February 29, 2012

HEALTH BENEFITS OF LEMON WATER

Lemon is an inexpensive, easily available citrus fruit, popular for its culinary and medicinal uses. It is used to prepare a variety of food recipes such as lemon cakes, lemon chicken and beverages like lemonade and lemon-flavored drinks. It is also used for garnishing. Lemon juice consists of about 5% citric acid that gives a tartly taste to lemon. Lemon is a rich source of vitamin C.  
            It also contains vitamins like vitamin B, riboflavin and minerals like calcium, phosphorus, magnesium as well as proteins and carbohydrates. Lemon is generally consumed in the form of lemon juice or lemon water. Lemon water makes a healthy drink, especially when taken in the morning. Daily consumption of lemon water provides a number of health benefits like: for stomach, Skin Care, Dental Care, Throat Infections, Weight Loss, High Blood Pressure, Respiratory Disorders, Rheumatism, Fever, blood purifier and most importantly, it is very useful in all variants of cancer.
The Top 10
1.    Good for stomach
Lemon can help relieve many digestion problems when mixed with hot water. These include nausea, heartburn and parasites. Due to the digestive qualities of lemon juice, symptoms of indigestion such as heartburn, bloating and belching are relieved. By drinking lemon juice regularly, the bowels are aided in eliminating waste more efficiently. Lemon acts as a blood purifier and as a cleansing agent. The intake of lemon juice can cure constipation. It is even known to help relieve hiccups when consumed as a juice. Lemon juice acts as a liver tonic and helps you digest your food by helping your liver produce more bile. It decreases the amount of phlegm produced by your body. It is also thought to help dissolve gallstones.
2.    Excellent for Skin Care
Lemon, being a natural antiseptic medicine, can participate to cure problems related to skin. Lemon is a vitamin C rich citrus fruit that enhances your beauty, by rejuvenating skin from within and thus bringing a glow on your face. Daily consumption of lemon water can make a huge difference in the appearance of your skin. It acts as an anti-aging remedy and can remove wrinkles and blackheads. Lemon water if applied on the areas of burns can fade the scars. As lemon is a cooling agent, it reduces the burning sensation on the skin.
3.    Aids in Dental Care
Lemon water is used in dental care also. If fresh lemon juice is applied on the areas of toothache, it can assist in getting rid of the pain. The massages of lemon juice on gums can stop gum bleeding. It gives relief from bad smell and other problems related to gums.

4.    Cures Throat Infections
Lemon is an excellent fruit that aids in fighting problems related to throat infections, sore throat and tonsillitis as it has an antibacterial property. For sore throat, dilute one-half lemon juice with one-half water and gargle frequently.
5.    Good for Weight Loss
One of the major health benefits of drinking lemon water is that it paves way for losing weight faster, thus acting as a great weight loss remedy. If a person takes lemon juice mixed with lukewarm water and honey, it can reduce the body weight as well.
6.    Controls High Blood Pressure
Lemon water works wonders for people having heart problem, owing to its high potassium content. It controls high blood pressure, dizziness, nausea as well as provides relaxation to mind and body. It also reduces mental stress and depression.
7.    Assist in curing Respiratory Disorders
Lemon water assists in curing respiratory problems, along with breathing problems and revives a person suffering from asthma.
8.    Good for treating Rheumatism
Lemon is also a diuretic and hence lemon water can treat rheumatism and arthritis. It helps to flush out bacteria and toxins out of the body.
9.    Reduces Fever
Lemon water can treat a person who is suffering from cold, flu or fever. It helps to break fever by increasing perspiration.
10. Acts as a blood purifier
The diseases like cholera or malaria can be treated with lemon water as it can act as a blood purifier.
DEFENSIVE TECHNIQUE FOR CANCER
ü Lemon (Citrus) is a miraculous product to kill cancer cells. It is 10,000 times stronger than chemotherapy. 
ü It is credited with many virtues, but the most interesting is the effect it produces on cysts and tumors.
ü It is considered also as an anti microbial spectrum against bacterial infections and fungi, effective against internal parasites and worms, it regulates blood pressure which is too high and an antidepressant, combats stress and nervous disorders.
ü This plant is a proven remedy against cancers of all types. Some say it is very useful in all variants of cancer.
ü It destroys the malignant cells in 12 cancers 
including colon, breast, prostate, lung and pancreas
ü The compounds of this tree showed 10,000 times better than the product Adriamycin, a drug normally used chemotherapeutic in the world, slowing the growth of cancer cells.
ü And what is even more astonishing: this type of therapy with lemon extract only destroys malignant cancer cells and it does not affect healthy cells.
ü The lemon juice is beneficial in preventing the disease. Its taste is pleasant and it does not produce the horrific effects of chemotherapy.
The source of this information is fascinating: it comes from one of the largest drug manufacturers in the world, Institute of Health Sciences, 819 N. L.L.C. Charles Street Baltimore,  MD 1201 says that after more than 20 laboratory tests since 1970, the extracts revealed that: ...





Why do we not know about that? Because, there are laboratories interested in making a synthetic version that will bring them huge profits




How much lemon water should I drink?

In case you are in good health and weigh 70 kg or less, it is advisable for you to have juice of one-half of the lemon squeezed into one glass of water, twice daily. However, if you weigh more than 70 kg, juice of one whole lemon in a glass of water should be preferred. For maximum benefit, this mixture should also be taken two times a day, though you may dilute more lemon juice according to your taste if you wish. Do not just remain oblivious to the gifts of nature such as this, for you should always try to make the most of them. So, make it a part of your daily routine to drink a glass of warm lemon water in the morning and then open your gateway to enjoy its health benefits.

Now you can decide whether to be healthy  or not????









February 25, 2012

ವೈದ್ಯರಿಗೆ ವೈದ್ಯರಾದ ಭಗವಾನ್ ಶ್ರೀ ರಮಣ ಮಹರ್ಷಿಗಳು

Courtesy : Mountain Path 
ವೈದ್ಯರಿಗೆ  ವೈದ್ಯರಾದ ಭಗವಾನ್ ಶ್ರೀ ರಮಣ ಮಹರ್ಷಿಗಳು 



1929 ರಲ್ಲಿ ರಮಣ ಆಶ್ರಮದಲ್ಲಿ ಪ್ರಾರಂಭಿಸಲಾದ ಚಿಕಿತ್ಸಾಲಯದ   ಡಾಕ್ಟರ್ ಎಂ ಆರ್ ಕೃಷ್ಣಮೂರ್ತಿ, ಮಹರ್ಷಿಗಳ ಅನುಕಂಪಕ್ಕೆ ಮತ್ತು ಅನುಗ್ರಹಕ್ಕೆ ಒಳಗಾದ ಸುಪ್ರಸಿದ್ದ ಪ್ರಥಮ ವೈದ್ಯರು.  ಡಾಕ್ಟರ್ಕೃಷ್ಣಮೂರ್ತಿ ರವರು ಮಹರ್ಷಿಗಳ ಪರಮ ಭಕ್ತರಾಗಿದ್ದು ಈ ಆಶ್ರಮದಲ್ಲಿ  ಚಿಕಿತ್ಸೆಗೆ ಬರುತ್ತಿದ್ದ  ಎಲ್ಲಾ ರೋಗಿಗಳ ಶಿಶ್ರುಷೆಯಂತು ಅತ್ಯಂತ ಪ್ರೇಮ ಮತ್ತು ಸೌಹಾರ್ದದಿಂದ ಮಾಡುತ್ತಿದ್ದರು .    ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಪ್ರಸಿದ್ಧಿಗೆ ಬಂದ ಈ ಚಿಕಿತ್ಸಾಲಯಕ್ಕೆ  ಮುಖ್ಯ ಕಾರಣವೆಂದರೆ ಮಹರ್ಷಿಗಳ ಕೃಪಾವಲಯ ಮತ್ತು ಅನುಗ್ರಹ.   ಡಾಕ್ಟರ್ ಎಂ ಆರ್ ಕೃಷ್ಣಮೂರ್ತಿಯವರು ತಿರುವನ್ನಮಲೈ ಪಟ್ಟಣದಲ್ಲಿ ಮನೆ ಮಾಡಿಕೊಂಡಿದ್ದರು.  ಪ್ರತಿನಿತ್ಯ ಆಶ್ರಮಕ್ಕೆ ಬಂದು ತಮ್ಮ ಸೇವೆಯನ್ನು ಮಾಡಿ ಹೋಗುತ್ತಿದ್ದರು. ಮಹರ್ಷಿಗಳು  ಬ್ರಹ್ಮ ನಿರ್ವಾಣ ಹೊಂದಿದ ಮೇಲೂ ಡಾಕ್ಟರ್ರವರು ಮಹರ್ಷಿಗಳ ಸಮಾಧಿಯ ಬಳಿ ನಿಂತು ಭಕ್ತಿ ಗೀತೆಯನ್ನು ಹಾಡಿ ನಂತರದಲ್ಲಿ ಗಿರಿ ಪ್ರದಕ್ಷಿಣೆಗೆ ಹೋಗುತ್ತಿದ್ದರು. ಇಂತಹ ಪರಮ ಭಕ್ತರ ಜೀವನದಲ್ಲಿ ಭಗವಾನರ ಅನುಗ್ರಹ ಹೇಗೆ ಆಯಿತು? ಎಂಬುದರ  ಬಗ್ಗೆ ಶ್ರೀ ವಿ ಗಣೇಶನ್ ಧಾಖಲಿಸಿರುವ ಒಂದು ಘಟನೆ.

