July 30, 2012

ಇಂದು ಮಾಡುವ ಕೆಲಸ ಈಗಲೇ ಮಾಡು




ಇಂದು ಮಾಡುವ ಕೆಲಸ ಈಗಲೇ ಮಾಡು

ದಲೈ ಲಾಮಾರನ್ನು ಒಬ್ಬ ಪತ್ರಕರ್ತ ಕೇಳಿದ " ಇಂದಿನ ಸಮಾಜದಲ್ಲಿ  ಅತ್ಯಂತ ಆಶ್ಚರ್ಯದ  ಸಂಗತಿ ಯಾವುದೆಂದು ನಿಮಗನ್ನಿಸುತ್ತದೆ ?" 
ದಲೈ ಲಾಮಾರು ನಸುನಗುತ್ತ " ಮನುಷ್ಯನಿಗಿಂತ ಇನ್ಯಾರು  ಇರಲು ಸಾಧ್ಯ ಹೇಳಿ! "
ಪತ್ರಕರ್ತ ತಕ್ಷಣ " ಅದು ಹೇಗೆ? " ಎಂದ. 
" ಹೇಗೆಂದರೆ, ಮನುಷ್ಯ ಹಣ ಸಂಪಾದನೆಗೊಸ್ಕರ ತನ್ನ ಆರೋಗ್ಯವನ್ನು ತ್ಯಾಗ ಮಾಡುತ್ತಾನೆ.  ಅಪಾರ ಹಣವನ್ನು ತನ್ನ ಆರೋಗ್ಯವನ್ನು ಪುನಃ ಪಡೆಯಲು ಖರ್ಚುಮಾಡುತ್ತಾನೆ.  ಇಂದಿನ ಸುಖದ ಕ್ಷಣಗಳನ್ನೆಲ್ಲ  ಅನುಭವಿಸದೇ, ನಾಳಿನ ಮತ್ತಷ್ಟು ಸುಂದರ ಸುಖದ ಕನಸಿಗಾಗಿ ಕಾಯ್ತ್ತಾನೆ.  ಭವಿಷ್ಯದಲ್ಲಿ ಅರಸುವ  ಇವನ ಸುಖದ ಆ  ನಾಳೆಗಳು ,  ಇವನಿಗೆ ಜೀವನ ಪೂರ್ತಿ ಸಿಗುವುದೇ ಇಲ್ಲ.  ಸುಂದರವಾದ ಈ ಕ್ಷಣಗಳನ್ನು ಅನುಭವಿಸಲಿಲ್ಲ, ಕನಸಿನ ಆ ನಾಳೆಗಳು ಸಿಗಲಿಲ್ಲ.  ಬದುಕಿರುವಷ್ಟು ಸಮಯ ನಾಳಿನ ಪ್ರತೀಕ್ಷೆಯಲ್ಲಿ ಕಳೆದು, ಕೊನೆಗೊಂದು ದಿನ ಏನನ್ನು ಪಡೆಯದೇ, ಸಾಧಿಸದೆ ಸೊನ್ನೆಯಾಗಿ ಸತ್ತು ಬಿಡುತ್ತಾನೆ." ಎಂದು ಮಾರ್ಮಿಕವಾಗಿ ನುಡಿದರು.

ಹೌದು,  ಸುಂದರ ಕನಸಿನ ನಾಳೆಗಳು, ಪುನಃ ನಾಳೆಗಳಾಗದೆ ಇಂದಾದಾಗ ಬದುಕು ಸಂತಸಮಯವಾಗುತ್ತದೆ.     
" ನಿನ್ನೆ ಸತ್ತಿಹುದು, ನಾಳೆ ಬರದಿರಬಹುದು ಆದರೆ ಇಂದು ನಿನ್ನ ಕೈಯಲ್ಲೇ ಇಹುದು " ಎನ್ನುತಾರೆ ಡಿ ವಿ ಜಿ.  
"  one in hand, worth two in bush."  ಎನ್ನುವುದೂ ಇದನ್ನೇ. 

 ಈ ಕ್ಷಣಗಳನು ಹಾಳು ಮಾಡುವವನು ಭವಿಷ್ಯದಲ್ಲಿ ಏನೂ ಮಾಡಲಾರ.  ನಾಳಿನ ಕನಸು ಇಂದಿನ ಕ್ಷಣಗಳ ಸಮರ್ಥ ಬಳಕೆಯ ಮೇಲೆ ನಿಲ್ಲುತ್ತದೆ. ಸುಂದರ ಭವಿಷ್ಯಕ್ಕೆ ಈ ಕ್ಷಣದ  ತಯಾರಿಯೇ ಗಟ್ಟಿ ಅಡಿಪಾಯ.  ಇದನ್ನೇ ಹಿರಿಯರು " ನಾಳೆ ಮಾಡುವ ಕೆಲಸ ಇಂದು ಮಾಡು,  ಇಂದು ಮಾಡುವ ಕೆಲಸ ಈಗಲೇ ಮಾಡು " ಎಂದಿರುವುದು. 
ನೀವೇನು ಹೇಳುತ್ತಿರಿ ?

ಹೆಚ್ ಏನ್ ಪ್ರಕಾಶ್ 
30 07 2012

July 28, 2012


ಕೇಳಿದ್ದನ್ನ ಕೊಡಬಾರದೇ??


         ಮಗು ಅಳುತ್ತಿತ್ತು. ಅಮ್ಮ ಒಳಗಿನಿಂದ ಕೂಗಿದಳು
         " ಗುಂಡಾ........... ಮಗುನ ಸುಮ್ಮನೆ ಅಳಿಸಬೇಡ ...ಅದೇನು ಕೇಳುತ್ತೋ ಅದನ್ನ ಕೊಟ್ಟುಬಿಡು. " 
          "ಅದು ಕೇಳಿದ್ದನ್ನ ಕೊಟ್ಟೆ "  ಎಂದ ಗುಂಡ.
          " ಮತ್ಯಾಕೆ ಮಗು ಅಳುತ್ತೆ?  ಅದೇನು ಕೇಳಿತು?" ಒಳಗಿನಿಂದ ಕಿರುಚಿದಳು 
          "  ಅದು.... ಅದು ಹಸಿರು ಮೆಣಸಿನಕಾಯಿ ಕೇಳಿತು .............ನಾನು ........."


ಇಷ್ಟಕ್ಕೆಅಷ್ಟಾದರೆ  , ಇನ್ನು ಅಷ್ಟಕ್ಕೆ ಎಷ್ಟು?

             ಒಬ್ಬ ಕಳ್ಳ ಒಂದು ಶ್ರೀಮಂತರ ಮನೆಗೆ ನುಗ್ಗಿ, ಮನೆಯಲ್ಲಿದ್ದವರನ್ನೆಲ್ಲ ಹೆದರಿಸಿ, ಬೆದರಿಸಿ ಇದ್ದ ಚಿನ್ನ ಮತ್ತು ಹಣವನ್ನು ದೋಚಿಕೊಂಡು ಹಿತ್ತಲ ಬಾಗಿಲ ಮುಲಕ ಹೊರಟ. ಹಿತ್ತಲಲ್ಲಿ ಕಟ್ಟಿದ್ದ ಒಂದು ಹಸು ನಕ್ಕಿತು. ಕಳ್ಳನಿಗೆ ಆಶ್ಚರ್ಯ.  ಎಂತಹ ಅದ್ಭುತ!  ಹಸುವಿನ ಹತ್ತಿರ ಹೋಗಿ "ನಗುತ್ತಿಯಾ, ಮಾತನ್ನೂ ಆಡುತ್ತಿಯಾ?"  ಎಂದು ಹಾಸ್ಯ ಮಾಡಿದ.  ಹಸು ಜೋರಾಗಿ ನಕ್ಕಿತು. ಕಳ್ಳ  " ಯಾಕೆ ನಗುತ್ತಿರುವೆ? ಎಂದು ಕೋಪದಿಂದ ಕೇಳಿದ.
             ಹಸು ಹೇಳಿತು " ಈ ಯಜಮಾನರ ಮನೆಯಲ್ಲಿ ನಾನು ಲೋಟ ಮಜ್ಜಿಗೆಯನ್ನು ಕದ್ದಿದ್ದೆ. ಅದರ ಸಲುವಾಗಿ ಎಷ್ಟೋ ದಿನದಿಂದ ಹಾಲು ಕೊಡುತ್ತಿದ್ದೇನೆ. ಇನ್ನು ನೀನು ಇಷ್ಟೊಂದನ್ನೆಲ್ಲಾ   ಕದ್ದು ಒಯ್ಯುತಿರುವೆ.  ನಾನು ಕದ್ದ ಇಷ್ಟಕ್ಕೆ ಅಷ್ಟಾದರೆ, ಇನ್ನು ನೀನು ಕದ್ದಿರುವ ಅಷ್ಟಕ್ಕೆ ಇನ್ನೆಷ್ಟೂ? " ಎಂದು ನಗು ಬಂತು.
             ಹಸು ಹೇಳಿರಲಿ ಬಿಟ್ಟಿರಲಿ, ಇಲ್ಲಿರುವ ಮಾತಂತೂ ಸತ್ಯ.  ಮಾಡಿದ ಪಾಪವನ್ನು ತೀರಿಸಲೇ ಬೇಕು. 
 " ನಗುನಗುತ್ತಾ ಮಾಡಿ ಅಳುಅಳುತ್ತ ತೀರಿಸುವುದು."  " ಮಾಡಿದ್ದುಣ್ಣೋ  ಮಹರಾಯ "  ಎಂದು  ಗಾದೆ ಮಾತುಗಳು ನಮ್ಮನ್ನು ಎಚ್ಚರಿಸುತ್ತಲೇ ಇರುತ್ತದೆ.   ಆದರೆ ನಾವು ಎಚ್ಚೆತ್ತುಕೊಳ್ಳಬೇಕು  ಅಷ್ಟೇ.

(ಗೆಳೆಯ ಗಿರಿಧರ ಹೇಳಿದ ಕಥೆ)

July 26, 2012


ರಾಗ ಮತ್ತು ದ್ವೇಷ .................ಒಂದಷ್ಟು ಚಿಂತನೆ 

ಶ್ರೀ ರಾಮಕೃಷ್ಣರು ಹೇಳುತ್ತಾರೆ " ಯಾರನ್ನೂ, ಯಾವುದನ್ನೂ ದ್ವೇಷಿಸಬೇಡ.  ಏಕೆಂದರೆ ಪ್ರೀತಿಸುವುದಕಿಂತ ಬೇಗನೆ ದ್ವೇಷಿಸುವುದರ ಬಲೆಗೆ ಬೀಳುತ್ತಿಯ.  ಜೋಕೆ."

ನಮಗೆ ಪ್ರಿಯವಾದುದನ್ನು ಪ್ರೀತಿಸುತ್ತೇವೆ, ಅಪ್ರಿಯವಾದುದನ್ನು ಕಂಡರೆ ಆಗುವುದಿಲ್ಲ, ಆದರೆ, ಅಪ್ರಿಯವಾದದ್ದು  ಪುನಃ ನಮ್ಮಲ್ಲಿ ಬಂದಾಗ ದ್ವೇಷಿಸುತ್ತೇವೆ.  ಒಂದು ರಾಗ, ಮತ್ತೊಂದು ದ್ವೇಷ.  ಇವೆರಡೂ ನಮ್ಮನ್ನು ಕಟ್ಟಿಹಾಕುತ್ತವೆ..  ನಾವು ದ್ವೇಷಿಸುವ ವಸ್ತು ಅಥವಾ ವಿಚಾರ, ನಮ್ಮ ಮನಸಿನ ಮುಂದೆ ಬೇಡ ಬೇಡ ಎಂದುಕೊಂಡರು ಹಾಜರಾಗಿಬಿಡುತ್ತದೆ.  ಆಗ ನಾವು ಅಪ್ರಿಯವಾದ ಭಾವನೆಯಿಂದಲೇ ಚಿಂತಿಸುತ್ತೇವೆ. ಇದು ನಮ್ಮ ಮನಸ್ಸಿನ ಮೇಲೆ ಗಾಢವಾದ   ಕೆಟ್ಟ  ಪ್ರಭಾವನ್ನೇ   ಬೀರುತ್ತದೆ.  ಇದು ನಮಗೆ ವಾಸ್ತವದಲ್ಲಿ ಬೇಡ. ಆದರೂ ನಮ್ಮನ್ನು ಅದು ಬಿಡುವುದೇ ಇಲ್ಲ. ಇದು ನಮ್ಮ ಮನಸನ್ನು ಕಲುಷಿತಗೊಳಿಸಿ ಬಿಡುತ್ತದೆ.    ಬಿಡಲಾಗದೆ, ಕಟ್ಟಿ ಕೊಳ್ಳಲಾಗದೆ ಒದ್ದಾಡುತ್ತೇವೆ.  ಆಗಲೇ ಮನಸ್ಥಿತಿ ಮತ್ತು ದೇಹಸ್ಥಿತಿ ಎರಡೂ ಹಾಳಾಗುತ್ತದೆ. 

