತೀರ್ಪು, ಮತ್ತೊಬ್ಬರಿಗಾದರೆ ಇನ್ನೊಂದು ರೀತಿಯ ತೀರ್ಪು.
ಈ ರೀತಿಯ ಹಲವಾರು ದ್ವಂದ್ವಗಳನ್ನು ದಿನನಿತ್ಯದಲ್ಲಿ ಕಾಣುತ್ತೇವೆ. ಯಾಕೆ ಹೀಗೆ? ಎಂದು ಹಲವಾರು ಸಾರಿ ಅಂದುಕೊಂಡರೂ ನಮ್ಮ ಅರಿವಿಗೆ ಬಾರದಂತೆ ಕೆಲವೊಮ್ಮೆ ನಮ್ಮಿಂದಲೂ ಈ ರೀತಿಯ ತಪ್ಪುಗಳು ಆಗಿಬಿಡುತ್ತವೆ. ತಪ್ಪುಗಳು ನಮಗೆ ಗೊತ್ತಾದಾಗ ನಮಗೆ ಬಹಳ ಹಿಂಸೆ ಅನಿಸುತ್ತದೆ. ಇಂತಹ ಸಮಯದಲ್ಲಿ ನಮ್ಮನ್ನು ನಾವು ತಿದ್ದಿಕೊಳ್ಳುವ ಕೆಲಸ ಮಾಡಿದರೆ ತಪ್ಪುಗಳ ಜೊತೆಗೆ ದ್ವಂದ್ವವೂ ಕಡಿಮೆಯಾಗಬಹುದು. ಇದು ಅವಶ್ಯವಾಗಿ ಆಗಲೇಬೇಕಾದ ಕಾರ್ಯ.
ಅಂದಿನ ದಿನದ ನಮ್ಮ ನಡವಳಿಕೆ, ಮಾತು, ಭಾವನೆ, ಇವುಗಳ ಸ್ವವಿಮರ್ಶೆಗಾಗಿ ಮಲಗುವಮುಂಚಿನ ಹತ್ತು ನಿಮಿಷ ಸಾಕು. ಚಲನಚಿತ್ರದಂತೆ ನಮ್ಮ ಕಣ್ಣಮುಂದೆ ಇವುಗಳು ಪ್ರದರ್ಶನವಾದಾಗ ನಮ್ಮ ತಪ್ಪು ನಮಗೆ ಅರಿವಾಗುತ್ತದೆ. ಸರಿ ದಾರಿಗಳು ನಮಗೆ ಗೋಚರಿಸುತ್ತದೆ. ಇನ್ನೊಬ್ಬರನ್ನು ಟೀಕಿಸುವ ಮೊದಲು ನಾವು ಹೇಗೆ ಇರಬೇಕು ಎಂಬುದು ಗೊತ್ತಾಗುತ್ತದೆ. ದಿನನಿತ್ಯದ ಆ ಹತ್ತು ನಿಮಿಷ ನಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯುತ್ತದೆ. ಇದಕ್ಕಾಗಿ ನಾವು ಬಿಡದ ಪ್ರಯತ್ನ ಮಾಡಬೇಕಾಗುತ್ತದೆ. ಈ ಅಭ್ಯಾಸ ಜೀವನವನ್ನು ಸಕಾರಾತ್ಮಕವಾಗಿ ನೋಡುವ ಶಕ್ತಿ ನೀಡುತ್ತದೆ.
ನೀವೇನು ಹೇಳುತ್ತೀರಿ ?
ಹೆಚ್ ಏನ್ ಪ್ರಕಾಶ್
24 07 2012
ನಮ್ಮ ತಪ್ಪುಗಳು ಬೇರೊಬ್ಬರಲ್ಲಿ ನೋಡಿದಾಗಾ ಅಸಹನೀಯವಾಗುತ್ತದೆ..ಮನುಜನ ಗುಣವೇ ಹಾಗೆ...
ReplyDeleteನನ್ನ ಸ್ವಾನುಭವ..ನಾನು ಮೋಟರ್ ಸೈಕಲ್ ಓಡಿಸುವಾಗ ಮಾಡಿದ ತಪ್ಪುಗಳು..ಕಾರು ಓಡಿಸುವಾಗ ತಿಳಿಯುತ್ತದೆ..