                            1930  ರ ಸಮಯದಲ್ಲಿ ಮಹರ್ಷಿಗಳಿಗೆ ಅಗ್ಗಾಗ್ಗೆ ತೊಂದರೆ ಕೊಡುತ್ತಿದ್ದ ಬಿಕ್ಕಳಿಕೆಯನ್ನು ತಡೆಯಲು  ಡಾಕ್ಟರ್ ಎಂ ಆರ್ ಕೃಷ್ಣಮೂರ್ತಿಯವರು ಮಹರ್ಷಿಗಳಿಗೆ ಚಿಕಿತ್ಸೆಯನ್ನು ಕೊಡುತ್ತಿದ್ದರು. ಆದರೆ, ದಿನ ಕಳೆದಂತೆ ಈ ಬಿಕ್ಕಳಿಕೆ ಕಡಿಮೆಯಾಗಲೇ ಇಲ್ಲ. ಎಲ್ಲಾ ತರಹದ ಔಷದಿಗಳನ್ನು ಪ್ರಯತ್ನಿಸಲಾಯಿತು.  ಆದರೂ, ಮಹರ್ಷಿಗಳು ಗುಣಮುಖರಾಗಲೇ ಇಲ್ಲ.  ಡಾಕ್ಟರ್ ಎಂ ಆರ್ ಕೃಷ್ಣಮೂರ್ತಿಯವರಿಗೆ  ಆತಂಕ ಪ್ರಾರಂಭವಾಯಿತು.  ಈತನ್ಮಧ್ಯೆ ಮಹರ್ಷಿಗಳ ನಾಡಿ ಮಿಡಿತವನ್ನು ಪರೀಕ್ಷಿಸಲಾಗಿ ಅದೂ ಸಹ ಬಹಳ ಕಡಿಮೆಯಾದ ಕಾರಣ ಆತಂಕ ಇನ್ನಷ್ಟು ಜಾಸ್ತಿಯಾಯಿತು.  ಡಾಕ್ಟರ್ರವರ ಮನಸಿನಲ್ಲಿ ಮಹರ್ಷಿಗಳ ಜೀವಿತಾವಧಿ ಕೆಲವು ದಿನಗಳು ಇರಬಹುದೇ? ಎಂಬ ಸಂಶಯ ಬಲವಾಗಿ ಕಾಡತೊಡಗಿತು.  ಡಾಕ್ಟರ್ ಕೃಷ್ಣಮೂರ್ತಿಯವರು ಮಹರ್ಷಿಯವರಲ್ಲಿ ಏನೊಂದು ಮಾತನಾಡಲಿಲ್ಲ , ಅವರ ಎದುರಿನಲ್ಲಿ ಕೈ ಕಟ್ಟಿ ನಿಂತು ಮುಂದೆ ಏನು ಮಾಡಬೇಕೆಂದು ತೋಚದೆ ಸುಮ್ಮನೆ ಕಣ್ಣು ಬಾಯಿ ಬಿಡುತ್ತ ನಿಂತಿದ್ದರು.  ಆದರೆ, ಮನಸ್ಸು ಮಾತ್ರ " ಏನಾದರೊಂದು ದಾರಿ ತೋರಿಸಿ ಗುರುವೇ" ಎಂದು ಅಂಗಲಾಚುತ್ತಿತ್ತು.  ಮಹರ್ಷಿಗಳು ಮಾತ್ರ ತಮಗೇನೂ ಗೊತ್ತಿಲ್ಲ ಎನ್ನುವಂತೆ ಸುಮ್ಮನೆ ಕುಳಿತು ಬಿಟ್ಟಿದ್ದರು.  ಸ್ವಲ್ಪ ಸಮಯದ ನಂತರ ಡಾಕ್ಟರ್ರವರು ಒಲ್ಲದ ಮತ್ತು ಭಾರವಾದ ಮನಸ್ಸಿನಿಂದ ಮನೆಗೆ ಹಿಂತಿರುಗಿದರು.