ಪ್ರೀತಿಯ ವಿಚಾರ ಇನ್ನೊಂದು ರೀತಿ. ಸಾಧಾರಣವಾಗಿ ನಾವು ಅಂದುಕೊಂಡಿರುವ ಪ್ರೀತಿ ಸ್ವಾರ್ಥವಿಲ್ಲದೆ  ಇರಲು ಸಾಧ್ಯವಿಲ್ಲ.  ಈ ಪ್ರೀತಿಯು ಹತ್ತಿರ ಇದ್ದಾಗ ಏನೋ ಒಂದು ರೀತಿಯ ಸುಖದ ಅನುಭವ. ಏನೋ ಒಂದು ರೀತಿಯ ಸಮಾಧಾನ.  ಇದು ಸ್ವಲ್ಪ ದೂರಾದರೆ ಅಥವಾ ಇದು  ಬೇರೆಯವರಲ್ಲಿ ಹಂಚಿಕೊಳ್ಳುವ ಪ್ರಸಂಗ ಏನಾದರು ಬಂದರೆ ಮನಸ್ಸು ಚಂಚಲವಾಗುತ್ತದೆ . ಇಲ್ಲ ಸಲ್ಲದ ಯೋಚನೆಗಳು ಮುತ್ತಿಕೊಂಡುಬಿದುತ್ತದೆ .    ಆಗ ಈ ಪ್ರೀತಿಯೇ   ಸಂಕಟವಾಗುತ್ತದೆ .   ಪ್ರೀತಿಯೇ  ಒಂದು ರೀತಿ ಚಿಂತೆಯಾಗುತ್ತದೆ.   ಆಗ ಅತ್ಯಂತ ಪ್ರಿಯವೆನಿಸಿದ್ದು ಈಗ ಕಾಟ ಕೊಡಲು ಪ್ರಾರಂಭಿಸುತ್ತದೆ.  ಆರೋಗ್ಯದಲ್ಲಿ ಏರುಪೇರು ಆಗುತ್ತದೆ.

ಪ್ರೀತಿ ಮತ್ತು ದ್ವೇಷ ಇವೆರಡೂ ಬಂಧನಗಳೇ.  ಒಂದು ಪ್ರಿಯವಾದ ಬಂಧನ, ಮತ್ತೊಂದು ಅಪ್ರಿಯವಾದ ಬಂಧನ. ಪ್ರೀತಿಸಿದರೆ, ನಾವು ಪ್ರೀತಿಸುವ ವಸ್ತು ಅಥವಾ ವ್ಯಕ್ತಿಗೆ  ದಾಸರಾಗುತ್ತೇವೆ.   ದ್ವೇಷಿಸಿದರೆ, ಅಪ್ರಿಯವಾದ ಆ ವಸ್ತು ಅಥವಾ ವ್ಯಕ್ತಿ ಯ ವಿಚಾರ ಪಿಶಾಚಿಯಂತೆ ಬೇಡವೆಂದರೂ ನಮ್ಮನ್ನು ಕಾಡುತ್ತವೆ.  ನಾವು ಇವುಗಳಿಂದ ಓಡಿಹೋಗಲು ಆಗುವುದಿಲ್ಲ. ಎಲ್ಲಿಗೆ ಹೋದರು ಅದು ನೆರಳಿನಂತೆ ಬೆನ್ನು ಬೀಳುತ್ತವೆ. ಮತ್ತೇನು ಮಾಡಬೇಕು?      

 ಶ್ರೀ ರಾಮಕೃಷ್ಣರು ಹೇಳುತ್ತಾರೆ " ಇಂತಹ ಸ್ಥಿತಿಯಿಂದ ಪಾರಾಗಬೇಕಾದರೆ ಅತ್ತ ಕಡೆ ಗಮನ ಹರಿಸುವುದನ್ನು ಬಿಡು. ಅದರ ಮೇಲೆ ಅನಾದರವನ್ನು ಉಂಟು ಮಾಡಿಕೊ."       ಹೌದು,   ನಾವು ಇವೆರಡರ ಕಡೆ ಗಮನ ಕೊಡುವುದನ್ನು ಕಡಿಮೆ ಮಾಡಲು ಅಭ್ಯಾಸ ಮಾಡಬೇಕು. ಮನಸ್ಸನ್ನು ಉತ್ತಮ ವಿಚಾರದ ಕಡೆಗೆ ತಿರುಗಿಸಬೇಕು.  ಸಾಹಿತ್ಯ, ಸಂಗೀತ, ಸತ್ಸಂಗ, ಅಧ್ಯಾತ್ಮ ಮತ್ತು ಧ್ಯಾನದ ಕಡೆಗೆ ಮನಸ್ಸು ಕೊಟ್ಟರೆ ರಾಗ ಮತ್ತು ದ್ವೇಷಗಳ ಕಾಟ ಕಡಿಮೆಯಾಗುತ್ತದೆ.   

ಇಂತಹ ಸಮಯದಲ್ಲಿ ತಿಮ್ಮ ಗುರು ಅಪ್ಪಣೆ ಕೊಡುತ್ತಾರೆ 
              ಒಮ್ಮೆ ಹೂದೋಟದಲಿ, ಒಮ್ಮೆ ಕೆಳೆಕೂಟದಲಿ |
              ಒಮ್ಮೆ ಸಂಗೀತದಲಿ, ಒಮ್ಮೆ ಶಾಸ್ತ್ರದಲಿ||  
              ಒಮ್ಮೆ ಸಂಸಾರದಲಿ, ಮತ್ತೊಮ್ಮೆ ಮೌನದಲಿ |
              ಬ್ರಹ್ಮಾನುಭವಿಯಾಗೋ.......ಮಂಕುತಿಮ್ಮ||


ಹೆಚ್ ಏನ್ ಪ್ರಕಾಶ್ 
26 07 2012
.   



July 24, 2012

ಸ್ವವಿಮರ್ಶೆ.......................ಒಂದಷ್ಟು ಚಿಂತನೆ 


ನಾವೆಂದುಕೊಂಡಿರುವ  ಚುರುಕುತನ ಮತ್ತೊಬ್ಬರಲ್ಲಿ ಕಂಡರೆ ಅದು ಅವಸರದ ಬುದ್ಧಿಯಾಗುತದೆ. ನಮಗೆ ಮಿತವ್ಯಯ ಎನಿಸಿದ್ದು ಮತ್ತೊಬ್ಬರಲ್ಲಿ ಕಂಡರೆ ಜಿಪುಣತನ  ಎನಿಸುತ್ತದೆ. ನಮ್ಮ ಮಕ್ಕಳು ಹೆಚ್ಚು ಮಾತನಾಡದೆ ಇದ್ದರೆ  ಶಾಂತಸ್ವರೂಪಿಗಳು  ಅದೇ ಬೇರೆಯವರ ಮಕ್ಕಳಾದರೆ ಅಳುಮುಂಜಿಗಳು.  ತಮ್ಮ ಹೆಣ್ಣು ಮಕ್ಕಳು ನಾಲ್ಕು ಮಂದಿಯೊಂದಿಗೆ    ನಗುನಗುತ್ತಾ  ಮಾತನಾಡಿದರೆ ಸೋಶಿಯಲ್ಲೂ,  ಅದೇ ಪಕ್ಕದ ಮನೆಯವರ ಮಗಳು ಹಾಗಿದ್ದರೆ ಚಲ್ಲು ಚಲ್ಲು.  ನಮ್ಮ ಅಳತೆಗೋಲೇ ಬೇರೆ,  ಬೇರೆಯವರನ್ನು ಅಳೆಯುವ ಅಳತೆಗೋಲೇ ಬೇರೆ.  ಈ ರೀತಿಯ ಅಳತೆಗೋಲುಗಳು ಒಬ್ಬೊಬ್ಬರಿಗೆ ಒಂದೊಂದುರೀತಿ.

ತನ್ನ ಹೆಂಡತಿಯ ಬಂಗಾರದ ಬಳೆಗಳನ್ನು ಕದ್ದಿರಬಹುದೆಂಬ  ಅನುಮಾನದಿಂದ ಮನೆ ಕೆಲಸದವನಿಗೆ ಪೋಲಿಸರಿಂದ ಕೊಡಿಸಿದ  ಏಟುಗಳು, ಬಳೆಗಳು  ಹಾಸಿಗೆ ದಿಂಬಿನ  ಕೆಳಗೆ ಸಿಕ್ಕಾಗ ಆತನಿಗಾದ ಶಿಕ್ಷೆ ವಾಪಸ್ಸು ಪಡೆಯುವುದು ಹೇಗೆ? ಪರೀಕ್ಷಾ ಕೊಟಡಿಯಲ್ಲಿ ನಕಲು ಮಾಡುತ್ತಿದ್ದ ವಿಧ್ಯಾರ್ಥಿಗೆ ಪರೀಕ್ಷೆಯಿಂದ ಡಿಬಾರ್,  ಅದೇ ಅಧ್ಯಾಪಕ ಹಲವು ಪುಸ್ತಕಗಳಿಂದ  ಕಾಪಿ ಹೊಡೆದು ಬರೆದ ಥೀಸೀಸಿಗೆ ಡಾಕ್ಟರೆಟ್ ಪ್ರಶಸ್ತಿ.  ತಮಗಾದರೆ ಒಂದು ರೀತಿಯ ತೀರ್ಪು, ಮತ್ತೊಬ್ಬರಿಗಾದರೆ ಇನ್ನೊಂದು ರೀತಿಯ ತೀರ್ಪು.

ಈ ರೀತಿಯ ಹಲವಾರು ದ್ವಂದ್ವಗಳನ್ನು ದಿನನಿತ್ಯದಲ್ಲಿ ಕಾಣುತ್ತೇವೆ. ಯಾಕೆ ಹೀಗೆ? ಎಂದು ಹಲವಾರು ಸಾರಿ ಅಂದುಕೊಂಡರೂ ನಮ್ಮ ಅರಿವಿಗೆ ಬಾರದಂತೆ ಕೆಲವೊಮ್ಮೆ ನಮ್ಮಿಂದಲೂ ಈ ರೀತಿಯ ತಪ್ಪುಗಳು ಆಗಿಬಿಡುತ್ತವೆ. ತಪ್ಪುಗಳು ನಮಗೆ ಗೊತ್ತಾದಾಗ ನಮಗೆ ಬಹಳ ಹಿಂಸೆ ಅನಿಸುತ್ತದೆ.  ಇಂತಹ ಸಮಯದಲ್ಲಿ  ನಮ್ಮನ್ನು ನಾವು ತಿದ್ದಿಕೊಳ್ಳುವ ಕೆಲಸ ಮಾಡಿದರೆ ತಪ್ಪುಗಳ ಜೊತೆಗೆ ದ್ವಂದ್ವವೂ ಕಡಿಮೆಯಾಗಬಹುದು.  ಇದು ಅವಶ್ಯವಾಗಿ ಆಗಲೇಬೇಕಾದ ಕಾರ್ಯ.

ಅಂದಿನ ದಿನದ ನಮ್ಮ ನಡವಳಿಕೆ, ಮಾತು, ಭಾವನೆ, ಇವುಗಳ  ಸ್ವವಿಮರ್ಶೆಗಾಗಿ ಮಲಗುವಮುಂಚಿನ ಹತ್ತು ನಿಮಿಷ ಸಾಕು.      ಚಲನಚಿತ್ರದಂತೆ ನಮ್ಮ ಕಣ್ಣಮುಂದೆ ಇವುಗಳು ಪ್ರದರ್ಶನವಾದಾಗ ನಮ್ಮ ತಪ್ಪು ನಮಗೆ ಅರಿವಾಗುತ್ತದೆ.  ಸರಿ ದಾರಿಗಳು ನಮಗೆ ಗೋಚರಿಸುತ್ತದೆ.   ಇನ್ನೊಬ್ಬರನ್ನು ಟೀಕಿಸುವ ಮೊದಲು ನಾವು ಹೇಗೆ ಇರಬೇಕು ಎಂಬುದು ಗೊತ್ತಾಗುತ್ತದೆ.  ದಿನನಿತ್ಯದ  ಆ  ಹತ್ತು ನಿಮಿಷ  ನಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯುತ್ತದೆ.  ಇದಕ್ಕಾಗಿ ನಾವು ಬಿಡದ ಪ್ರಯತ್ನ ಮಾಡಬೇಕಾಗುತ್ತದೆ.  ಈ ಅಭ್ಯಾಸ  ಜೀವನವನ್ನು  ಸಕಾರಾತ್ಮಕವಾಗಿ ನೋಡುವ ಶಕ್ತಿ ನೀಡುತ್ತದೆ.

ನೀವೇನು ಹೇಳುತ್ತೀರಿ ?

