ಮೌನ
ಮಾತು ಬೆಳ್ಳಿ ಮೌನ ಬಂಗಾರ
ಮಾತು ನೂರ ಹೇಳಿದರೆ
ಮೌನ ಸಾವಿರ ಚಿಂತಿಸಿತು.
ಮಾತು ಮಾತು ಮಾತಲ್ಲಿ ಮುಳುಗಿ
ನನ್ನ ಮಾತು ಕೊನೆಗೊಂದು ದಿನ
ಯಾರಿಗೂ ಬೇಡವೆನಿಸಲು
ಅಂದು ಮೌನದಲಿ ನೆಲೆನಿಂತಾಗ
ಕಾಣುವ ಅಂತರದರ್ಶನ ಭಯಾನಕ.
ತನ್ನ ಮಾತಿನಿಂದಾದ ಅಚಾತುರ್ಯ
ಕ್ರುತಿಯಿಂದಾದ ಅನಾಚಾರ
ರಹಸ್ಯದಲಿ ಕಂಡ ವಾಮಾಚಾರ
ಮೌನದಲಿ ಕೂತು ಬೆನ್ನಿಗೆ ಕತ್ತು ತಿರುಗಿಸಿದಾಗ
ಕಾಣುವುದು ಸರಿಪಡಿಸಲಾಗದ ಪಾಪದರ್ಶನ.
ದೇಹ ಸೋತು ಹಣ್ಣಾದಾಗ
ಮೂಲೆಗುಂಪಾಗಿ ಹಾಸಿಗೆ ಹಿಡಿದಾಗ
ಮಾತಿಗೆ ಬೆಲೆ ಇಲ್ಲ,ಯಾರಿಗೂ ಬೇಕೂ ಇಲ್ಲದಾಗ
ನಿಸ್ಸಾರ ಬದುಕು ಬೇಡವೆನಿಸಿ ಹೊರಳುವಾಗ
ಅಲೆಅಲೆಯಾಗಿ ಅನುಭವದ ಚಾರಣ
ಬೆನ್ನು ಹತ್ತಿದಾಗ ಮೌನ ........ನಿಜಕ್ಕೂ ಬಂಗಾರ.
ಹೆಚ್ ಏನ್ ಪ್ರಕಾಶ್
22 ನವೆಂಬೆರ್ 2011
ಮಾತು ಬೆಳ್ಳಿ ಮೌನ ಬಂಗಾರ
ಮಾತು ನೂರ ಹೇಳಿದರೆ
ಮೌನ ಸಾವಿರ ಚಿಂತಿಸಿತು.
ಮಾತು ಮಾತು ಮಾತಲ್ಲಿ ಮುಳುಗಿ
ನನ್ನ ಮಾತು ಕೊನೆಗೊಂದು ದಿನ
ಯಾರಿಗೂ ಬೇಡವೆನಿಸಲು
ಅಂದು ಮೌನದಲಿ ನೆಲೆನಿಂತಾಗ
ಕಾಣುವ ಅಂತರದರ್ಶನ ಭಯಾನಕ.
ತನ್ನ ಮಾತಿನಿಂದಾದ ಅಚಾತುರ್ಯ
ಕ್ರುತಿಯಿಂದಾದ ಅನಾಚಾರ
ರಹಸ್ಯದಲಿ ಕಂಡ ವಾಮಾಚಾರ
ಮೌನದಲಿ ಕೂತು ಬೆನ್ನಿಗೆ ಕತ್ತು ತಿರುಗಿಸಿದಾಗ
ಕಾಣುವುದು ಸರಿಪಡಿಸಲಾಗದ ಪಾಪದರ್ಶನ.
ದೇಹ ಸೋತು ಹಣ್ಣಾದಾಗ
ಮೂಲೆಗುಂಪಾಗಿ ಹಾಸಿಗೆ ಹಿಡಿದಾಗ
ಮಾತಿಗೆ ಬೆಲೆ ಇಲ್ಲ,ಯಾರಿಗೂ ಬೇಕೂ ಇಲ್ಲದಾಗ
ನಿಸ್ಸಾರ ಬದುಕು ಬೇಡವೆನಿಸಿ ಹೊರಳುವಾಗ
ಅಲೆಅಲೆಯಾಗಿ ಅನುಭವದ ಚಾರಣ
ಬೆನ್ನು ಹತ್ತಿದಾಗ ಮೌನ ........ನಿಜಕ್ಕೂ ಬಂಗಾರ.
ಹೆಚ್ ಏನ್ ಪ್ರಕಾಶ್
22 ನವೆಂಬೆರ್ 2011
No comments:
Post a Comment