                                ಮನೆಗೆ ಬಂದ ನಂತರದಲ್ಲಿ ಡಾಕ್ಟರ್ ಎಂ ಆರ್ ಕೃಷ್ಣಮೂರ್ತಿರವರಿಗೆ ತಮ್ಮ ದುಃಖ ತಡೆದು ಕೊಳ್ಳಲು ಸಾಧ್ಯವಾಗಲೇ ಇಲ್ಲ.  ದುಃಖ ಉಮ್ಮಳಿಸಿ ಬಂತು. ದಿಕ್ಕು ತೋಚದೆ  ಚಿಕ್ಕ ಮಗುವಿನಂತೆ  ಗಟ್ಟಿಯಾಗಿ ಅಳಲು ಪ್ರಾರಂಭ ಮಾಡಿದರು.  ಯಾರು ಸಮಾಧಾನ ಮಾಡಿದರು ಸಮಾಧಾನ ಆಗಲೇ ಇಲ್ಲ. ಅಂದು ಊಟವನ್ನು ಮಾಡದೆ ಹಾಗೆ ಮಲಗಿಬಿಟ್ಟರು.  ಬಹಳಹೊತ್ತು ನಿದ್ದೆ ಬಾರದೆ ಏನೇನೋ ಚಿಂತೆಗಳು ಕಾಡುತ್ತಲೇ ಇದ್ದವು.  ಯಾವಾಗಲೋ ನಿದ್ದೆ ಹತ್ತಿದೆ.   ಸುಮಾರು ಬೆಳಗಿನ ಜಾವದ ಸಮಯ ಇರಬಹುದೇನೋ ಆ ಸಮಯದಲ್ಲಿ ಭಗವಾನರು ಇವರ ಕನಸಿನಲ್ಲಿ ಬಂದು " ಏಕೆ ಅಳುತ್ತಿಯೇ?" ಎಂದು ಕೇಳಿದರು.  ಡಾಕ್ಟರ್ " ಭಗವಾನ್ ನಿಮಗೆ ಗೊತ್ತಿಲ್ಲದ್ದು ಏನಿದೆ? ನಾನು ಏಕೆ ಅಳುತ್ತಿರುವೆನೆಂದು ನಿಮಗೆ ಗೊತ್ತಿಲ್ಲವೇ?  ನಿಮ್ಮ ಈ ಬಿಕ್ಕಳಿಕೆಯ ರೋಗವನ್ನು  ಏನು ಮಾಡಿದರು ನನ್ನಿಂದ ಗುಣಪಡಿಸಲಾಗುತ್ತಿಲ್ಲವಲ್ಲ, ನಾನು ಏನು ಮಾಡಲಿ?"  ಎಂದು ಪುನಃ ಅಳಲು ಪ್ರಾರಂಭ ಮಾಡಿದರು.  ಆಗ ಮಹರ್ಷಿಗಳು " ಅಳಬೇಡ. ನಿಮ್ಮ ಮನೆಯ ಅಂಗಳದಲ್ಲಿ 'ಸೀಂಧಿಕೊಡಿ' ಎಂಬ ಗಿಡ ಇದೆ.  ಈ ಗಿಡದ ಎಲೆಗಳನ್ನು ಕಿತ್ತು ಶುಚಿಮಾಡಿ, ತುಪ್ಪದಲ್ಲಿ ಹುರಿದು,  ನಂತರ ಒಣಗಿದ ಶುಂಟಿ ಮತ್ತು ಬೆಲ್ಲವನ್ನು ಬೆರೆಸಿ ಚೆನ್ನಾಗಿ ಮಿದ್ದು ಗೋಲಿಗಳನ್ನು ಮಾಡಿಕೊಂಡು ನಾಳೆ ತೆಗೆದು ಕೊಂಡು ಬಾ.  ಏಕೆ ಸುಮ್ಮನೆ ಚಿಂತಿಸುತ್ತಿಯ?" ಎಂದು ಹೇಳಿದ ಹಾಗೆ ಭಾಸವಾಯಿತು. ತಕ್ಷಣ ಎಚ್ಚರವಾಯಿತು.  ಮೈಯಲ್ಲಿ ವಿದ್ಯುತ್ ಸಂಚಾರವಾದಂತೆ ಭಾಸವಾಯಿತು. ಆಶ್ಚರ್ಯದೊಂದಿಗೆ ಮೈ ಪುಲಕಿತ ಗೊಂಡಿತು. ತಕ್ಷಣ ತಮ್ಮ ಪತ್ನಿಯನ್ನು ಎಬ್ಬಿಸಿಕೊಂಡು ಕೈ ದೀಪ ಹಿಡಿದುಕೊಂಡು ಅಂಗಳವೆಲ್ಲವನ್ನು ಹುಡುಕಲು ಪ್ರಾರಂಭ ಮಾಡಿದರು . ಆ ಮನೆಯ ಅಂಗಳದ ಸ್ವಲ್ಪ ಭಾಗ ಬಿಟ್ಟು ಮಿಕ್ಕೆಲ್ಲ ಭಾಗ  ಗಾರೆ ಹಾಕಲ್ಪಟ್ಟಿತ್ತು.   ಆ ಇರುವ ಸ್ವಲ್ಪ ಜಾಗದಲ್ಲಿ ಈ ಗಿಡ ಹುಡುಕಬೇಕಾಗಿತ್ತು.  ಈ ಇರುವ ಮಣ್ಣಿನ ಜಾಗದಲ್ಲಿ ಹಲವಾರು ಗಿಡಗಳು ಪೊದೆಯಂತೆ ಬೆಳೆದು ಬಿಟ್ಟಿದ್ದವು.  ನಿಧಾನವಾಗಿ ಗಿಡಗಳನ್ನು ಸರಿಸುತ್ತ ಮಹರ್ಷಿಗಳು ಹೇಳಿದ ಗಿಡಕ್ಕಾಗಿ ಹುಡುಕಾಟ ಪ್ರಾರಂಭ ಮಾಡಿದರು.  ಒಂದು ಮೂಲೆಯಲ್ಲಿ ಮಹರ್ಷಿಗಳು ಹೇಳಿದ ಒಂದೇ ಒಂದು ಗಿಡ ಸಿಕ್ಕಿತು.  ಈ ದಂಪತಿಗಳಿಗೆ ಪರಮಾನಂದವಾಯಿತು. ಅವರ ಸಂತೋಷಕ್ಕೆ  ಪಾರವೇ ಇಲ್ಲ. ತಕ್ಷಣ ಆ ಗಿಡವನ್ನು ತಂದು ಮಹರ್ಷಿಗಳ ಆಜ್ಞಾನುಸಾರ  ಲೇಹ್ಯವನ್ನು ತಯಾರು ಮಾಡಿದರು.

                    ಈ ಲೇಹ್ಯವನ್ನು ತೆಗೆದುಕೊಂಡು ಆಶ್ರಮಕ್ಕೆ ಓಡಿದರು.  ಎಂದಿನಂತೆ ಆಶ್ರಮದಲ್ಲಿ ಸತ್ಸಂಗಕ್ಕೆ ಎಲ್ಲರು ಸೇರಿದ್ದರು. ಮಹರ್ಷಿಗಳು ತಮ್ಮ ಜಾಗದಲ್ಲಿ ಆಸೀನರಾಗಿದ್ದರು.  ಈ ದಂಪತಿಗಳನ್ನು ಕಂಡ ಮಹಷಿಗಳು ಮುಗುಳುನಕ್ಕು ಸ್ವಾಗತಿಸಿ ತಮ್ಮ ಕೈಯನ್ನು ಮುಂದೆ ಚಾಚಿ " ಅದೇನು ತಂದಿರುವಿರೋ ಅದನ್ನು ಕೊಡಿ" ಎಂದು ಔಷಧಿಯನ್ನು ಪಡೆದುಕೊಂಡು ಒಂದೆರಡು ಗೋಲಿಗಳನ್ನು ತಿಂದು ಬಿಟ್ಟರು.  ನಂತರದಲ್ಲಿ ತಮಗೆ ಬಿದ್ದ ಕನಸಿನ ಬಗ್ಗೆ ವಿಸ್ತಾರವಾಗಿ ಮಹಾರ್ಹಿಗಳಲ್ಲಿ ನಿವೇದಿಸಿಕೊಂಡಾಗ ತಮಗೇನೂ ಗೊತ್ತಿಲ್ಲದವರಂತೆ ಸುಮ್ಮನೆ ಕುಳಿತ್ತಿದ್ದರು.  ಒಂದೆರಡು ದಿನಗಳಲ್ಲೇ ಮಹರ್ಷಿಗಳ ಬಿಕ್ಕಳಿಕೆ ನಿಂತು ಸಹಜ ಸ್ತಿತಿಗೆ ಬಂದರು.

                           ಮಹರ್ಷಿಗಳ ಕೃಪೆಯೇ ಹಾಗೆ!  ಮಹರ್ಷಿಗಳು ಯಾರನ್ನು ಯಾವಾಗ, ಹೇಗೆ ಮತ್ತು ಯಾವ ಪರಿಸ್ಥಿತಿಯ  ಮುಖಾಂತರ ಅಹಂಕಾರವನ್ನು ನಾಶಮಾಡಬೇಕೆಂದು ತಿಳಿದು ಅಂತಹವರಿಗೆ ಯಾವ ಸುಳಿವನ್ನು ಕೊಡದೆ ಅಂದುಕೊಂಡ ಕೆಲಸವನ್ನು ನಿರ್ವಹಿಸುತ್ತಿದ್ದರು.   ಈ ರೀತಿಯ ಉಪದೇಶದಿಂದ ಭಕ್ತರನ್ನು ಸರಿ ದಾರಿಗೆ ತಂದು  ಉದ್ಧಾರ ಮಾಡಿ, ಜೀವನದಲ್ಲಿ ಎಂದೂ ಮರೆಯಲಾಗದ ಪಾಠವನ್ನು ಕಲಿಸಿಬಿಡುತ್ತಿದ್ದರು. ಡಾಕ್ಟರ ಜೀವನದಲ್ಲೂ ಎಲ್ಲೋ ಅಡಗಿದ್ದ ಅಹಂಕಾರದ ಮೂಲವನ್ನು ಹುಡುಕಿ ಬೇರು ಸಮೇತ ಕಿತ್ತು ಬಿಟ್ಟರು. "ಎಲ್ಲವೂ ನೀನೆ, ನಾನು ನೆಪ ಮಾತ್ರ" ಎಂಬ ಸತ್ಯವನ್ನು  ದೃಢವಾಗಿ ಇವರ ಮನಸ್ಸಿನಲ್ಲಿ ನೆಟ್ಟು ಬಿಟ್ಟರು.  ಇಂತಹ ಸಾವಿರಾರು ಉದಾಹರಣೆಗಳು ಮಹರ್ಷಿಗಳ ಜೀವನದಲ್ಲಿ ನಡೆದಿವೆ.  ಇದೊಂದು ತುಣುಕು ಮಾತ್ರ.  ಈ ರೀತಿಯ ಭಗವಾನರ ಕೃಪಾ ವಲಯಕ್ಕೆ ಬಂದ ಅದೆಷ್ಟೋ ಭಕ್ತರು ತಮ್ಮ ಜೀವನವನ್ನು ಪಾವನ ಮಾಡಿಕೊಂಡು ಬಿಟ್ಟರು. ಇಂತಹ ಪುಣ್ಯ ಪುರುಷರ ಅನುಭವಾಮೃತ ಕೇಳುವಾಗಲೇ ನಮ್ಮ ಮೈ ಮತ್ತು ಮನಸ್ಸು ಪುಲಕಿತ ವಾಗುತ್ತದೆ.  ಇನ್ನು ಸ್ವತಃ ಅನುಭವ ಆದಾಗ........ ಅದನ್ನು ಪದಗಳು ಪ್ರಾಯಶಃ ಬಣ್ಣಿಸಲಾರವು.   ಆದರೂ, ನಮ್ಮಂತಹ ಪಾಮರರಿಗಾಗಿ ಅನುಭವ ಕಥನವನ್ನು ಧಾಖಲಿಸಿರುವುದೂ ಸಹ ನಮ್ಮ ಪೂರ್ವಪುಣ್ಯದ ವಿಶೇಷವೆಂದೇ ನಾನು ಭಾವಿಸುತ್ತೇನೆ.