ಹೆಚ್ ಏನ್ ಪ್ರಕಾಶ್ 
24 07 2012

July 23, 2012

ಸುಳ್ಳರ ಸಂತೆ!


ಸುಳ್ಳರ ಸಂತೆ! 

ಮೂವರು ಸುಳ್ಳರು ಒಂದು ಕಡೆ ಕೂತು ಗುಂಡು ಹಾಕುತ್ತಿದ್ದರು.  ಸ್ವಲ್ಪ ನಿಶೆ ಏರುತ್ತಿದ್ದಂತೆ ಒಬ್ಬ ಹೇಳಿದ " ನಾನು ಮಿಲಿಟರಿಯಲ್ಲಿದ್ದಾಗ  ನನ್ನನ್ನು ಕಾಡಿನ ಮಧ್ಯೆ ಇರುವ ಕ್ಯಾಂಪ್ಗೆ  ಹಾಕಿದ್ದರು.  ಅಲ್ಲಿ ಒಮ್ಮೆ ಒಂದು ಹುಲಿ ನನ್ನನ್ನು ನೋಡಿ ಅಟ್ಟಿಸಿಕೊಂಡು ಬಂತು.  ನಾನು ಹೆದರುತ್ತಿನಾ?  ಜೇಬಿಂದ ಪಿಸ್ತೂಲು ತೆಗೆದು ಒಂದೇ ಏಟಿಗೆ ಉಡಾಯಿಸಿಬಿಟ್ಟೆ. "  ಎಂದು ಕೊಚ್ಚಿಕೊಂಡ.

ಎರಡನೆಯವನು ತಾನೇನು ಕಮ್ಮಿ ಎಂದು " ಏನಾಶ್ಚರ್ಯ!  ನಂಗೂ ಇದೆ ರೀತಿ ಒಮ್ಮೆ ಆಯಿತು.  ಆದರೆ ನಾನು ಹುಲಿಯನ್ನು ಎದುರಿಸಿದ್ದೆ ಬೇರೆ ರೀತಿ."  

"ಅಂದರೆ'" ಎಂದು ಇನ್ನಿಬ್ಬರು ಒಮ್ಮೆಲೇ ಕೇಳಿದರು. 

" ಜೇಬಿಗೆ ಕೈ ಹಾಕ್ತೀನಿ, ಪಿಸ್ತೂಲು ಇಲ್ಲ. ಅದನ್ನು ಮರೆತು ಟೆಂಟ್ ನಲ್ಲೆ ಬಿಟ್ಟು ಬಂದಿದ್ದೆ.   ಹುಲಿ ಹತಿರ ಬರ್ತಾ ಇದೆ.  ತಕ್ಷಣ ನಾನು ಸೊಂಟಕ್ಕೆ ಕಟ್ಟಿದ್ದ ಬೆಲ್ಟ್ ಬಿಚ್ಚಿಕೊಂಡು ಕೊಟ್ಟೆ.....ಕೊಟ್ಟೆ.....ಕೊಟ್ಟೀ....ಹುಲಿ ಬಿದ್ದೆನೋ ಕೆಟ್ಟನೋ ಅಂತ ಓಡಿಹೋಯಿತು ಮಾರಾಯ! " 

ಮೂರನೆಯನು  "ಏನಂತ ಹೇಳಲಿ?  ನನಗೂ ಹೀಗೆ ಆಗಬೇಕಾ? "

 "ಏನು?  ನಿಂದು ಇದೆ ಕಥೇನಾ? " ಎಂದು ಇನ್ನಿಬ್ಬರು ಒಟ್ಟಿಗೆ ಕಿರುಚಿದರು.

" ತಾಳ್ಮೆ, ಯಾಕೆ ಹಾಗೆ ಕಿರುಚುತ್ತಿರಾ?  ಸ್ವಲ್ಪ ಕೇಳಿ.   ನನ್ನ ಎದುರು ಹುಲಿ ಬಂದು ನಿಂತಿದೆ. ಜೇಬಿಗೆ ಕೈ ಹಾಕಿದರೆ ಪಿಸ್ತೂಲು ಇಲ್ಲ.  ಸೊಂಟಕ್ಕೆ ಕೈ ಹಾದರೆ ಬೆಲ್ಟ್ ಕೂಡ ಇಲ್ಲ " 

" ಮತ್ತೇನು ಮಾಡಿದೆ ಮಾರಾಯ? " ಎಂದು ಆತುರದಲ್ಲಿ ಕೇಳಿದ ಒಬ್ಬ.

" ಮತ್ತೇನು ಮಾಡೋದು?  ಹಿಪ್ ಪಾಕೆಟ್ಟಿಗೆ ಕೈ ಹಾಕಿ ಅಲ್ಲಿಂದ ರೈಫೆಲ್  ಲೈಸೆನ್ಸ್ ತೋರಿಸಿದೆ ಮಾರಾಯ , ಆ ಹುಲಿ ಸತ್ತೆನೋ, ಕೆಟ್ಟೆನೋ ಎಂದು ಪರಾರಿ .   ಈಗಲೂ ನನಗೆ ಆಶ್ಚರ್ಯ ಆ ಹುಲಿ ಎಲ್ಲಿಗೆ ಹೋಯ್ತು ಅಂತ." ಎಂದು ಮತ್ತೊಂದು  ಪೆಗ್ ಏರಿಸಿದ. 

July 22, 2012

ಅನರ್ಘ್ಯ ರತ್ನಗಳು

ಅನರ್ಘ್ಯ ರತ್ನಗಳು

ಸೂಫಿ ಸಾಧಕರಲ್ಲಿ ಹಲವಾರು ಮಹಿಳೆರದೂ   ಪಾತ್ರವಿದೆ.  ಅವರಲ್ಲಿ ಆರನೇ ಶತಮಾನದಲ್ಲಿ ಇದ್ದ ರಬಿಯಾ ಒಬ್ಬ ಮಹಾನ್ ಸಾಧಕಿ.  ಆಕೆಗೆ ಭಗವಂತನಲ್ಲಿ ಅಪಾರವಾದ ನಂಬುಗೆ ಮತ್ತು ಶರಣಾಗತಿ.  ಈಕೆಯ ಜೀವನದಲ್ಲಿ ನಡೆದ ಒಂದು ಘಟನೆ ಇವಳ ಸಂಪೂರ್ಣ  ಶರಣಾಗತಿಯನ್ನು ಸಾದರ ಪಡಿಸುತ್ತದೆ.
  
ತನಗೆ ಇದ್ದ ಪ್ರಾಯದ ಅವಳಿ  ಗಂಡು ಮಕ್ಕಳು ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲಿನ ಹೊಡೆತಕ್ಕೆ ಸಿಕ್ಕಿ ಅಸು ನೀಗುತ್ತಾರೆ.   ಇವರ ಪಾರ್ಥಿವ ಶರೀರವನ್ನು ಮನೆಗೆ ತಂದ ಸುತ್ತಮುತ್ತಲಿನವರು ರಬಿಯಾಗೆ ಎಲ್ಲವನ್ನು ವಿವರಿಸುತ್ತಾರೆ. ತನಗಾದ ದುಃಖವನ್ನು ಕ್ಷಣಮಾತ್ರದಲ್ಲಿ ಸಾವರಿಸಿಕೊಂಡು, ಆ ಮಕ್ಕಳ ಪಾರ್ಥಿವ ಶರೀರವನ್ನು ಒಂದು ಕೋಣೆಯಲ್ಲಿ ಇರಿಸಿಕೊಂಡಳು.   ತನ್ನನ್ನು ಸಂತೈಸಲು ಬಂದವರಿಗೆ " ದಯಮಾಡಿ ನೀವೆಲ್ಲ ಈಗ ಇಲ್ಲಿಂದ ಹೋಗಿ.  ನನ್ನ ಯಜಮಾನರು ಬರುವ ಸಮಯ.  ಅವರಿಗೆ ಒಮ್ಮೆಲೇ ಈ ಆಘಾತವನ್ನು ತಡೆದುಕೊಳ್ಳುವ ಶಕ್ತಿ ಇಲ್ಲ.  ಅವರನ್ನು ಸಂತೈಸಿ ನಂತರ   ಹೇಳುತ್ತೇನೆ " ಎಂದು ಎಲ್ಲರನ್ನು ಬೀಳ್ಕೊಟ್ಟಳು.

ಸ್ವಲ್ಪ ಸಮಯದಲ್ಲೇ ಬಂದ ಗಂಡನಿಗೆ ಎಂದಿನಂತೆ ಉಣ್ಣಲು ಬಡಿಸಿ, ನಂತರದಲ್ಲಿ ನಿಧಾನವಾಗಿ ಮಾತಿಗೆ ಎಳೆಯುತ್ತ  " ನಾನು ನಿಮ್ಮಲ್ಲಿ ಒಂದು ವಿಚಾರವನ್ನು ಹಲವಾರು ವರ್ಷಗಳಿಂದ ಹೇಳದೆ ರಹಸ್ಯವಾಗಿ ಇಟ್ಟಿರುವೆ. ಇದಕ್ಕಾಗಿ ನೀವು ನನ್ನನ್ನು ಕ್ಷಮಿಸಬೇಕು.  ಇಂದು ಆ ವಿಚಾರವನ್ನು ಹೇಳಲೇ ಬೇಕಾದ ಸಮಯ ಬಂದಿದೆ. " ಎಂದು ಪೀಟಿಕೆ ಹಾಕಿದಳು.  ರಬಿಯಾಲನ್ನು  ಅಪಾರ ಗೌರವದಿಂದ ನೋಡುತ್ತಿದ್ದ  ಗಂಡ ಕಾತರದಿಂದ "ಅದೇನು?" ಎಂದು ಕೇಳಿದ.  " ಬಹಳ ವರ್ಷಗಳ ಹಿಂದೆ ನಮ್ಮ ಮನೆಗೆ ಬಂದ ಒಬ್ಬ ಸಾಧು ಪುರುಷರು ನನ್ನಲ್ಲಿ ಎರಡು ಅನರ್ಘ್ಯ ರತ್ನಗಳನ್ನು ಕೊಟ್ಟು, ಇದನ್ನು ಜೋಪಾನವಾಗಿ   ಕಾಪಾಡು, ನಾನು ಬೇಕಾದಾಗ ಬಂದು ವಾಪಾಸು ಪಡೆಯುತ್ತೇನೆ. ಎಂದು ಹೇಳಿ ಹೋದವರು ವರ್ಷಗಳು ಕಳೆದರು ಬರಲೇ ಇಲ್ಲ.  ನಾನು ಆ ರತ್ನಗಳನ್ನು ನನ್ನವೇ ಎಂದು ಅದರ ಮೇಲೆ ಮೋಹ ಬೆಳೆಸಿಕೊಂಡು ಬಿಟ್ಟೆ.  ಆದರೆ, ಅವರು ಈಗ ಬಂದು ಅವರ  ರತ್ನಗಳನ್ನು ವಾಪಾಸು ಕೇಳುತ್ತಿದ್ದಾರೆ.  ದಿಕ್ಕೇ ತೋಚದೆ ನಿಮ್ಮನ್ನು ಕೇಳಿ ಕೊಡುವೆನೆಂದು ಹೇಳಿ ಕಳುಹಿದೆ.  ಈ ಗ ಹೇಳಿ ನಾನೇನು ಮಾಡಲಿ? "  ಎಂದು ಖಿನ್ನಳಾಗಿ ಹೇಳಿದಳು.   ಸಾವಕಾಶವಾಗಿ ಎಲ್ಲವನ್ನು ಕೇಳಿದ ಗಂಡ " ರಬಿಯ, ನಿನಗೆ ಹೇಳುವುದೇನಿದೆ?  ಪರರ ವಸ್ತುವನ್ನು ಎಂದೂ ನೀನು ಇಟ್ಟುಕೊಂಡವಳಲ್ಲ.  ಈಗ ಯಾಕೆ ಆ ಚಿಂತೆ? ಅವರ ರತ್ನಗಳನ್ನು ಅವರಿಗೆ ವಾಪಾಸು ಕೊಟ್ಟುಬಿಡು." ಎಂದು ಸ್ಪಷ್ಟವಾಗಿ ಹೇಳಿದ. 