ಒಬ್ಬರ ಮಿತಿ..ಇನ್ನೊಬ್ಬರ ಪರಿಮಿತಿ..ಇದು ಮನುಜ ಸ್ವಭಾವ..
ಎಲ್ಲರೋಳಗೊಂದಾಗು ಮಂಕುತಿಮ್ಮ..ಎನ್ನುವಂತೆ..ನಮ್ಮನ್ನು ಬೇರೊಬ್ಬರಲ್ಲಿ ನೋಡಿದಾಗ ಮಾತ್ರ ಇದಕ್ಕೆ ಮುಕ್ತಿ..ಇಲ್ಲ ಅಂದ್ರೆ ಮುಕ್ತ ಮುಕ್ತ ಧಾರವಾಹಿ ತರಹ ರಬ್ಬರ್...ಮುಗಿಯಲಾರದ ಕಥೆ..
ಆತ್ಮೀಯ ಶ್ರೀಕಾಂತ,
ReplyDeleteಜಗವ ತಿದ್ದುವ ಬದಲು ನಿನ್ನ ನೀ ತಿದ್ದಿಕೋ ಮೊದಲು ....... ಎನ್ನುವ ಮಾತು ಸರ್ವಕಾಲಕು ಸತ್ಯವೇ. ಅಧ್ಯಾತ್ಮ ಸಾಧಕರಿಗೆ ಮೊದಲನೇ ಕಿವಿಮಾತು ಏನೆಂದರೆ ' ಅನ್ಯರ ತಪ್ಪನ್ನು ಗುರುತಿಸ ಬೇಡ. ಜಗದಲ್ಲಿ ಎಲ್ಲವು ಅನಿವಾರ್ಯವೇ. ಆದರೆ ಆ ತಪ್ಪನ್ನು ನೀ ಮಾಡಬೇಡ." ಇಂತಹ ಉನ್ನತವಾದ ಆದರ್ಶಗಳು ನಮ್ಮನ್ನು ಸದಾ ತಿದ್ದುತ್ತಲೇ ಬಂದಿದೆ.
ನಿನ್ನ ಅಭಿಪ್ರಾಯಗಳಿಗ ಧನ್ಯವಾದಗಳು,
ನಾನೂ ಸಹ ಕೆಲವೊಮ್ಮೆ ಈ ಬಗ್ಗೆ ಚಿ೦ತಿಸುತ್ತೇನೆ ಹಿರಿಯರೇ.. ಆದರೆ ಎಲ್ಲವೂ ಗೊ೦ದಲವೆನಿಸುತ್ತದೆ! ತಪ್ಪನ್ನು ಹೇಳುವುದು ಅಮುಖ್ಯವೆನಿಸಿದರೆ, ತಪ್ಪು ಮಾಡುವುದನ್ನು ನೋಡಿಕೊ೦ಡು ಸುಮ್ಮನಿರಬೇಕಾಗುತ್ತದೆ! ನಿಜವಾಗಿಯೂ ತಪ್ಪು ಮಾಡಿದುದನ್ನು ತಿಳಿಸಿದರೆ ಸ್ನೇಹದ ಬಗ್ಗೆ ಗೊ೦ದಲ.. ಅಕಾರಣವಾಗಿ ಮುನಿಸು ಮಾಡಿಕೊ೦ಡಿದ್ದು ಗೊತ್ತಾದರೂ ಒಪ್ಪಿಕೊಳ್ಳಲು ಸ್ವಾಭಿಮಾನದ ಪ್ರಶ್ನೆ! ಹೀಗೆ ಹತ್ತು ಹಲವಾರು ಗೊ೦ದಲಗಳು. ಅದಕ್ಕಾಗಿ ಈಗೀಗ ಯಾವುದಕ್ಕೂ ಕೂಡಲೇ ಪ್ರತಿಕ್ರಿಯಿಸುವುದಿಲ್ಲ.. ಸ್ವಲ್ಪ ಹೊತ್ತು ಆಲೋಚಿಸಿದ ನ೦ತರವಷ್ತೇ ತೀರ್ಮಾನ ತೆಗೆದುಕೊಳ್ಳುವುದು! ಈ ನನ್ನ ನಿರ್ಧಾರ ಹತ್ತು ಹಲವು ಅಭಾಸಗಳನ್ನು ತಪ್ಪಿಸಿದೆ.