ಹೆಚ್ ಏನ್ ಪ್ರಕಾಶ್ 
25 02 2012


February 22, 2012

ಶ್ರೀ ರಮಣ ಮಹರ್ಷಿಗಳ ಜೀವನ ಸಂದೇಶ.

                                                                                                                                                           courtesy : Mountain Path
ಶ್ರೀ ರಮಣ ಮಹರ್ಷಿಗಳ ಜೀವನ ಸಂದೇಶ.


                   ಶ್ರೀ ರಮಣ ಮಹರ್ಷಿಗಳು ತಮ್ಮ ಜೀವಿತವನ್ನು ತಿರುವಣ್ಣಾಮಲೈನ ತಮ್ಮ ಆಶ್ರಮದಲ್ಲೇ ಕಳೆದರು.   ಎರಡು ಕಿ ಮಿ ಗಿಂತ ದೂರ ಹೋಗಲೇ ಇಲ್ಲ.   ಆದರೆ,  ದೇಶ ವಿದೇಶಗಳಿಂದ ಅನೇಕಾನೇಕ ಭಕ್ತರುಗಳನ್ನು ಆಕರ್ಷಿಸಿದರು.  ಜನ ಸಾಮಾನ್ಯರಿಂದ ಹಿಡಿದು   ಎಲ್ಲ  ವರ್ಗದ ಜನರು ಶ್ರೀ ರಮಣ  ಆಶ್ರಮಕ್ಕೆ ಭೇಟಿ ನೀಡಿ ಶ್ರೀ ರಮಣರ ಕೃಪೆಗೆ ಪಾತ್ರರಾಗಿರುವವರೇ! ಈ ಎಲ್ಲರೂ  ಒಂದೇ ಮಹರ್ಷಿಗಳ ದೃಷ್ಟಿಯಲ್ಲಿ.  ಇಂತಹ ಒಂದು ಆಕರ್ಷಣೆಗೆ ಮುಖ್ಯ ಕಾರಣವೆಂದರೆ,  ಮಹರ್ಷಿಗಳ ಸರಳ ಮತ್ತು ಸಹಜ ಜೀವನಮಾರ್ಗ.
                       ಒಮ್ಮೆ ಆಶ್ರಮದ ಭಕ್ತರಾದ ಶ್ರೀ ವಿಶ್ವನಾಥ ಸ್ವಾಮಿಯವರು ಅಡುಗೆ ಮನೆಯಲ್ಲಿ ಅಂದಿನ ಅಡುಗೆಗಾಗಿ ಬದನೇಕಾಯಿ ಹೆಚ್ಚುತ್ತಿದ್ದರು. ಈ ಸಮಯದಲ್ಲಿ ಮಹರ್ಷಿಗಳು ಅಲ್ಲೇ ಇದ್ದರು.  ಸ್ವಾಮಿಯವರು ಬದನೇಕಾಯಿ ಹೆಚ್ಚುವಾಗ ಅದರ ತೊಟ್ಟಿನ ಜೊತೆಗೆ ಸ್ವಲ್ಪ ಬದನೆಕಾಯಿಯ ಭಾಗವನ್ನು  ಬಿಟ್ಟು ಬಿಡುತ್ತಿದ್ದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಮಹರ್ಷಿಗಳು, ತಿರಸ್ಕರಿಸಲ್ಪಟ್ಟ ಈ ಭಾಗಗಳನ್ನು ತೆಗೆದುಕೊಂಡು ಅದರಲ್ಲಿ ಇರುವ ಬದನೆಕಾಯಿಯ ಭಾಗವನ್ನು ತೆಗೆದು ಕೇವಲ ತೊಟ್ಟಿನ ಭಾಗವನ್ನು ಮಾತ್ರ ಕಲಗಚ್ಚಿಗೆ ಹಾಕಿದರು.  ನಂತರದಲ್ಲಿ ಸ್ವಾಮಿಯ ಕಡೆ ತಿರುಗಿ " ಒಂದು ಚಿಕ್ಕ ದೂಳಿನ ಕಣವನ್ನು ಉಪಯೋಗಕ್ಕೆ ಬರುವಂತೆ ಮಾಡುವ ಶಕ್ತಿ ನಿಮ್ಮೊಳಗಿದೆ.      ಅದನ್ನು ಬಳಸಿ.      ಹೇಗೆ ಎಲ್ಲವನ್ನು ಬಳಸುವ ಶಕ್ತಿಯನ್ನು ಗಳಿಸಿಕೊಳ್ಳುತ್ತೀರೋ ಹಾಗೆ, ಅದೇ ಸಮಯದಲ್ಲಿ ಈ ಪ್ರಾಪಂಚಿಕ ಸಕಲ ಭೋಗ ಭಾಗ್ಯವನ್ನು ಧೂಳಿನಂತೆ ಎಣಿಸಿ ಎಲ್ಲವುಗಳಿಂದ ಮುಕ್ತನಾಗುವ ಶಕ್ತಿಯು ನಿಮ್ಮೊಳಗೆ ಇದೆ.   ಅದನ್ನು ಗುರುತಿಸಿ ಕೊಳ್ಳಿ." ಎಂದು ಉಪದೇಶದ ಸಾರವನ್ನು ತಿಳಿಸಿದರು.

                          ಶ್ರೀ ರಮಣರು ಯಾವುದನ್ನು ದಂಡ ಮಾಡುತ್ತಿರಲಿಲ್ಲ. ಎಲ್ಲದರಿಂದ ಎಷ್ಟು ಹೆಚ್ಚಿನ ಪ್ರಯೋಜನ ಪಡೆಯಲು ಸಾಧ್ಯವೋ ಅಷ್ಟನ್ನು  ಪಡೆಯುತ್ತಿದ್ದರು.  ಸಾಮಾನ್ಯವಾಗಿ ಕೊತ್ತಂಬರಿ ಸೊಪ್ಪನ್ನು ಕಾಂಡದ ತನಕ ಉಪಯೋಗಿಸಿ ಮಿಕ್ಕದ್ದು ದಂಡವಾಗುತ್ತದೆ. ಆದರೆ,  ಮಹರ್ಷಿಗಳು ಮಾತ್ರ ಕೇವಲ ಬೇರಿನ ಭಾಗವನ್ನು ಮಾತ್ರ ಬಿಸಾಕುತ್ತಿದ್ದರು. ಕಾಂಡದ ಭಾಗವನ್ನು ರುಬ್ಬಿ ಸಾಂಬಾರಿಗೆ ಸೇರಿಸಿಬಿಡುತ್ತಿದ್ದರು.  ಎಲ್ಲವನ್ನು  ಸಮರ್ಥವಾಗಿ ಹೇಗೆ ಬಳಸಬೇಕೆಂದು ಹೇಳುತ್ತಿರಲಿಲ್ಲ   ಸ್ವತಃ ತಾವೇ ಮಾಡಿ ತೋರಿಸುತ್ತಿದ್ದರು.   ಇದು ಕೇವಲ ಅಡುಗೆ ವಿಚಾರದಲ್ಲಿ ಮಾತ್ರವಲ್ಲ, ಎಲ್ಲ ವಿಚಾರದಲ್ಲೂ ಅವರು ಹೀಗೆ ಇರುತ್ತಿದ್ದರು. ಇವರಿಗೆ ಬರುತ್ತಿದ್ದ ಎಲ್ಲ ಅಂಚೆ ಕವರುಗಳನ್ನು ನೀಟಾಗಿ ತೆರೆದು ಒಂದೇ ಆಕಾರದಲ್ಲಿ ಕತ್ತರಿಸಿ ಆ ಕವರಿನ ಹಿಂಭಾಗವನ್ನು ಬರೆಯಲು ಸಾಧ್ಯವಾಗುವಂತೆ ನೀಟಾಗಿ ಬೈಂಡ್ ಮಾಡಿ ಇಡುತ್ತಿದ್ದರು. ಇದನ್ನು ತಮ್ಮ ಬರವಣಿಗೆಗೆ ಇಟ್ಟು ಕೊಳ್ಳುತ್ತಿದ್ದರು. ಈ ಯಾವ ಕೆಲಸವನ್ನು ಮಹರ್ಷಿಗಳು ಯಾರಿಗೂ ಹೇಳುತ್ತಿರಲಿಲ್ಲ. ತಾವೇ ಮಾಡುತ್ತಿದ್ದರು. ತಮ್ಮ ಬಳಿಯಲ್ಲಿಯೇ ಸೂಜಿ, ದಾರ, ಗೋಂದು, ಕಾಲಿಕೋ ಮತ್ತು ರೊಟ್ಟನ್ನು ಇಟ್ಟುಕೊಂಡಿರುತ್ತಿದ್ದರು.  ಈ ರೀತಿ ಬೈಂಡ್ ಮಾಡಿದ ಪುಸ್ತಕಗಳನ್ನು ಅವಶ್ಯಕತೆಗಳಿಗೆ ಅನುಸಾರವಾಗಿ ಸೂಕ್ತವಾಗಿ ಬಳಸುತ್ತಿದ್ದರು.ಪ್ರತಿ ಹಾಳೆಯನ್ನು ಸದುಪಯೋಗ ಮಾಡುತ್ತಿದ್ದರು.   ಮಹರ್ಷಿಗಳು ಯಾರಿಗೂ ಕೇವಲ ಉಪದೇಶ ಮಾಡುತ್ತಿರಲಿಲ್ಲ. ಅಂತಹ ಉಪದೇಶಗಳೇ  ಅವರಾಗಿರುತ್ತಿದ್ದರು.