ಈ ಮಾತು ಕೇಳಿದ ನಂತರ ರಬಿಯ ತನ್ನ ಗಂಡನ ಕೈ ಹಿಡಿದುಕೊಂಡು  ಮಕ್ಕಳ ಶವ ಇರಿಸಿದ್ದ ಕೋಣೆಗೆ ಕರೆದೊಯ್ದಳು.  ಮಕ್ಕಳ ಶವ ನೋಡಿದ ಗಂಡ ಪ್ರಜ್ಞೆ ತಪ್ಪಿದ.   ಸಾವರಿಸಿಕೊಂಡ ನಂತರ, ರಬಿಯ ಸಮಾಧಾನದಿಂದ ಹೇಳಿದಳು, " ಇವೆ, ಆ ಅನರ್ಘ್ಯ ರತ್ನಗಳು.  ಭಗವಂತ ನಮ್ಮಲಿ ಜೋಪಾನವಾಗಿ ಇಡಬೇಕೆಂದು ಹೇಳಿ ಕಳುಹಿಸಿದ್ದ.  ಇಂದು ಅವನು ವಾಪಾಸು ಕೇಳಿದ. ಆತನ ರತ್ನಗಳನ್ನು ಇಲ್ಲಿಯವರೆಗೆ ಜೋಪಾನ ಮಾಡಿದ್ದೇವೆ .  ಈಗ ಕೊಡಬೇಕಲ್ಲವೇ?  ಬನ್ನಿ ಅವನ ರತ್ನಗಳನ್ನು ಸಂತೋಷದಿಂದ ಹಿಂತಿರುಗಿಸೋಣ."  ಎಂದು ಇಬ್ಬರು ಸೇರಿ ಶವ ಸಂಸ್ಕಾರ ನೆರೆವೇರಿಸಿದರು.

ರಬಿಯಾಲ ಜೀವನದಲ್ಲಿ ಇದೊಂದು ಬಹು ದೊಡ್ಡ ಪರೀಕ್ಷೆಯಾಗಿತ್ತು.  ಆ ಸಮಯದಲ್ಲೂ ತನ್ನ ಚಿತ್ತವನ್ನು ಕಳೆದುಕೊಳ್ಳದೆ ಸಮಚಿತ್ತದಿಂದ ಸಂಪೂರ್ಣವಾಗಿ ಭಗವಂತನಲ್ಲಿ ಶರಣಾಗತಿ ಹೊಂದಿದಳು. ಇವಳ ಜೀವನದ  ಆದರ್ಶಗಳು ಇಂದಿಗೂ ಜನಮಾನಸದಲ್ಲಿ   ಚಿರಸ್ಥಾಯಿಯಾಗಿ ಉಳಿದುಕೊಂಡಿದೆ.

ಹೆಚ್ ಏನ್ ಪ್ರಕಾಶ್ 
22 07 2012

ಅವರ ಚಿಂತೆ ಅವರಿಗೆ ಗೊತ್ತು.


ಅವರ ಚಿಂತೆ ಅವರಿಗೆ ಗೊತ್ತು.

ಜಾರ್ಜ್ ಬರ್ನಾರ್ಡ್ ಷಾ ಒಮ್ಮೆ ಲಂಡನ್ನಿಂದ ರೈಲಿನಲ್ಲಿ ಪ್ರಯಾಣ ಮಾಡುತ್ತಾ ಇದ್ದರಂತೆ.  ಟಿಕೆಟ್ ಕಲೆಕ್ಟೆರ್ ಬಂದು ಎದುರು ನಿಂತಾಗ ಷಾ ರವರು ತಮ್ಮ ಕೋಟಿನ   ಜೇಬು, ಪಾಂಟಿನ ಜೇಬು ಎಲ್ಲ ಕಡೆ ತಡಕಾಡ ತೊಡಗಿದರು.  ಎಲ್ಲಿ ನೋಡಿದರು ಟಿಕೇಟು ಸಿಗಲಿಲ್ಲ. ಕೊನೆಗೆ ತಮ್ಮ ಟ್ರಂಕನ್ನು ತೆಗೆದು ಬಟ್ಟೆ ಎಲ್ಲವನ್ನು ಹೊರಗೆಳೆದು ತಡಕಾಡ ತೊಡಗಿದರು.  ಆದರೆ ಟಿಕೆಟ್ ಮಾತ್ರ ಸಿಗಲೇ ಇಲ್ಲ.

ಇದನ್ನೆಲ್ಲಾ ಗಮನಿಸಿದ ಟಿಕೆಟ್ ಕಲೆಕ್ಟೆರ್ " ಸಾರ್, ನೀವು ಬರ್ನಾರ್ಡ್ ಷಾ ಎಂಬುದು ನನಗೆ ತಿಳಿದಿದೆ.  ನಿಮ್ಮಂತಹವರು ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದಿಲ್ಲವೆಂದು ನನಗೆ ಗೊತ್ತಿದೆ. ಅದಕ್ಕೆ ಯಾಕೆ ತಲೆ ಕೆಡಿಸಿ ಕೊಳ್ಳುತ್ತಿರಿ?   ಚಿಂತೆ ಮಾಡಬೇಡಿ."  ಎಂದು ಸಮಾಧಾನ ಹೇಳಿದ.

 ಷಾ ರವರು ಟಿಕೆಟ್ ಕಲೆಕ್ಟೆರ್ ಕಡೆ ತಿರುಗಿ " ಧನ್ಯವಾದಗಳು, ಆದ್ರೆ, ನನ್ನ ಚಿಂತೆ ಈಗ ಟಿಕೆಟ್ ಸಿಗದಿದ್ದರೆ ನಾನು ಎಲ್ಲಿ ಇಳಿಯಬೇಕೆಂಬುದು  ಗೊತ್ತಾಗುವುದಿಲ್ಲವಲ್ಲ? " ಎಂದು ತಮ್ಮ ಚಿಂತೆ ತೋಡಿಕೊಂಡರಂತೆ.

ಅವರವರ ಚಿಂತೆ ಅವರಿಗೆ ತಾನೇ ತಿಳಿಯುವುದು.

ಪ್ರಕಾಶ್

July 20, 2012

ಮಕ್ಕಳ ಕನಸು

ಮಕ್ಕಳ ಕನಸು

ಸಾಮಾನ್ಯವಾಗಿ ಎಲ್ಲಾ ತಂದೆತಾಯಿಯರು ತಮ್ಮ ಮಕ್ಕಳ ಬಗ್ಗೆ ಅಪಾರವಾದ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ತಮ್ಮ ಮಕ್ಕಳು ಹೀಗಾಗಬೇಕು,  ಹಾಗಾಗಬೇಕು ಎಂಬ ಹಲವಾರು ಆಸೆ ಆಕಾಂಕ್ಷೆಗಳನ್ನು ಇರಿಸಿಕೊಂಡು ತಮ್ಮ ಮಕ್ಕಳನ್ನು ಆ ದಿಸೆಯಲ್ಲಿ ನಡೆಸಲು ಶ್ರಮ ಹಾಕುತ್ತಾರೆ.  ತಮ್ಮ ಮಕ್ಕಳು  ತಮಗಿಂತ ಹೆಚ್ಚು ಪುರೋಭಿವೃದ್ಧಿಗೆ  ಬರಬೇಕೆಂದು ತಮ್ಮ ಅಮೂಲ್ಯವಾದ ಸಮಯವನ್ನು ತೊಡಗಿಸಿಕೊಂಡು ಮಕ್ಕಳಿಗೆ ಶಿಕ್ಷಣವನ್ನು ಹಲವಾರು ಪ್ರಾಕಾರಗಳಲ್ಲಿ ಕೊಡಿಸುತ್ತಾರೆ, ಕೊಡುತ್ತಾರೆ. ತಮ್ಮ ಮಕ್ಕಳ ಸ್ವಲ್ಪ ಯಶಸ್ಸು ಕೂಡಾ,  ಅಪ್ಪ ಅಮ್ಮರಿಗೆ ಅಪಾರ ಸುಖವನ್ನು ನೀಡುತ್ತದೆ.  ಆದರೆ, ಕೆಲವೊಮ್ಮೆ ಮಕ್ಕಳ ಮನಸ್ಸು ಬೇರೆಡೆಗೆ ಹೋದಾಗ, ಅಥವಾ ತಂದೆತಾಯಿಯರ ಆಸೆ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾದಾಗ, ಅಥವಾ ತಮ್ಮ ಕನಸುಗಳು ವಿಭಿನ್ನವಾದಾಗ, ಇನ್ನಿತರ ಯಾವುದೋ ಕಾರಣದಿಂದ ನಿರೀಕ್ಷಿತ ಫಲಿತಾಂಶ ಸಿಗದಾದಾಗ ಮಕ್ಕಳ ಮೇಲೆ ಅಪ್ಪ ಅಮ್ಮರ ನಿರಾಸೆ ಹೆಚ್ಚಾಗುತ್ತದೆ.  ಕೆಲವೊಮ್ಮೆ ಅಸಡ್ಡೆ, ತಿರಸ್ಕಾರ ಮತ್ತು ಸಿಟ್ಟು ಇವುಗಳು ಮಕ್ಕಳ ಮೇಲೆ ದುಬಾರಿಯಾದ ಪರಿಣಾಮ ಬೀರುತ್ತವೆ.     ಇಂತಹ ಜಟಿಲವಾದ  ಸಮಸ್ಯೆಗಳು ಬರುವ ಮುಂಚೆ ಮಕ್ಕಳ ಮನಸನ್ನು ಅರ್ಥಮಾಡಿಕೊಳ್ಳುವುದು ಅವಶ್ಯಕ.  ಮಕ್ಕಳ ಕನಸು, ವಿಚಾರ ಮತ್ತು ಆಸೆಗಳು ತೀರಾ ಬಾಲಿಶವಾಗಿದೆಯೆಂದು ನಮಗೆ ಅನ್ನಿಸಬಹುದು,  ಆದರೆ,ಆ ಚಿಂತನೆಯಲ್ಲೂ  ಸರಿಯಾದ ದಿಕ್ಕು ಇರುತ್ತೆ  ಎಂಬುದನ್ನು   ತಂದೆ ತಾಯಿಯರು ಮರೆಯಬಾರದು.

ನರೇಂದ್ರ ಚಿಕ್ಕ ಹುಡುಗನಾಗಿದ್ದಾಗ ತನ್ನ ತಂದೆ ತಾಯಿಯ ಜೊತೆ ಎರಡು ಕುದುರೆಗಳ ಸಾರೋಟಿನ ಪ್ರಯಾಣವನ್ನು ಬಹಳ ಇಷ್ಟ ಪಡುತ್ತಿದ್ದ.  ಕಲ್ಕೊತ್ತ ನಗರ ಸಂಚಾರ ಮಾಡುವಾಗ ಕುದುರೆಯ ಕಾಲಿನ ಟಕ್ ಟಕ್ ಸದ್ದು, ಕಟ್ಟಿದ ಗೆಜ್ಜೆಯ ನಿನಾದ, ತಂಪಾದ ಗಾಳಿ ಇವೆಲ್ಲವೂ ನರೆಂದ್ರನಿಗೆ ಬಹಳ ಆಪ್ಯಾಯಮಾನವಾಗಿತ್ತು.  ಇಂತಹ ನಗರ ಪ್ರದಕ್ಷಿಣೆ ಮುಗಿಸಿ ಬಂದ ನರೇಂದ್ರನ ತಂದೆ " ನೀನು ದೊಡ್ಡವನಾದ ಮೇಲೆ ಏನು ಆಗಲು ಬಯಸುತ್ತೀ? " ಎಂದು ಪ್ರಶ್ನೆ ಹಾಕಿದರು.  ನರೇಂದ್ರ ಕ್ಷಣ ಮಾತ್ರವೂ ತಡಮಾಡದೆ " ನಾನು ಜೋಡಿ ಕುದರೆಯ ಸಾರೋಟಿನ ಸವಾರನಾಗುತ್ತೀನಿ " ಎಂದು ಉತ್ತರಿಸಿದ.  ಈ ಮಾತು ನರೇಂದ್ರನ ತಂದೆಗೆ ಅತ್ಯಂತ ಸಿಟ್ಟು ಮತ್ತು ನಿರಾಸೆ ಒಮ್ಮೆಲೇ ಆಯಿತು.  ಇದನ್ನು ಗಮನಿಸಿದ ತಾಯಿ ನರೇಂದ್ರನ ಕೈ ಹಿಡಿದುಕೊಂಡು ನೇರಾ ದೇವರಮನೆಗೆ ಕರೆದುಕೊಂಡು ಹೋಗಿ ದೇವರಮುಂದೆ ನಿಲ್ಲಿಸಿ ಅಲ್ಲಿ ಇರಿಸಲಾಗಿದ್ದ ಶ್ರೀ ಕೃಷ್ಣನ ಭಗವದ್ಗೀತಾ ಉಪದೇಶದ ಫೋಟೋ ತೋರಿಸುತ್ತ " ಈ ರೀತಿಯ ಸವಾರನಾಗಲು ಬಯಸಿರುವೆ ಅಲ್ಲವೇ? " ಎಂದು ಕೇಳಿದರು.  ನರೇಂದ್ರನ ಬಾಯಿಂದ ಮಾತು ಬರಲಿಲ್ಲ.  " ನೀನು ಜೋಡಿ ಕುದುರೆಗಳ ಸಾರೋಟಿನ ಸವಾರನೇ ಆಗುವುದಾದರೆ ಶ್ರೀಕೃಷ್ಣನ ತರಹ ಜಗತ್ತಿಗೆ ಬೆಳಕು ಕೊಡುವ ಸವಾರನಾಗು." ಎಂದು ಹುರಿದುಂಬಿಸಿದರು.  ಮುಂದೆ ಆ ಪುಟ್ಟ ನರೇಂದ್ರನೆ,   ಸ್ವಾಮಿ   ವಿವೇಕಾನಂದನಾಗಿ ಜಗತ್ತಿಗೆ ಬೆಳಕು ತೋರಿದ ಸವಾರನಷ್ಟೇ ಅಲ್ಲ ಸರದಾರನು   ಆದರು.