ReplyDeleteನಿಮ್ಮ ಬ್ಲಾಗ್ ಹರಟೆಯಾದರೂ ಚಿ೦ತನಗಳನ್ನು ಹೊತ್ತುಕೊ೦ಡಿದೆ. ದೈನ೦ದಿನ ಜ೦ಜಾಟಗ್ಳ ನಡುವೆ ನಿಜವಾಗಿಯೂ ಯೋಚಿಸಲೇ ಬೇಕಾದವುಗಳನ್ನು ತಿಳಿಸುತ್ತೀರಿ. ಧನ್ಯವಾದಗಳು. ಮನಸ್ಸಿನ ರಿಲ್ಯಾಕ್ಸ್ಗ್ ಗೆ ನಿಮ್ಮಲ್ಲಿಗೆ ಬರಲೇಬೇಕು ಎನ್ನಿಸುವ೦ತೆ ಬರೆಯುತ್ತೀರಿ. ಒಳ್ಳೆಯದಾಗಲಿ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಆತ್ಮೀಯ ನಾವಡರವರೆ,
Deleteನಿಮ್ಮ ಮೆಚ್ಚುಗೆಯ ಮಾತುಗಳಿಗೆ ನಾನು ಕೃತಜ್ಞ. ನೀವು ಹೇಳಿದ್ದು ಸರಿ ಈ ಗೊಂದಲಗಳು ಯಾವಾಗಲು ಕಾಡುತ್ತಲೇ ಇರುತ್ತವೆ. ಅದಕ್ಕೆ ಮಹರ್ಷಿ ರಮಣರು ಹೇಳುತ್ತಾರೆ " ಚುಮ್ಮಾ ಇರು " ಅಂದರೆ ಸುಮ್ಮನಿರು. ಮನಸ್ಸನ್ನು ಗೊಂದಲಕ್ಕೆ ತಳ್ಳಬೇಡ. ಸ್ವಲ್ಪ ಶಾಂತವಾಗಲು ಬಿಡು. ತನ್ನಷ್ಟಕ್ಕೆ ತಾನೇ ಸರಿಯಾಗುತ್ತದೆ. ಆಗ ಸರಿಯಾದ ವಿಚಾರಗಳು ಗೋಚರಿಸುತ್ತವೆ. ಚಂಚಲ ಮನಸ್ಸು ಸ್ಥಿರವಾದ ಉತ್ತರ ಹೇಳಲು ಹೇಗೆ ಸಾಧ್ಯ? ಅಲ್ಲವೇ.
ನೀವು ಹಾಸನಕ್ಕೆ ಬರುವಿರಾದರೆ ಅದಕ್ಕಿಂತ ಸಂತೋಷದ ವಿಚಾರ ಇನ್ನೇನಿದೆ? ನೇರಾ ನಮ್ಮ ಮನೆಗೆ ಬಂದು ನಮ್ಮೊಡನೆ ಇದ್ದು ಹೋಗಬಹುದು. ನನ್ನ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಈ ಕೆಳಗೆ ಕೊಟ್ಟಿದ್ದೇನೆ. ಪುರುಸೊತ್ತು ಮಾಡಿಕೊಂಡು ಸಂಸಾರ ಸಮೇತಾ ಬನ್ನಿ. ಬರುವ ಮುಂಚೆ ಒಂದು ಫೋನ್ ಮಾಡಿ .
ಹೆಚ್ ಏನ್ ಪ್ರಕಾಶ್ , ಮೈತ್ರಿ , ಬಿ ಎಸ ಏನ್ ಎಲ್ ಟವರ್ ಪಕ್ಕ, ಜಯನಗರ, ಸಾಲಗಾಮೆ ರಸ್ತೆ, ಹಾಸನ. ಸ್ಥಿರ ದೂರವಾಣಿ ಸಂಖ್ಯೆ 08172 245689 ಮೊಬೈಲ್ ಸಂಖ್ಯೆ 9964827580
ಧನ್ಯವಾದಗಳು
ಪ್ರಕಾಶ್
"Make the unit of measurement same and solve the problem"
ReplyDeleteLiquid in liters and distance in meters!!!
Note: "he/she", "you", "it" & "they" are always equal to "I".
Cheers
Rajaneesh
Thanks Rajaneesha.
ReplyDelete