             ಮಾವಿನಹಣ್ಣಿನ ಕಾಲದಲ್ಲಿ ಭಗವಾನರು ಸ್ವತಃ ಎಲ್ಲ ಮಾವಿನಹಣ್ಣುಗಳನ್ನು ಹೆಚ್ಚಿ ನೆರೆದಿರುತ್ತಿದ್ದ ಭಕ್ತರಿಗೆ ಹಂಚುತ್ತಿದ್ದರು. ಪ್ರಾಂಗಣದಲ್ಲಿ ಇರುವಂತಹ ಎಲ್ಲಾ ಭಕ್ತ ಸಮೂಹಕ್ಕೆ ಹೆಚ್ಚಿದ ಹಣ್ಣಿನ ತುಂಡುಗಳು ಸರಿಯಾಗಿ ವಿತರಣೆಯಾಗಿದೆಯೇ ಎಂಬುದನ್ನು ಗಮನಿಸುತ್ತಿದ್ದರು. ಹೀಗೆ ಸರಿಯಾಗಿ ವಿತರಣೆಯಾಗಿದೆ ಎಂದು ಅರಿತಮೇಲೆ ತಾವೂ ಒಂದೆರಡು ಹೋಳುಗಳನ್ನು ತಿನ್ನುತ್ತಿದ್ದರು.  ಸರಳವಾದ ಸಹಜವಾದ ಇರುವಿಕೆಗೆ ಒಂದು ನಿದರ್ಶನ.

                     ಒಮ್ಮೆ,  ಒಂದು ಬೆಳಗಿನ ಸತ್ಸಂಗ ಪ್ರಾರಂಭವಾಗುವ ಮುಂಚೆ ಒಂದು ಹೆಂಗಸು ಬಂದು       ಮಹರ್ಷಿಗಳನ್ನು    ಉದ್ದೇಶಿಸಿ  " ದಯಮಾಡಿ  ನನ್ನ  ಗಂಡನನ್ನು  ಕಳುಹಿಸಿ  ಕೊಡಿ .  ನನ್ನ ಸಂಸಾರ  ನಡೆಯುತ್ತಿಲ್ಲ . ನನ್ನ ಗಂಡನಿಗೆ  ಏನಾಗಿದೆಯೋ  ಗೊತ್ತಿಲ್ಲ , ಆಶ್ರಮ್ಮಕ್ಕೆ  ಬಂದುಬಿಡುತ್ತಾರೆ . ಕೆಲಸಕ್ಕೆ  ರಜೆ  ಹಾಕದೆ  ಸುಮ್ಮನೆ ಇಲ್ಲಿ   ಬಂದರೆ  ಸಂಬಳ  ಯಾರು  ಕೊಡುವವರು ?  ನನ್ನ ಸಂಸಾರ ನಡೆಯುದು  ಹೇಗೆ ? " ಎಂದು ಏರಿದ  ದ್ವನಿಯಲ್ಲಿ  ಕಿರುಚಾಡಿದಳು . ಅಲ್ಲಿ  ನೆರದಿದ್ದ  ಭಕ್ತರಿಗೆಲ್ಲ  ಆಶ್ಚರ್ಯ  ಮತ್ತು  ಗಾಬರಿ .  ಎಲ್ಲರು  ಮಹರ್ಷಿಗಳ  ಮುಖ  ನೋಡುತ್ತಿದ್ದರು . ಆದರೆ , ಮಹರ್ಷಿಗಳು ಮಾತ್ರ  ಏನೂ  ಆಗಿಯೇ ಇಲ್ಲವೇನೋ ಎನ್ನುವಂತೆ ಸುಮ್ಮನೆ ಕುಳಿತ್ತಿದ್ದರು.  ಒಂದೆರಡು ಕ್ಷಣಗಳು ಕಳೆದ ನಂತರ ಸಮಾಧಾನಚಿತ್ತದಿಂದ " ಈ ಆಶ್ರಮವು ಯಾರನ್ನು ಕರೆಯುವುದಿಲ್ಲ.  ಯಾರನ್ನು ತಡೆಯುವುದೂ  ಇಲ್ಲ. ಬರುವವರಿಗೆ  ಮತ್ತು ಹೋಗುವವರಿಗೆ ಯಾವುದೇ ನಿರ್ಭಂದವಿಲ್ಲ. ಇಲ್ಲಿ ಬರುವ ಭಕ್ತರೆಲ್ಲರೂ ಸರ್ವ ಸ್ವತಂತ್ರರು." ಎಂದು ಹೇಳಿದರು. ಇದು ಮಹರ್ಷಿಗಳ ಸ್ತಿತಪ್ರಜ್ನೆಯನ್ನು ತೋರಿಸುತ್ತದೆ.