ಮಕ್ಕಳ ಮನಸಿನಲ್ಲಿ ಇರುವ ಆಸೆಗಳು ಅಸ್ಪಷ್ಟವಾಗಿರಬಹುದು, ಕನಸುಗಳು ಬಾಲಿಶ ಎನಿಸಬಹುದು, ವಿಚಾರಗಳು ಅಸಂಬದ್ಧ ಎನಿಸಬಹುದು.  ಆದರೆ ಸ್ವಲ್ಪ ತಾಳ್ಮೆ ವಹಿಸಿ, ಮಕ್ಕಳ ಕನಸಿಗೆ, ಆಸೆಗಳಿಗೆ, ವಿಚಾರಗಳಿಗೆ ಹೇಗೆ ನೀರೆರೆದು ಪೋಷಿಸಿ ಬೆಳೆಸೆಬಹುದು ಎಂಬುದರ ಬಗ್ಗೆ ಚಿಂತಿಸಿದರೆ ಸಾಕು ಮಕ್ಕಳು ಹೆಚ್ಚು ಸಬಲರಾಗುತ್ತಾರೆ.  ತಮ್ಮ  ಮಕ್ಕಳು ಪ್ರತಿಭಾಶಾಲಿಗಳು ಆಗಬೇಕೆಂಬುದು ಪ್ರತಿ ತಂದೆತಾಯರ ಉದ್ದೇಶವು ಅದೇ ತಾನೇ!  ಇದಕ್ಕೆ ನೀವೇನು ಹೇಳುವಿರಿ?

ಹೆಚ್ ಏನ್ ಪ್ರಕಾಶ್
20 07 2012 

July 16, 2012



 ಓದುವ ವಿಧ್ಯಾರ್ಥಿಗಳಿಗೆ ಸಹಾಯ   ಮಾಡಿ, ಅದು ಅವರಿಗೆ ಜೀವನ ಕೊಡುತ್ತೆ


ನಾನು S S L C  ಓದುತ್ತಿದ್ದ ಸಮಯದಲ್ಲಿ ನಮ್ಮ ಮನೆಗೆ ಒಬ್ಬ ವಿಧ್ಯಾರ್ಥಿ ವಾರಾನ್ನಕಾಗಿ ಬರುತ್ತಿದ್ದ.. ವಾರಾನ್ನ ಎಂದರೆ ವಾರದ ಒಂದು ದಿನ, ಒಂದು ಹೊತ್ತಿನ ಅಥವಾ ಎರಡು ಹೊತ್ತಿನ ಊಟವನ್ನು ಮಾಡಿಕೊಂಡು ಹೋಗುವುದು. ಆ ದಿನಗಳಲ್ಲಿ ಹಳ್ಳಿಯಿಂದ   ಬರುವ ಬಡ ಕುಟುಂಬದ ವಿಧ್ಯಾರ್ಥಿಗಳಿಗೆ ವಾಸಮಾಡಲು ಅನಾಥಾಲಯಗಳಲ್ಲಿ ಜಾಗ ಸಿಗುತ್ತಿತ್ತು. ಆದರೆ, ಊಟಕ್ಕೆ ಈ ರೀತಿಯಾಗಿ ತಮ್ಮದೇ ವರ್ಗದ ಮನೆಗಳಲ್ಲಿ ಉಚಿತವಾಗಿ ವಾರದ ಒಂದು ದಿನ ಅಥವಾ ಅರ್ಧ ದಿನದ ಊಟದ ವ್ಯವಸ್ಥೆ ಕೇಳಿಕೊಂಡು ಬರುತ್ತಿದ್ದರು. ಅಂದಿನ ದಿನಗಳಲ್ಲಿ ಹೋಟೆಲ್ಲಿಗೆ ಅಥವಾ ಮೆಸ್ಸಿಗೆ ಹೋಗುವಷ್ಟು ಅನುಕೂಲ ಹೆಚ್ಚಿನವರಲ್ಲಿ ಇರುತ್ತಿರಲಿಲ್ಲ.  ಹೀಗೆ ಕೇಳಿಕೊಂಡು ಬಂದ ವಿಧ್ಯಾರ್ಥಿಗಳ ಕುಲ ಗೋತ್ರ ವಿಚಾರಿಸಿಕೊಂಡು ಯಥಾನುಶಕ್ತಿ ವಿದ್ಯಾರ್ಥಿಗಳಿಗೆ ವಾರನ್ನಕ್ಕೆ ಒಪ್ಪಿಗೆ ನೀಡುತ್ತಿದ್ದರು.  ಆ ವಿಧ್ಯಾರ್ಥಿ ನಿಗದಿತ ವಾರದ ದಿನದಂದು ಬಂದು ಊಟ, ತಿಂಡಿ ಮುಗಿಸಿ ಹೋಗುತ್ತಿದ್ದ.  ಪ್ರತಿ ವಿಧ್ಯಾರ್ಥಿ ಹೀಗೆ ಹತ್ತಾರು ಮನೆಗಳ ವ್ಯವಸ್ಥೆ ಮಾಡಿಕೊಂಡು ತಮ್ಮ ವಿಧ್ಯಾಭ್ಯಾಸ ಮುಗಿಸುತ್ತಿದ್ದರು.

ನಮ್ಮ ಮನೆಯಲ್ಲಿ ಕೂಡ ಮೂವರು ವಿಧ್ಯಾರ್ಥಿಗಳಿಗೆ ಈ ರೀತಿಯ ವಾರಾನ್ನದ ವ್ಯವಸ್ಥೆ ಇತ್ತು. ನಮ್ಮದು ಬಡ ಕುಟುಂಬವೇ.  ನಮ್ಮ ಮನೆಯಲ್ಲೂ ಆರು ಜನ ಮಕ್ಕಳೊಟ್ಟಿಗೆ ನಮ್ಮ ಅಪ್ಪ ಅಮ್ಮ ಸೇರಿ ಎಂಟು ಮಂದಿಯ ಜೊತೆಗೆ ವಾರಾನ್ನದ ವಿಧ್ಯಾರ್ಥಿಯ   ಊಟವು    ಸೇರುತ್ತಿತ್ತು .  ಇಷ್ಟು  ಜನಗಳ   ತುತ್ತಿನ  ಚೀಲ  ತುಂಬುವ   ಹೊಣೆ  ನನ್ನ  ತಂದೆಯ  ಏಕಮಾತ್ರ  ಆದಾಯದಿಂದ  ಸಾಗುತಿತ್ತು.   ಒಮ್ಮೆ ಕೂಡ ನನ್ನ ಅಪ್ಪ ತನಗಾಗುತ್ತಿದ್ದ ಹಣಕಾಸಿನ ಮುಗ್ಗಟ್ಟಿನ ಪರಿಸ್ಥಿಯನ್ನು  ನಮ್ಮೆದುರಿಗೆ ಎಂದಿಗೂ ಹೇಳಿಕೊಂಡವರಲ್ಲ. 

ಒಂದು ದಿನ ರಾತ್ರಿ      ಎಲ್ಲ ಎಂಟು ಜನರು ಊಟಕ್ಕೆ ಕೂತಿದ್ದೆವು.  ನನ್ನ ಅಮ್ಮ ಎಲ್ಲರಿಗೂ ಅನ್ನ ಬಡಿಸಲು ಪ್ರಾರಂಭ ಮಾಡಿದರು.  ಅಂದು ಬೆಳಿಗ್ಗೆ ಮಾಡಿ ಉಳಿದ ಅನ್ನವನ್ನು ಸಂಜೆಗೆ ಬಡಿಸಲು ಇಟ್ಟಿದ್ದರು. ಬಿಸಿಬಿಸಿ  ಅನ್ನ ಬಡಿಸುವ  ಬದಲು ಬೆಳಗಿನ ತಂಗಳು ಅನ್ನವನ್ನು ವಾರಾನ್ನದ ಹುಡುಗನ  ಕಡೆಯಿಂದ ಬಡಿಸಲು ಅಮ್ಮ ಪ್ರಾರಂಭಿಸಿದರು.  ಅಮ್ಮನ ಉದ್ದೇಶ ತಣ್ಣನೆಯ ಅನ್ನ ಖಾಲಿಯಾದೊಡನೆ ಬಿಸಿ ಅನ್ನ ಬಡಿಸುವ ಯೋಚನೆ. ಆ ಹುಡುಗ ಮೊದಲಲ್ಲೇ ಕೂತ ಕಾರಣ ಆ ಅನ್ನ ಅವನ ತಟ್ಟೆಗೆ ಅಮ್ಮ ಬಡಿಸಿದರು. ಆಚೆ ಬದಿಯಲ್ಲಿ ಕೂತ ನನ್ನ ಅಪ್ಪ "ಆ ಹುಡುಗನಿಗೆ ಬಿಸಿ ಅನ್ನ ಬಡಿಸು, ಅವನಿಗೆ ತಂಗಳು ಅನ್ನ ಬೇಡ " ಎಂದರು   .  ತಕ್ಷಣ    ಆತನಿಗೆ    ಬಡಿಸಿದ    ತಂಗಳು ಅನ್ನ ತೆಗೆದು    ಬಿಸಿ ಅನ್ನ ಬಡಿಸಿದರು ಅಮ್ಮ.  ಅಮ್ಮನಿಗೆ  ಕೊಂಚ  ಬೇಸರ  ಹಾಗೂ  ಇರಿಸುಮುರುಸು ಆಯಿತು .   ಅವರ  ಮುಖದಲ್ಲಿ  ಆದ   ಬದಲಾವಣೆ  ಇತರರಿಗೆ     ಗೊತ್ತಾಗುತ್ತಿತು  .  ಇದನ್ನು   ಆ ಹುಡುಗನು   ಗಮನಿಸಿದ   ಆತನಿಗೂ   ತುಂಬಾ            ಕಷ್ಟ    ಎನಿಸಿತು   .  ತಕ್ಷಣ  ಆ ಹುಡುಗ "ಇಲ್ಲ,.....  ನನಗೂ ಬೆಳಗಿನ ಅನ್ನವನ್ನೇ  ಹಾಕಿ , ಬಿಸಿ ಅನ್ನ ಬೇಡ" ಎಂದು ಬೇಡಿಕೊಂಡ .   ಪಕ್ಕದಲ್ಲಿ  ಇದ್ದ  ನಮ್ಮೆಲ್ಲರಿಗೂ  ಅಪ್ಪನ  ಮಾತು  ಆ ಸಮಯದಲ್ಲಿ ಸರಿ  ಅನ್ನಿಸಲಿಲ್ಲ .   ಇದನ್ನೆಲ್ಲಾ  ಸೂಕ್ಹ್ಮವಾಗಿ  ಗಮನಿಸಿದ  ನನ್ನ ತಂದೆಯವರು,          " ನೀನು       ಬಿಸಿ ಅನ್ನವನ್ನೇ   ಊಟಮಾಡು .  ಪರೀಕ್ಷೆ   ಸಮಯ  . ನೀನು  ಹುಷಾರು  ತಪ್ಪಿ  ಮಲಗಿದರೆ  ನೋಡಲು   ಯಾರಿದ್ದಾರೆ   .  ಈ ಮಕ್ಕಳಿಗೆ   ನಾನಿದ್ದೇನೆ.   ನಿಂಗೆ  ಇಲ್ಲಿ  ಯಾರಿದ್ದಾರಪ್ಪ ?  ಊಟ ಮಾಡು , ಚನ್ನಾಗಿ  ಓದು "  ಎಂದು ಹೇಳಿದರು.  ಈ ಮಾತು  ಕೇಳಿದ  ಅಮ್ಮನ  ಮುಖದಲ್ಲಿ     ಒಂದು ರೀತಿಯ ಸಮಾಧಾನ  ಕಂಡಿತು ಎಲ್ಲರು  ಊಟ ಮುಗಿಸಿ ಎದ್ದರು  . 

