July 22, 2012

ಅವರ ಚಿಂತೆ ಅವರಿಗೆ ಗೊತ್ತು.


ಅವರ ಚಿಂತೆ ಅವರಿಗೆ ಗೊತ್ತು.

ಜಾರ್ಜ್ ಬರ್ನಾರ್ಡ್ ಷಾ ಒಮ್ಮೆ ಲಂಡನ್ನಿಂದ ರೈಲಿನಲ್ಲಿ ಪ್ರಯಾಣ ಮಾಡುತ್ತಾ ಇದ್ದರಂತೆ.  ಟಿಕೆಟ್ ಕಲೆಕ್ಟೆರ್ ಬಂದು ಎದುರು ನಿಂತಾಗ ಷಾ ರವರು ತಮ್ಮ ಕೋಟಿನ   ಜೇಬು, ಪಾಂಟಿನ ಜೇಬು ಎಲ್ಲ ಕಡೆ ತಡಕಾಡ ತೊಡಗಿದರು.  ಎಲ್ಲಿ ನೋಡಿದರು ಟಿಕೇಟು ಸಿಗಲಿಲ್ಲ. ಕೊನೆಗೆ ತಮ್ಮ ಟ್ರಂಕನ್ನು ತೆಗೆದು ಬಟ್ಟೆ ಎಲ್ಲವನ್ನು ಹೊರಗೆಳೆದು ತಡಕಾಡ ತೊಡಗಿದರು.  ಆದರೆ ಟಿಕೆಟ್ ಮಾತ್ರ ಸಿಗಲೇ ಇಲ್ಲ.

ಇದನ್ನೆಲ್ಲಾ ಗಮನಿಸಿದ ಟಿಕೆಟ್ ಕಲೆಕ್ಟೆರ್ " ಸಾರ್, ನೀವು ಬರ್ನಾರ್ಡ್ ಷಾ ಎಂಬುದು ನನಗೆ ತಿಳಿದಿದೆ.  ನಿಮ್ಮಂತಹವರು ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದಿಲ್ಲವೆಂದು ನನಗೆ ಗೊತ್ತಿದೆ. ಅದಕ್ಕೆ ಯಾಕೆ ತಲೆ ಕೆಡಿಸಿ ಕೊಳ್ಳುತ್ತಿರಿ?   ಚಿಂತೆ ಮಾಡಬೇಡಿ."  ಎಂದು ಸಮಾಧಾನ ಹೇಳಿದ.

 ಷಾ ರವರು ಟಿಕೆಟ್ ಕಲೆಕ್ಟೆರ್ ಕಡೆ ತಿರುಗಿ " ಧನ್ಯವಾದಗಳು, ಆದ್ರೆ, ನನ್ನ ಚಿಂತೆ ಈಗ ಟಿಕೆಟ್ ಸಿಗದಿದ್ದರೆ ನಾನು ಎಲ್ಲಿ ಇಳಿಯಬೇಕೆಂಬುದು  ಗೊತ್ತಾಗುವುದಿಲ್ಲವಲ್ಲ? " ಎಂದು ತಮ್ಮ ಚಿಂತೆ ತೋಡಿಕೊಂಡರಂತೆ.

ಅವರವರ ಚಿಂತೆ ಅವರಿಗೆ ತಾನೇ ತಿಳಿಯುವುದು.

ಪ್ರಕಾಶ್

4 comments:

  1. ಪ್ರತಿಯೊಂದು ಸಮಸ್ಯೆಗೂ ಒಂದು ಉತ್ತರವಿದೆ...ಪ್ರತಿಯೊಂದು ಉತ್ತರಕ್ಕೂ ಸಮಸ್ಯೆ ಇದ್ದೆ ಇರುತ್ತದೆ..ಆದ್ರೆ ಒಂದಕ್ಕೊಂದು ಸಂಬಂಧ ಇರಲೇ ಬೇಕಿಲ್ಲ...ಚಂದದ ಲೇಖನ...ಚಿಕ್ಕಪ್ಪ..

    ReplyDelete
    Replies
    1. ಆತ್ಮೀಯ ಶ್ರೀಕಾಂತ್,
      ಕಾರ್ಯ ಕಾರಣ ಸಂಬಂಧಗಳು ಇದ್ದೆ ಇರುತ್ತವೆ. ಆದರೆ ಕೆಲವೊಮ್ಮೆ ಸಂಬಂಧಗಳೇ ಇಲ್ಲವೇನೋ ಅನ್ನುವ ಹಾಗೆ ತೋರುತ್ತವೆ. ನಿನ್ನ ಅಭಿಪ್ರಾಯಕ್ಕೆ ಧನ್ಯವಾದಗಳು.

      Delete
  2. ಇಂದು ನಮ್ಮ ಸಮಸ್ಯೆಯೂ ಇದೇ ಅಲ್ಲವೇ. ರೈಲಿನಲ್ಲಿ ಕುಳಿತಿದ್ದೇವೆ; ಏಕೆ, ಎಲ್ಲಿಗೆ, ಯಾವಾಗ ಎಂಬುದನ್ನ ಹುಡುಕುತ್ತಿದ್ದೇವೆ...

    ರಜನೀಶ

    ReplyDelete
    Replies
    1. ಆತ್ಮೀಯ ರಜನೀಶ,
      ನೀನು ಈ ಪ್ರಸಂಗವನ್ನು ಆಧ್ಯಾತ್ಮದ ನೆಲೆಯಲ್ಲಿ ನಿಂತು ನೋಡಿದ ಹಾಗಿದೆ. ಹೌದು! ನಾವೆಲ್ಲರೂ ರೈಲಿನಲ್ಲಿ ಕೂತು ಬಿಟ್ಟಿದ್ದೇವೆ. ನಮಗ್ಯಾರಿಗೂ ನಮ್ಮ ಪ್ರಯಾಣ ಎಲ್ಲಿಗೆಂತ ಗೊತ್ತಿಲ್ಲ. ಆದರೂ, ನಮಗೆಲ್ಲ ತಿಳಿದಿರುವವರ ಹಾಗೆ ಪ್ರಯಾಣ ಮಾಡುತ್ತಿದ್ದೇವೆ. ನಮ್ಮ ಸ್ಟೇಷನ್ ಯಾವುದು ಎಂಬುದರ ನಿರ್ಧಾರ ಆ ಭಗವಂತನಿಗೆ ಮಾತ್ರ ಗೊತ್ತು. ನಿನ್ನ ಚಿಂತನೆಗೆ ಧನ್ಯವಾದಗಳು.

      Delete