                1943 ರಲ್ಲಿ ಭಗವಾನರ ಭಕ್ತರೊಬ್ಬರು ತಮ್ಮ ಒಂದೂವರೆ ವರ್ಷದ ಮಗುವನ್ನು ಕರೆದುಕೊಂಡು ಮಹರ್ಷಿಗಳ ಆಶೀರ್ವಾದಕ್ಕೆ ಬಂದರು. ಅವರ ಮನಸ್ಸಿನಲ್ಲಿ ಸ್ಕಂದಾಶ್ರಮಕ್ಕೆ ಹೋಗಿ ಅಲ್ಲೂ ದರ್ಶನ ಮಾಡಬೇಕೆಂಬ ಉತ್ಕಟವಾದ ಬಯಕೆ ಇತ್ತು. ಇದನ್ನು ಮಹರ್ಷಿಗಳ ಸಮ್ಮುಖದಲ್ಲಿ ಹೇಗೆ ಹೇಳುವುದೆಂದು ತಿಳಿಯದೆ ಸುಮ್ಮನೆ ನಿಂತಿದ್ದರು. ಇಷ್ಟು ಚಿಕ್ಕ ಮಗುವನ್ನು ಕರೆದುಕೊಂಡು ಸ್ಕಂದಾಶ್ರಮದ ಪರಿಕ್ರಮಕ್ಕೆ ಹೋಗುವುದಾಗಿ ಹೇಳಿದರೆ ಮಹರ್ಷಿಗಳು ಏನು ಹೇಳುತ್ತಾರೋ?  ಎಂಬ ಆತಂಕ ಕೂಡ ಇವರ ಮನಸಿನ್ನಲ್ಲಿ ಇತ್ತು. ಮಹರ್ಷಿಗಳು ಇದನ್ನು ಸೂಕ್ಷ್ಮವಾಗಿ ಗಮನಿಸಿದರು. ಮಹರ್ಷಿಗಳು ದಂಪತಿಗಳನ್ನು ನೋಡಿ " ಸ್ಕಂದಾಶ್ರಮ ಪರಿಕ್ರಮ ಮುಗಿಸಿ ಬನ್ನಿ" ಎಂದರು.  ಈ ದಂಪತಿಗಳಿಗೆ ಬಹಳ ಆನಂದವಾಯಿತು. ಒಡನೆಯೇ ಈ ದಂಪತಿಗಳು ಸ್ಕಂದಾಶ್ರಮದ ಕಡೆಗೆ ಹೊರಟೆ ಬಿಟ್ಟರು.  200 ಮೀಟರ್ನಷ್ಟು ಹೋಗುವಷ್ಟರಲ್ಲಿ ಮಹರ್ಷಿಗಳ ಸಹಾಯಕರೊಬ್ಬರು ಓಡುತ್ತಾ ಈ ದಂಪತಿಗಳ ಕಡೆಗೆ ಬಂದರು.  ಈ ದಂಪತಿಗಳಿಗೆ ಮತ್ತೆ ಆಶ್ಚರ್ಯ ಮತ್ತು ಆತಂಕವೂ ಆಯಿತು.  " ಚಿಕ್ಕ ಮಗುವನ್ನು ಕರೆದುಕೊಂಡು ಹೋಗುತ್ತಿದ್ದಾರೆ, ದಾರಿ ಮಧ್ಯೆ ಮಗು ಅತ್ತರೆ ಏನು ಮಾಡುತ್ತಾರೆ? ಎಂದು ಹೇಳಿ ಈ ಹಣ್ಣು ಮತ್ತು ಹಾಲನ್ನು ನಿಮಗೆ ಕೊಡಲು ಭಗವಾನರು ಕಳುಹಿಸಿದ್ದಾರೆ ." ಎಂದು ಒಂದು ಚಿಕ್ಕ ಬುಟ್ಟಿಯನ್ನು ಈ ದಂಪತಿಗಳ ಕೈಯಲ್ಲಿಟ್ಟು ನಸುನಗುತ್ತ ಹೊರಟುಹೋದರು.  ಈ ದಂಪತಿಗಳ ಕಣ್ಣು ತುಂಬಿ ಬಂತು.  ಪರಿಕ್ರಮಕ್ಕೆ ಹೊರಡುವ ಆತುರದಲ್ಲಿ ಮಗುವಿನ ಬಗ್ಗೆ ಸ್ವಲ್ಪವೂ ಕಾಳಜಿ  ವಹಿಸದೆ ಇದ್ದುದನ್ನು ಮಹರ್ಷಿಗಳು, ಮಾತೃ ಹೃದಯದಿಂದ ಗಮನಿಸಿದ್ದರು. " ಇದು ನಮ್ಮ ಜೀವನದಲ್ಲಿ ಮರೆಯಲಾಗದ ಒಂದು ಅಮೃತದ ಕ್ಷಣ.   ಆ  ದಿನ ನಮಗೆ ಅತ್ಯಂತ ಪವಿತ್ರ ದಿನವಾಗಿತ್ತು.  ಆಗ ಆದ ಸಂತೋಷಕ್ಕೆ ಪಾರವೇ ಇರಲಿಲ್ಲ.  ಆ ಕ್ಷಣಗಳನ್ನು ಈಗ ನೆನಸಿಕೊಂಡರು ನಮಗರಿವಿಲ್ಲದಂತೆ ಕಣ್ಣು ತುಂಬಿಬರುತ್ತದೆ " ಎಂದು ಈ ದಂಪತಿಗಳು ತಮ್ಮ ಅನುಭವದ ಪುಸ್ತಕದಲ್ಲಿ ಧಾಖಲಿಸಿದ್ದಾರೆ.

             ಶ್ರೀ ರಮಣರ    ಸರಳ ಮತ್ತು ಸಹಜವಾದ  ಬದುಕನ್ನು ಗಮನಿಸಿದರೆ  ಸಾಕು, ಬೇರೆ ಯಾವ ಉಪದೇಶವು ಬೇಕಾಗಿರಲಿಲ್ಲ. ಈ ಉಪದೇಶವೇ ಅವರಾಗಿರುತ್ತಿದ್ದರು.  ಸರಳವಾಗಿ ಮತ್ತು ಸಹಜವಾಗಿ ಬದುಕಲು ಅವರ ಜೀವನದ ಪುಟಗಳನ್ನೂ ತಿರುವಿ ಹಾಕಿದರೆ ಸಾಕು ಎಲ್ಲವು ಸ್ಪಷ್ಟವಾಗಿ ಅರ್ಥವಾಗುತ್ತದೆ.  ಸರಳವಾಗಿ  ಸುಂದರ ಜೀವನ ನಡೆಸುವುದು ಸಾಧ್ಯ ಎನ್ನುವುದು ಈ ಪುಣ್ಯ ಭೂಮಿಯ ಹಲವಾರು ಮಹಾಮಹಿಮರ ಜೀವನದಲ್ಲಿ ಕಂಡುಬರುವ ಸತ್ಯ.  ಇಂತಹ ಮಹಾಮಹಿಮರು  ಸರಳರಲ್ಲಿ ಸರಳರಾಗಿ ಜೀವನ ಸಾಗಿಸುತ್ತ,  ತಮ್ಮ ಆದರ್ಶಗಳನ್ನು   ಸ್ವತಃ   ಪಾಲಿಸಿ ಇತರರಿಗೆ ಮಾರ್ಗದರ್ಶಿಗಳಾಗಿದ್ದರು.  ಇಂತಹವರ ನೆರಳಿನಲ್ಲಿ ಬಾಳುವೆ ನಡೆಸಿದ ಸಾಮಾನ್ಯರು ಅದೆಷ್ಟು ಪುಣ್ಯವಂತರು! 

ಹೆಚ್ ಏನ್ ಪ್ರಕಾಶ್ 
22 02 2012

February 15, 2012

The Great Dictator


The Great Dictator

I'm sorry but I don't want to be an Emperor.  That's not my business.  I don't want to rule or conquer anyone.  

I should like to help everyone if possible. We all want to help one another -- human beings are like that.  We all want to live by each other's happiness, not by each other's misery. We don't want to hate and despise one another. In this world there is room for everyone and the earth is rich and can provide for everyone.

The way of life can be free and beautiful.  But we have lost the way.

Greed has poisoned men's souls, has barricaded the world with hate, and has goose-stepped us into misery and bloodshed.  We have developed speed but we have shut ourselves in: machinery that gives abundance has left us in want. Our knowledge has made us cynical, our cleverness hard and unkind. We think too much and feel too little: more than machinery we need humanity; more than cleverness we need kindness and gentleness. Without these qualities, life will be violent and all will be lost.

The aero plane and the radio have brought us closer together. The very nature of these inventions cries out for the goodness in men, cries out for universal brotherhood for the unity of us all. Even now my voice is reaching millions throughout the world, millions of despairing men, women and little children, victims of a system that makes men torture and imprison innocent people. To those who can hear me I say, "Do not despair".

The misery that is now upon us is but the passing of greed, the bitterness of men who fear the way of human progress.  The hate of men will pass and the power they took from the people will return to the people and liberty will never perish.

In the seventeenth chapter of Saint Luke it is written, "The kingdom of God is within man."  Not one man, nor a group of men, but in all men -- in you, the people.

You the people have the power, the power to create machines, the power to create happiness. You the people have the power to make life free and beautiful, to make this life a wonderful adventure. Then in the name of democracy let's use that power.  Let us all unite. Let us fight for a new world, a decent world that will give men a chance to work that will give you the future and old age and security.  Let us fight to free the world, to do away with national barriers, do away with greed, with hate and intolerance. Let us fight for a world of reason, a world where science and progress will lead to all men's happiness.  Let us all unite!

Look up.  The clouds are lifting, the sun is breaking through. We are coming out of the darkness into the light.   The soul of man has been given wings, and at last he is beginning to fly. He is flying into the rainbow - into the light of hope - into the future, that glorious future that belongs to you, to me and to all of us. Look up. Look up!