ನಂತರದಲ್ಲಿ ನಮ್ಮನ್ನೆಲ್ಲ ಕೂರಿಸಿಕೊಂಡು ವಾರಾನ್ನಕ್ಕೆ ಬರುವ ಹುಡುಗರ ಕಷ್ಟಗಳು ಎಷ್ಟಿರುತ್ತದೆ? ಎಂಬುದನ್ನು ತಮ್ಮ ಜೀವನದಲ್ಲಿ ಆದ ಘಟನೆಗಳನ್ನು ವಿಸ್ತಾರವಾಗಿ ಹೇಳಿದರು. ನಮ್ಮೆಲ್ಲರಿಗೂ ಆಗ ಅಪ್ಪನ ಬಗ್ಗೆ ಹೆಮ್ಮೆ ಎನಿಸಿತು. ಈ ಘಟನೆ ಚಿಕ್ಕದಾಗಿ ಕಾಣಬಹುದು, ಆದರೆ ಇದು ನಮಗೆ ಹೇಳಿದ ಪಾಠ ಮಾತ್ರ ತುಂಬಾ ದೊಡ್ಡದಾಗಿತ್ತು. ಯಾವ ಬೀಜದ ಶಕ್ತಿ ಹೇಗೆ ಇರುತ್ತೆ ಎಂಬುದನ್ನು ಅರಿಯಲು ಕಾಯಬೇಕಾಗುತ್ತದೆ. ಒಮ್ಮೆಲೇ ತೀರ್ಮಾನಿಸಲು ಸಾಧ್ಯವಾಗದು.  ನಮ್ಮ ಮನೆಯಲ್ಲಿ ವಾರಾನ್ನ ಮಾಡಿದ ಒಬ್ಬ ವಿದ್ಯಾರ್ಥಿ ಉನ್ನತ ಹುದ್ದೆಗೆ ಸೇರಿಕೊಂಡಾಗ ನನ್ನ ಅಪ್ಪನ ಆಶೀರ್ವಾದ ಪಡೆದು ಹೋಗಲು ಬಂದಿದ್ದರು. ಆತ " ನಿಮ್ಮ ಉಪಕಾರ ಮರೆಯಲಾರೆ, ನಿಮ್ಮ ಋಣ ಹೇಗೆ ತೀರಿಸಲಿ? " ಎಂದು ಕೇಳಿದಾಗ ನನ್ನ ಅಪ್ಪ ಕೊಟ್ಟ ಉತ್ತರ " ನಿನ್ನಂತೆ ಇರಬಹುದಾದ ವಿದ್ಯಾರ್ಥಿಗೆ ಸರಿಯಾದ ಸಮಯದಲ್ಲಿ ಸಹಾಯ ಮಾಡು, ನಿನ್ನ ಋಣ ತೀರುತ್ತೆ " ಎಂದು ಆಶೀರ್ವಾದ ಮಾಡಿ ಕಳುಹಿಸಿ ಕೊಟ್ಟರು.

ನನ್ನ ಅಪ್ಪ  ನಮಗೂ ಪದೇ ಪದೇ ಹೇಳುತ್ತಿದ್ದರು. " ಓದುವ ವಿಧ್ಯಾರ್ಥಿಗಳಿಗೆ ಸಹಾಯ    ಮಾಡಿ, ಅದು ಅವರಿಗೆ ಜೀವನ ಕೊಡುತ್ತೆ  "  ಈ ಮಾತು ನಮಗೆ ಯಾವಾಗಲು ಜ್ಞಾಪಕಕ್ಕೆ ಬರುತ್ತದೆ.  ಪುಣ್ಯವಶಾತ್ ನಾನೂ ಕೂಡ ಒಂದು ವಿದ್ಯಾ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಭಗವಂತ ಕರುಣಿಸಿದ ಕಾರಣ ಹಲವಾರು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಅವಕಾಶ  ನನ್ನದಾಗಿದೆ. ನನ್ನ ತಂದೆಯವರು  ನನಗೆ ವಿದ್ಯಾಸಂಸ್ಥೆಯಲ್ಲಿ ಕೆಲಸ ಸಿಕ್ಕಿದ್ದು ಕೇಳಿಯೇ ತುಂಬಾ ಖುಷಿ ಪಟ್ಟು, "ಈ ಸದವಕಾಶವನ್ನು ಸರಿಯಾಗಿ ಬಳಸಿಕೋ" ಎಂದು ಹಲವಾರು ಬಾರಿ ನನಗೆ ಹೇಳಿದ್ದುಂಟು.

ಹೆಚ್ ಏನ್ ಪ್ರಕಾಶ್ 
16 07 2012

"What You Do All Day at Home?"

July 10, 2012

ನನ್ನ ಅಪ್ಪ ಮತ್ತು ಪುಸ್ತಕ



ನನ್ನ ಅಪ್ಪ ಮತ್ತು ಪುಸ್ತಕ  



" ಅಣ್ಣಾ, ಈ ತಿಂಗಳ ಸಂಬಳ ನನಗೆ ರೂ.112 .50  ಬಂದಿದೆ. ಅದನ್ನು ನಿಮ್ಮ ಕೈಯಲ್ಲಿಟ್ಟು ಆಶೀರ್ವಾದ ಪಡೆಯೋಣ ಅಂತ ಬಂದೆ." ಎಂದು ನನ್ನ ಮೊದಲ ತಿಂಗಳ ಸಂಬಳವನ್ನು ನನ್ನ ತಂದೆ ತಾಯಿಯ ಕೈಯಲ್ಲಿಟ್ಟು  ಅವರ ಪಾದಗಳಿಗೆ ಎರಗಿದೆ. ತುಂಬು ಸಂತೋಷದಿಂದ ತಂದೆತಾಯಿ ಇಬ್ಬರು ಬೆನ್ನುಸವರಿದರು.  " ಈ ಹಣದಲ್ಲಿ ಏನು ಮಾಡಬೇಕೆಂದು ಅಂದುಕೊಂಡಿರುವೆ?" ಎಂದು ಅಪ್ಪ ಕೇಳಿದರು.  ನಿಶ್ಚಯವಾಗಿ ನಾನು ಏನು ಅಂದುಕೊಂಡಿರಲಿಲ್ಲ. ನೇರ ಹೋಗಿ ಹಣವನ್ನು ಅಪ್ಪ ಅಮ್ಮನ ಕೈಲಿರಿಸಿ ಆಶೀರ್ವಾದ ಪಡೆಯುವುದು ಅಷ್ಟೇ ನನ್ನ ಮನಸಿನಲ್ಲಿ ಇದ್ದದ್ದು. ಇದನ್ನೇ ನೇರವಾಗಿ ಅಪ್ಪನಿಗೆ ಹೇಳಿದೆ. " ಅದು ಸರಿ.  ಈಗ ಆಶೀರ್ವಾದ ಸಿಕ್ಕಿತಲ್ಲ," ಎಂದು ಅಪ್ಪ ಮರು ಪ್ರಶ್ನೆ ಹಾಕಿದರು.ಏನೂ ಹೇಳಲು ತೋಚಲಿಲ್ಲ. ಅಮ್ಮ ನನ್ನ ಸಹಾಯಕ್ಕೆ ಬಂದರು " ಅದ್ಯಾಕೆ ಸುತ್ತಿಬಳಸಿ ಹೇಳುತ್ತಿರಿ?   ಅದೇನು ಮಾಡಬೇಕು?ಅದನ್ನ ಹೇಳಿ." ಎಂದು ನನ್ನ ಪಕ್ಷವಹಿಸಿ ಮಾತನಾಡಿದರು.  ನನ್ನನ್ನು ಹತ್ತಿರ ಕರೆದು ಕೂರಿಸಿಕೊಂಡು " ಈ ಹಣದಲ್ಲಿ ಯಾವುದಾದರು ಒಳ್ಳೆಯ ಪುಸ್ತಕ ತಂದು ಓದು. ಜೀವಮಾನದಲ್ಲಿ ನಿನ್ನ ಜೊತೆ ಸದಾ ಕಾಲ ಇರಬಹುದಾದ  ಪುಸ್ತಕ ತಂದು ಓದು.  ಪುಸ್ತಕವೇ ನಿನ್ನ ಒಳ್ಳೆಯ ಸ್ನೇಹಿತನಾಗಬೇಕು." ಎಂದರು. 

ನಾನು ಪುಸ್ತಕ ಓದುವ ಹವ್ಯಾಸ ನನಗೇನು ಅಷ್ಟು ಇರಲಿಲ್ಲ. ಜೊತೆಗೆ ಯಾವ ರೀತಿಯ ಪುಸ್ತಕಗಳನ್ನು ಓದಬೇಕೆಂಬ ತಿಳುವಳಿಕೆಯು ಇರಲಿಲ್ಲ.  1977 ನೆ ಮಾರ್ಚ್ ಮೊದಲನೇ ಭಾನುವಾರ ನಡೆದ ಈ ಮಾತು ನನಗೆ ಇನ್ನು ಸ್ಪಷ್ಟವಾಗಿ ನೆನಪಿದೆ.  ಏನೂ ಸರಿಯಾಗಿ ತಿಳಿಯದಿದ್ದರಿಂದ ನಾನು ಬೆಪ್ಪನ ಹಾಗೆ ಅಪ್ಪನ ಮುಖ ನೋಡುತ್ತಾ ಕುಳಿತೆ.  " ನೋಡು ಮಗು, ಪ್ರಪಂಚಜ್ಞಾನ ತಿಳಿಬೇಕು ಅಂದರೆ, ತುಂಬಾ ತಿರುಗಬೇಕು ಇಲ್ಲ ತುಂಬಾ ಪುಸ್ತಕ ಓದಬೇಕು.   ನಿನಗೆ ತುಂಬಾ ತಿರುಗಲು ಆಗದು, ಹಾಗಂತ ನೀನು ಸುಮ್ಮನೆ ಕೂರಬಾರದು. ಚನ್ನಾಗಿ ಓದಿ ಚನ್ನಾಗಿ ಪ್ರಪ್ರಂಚ ಜ್ಞಾನ ಸಂಪಾದನೆ ಮಾಡಬೇಕು. ಪುಸ್ತಕಗಳನ್ನು ಓದು. ಕೊಂಡು ಓದು, ಎರವಲು ಪಡೆದು ಓಡಬೇಡ.  ಯಾವಾಗಲು ನಿನ್ನ ಸಂಗಾತಿ ಪುಸ್ತಕವೇ ಆಗಿರಲಿ. ತಿಂಗಳಿಗೆ ಒಂದು ಪುಸ್ತಕ ಸಾಕು. ಅದನ್ನು ಓದಲಾಗಲಿಲ್ಲವೆಂದು ಪುಸ್ತಕ ಕೊಳ್ಳುವುದನ್ನು ಬಿಡಬೇಡ.  ಪುಸ್ತಕ ನಿನ್ನಲ್ಲಿ ಇದ್ದರೆ ಅದು ನಿನ್ನನ್ನು ಓದಲು ಸೆಳೆಯುತ್ತದೆ." ಎಂದು ಹೇಳಿದರು. ನನಗೆ ಅಪ್ಪನ ಮಾತು ಸರಿಯೆನಿಸಿತು. " ಹಾಗಾದರೆ ಈ ಹಣದಲ್ಲಿ ಯಾವ ಪುಸ್ತಕ ಕೊಂಡುಕೊಳ್ಳಲಿ? " ಎಂದು ಕೇಳಿದೆ. " ನಿನ್ನ ಮೊದಲನೇ ಸಂಪಾದನೆಯಲ್ಲಿ  complete works of Swami Vivekananda"  ಕೊಂಡು ಓದಲು ಪ್ರಾರಂಭಿಸು." ಎಂದು ಸಲಹೆ ಇತ್ತರು.

ಆ ದಿನವೇ ನಾನು ನನ್ನ ಅಣ್ಣನ ಜೊತೆ ಹೋಗಿ ಮೈಸೂರಿನ ರಾಮಕೃಷ್ಣ ಆಶ್ರಮದಿಂದ ಪುಸ್ತಕಗಳನ್ನು ತಂದೆ. ಎಲ್ಲರಿಗೂ ಸಂತೋಷವಾಯಿತು. ನನ್ನ ತಂದೆಗೆ ಹೆಚ್ಚು ಸಂತೋಷವಾಯಿತು. ಅಂದು ಪ್ರಾರಂಭವಾದ ನನ್ನ ಪುಸ್ತಕ ಕೊಳ್ಳುವ ಮತ್ತು ಓದುವ ಹವ್ಯಾಸ ಇಂದಿಗೂ ಜಾರಿಯಲ್ಲಿದೆ. ನನ್ನ ಬಳಿ ಈಗ ಒಂದು ಚಿಕ್ಕ ಗ್ರಂಥಾಲಯವಿದೆ. ಸುಮಾರು  ಸಾವಿರಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವಿದೆ. ನಾನು ಎಲ್ಲ ಪುಸ್ತಕಗಳನ್ನು ಕೊಂಡೇ   ಓದುವ ಅಭ್ಯಾಸ ಮಾಡಿಕೊಂಡಿದ್ದೇನೆ. ಅಂದು ನನ್ನ ತಂದೆ ನನಗೆ  ಹೇಳಿದ ಆ ಮಾತು  ನನ್ನ ಜೀವನದ ಗತಿಯನ್ನೇ ಬದಲಿಸಿತು. ನಾನು ಪ್ರತಿತಿಂಗಳು ಹೊಸ ಪುಸ್ತಕ ಕೊಂಡಾಗ ನನ್ನ ಅಪ್ಪನಲ್ಲಿ ಹೋಗಿ ತೋರಿಸುತ್ತಿದ್ದೆ.  ಅವರು ಕೆಲವೊಮ್ಮೆ ಪುಸ್ತಕ ಯಾವರೀತಿ ಆರಿಸಬೇಕೆಂದು ಸಲಹೆ ನೀಡಿ ತಿದ್ದುತ್ತಿದ್ದರು. ಅವರು ದೈವಾಧೀನರಾಗುವ ಹೊತ್ತಿಗೆ ನನ್ನ ಬಳಿ ೫೦ ಪುಸ್ತಕಗಳು ಇದ್ದವು. 

ಇಂದಿಗೆ ಅವರು ಇದ್ದಿದ್ದರೆ? ಎಂದು ಅನ್ನಿಸಿದಾಗಲೆಲ್ಲ ಅವರೆಲ್ಲಿ ಹೋಗಿದ್ದಾರೆ? ನನ್ನ ಎಲ್ಲ ಪುಸ್ತಕದ ಪ್ರತಿ ಹಾಳೆಯಲ್ಲಿ ನನ್ನ ಅಪ್ಪ ಇದ್ದಾರೆ ಎಂದು ಭಾಸವಾಗುತ್ತದೆ.   ಪೂರ್ವಜನ್ಮದ ಸುಕೃತದಿಂದ ನನಗೆ ಇಂತಹ ಅಪ್ಪ ಅಮ್ಮನನ್ನು  ಭಗವಂತ ಕರುಣಿಸಿದ.  

ಇಂತಹ ತಂದೆತಾಯಿಯನ್ನು ಪಡೆದ ನಾನು ಪುಣ್ಯಶಾಲಿಯಲ್ಲವೇ?

ಹೆಚ್ ಏನ್ ಪ್ರಕಾಶ್ 

July 8, 2012

ಚಿರಂತನ ಸತ್ಯ


ಚಿರಂತನ ಸತ್ಯ

ಸ್ವಾಮಿ ವಿವೇಕಾನಂದರು ಅಮೆರಿಕಾದಲ್ಲಿ ಭಾಷಣ ಮಾಡುತ್ತಿರುವಾಗ ಒಬ್ಬ ಮಹನೀಯರು ಎದ್ದು ನಿಂತು " ಸ್ವಾಮಿಜಿ, ನೀವು ಒಂದು ಬಗೆಯ ಸಂಮೊಹನವನ್ನು  ಬೋಧಿಸುತ್ತಿಲ್ಲಾ ತಾನೇ? " ಎಂದು ಪ್ರಶ್ನಿಸಿದರು. ಸ್ವಾಮಿಜಿ ನಸುನಗುತ್ತ    " ಇಲ್ಲ. ನಾನು ನಿಮ್ಮನ್ನು ಸಂಮೊಹನಾವಸ್ಥೆಯಿಂದ ಬಿಡಿಸುತ್ತಿದ್ದೇನೆ.  ನೀವು ಈಗಾಗಲೇ ಸಮ್ಮೋಹನಕ್ಕೆ ಒಳಗಾಗಿ ಬಿಟ್ಟಿದ್ದಿರಿ.  ನಾನು ಬಿಳಿಯ, ಅವನು ಕರಿಯ, ನಾನು ಶ್ರೀಮಂತ, ಅವನು ಬಡವ, ನಾನು ಅಧಿಕಾರಿ, ಅವನು ಜವಾನ ಇತ್ಯಾದಿ ಇತ್ಯಾದಿಗಳಲ್ಲಿ ತೊಳಲಾಡುತ್ತಾ ಇದ್ದೀರಿ.  ವಾಸ್ತವದಲ್ಲಿ ಈ ಯಾವ ಸ್ಥಿತಿಯು ನಿಮ್ಮದ್ದಲ್ಲ.  ನೀವು ಆ ಚಿರಂತನ ಸತ್ಯವಾದ ಆತ್ಮ ಮಾತ್ರ.  ಈ ಸತ್ಯವನ್ನು ಅರಿಯಬೇಕಾದರೆ, ನೀವು ಈಗಾಗಲೇ ಒಳಗಾಗಿರುವ ಸಮ್ಮೋಹನ ಸ್ಥಿತಿಯಿಂದ ಹೊರಬರಬೇಕಾಗಿದೆ.  ಈ ಕೆಲಸವನ್ನು ನಾನು ಮಾಡುತ್ತಿದ್ದೇನೆ. "  ಎಂದು ಚಾಟಿ ಎಟಿನಂತಹ ಉತ್ತರವನ್ನು ಕೊಟ್ಟರು.

ಇಂದಿನ ನಮ್ಮ ಸ್ಥಿತಿಯು ಇದಕ್ಕೆ ಹೊರತೇನಲ್ಲ. ನಾವು ಒಂದು ರೀತಿಯ ಸಮ್ಮೋಹನ ಸ್ಥಿತಿಯಲ್ಲೇ ತೊಳಲಾಡುತ್ತಿದ್ದೇವೆ.  ನಮ್ಮೊಳಗಿರುವ ಲೆಕ್ಕವಿಲ್ಲದಷ್ಟು ನಂಬಿಕೆಗಳು, ನಮ್ಮನ್ನು ಅಧೋಗತಿಗೆ ತಳ್ಳುತ್ತಿವೆ. ಧರ್ಮದ ಸತ್ಯವನ್ನು ಅರ್ಥಮಾಡಿಕೊಳ್ಳದೆ ಇಂದು ನಾವು ಕಚ್ಚಾಡುತ್ತಿದ್ದೇವೆ.  ನನ್ನ ಮತ ಹಿರಿದು, ನಿನ್ನ ಮತ ಕಿರಿದು, ನಾನು ಉತ್ಕೃಷ್ಟ, ನೀನು ನಿಕೃಷ್ಟ ಇತ್ಯಾದಿಗಳಲ್ಲಿ ಕಿರುಚಾಡುತ್ತಿದ್ದೇವೆ.  ಆದರೆ, ಆ ದಿವ್ಯ ಸತ್ಯದ ಎದುರು ನಾವೆಲ್ಲಾ ಒಂದು, ಎಂಬುದನ್ನು ನಾವು ಮರತೇ ಬಿಟ್ಟಿದ್ದೇವೆ.   ನಮ್ಮ ಆಚರಣೆಗಳು, ನಂಬಿಕೆಗಳು, ವಿಚಾರಗಳು ಬೇರೆಯಾದ ಮಾತ್ರಕ್ಕೆ  ಸತ್ಯವು ಬದಲಾಗುತ್ತದೆಯೇ?  ಯಾವ ರೀತಿ ದೈಹಿಕವಾಗಿ, ಮಾನಸಿಕವಾಗಿ ನಮ್ಮನ್ನು ನಾವು ಬದಲು ಮಾಡಿಕೊಂಡರೂ ಸತ್ಯ ಮಾತ್ರ ಯಾವಕಾಲಕ್ಕೂ ಒಂದೇ ಎಂಬುದನ್ನು ನಾವು  ಅರಿಯಲು ಅಸಮರ್ಥರಾಗಿದ್ದೇವೆ.  ಭಗವಂತನ ಸೃಷ್ಟಿಯಲ್ಲಿ ನಾವೆಲ್ಲ ಒಂದೇ ಅಲ್ಲವೇ?  ಅವರವರ ಕರ್ಮಾನುಸಾರ ಜನ್ಮ ತಳೆಯಲು ಸಾಧ್ಯವಾಗಿರುತ್ತದೆಯ ವಿನಃ ಬೇರೇನೂ ಅಲ್ಲ.  ಯಾರು ಯಾವುದೇ ಮತದಿಂದಾಗಲಿ, ಧರ್ಮದಿಂದಾಗಲಿ ದೊಡ್ದವರಾಗಲು   ಸಾಧ್ಯವಿಲ್ಲ.  ಧರ್ಮದಲ್ಲಿರುವಂತಹ ಚಿರಂತನ ಸತ್ಯವನ್ನು ಅರಿತು ದಿನ ನಿತ್ಯದಲ್ಲಿ ಆಚರಣೆಗೆ ತಂದರೆ ಆಗ ಮಾತ್ರ  ದೊಡ್ಡ ವ್ಯಕ್ತಿಯಾಗಲು ಸಾಧ್ಯ.. 

ನೀವೇನು ಹೇಳುತ್ತೀರಾ ?.............

ಹೆಚ್ ಏನ್ ಪ್ರಕಾಶ್ 
18 07 2012


July 4, 2012

ಪ್ರಾಮಾಣಿಕತೆ


ಪ್ರಾಮಾಣಿಕತೆ 


ಒಂದು ಸಂಶೋಧನಾ ಕೇಂದ್ರದಲ್ಲಿ  ವಿಜ್ಞಾನಿಯ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದರು.  ಆ ಹುದ್ದೆಗೆ ಸಾವಿರಾರು ಅರ್ಜಿಗಳು ಬಂದದ್ದವು.  ಸಂದರ್ಶಕ್ಕೆ ಕೇವಲ ನೂರು ಅಭ್ಯರ್ಥಿಗಳನ್ನು ಕರೆದಿದ್ದರು.  ಅಂದು ಸಂದರ್ಶನ ನಡೆಸಿಕೊಡಲು ನೊಬೆಲ್ ಪ್ರಶಸ್ತಿ ವಿಜೇತ ಸರ್ ಸಿ ವಿ ರಾಮನ್ ಇದ್ದರು . ಸಂದರ್ಶನದಲ್ಲಿ ಉತ್ತಮವಾದ ಪ್ರಶ್ನೆಗಳನ್ನು ಕೇಳಲಾಯಿತು.  ಸರಿಯಾದ ಉತ್ತರವನ್ನು ನೀಡಲಾದ ಮೂವರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ಮಿಕ್ಕ ಅಭ್ಯರ್ಥಿಗಳಿಗೆ ನಿರಾಶೆ ಎನಿಸಿದರು ಸರ್ ಸಿ ವಿ ಅವರೊಡನೆ ಮಾತನಾಡುವ ಮತ್ತು ಅವರ ಜೊತೆ ಕೂತ ಸಮಾಧಾನ ಇತ್ತು. 
  
ಸಂದರ್ಶನ ಮುಗಿಸಿ ಹೊರ ಬಂದ ಸರ್ ಸಿ ವಿ ಯವರ ಕಣ್ಣಿಗೆ ಒಬ್ಬ ಯುವಕ ತಮಗೆ ಕಾಯುತ್ತಿರುವಂತೆ ಬಾಸವಾಯಿತು.  ನೇರ ನೋಡುವಾಗ ಸಂದರ್ಶನಕ್ಕೆ ಬಂದ ಯುವಕ ಎಂದು ತಕ್ಷಣ ಅರ್ಥವಾಯಿತು. ತಾವೇ ಹತ್ತಿರ ಹೋಗಿ ಆ ಯುವಕನ ಬೆನ್ನು ಸವರುತ್ತ " ಚಿಂತಿಸ ಬೇಡ, ಮುಂದಿನ ಸಾರಿ ಚನ್ನಾಗಿ ತಯಾರಿ ನಡೆಸು.  ಖಂಡಿತವಾಗಿ ಆಯ್ಕೆಯಾಗುತ್ತಿಯ." ಎಂದು ಸಮಾಧಾನ ಮಾಡಿದರು.  ಆದರೆ, ಆ ಯುವಕ " ಸರ್, ನಾನು ಅದಕ್ಕಾಗಿ ನಿಂತಿಲ್ಲ. ನನಗೆ ನನ್ನ ಪ್ರಯಾಣ ಭತ್ಯೆ ಕೊಡುವಾಗ ತಪ್ಪು ಲೆಕ್ಕಾಚಾರ ಹಾಕಿ ಏಳು ರೂಪಾಯಿ ಹೆಚ್ಚಿಗೆ ಕೊಟ್ಟಿದ್ದಾರೆ.  ಇದನ್ನು ಆಫೀಸಿನಲ್ಲಿ ತಿಳಿಸುವಾಗ ಕೌಂಟರ್ ಮುಚ್ಚಲಾಗಿದೆ, ನೀವೇ ಇಟ್ಟುಕೊಳ್ಳಿ  ಎಂದು ಹೇಳಿದರು.  ಆದರೆ,  ನನಗೆ ಈ ಹೆಚ್ಚಿನ ಬೇಡ ಸಾರ್. " ಎಂದು ಪ್ರಾಮಾಣಿಕನಾಗಿ ಹೇಳಿದ.  ಸರ್ ಸಿ ವಿ ಒಮ್ಮೆ ಯುವಕನನ್ನು ದಿಟ್ಟಿಸಿ ನೋಡುತ್ತಾ ಮುಗುಳುನಕ್ಕು " ಹಾಗಾದರೆ ನನಗೆ ಕೊಡು " ಎಂದರು.  ಯಾವುದೇ ಪ್ರತಿಉತ್ತರ ನೀಡದೆ ಏಳು ರೂಪಾಯಿಯನ್ನು ಅವರ ಕೈಗಿತ್ತ ಯುವಕ.  ಜೇಬಿಗೆ ಇಳಿಸಿಕೊಂಡ ಸರ್ ಸಿ ವಿ ನಾಲ್ಕಾರು ಹೆಜ್ಜೆ ಹಾಕಿದರು.  ಯುವಕ ಬೆನ್ನು ಮಾಡುತ್ತಾ ಹೊರಟ.  ತಿರುಗಿ ಸರ್ ಸಿ ವಿ ಯವರು ಯುವಕನನ್ನು ಕರೆಯುತ್ತ, " ಇಲ್ಲಿ ನೋಡು,  ನಾಳೆ ಬೆಳಿಗ್ಗೆ ನೀನು ನನ್ನನ್ನು ಆಫೀಸಿನಲ್ಲಿ ಕಾಣು." ಎಂದು ಹೊರಟು ಹೋದರು. 
       