--Charlie Chaplin, excerpted from The Great Dictator (1940)


"The happiness is not about having all that I want, it's about having less wants."  I agree that greed is poisoning our soul.  Sharing, consideration, respect, looking out for the other person all seem to be in decline.  To be happy --  it is important to share, work together with consideration and respect for one another, look out for the other person.  We are in this together.  I do believe the plight of the least of us affects each of us and the whole of us.  I do believe we will grow and be happy as a working together whole or decline and die as greedy individuals.  
Do you have any thing to comment................Please
Prakash H N 

February 14, 2012

LOVE WARRIOR ON A TRICYCLE: STORY OF RAGHU LOVE WARRIOR ON A TRICYCLE: STORY OF RAGHU


LOVE WARRIOR ON A TRICYCLE: STORY OF RAGHU



When you are inspired by some great purpose ... dormant forces, faculties and talents become alive, and you discover yourself to be a greater person by far than you ever dreamed yourself to be.


- Patanjali -





After polio, Raghu Makwana lost his legs.  He had to walk with the support of his hands.
A long time back, a few friends took a walk on the street with the inspiration to do a small act of kindness.  After some searching, two of them saw Raghu arranging the shoes that people had left outside the temple.  Given his condition, their first impulse was to do something for him, but when they conversed with him, they quickly realized that they were actually receiving a lot more than they could give him.  Raghu's big-hearted devotion coupled with a sharp and street-smart intellect profoundly impressed them, so much so that they spoke about him to their nonprofit mentor Jayeshbhai, and ended up making him financially self-reliant.
Raghu's impluse of kindness is ever-present.  One of his many kindness endeavors is the Tulsi project.  Whenever he learns of a family (mostly in the slums nearby, the largest in the large Indian state of Gujarat) with some dispute or even violent abuse, Raghu courageously walks in to spread good cheer and gifts them a tulsi plant.  Most of these are complete strangers.  Sometimes he'll recite a prayer, sometimes he'll talk about wise saints, sometimes he'll share stories.  Hearing hopeful messages from a young man without legs is quite transformative!  When he leaves the holy Tulsi plant, people accept it as a blessing; and as they nurture the plant, and are reminded of its presence everyday, they sometimes grow in empathy.  To date, he has given out more than 500 of these plants, one at a time.
Let alone folks in the slums, Raghu even attracts famous people. :)  Once, a philanthropist gave a talk to the slum kids and described the experience of flying in a plane.  A few weeks later, through wild serendipity, it so turned out that Spice Jet Airlines donated an entire plane for that whole group of slum children and young adults, including Raghu, to "fly in the air".  Miss India herself received them at the airport, and personally chatted with Raghu about life in the slums, as they were all gifted a royal tour of a big city.  Even more recently, when Dr. APJ Abdul Kalam, the former president of India, was giving a talk, he was so inspired by Raghu that he not only invited him on stage but also opened his talk with: "When I asked Raghu what is your dream in life, he said only one thing: 'I want to see the women of India and their children smile.' "
 As a Lok Mitra fellow for our Moved By Love posse, Raghu continues to shine his compassion quotient in creative ways.  To start 2011, Raghu gave birth to one of his dreams.  When he lived out on the streets, he often felt deeply moved by others on the streets who had even less than him. He made a vow to himself that he would return to serve them one day, and that day had arrived for him.  He put together a team of five everyday folks, (one of whom is blind!), who would make small sacrifices in their own lives to support delivery of hand-cooked meals for some of the absolutely neglected people on the streets.  They appropriately named it "Tyaag Nu Tiffin" (Food of Sacrifice).   Everyday at 12:30PM and at 7:30PM, Raghu starts off on his hand tricycle to deliver the food.  It's the same food he himself eats, but he won't eat it until he has finished his round of offerings.
In a recent feature in Times of India, Raghu notes: "I'm not doing anything great. I'm not on a mission to change the world. God has been very kind to me in my struggle to survive. Now it is my turn to repay the kindness by helping other needy human beings."
Posted by Madhusudan Agrawal

           "ಸುಖದಿಂದ ತೃಪ್ತಿ ಖಂಡಿತ ಇಲ್ಲ, ಆದರೆ ತೃಪ್ತಿಯಿಂದ ಸುಖ ಖಂಡಿತ ಇದೆ"  ಎನ್ನುವ ಮಾತು ಅದೆಷ್ಟು ಸತ್ಯ.  ಎಷ್ಟಿದ್ದರೂ ಬೇಕುಬೇಕೆನ್ನುವ ಅತೃಪ್ತ ಮನಸ್ಸಿನ ಶ್ರೀಮಂತನ ಬಾಳಿಗಿಂತ ಸಾಕೆನ್ನುವ  ಮತ್ತು ಇತರರೊಡನೆ ಹಂಚಿ ತಿನ್ನುವ ಹೃದಯ ಶ್ರೀಮಂತಿಕೆಯೇ ಲೇಸು ಎನ್ನುವ ಪಾಠವನ್ನು ರಘುವಿನ ಜೀವನ ಶೈಲಿ ನಮಗೆ ತೋರಿಸುತ್ತಿದೆ. ನಡೆದಷ್ಟಿದೆ ನೆಲ ಕಲಿತಷ್ಟಿದೆ ಪಾಠ.  ಜೀವನದಲ್ಲೊಂದಿಷ್ಟು ಇತರರಿಗೆ ನಮ್ಮಿಂದ ಸಹಾಯ ಮಾಡುವ ಬುದ್ಧಿ ನಮಗೆ ಕರುಣಿಸಲಿ ಎಂದು ಅನನ್ಯ ಭಗವಂತನಲ್ಲಿ ಬೇಡುತ್ತೇನೆ ..............
            ಮಿತ್ರ ಮಧುಸೂದನ್ ರವರಿಗೆ ವಂದನೆಗಳು.

February 10, 2012

ಅಹಂಕಾರ.....................ಒಂದಷ್ಟು ಹರಟೆ.

ಅಹಂಕಾರ.....................ಒಂದಷ್ಟು ಹರಟೆ.