ಯುವಕನಿಗೆ ಏನೂ ಅರ್ಥವಾಗಲಿಲ್ಲ.  ಮಾರನೆ ಬೆಳಿಗ್ಗೆ ಆಫೀಸಿಗೆ  ಹೋಗಿ ಸರ್ ಸಿ ವಿ ಯವರನ್ನು ಕಂಡ.  ಆತ್ಮೀಯವಾಗಿ ಸ್ವಾಗತಿಸುತ್ತಾ " ಮಗು, ನೀನು ಭೌತ ಶಾಸ್ತ್ರದಲ್ಲಿ ಉತ್ತೀರ್ಣನಾಗದೆ ಇರಬಹುದು.  ಆದರೆ ನೀನು ಪ್ರಾಮಾಣಿಕತೆಯ ಪರೀಕ್ಷೆಯಲ್ಲಿ ಪಾಸಾಗಿದ್ದಿಯ. ನನಗೆ ಇದೆ ಮುಖ್ಯ. ಆದ್ದರಿಂದ ನಿನಗೆ ಒಂದು ಹುದ್ದೆಯನ್ನು ವಿಶೇಷವಾಗಿ ಸೃಷ್ಟಿಸಿದ್ದೇನೆ. ಹೋಗಿ ಸೇರಿಕೋ " ಎಂದು ನುಡಿಯುತ್ತ ಕೆಲಸದ ಆಜ್ಞಾಪತ್ರವನ್ನು ಆ ಯುವಕನ ಕೈಗಿತ್ತರು  ಮುಂದೆ ಆ ಯುವಕ ವಿಜ್ಞಾನದಲ್ಲಿ ಹೆಸರುಮಾಡಿದ. 

ನಮ್ಮಲ್ಲಿ ಪ್ರಾಮಾಣಿಕತೆ ಇದ್ದರೆ ಅದು ನಮ್ಮ ಜೀವನದ ಗತಿಯನ್ನೇ ಬದಲಿಸುತ್ತದೆ. ಸ್ವಲ್ಪ ನಿಧಾನವಾಗಬಹುದು ಅಷ್ಟೇ. 

ಹೆಚ್ ಏನ್ ಪ್ರಕಾಶ್ 
14 07 2012

(source: Seven rupees that changed  the course of my life.)

July 2, 2012

ಪ್ರೀತಿ .................ಒಂದಷ್ಟು ಹರಟೆ



ಪ್ರೀತಿ .................ಒಂದಷ್ಟು ಹರಟೆ 

"ನನ್ನ ಪ್ರೀತಿಯ ಬುದ್ಧ ದೇವನಿಗೆ ಹಚ್ಚಿದ ಸುಗಂದದ ಬತ್ತಿಯ ಸುವಾಸನೆ ಹೊರಗೆಲ್ಲ ಹರಡಿದರೆ ನನ್ನ ದೇವನಿಗೆ ಕಡಿಮೆ ಆಗುವುದಿಲ್ಲವೇ?"  ಎಂಬ ಯೋಚನೆ ಒಮ್ಮೆ ಓರ್ವ ಭಕ್ತನಿಗೆ ಬಂತು.  ತಕ್ಷಣ ಹಚ್ಚಿದ್ದ ಬತ್ತಿಯನ್ನು ನಂದಿಸಿ  ಒಂದು ಅಂದವಾದ, ಕುಸುರಿ ಕೆಲಸಮಾದಲಾದ ಒಂದು ಚಿಕ್ಕ ಪೆಟ್ಟಿಗೆ ತಂದು ಅದರಲ್ಲಿ ತನ್ನ ಇಷ್ಟ ದೇವನಾದ ಬುದ್ಧನನ್ನು ಕೂರಿಸಿ ಸುತ್ತಲೂ ಸಾಟಿನ್ ಬಟ್ಟೆಯಿಂದ ಅಲಂಕರಿಸಿ,  ಸುಗಂದದ ಬತ್ತಿಗಾಗಿ ಒಂದು ಪ್ರತ್ಯೇಕ ಜಾಗ ಕಲ್ಪಿಸಿ ಬತ್ತಿ ಹಚ್ಚಿ ಬಾಗಿಲು ಮುಚ್ಚಿಬಿಟ್ಟ. ಏನೋ ಒಂದು ರೀತಿಯ ಸಮಾಧಾನ.  ಈಗ ನನ್ನ ದೇವನು ಮಾತ್ರ ಇರುವ ಸುಗಂಧವನ್ನೆಲ್ಲ ತೆಗೆದುಕೊಳ್ಳುತ್ತಿದ್ದಾನೆ ಎಂದು ಬಹಳ ಸಂತೋಷವಾಯಿತು.  

ದಿನವೂ  ಈ ರೀತಿಯ ಭಕ್ತಿಯ ಪೂಜೆ ಅತ್ಯಂತ ಶ್ರದ್ಧೆ ಯಿಂದ ನಡೆಯುತ್ತಿತ್ತು. ಒಂದು ತಿಂಗಳು ಕಳೆದು ನೋಡುವಾಗ ಬುದ್ಧದೇವನ ಮುಖ ಕಪ್ಪಿಟ್ಟಿತ್ತು.  ಭಕ್ತನಿಗೆ ಅತ್ಯಂತ ದುಃಖ ಮತ್ತು ಚಿಂತೆಯಾಯಿತು.  ಏನು ಮಾಡಲು ತೋಚಲಿಲ್ಲ. ಈ ವಿಷಯವನ್ನು ಹತ್ತಿರದಲ್ಲಿದ್ದ ಝೆನ್ ಗುರುವಲ್ಲಿ ಹೋಗಿ ನಿವೇದಿಸಿಕೊಂಡು  "ಈ ರೀತಿಯಾಗಲು ಕಾರಣವೇನು? ನನ್ನ ಭಕ್ತಿಯಲ್ಲಿ ಏನಾದರು ಲೋಪವಾಯಿತೆ ? ದಯಮಾಡಿ ವಿವರಿಸಿ."  ಎಂದು ಹಲುಬಿದ.  ಝೆನ್ ಗುರು ಒಂದು ಕ್ಷಣ ಸುಮ್ಮನಿದ್ದು " ನೀನು ನಿನ್ನ ಇಷ್ಟದೇವನಿಗೆ ತೋರಿದ ಪ್ರೀತಿ ಅತ್ಯಂತ ಸ್ವಾರ್ಥದಿಂದ ಕೂಡಿತ್ತು. ಈ ರೀತಿಯಾದ ಪ್ರೀತಿಯಿಂದಲೇ ನಿನ್ನ ದೇವನ ಮುಖ ಕಪ್ಪಿಟ್ಟಿದೆ."  ಭಕ್ತ ಹೌಹಾರಿದ. "ನನ್ನ ಪ್ರೀತಿ ಸ್ವಾರ್ಥವೇ?"  ಗುರುವು ಸಂತೈಸುತ್ತ " ಹೌದು ನೀನು ತೋರಿಸಿದ ಪ್ರೀತಿ ಸ್ವಾರ್ಥದ್ದೆ ಆಗಿತ್ತು. ಈ ಪ್ರೀತಿ ಸ್ವಲ್ಪ ಕಾಲ ಚನ್ನಾಗಿರುತದೆ, ನಂತರದಲ್ಲಿ ಇದು ತನ್ನ ಮೂಲ ಉದ್ದೇಶವನ್ನೇ ತೆಗೆದು ಹಾಕಿ ಬಿಡುತ್ತದೆ.   ನಿರಪೇಕ್ಷ ಭಾವದಿಂದ ತೋರುವ ಪ್ರೀತಿ ಮಾತ್ರ ಶಾಶ್ವತವಾಗಿ  ನಿಲ್ಲುತ್ತದೆ. ನಿನ್ನ ಬುದ್ಧನಿಗೆ ಸಲ್ಲುವ ಸುಗಂಧ ಜಗತಿನ ಎಲ್ಲರಿಗೂ ಸಿಗಲಿ ಎನ್ನುವ ವಿಶಾಲ ಭಾವದಲ್ಲಿ  ಪೂಜೆ ಮಾಡು, ಆಗ  ನಿನ್ನ ದೇವನ ಮುಖದಲ್ಲಿ ಮಂದಹಾಸ ಕಾಣುತ್ತದೆ." ಎಂದನು.

ಪ್ರೀತಿಯ  ಆಯ್ಕೆ ನಮ್ಮದೇ................

ಹೆಚ್ ಏನ್ ಪ್ರಕಾಶ್ 
02 07 2012 

July 1, 2012

VOLITIONAL ACT


 VOLITIONAL  ACT 

Man is afraid of freedom, and freedom is the only thing which makes you a man. So we are suicidal — destroying our freedom. And with that destruction we are destroying our whole possibility of being. Then having is good because having means accumulating dead things. You can go on accumulating; there is no end to it. And the more you accumulate, the more secure you are. When I say, “Now man has to move consciously,” I mean this, that you have to be aware of your freedom and also aware of your fear of freedom.

How to use this freedom? Religion is nothing but an effort toward conscious evolution, an effort how to use this freedom. Your volitional efforts are now significant. Whatsoever you are doing non-voluntarily is just part of the past. Your future depends on your volitional acts. A very simple act done with awareness, with volition, gives you a certain growth — even an ordinary act.

You go on a fast, but not because you have no food. You have food; you can eat it. You have hunger; you can eat. You go on a fast: it is a volitional act — a conscious act. No animal can perform this. An animal will go on a fast sometimes when there is no hunger. An animal will have to fast when there is no food. But only man can fast when there is hunger and food both. This is a volitional act. You use your freedom. The hunger cannot goad you. The hunger cannot push you and the food cannot pull you.

If there is no food, it is not a fast. If there is no hunger, it is naturopathy; it is not a fast. Hunger is there, food is there, and you are on a fast. This fasting is a volitional act, a conscious act. This will give you much awareness. You will feel a subtle freedom: freedom from food, freedom from hunger — really, deep down, freedom from the body, and still more deep down, freedom from nature. And your freedom grows and your consciousness grows. As your consciousness grows, your freedom grows. They are interrelated. Be more free and you will be more conscious; be more conscious and you will be more free: they are interdependent.

But we can deceive ourselves. A son, a daughter, can say, “I will rebel against my father so that I may be more free.” Hippies are doing that. But rebellion is not freedom because it is just natural. At a particular age, to rebel against parents is not freedom: it is just natural! A child who is just coming out of the womb of his mother cannot say, “I am leaving the womb.” It is natural.
When someone is sexually mature, it is a second birth. Now he must fight his parents, because only if he fights with his parents will he move further away from them. And unless he moves further away from them he cannot create a new family nucleus. So every child will go against his parents: this is natural. And if a child is not going against, it is a growth — because then he is fighting nature.

For example, you get married. Your mother and your wife are coming into conflict, which is natural — natural, I say, because for the mother it is a great shock. You have moved to another woman. Up to now you were wholly and solely your mother’s. And it makes no difference that she is your mother: deep down no one is a mother and no one is a wife. Deep down every female is a woman. Suddenly you have moved to another woman, and the woman in your mother will suffer, will become jealous. Fight and conflict are natural. But if your mother can still love you it is a growth. If your mother can love you more than she ever loved you now that you have moved to a new woman, it is a growth, it is a conscious growth. She is going above natural instincts.

When you are a child you love your parents. That is natural — just a bargain. You are helpless, and they are doing everything for you. You love them and you give them respect. When your parents have become old and they cannot do anything for you, if you still respect and love them, it is a growth. Any time natural instinct is transcended, you grow. You have made a volitional decision, so your being will grow and you will acquire an essence.

The old Indian culture tried in every way to make life such that everything becomes a growth. It is natural for a small child to respect his father, but it is unnatural to respect him when the father has become old, dying, unable to do anything for the child and is just a burden to him. Then it is unnatural! No animal can do that; the natural bond has broken. Only man can do that, and if it is done you grow. It is volitional. You grow with any volitional act, simple or complex.

Source – Osho Book “The Ultimate Alchemy, Vol2″