                   ಒಂದು ಬೆಟ್ಟದ ಮೇಲೆ ಪುರಾತನ ಕಾಲದ 3 ಆಶ್ರಮಗಳಿದ್ದವು.  ಇದನ್ನು  ಮಠಗಳೆಂದು ಕರೆಯುತ್ತಿದ್ದರು. ಈ ಮಠಗಳ  ಮುಖ್ಯಸ್ಥರುಗಳು ಯಾವಾಗಲಾದರೊಮ್ಮೆ ಒಟ್ಟಿಗೆ ಸೇರುತ್ತಿದ್ದರು. ಒಮ್ಮೆ ಹೀಗೆ ಸೇರಿದಾಗ ಉಭಯಕುಶಲೋಪರಿ ಆದನಂತರ ಪ್ರಾಸಂಗಿಕವಾಗಿ ತಮ್ಮ ತಮ್ಮ ಮಠಗಳ ಬಗ್ಗೆ ಮಾತನಾಡಲು ಆರಂಭಿಸಿದರು.  ಒಬ್ಬ   ಮಠಾಧಿಪತಿ  " ನಿಮ್ಮ ಮಠ ಸುಂದರವಾದ ಉತ್ತಮವಾದ ಮಠ. ಆದರೆ, ನಮ್ಮ ಮಠದ ವ್ರತ,ನಿಯಮ ಮತ್ತು ಕಠಿಣ ಬದ್ಧತೆಯಲ್ಲಿ ನೀವು ನಮ್ಮ ಮಠವನ್ನು ಸರಿಗಟ್ಟಲಾರಿರಿ." ಎಂದು ಸ್ವಯಂ ಪ್ರತಿಷ್ಠೆಯಲ್ಲಿ ಹೇಳಿದರು.  ಇದನ್ನು ಕೇಳಿಸಿಕೊಂಡ  ಮತ್ತೊಬ್ಬ  ಮಠಾಧಿಪತಿ         "ಹೌದು, ನೀವು ಹೇಳಿದ್ದು ಸರಿಯೇ. ನಿಮ್ಮ ಮಠದ ಬಗ್ಗೆ ನಮಗೆ ಚನ್ನಾಗಿ ಗೊತ್ತು. ನಿಮ್ಮ ವ್ರತ, ನಿಯಮ ಮತ್ತು ಕಠಿಣ ಬದ್ಧತೆಯ ವಿಚಾರ ಪ್ರಶಂಸನೀಯ ಮತ್ತು ಉತ್ಕೃಷ್ಟ.  ಆದರೂ, ಕಲಿಕೆಯ ವಿಚಾರ ಬಂದರೆ ನಮ್ಮ ಮಠಕ್ಕೆ ಯಾವ ಹೋಲಿಕೆಯನ್ನು ಮಾಡಲಾಗದು. ನಮ್ಮ ಮಠದಲ್ಲಿ ಇರುವಷ್ಟು ಶಾಸ್ತ್ರಾಧ್ಯಯನ ಆಚಾರ್ಯರು ಮತ್ತು ಪಂಡಿತರು ಬೇರೆ ಯಾವ ಮಠದಲ್ಲೂ ಇಲ್ಲವೆಂಬ ವಿಚಾರ ನಿಮಗೂ ತಿಳಿದಿರಬೇಕಲ್ಲ!" ಎಂದು ಹಮ್ಮಿನಿಂದ ಹೇಳಿಕೊಂಡರು.   ಈ ಎಲ್ಲ ಮಾತನ್ನು ಕೇಳಿಸಿಕೊಂಡ ಮತ್ತೊಬ್ಬ ಮಠಾಧಿಪತಿ " ನೀವಿಬ್ಬರು ಸರಿಯೇ. ನಿಮ್ಮ ಮಠದ  ವ್ರತ, ನಿಯಮ ಮತ್ತು ಇವರ ಮಠದ  ಶಾಸ್ತ್ರಾಧ್ಯಯನ ಆಚಾರ್ಯರುಗಳ ಬಗ್ಗೆ  ಯಾರೂ ಮಾತಾಡುವ ಹಾಗೆ ಇಲ್ಲ.  ಆದರೂ, ನಮ್ಮ ಮಠದಲ್ಲಿರುವ ಯಾರೊಬ್ಬರಲ್ಲೂ ಸ್ವಪ್ರತಿಷ್ಠೆ ಇಲ್ಲ. ನಮ್ರತೆ, ವಿನೀತ ಮತ್ತು ತಗ್ಗಿ ಬಗ್ಗಿ ನಡೆಯುವ ನಾವುಗಳು  ಉನ್ನತ ಸ್ತಾನದಲ್ಲಿ ಇದ್ದೇವೆ. ಈ ಗುಣಗಳನ್ನು ನಿಮ್ಮ ಮಠದಲ್ಲಿ ಕಾಣಸಿಗುವುದಿಲ್ಲ.  ಇದನ್ನು ನೀವು ಒಪ್ಪುತ್ತಿರ ಅಲ್ಲವೇ?"  ಎಂದು ಅಹಂನಿಂದ ಹೇಳಿದರು.ಮೊದಲು ಹೇಳಿದ ಇಬ್ಬರು ಮಠಾಧಿಪತಿಗಳ ಹೇಳಿಕೆಯಲ್ಲಿ ಅಹಂಕಾರದ ಛಾಯೆ ಇರುವುದು ಅವರ ಮಾತಿನಲ್ಲಿ  ಕಾಣುತ್ತದೆ . ಆದರೆ ಮುರನೆಯ ಮಠಾಧಿಪತಿಯ ಹೇಳಿಕೆಯು ಎಂತಹ ವಿರೋಧಾಭಾಸ. ಸಾತ್ವಿಕ ಗುಣ ಇದೆ ಎನ್ನುವ ವಿಚಾರ ಕೂಡ ಅಹಂಕಾರದಲ್ಲಿದೆ.

                  ಇದನ್ನು, ಕೆಲವರು ಸಾತ್ವಿಕ ಅಹಂಕಾರ ಎನ್ನುತ್ತಾರೆ. ಇಲ್ಲೇ ವಿಚಾರಬೇಧ ಇರುವುದು. ಅಹಂಕಾರದಲ್ಲಿ ಸಾತ್ವಿಕ ಮತ್ತು ಸಾಮಾನ್ಯ ಎಂಬುದಿಲ್ಲ.  ಅಹಂಕಾರ  ಅಹಂಕಾರವೇ! ಹಣವಿದೆ, ರಾಜಕೀಯದಲ್ಲಿ ಬಲವಿದೆ, ಸಮಾಜದಲ್ಲಿ ಉತ್ತಮ ಸ್ಥಾನ ಮಾನಗಳಿವೆ,  ಸೌಂದರ್ಯವಿದೆ, ವಿದ್ಯೆಬುದ್ಧಿ  ಇದೆ, ಉತ್ತಮ ದೇಹಧಾಡ್ಯತೆ  ಇದೆ, ಅಧ್ಯಾತ್ಮದಲ್ಲಿ ಉನ್ನತ ಸಾಧನೆ ಇದೆ, ದೊಡ್ಡ ಸಂತನಾಗಿದ್ದೇನೆ,  ಹೀಗೆ ಇನ್ನು ಹಲವಾರು ರೀತಿಯ  ವಿಂಗಡಣೆಗಳು  ಅಹಂಕಾರದ ಬೀಜಗಳು.  ಈ  'ನಾನು ನನ್ನದು ' ಎಂಬ ಹಮ್ಮು ಒಮ್ಮೆ ಮನದಾಳದಲ್ಲಿ ಹೊಕ್ಕಿದರೆ ಸಾಕು, ಒಂದು ಚಿಕ್ಕ ಬೀಜ ಹೆಮ್ಮರವಾಗಿ ಬೆಳೆದು ಬೇಕೆಂದ ಕಡೆಗೆಲ್ಲ ತನ್ನ ಬಾಹುಳ್ಯವನ್ನು ಚಾಚಿಕೊಂಡು ಬಿಡುತ್ತದೆ. ಇದೊಂದು ರೀತಿಯ ರಕ್ತಬೀಜಾಸುರನ ಹಾಗೆ!  ಈ ಅಹಂಕಾರವು ಯಾವುದೇ ದಿಕ್ಕಿನಿಂದ ಬಂದು ನಮ್ಮನ್ನು ಆವರಿಸಿಬಿಡಬಹುದು. ಅಹಂಕಾರಕ್ಕೆ ಇಂತಹುದೇ ಒಂದು ನಿರ್ಧಿಷ್ಟ ದಾರಿಯಿಲ್ಲ. ಇದು ಯಾವುದೇ ಸನ್ನಿವೇಶವನ್ನು ತನ್ನದಾಗಿಸಿಕೊಂಡು ಗಟ್ಟಿ ಬೇರುಗಳನ್ನು  ಬಿಡಬಲ್ಲದು.

                  ಸಾತ್ವಿಕತೆ ಉದಯವಾಗುವುದು ಅಹಂಕಾರದ ಮರಣದ ನಂತರ. ಆಚಾರ್ಯ ರಜನೀಷರು ಹೇಳುತ್ತಾರೆ. "ಸಾತ್ವಿಕತೆ ಇದ್ದಲ್ಲಿ ಅಹಂಕಾರ ಇರುವುದಿಲ್ಲ.  ಅಹಂಕಾರ ಇರುವಲ್ಲಿ ಸಾತ್ವಿಕತೆಗೆ ಜಾಗವೇ ಇಲ್ಲ. ಒಂದೇ ಜಾಗದಲ್ಲಿ ಎರಡು ಭಾವಗಳು ಇರಲು ಹೇಗೆ ತಾನೇ ಸಾಧ್ಯ?"    ತಮಸ್ಸು, ರಜಸ್ಸು ಮುಂತಾದ ಪರಿಕ್ರಮಗಳೆಲ್ಲ ಮುಗಿದನಂತರ ಸಾತ್ವಿಕತೆ ಕಾಣುತ್ತದೆ.  ಸಾತ್ವಿಕ ನಾಗಿ ಉಳಿಯಲು ಆಹಾರ ವಿಹಾರಗಳ ಜೊತೆಗೆ ನಡೆನುಡಿಗಳಲ್ಲಿ  ಕ್ಷಣ ಕ್ಷಣದಲ್ಲೂ ಎಚ್ಚರನಾಗಿರಬೇಕು. ಶ್ರೀ ಶಂಕರರು ಹೇಳುತ್ತಾರೆ " ಸಾಧಕನು, ಅಧ್ಯಾತ್ಮದಲ್ಲಿ  ಮೇಲೆ ಹೋದಂತ್ತೆಲ್ಲ ದಾರಿ ಕಿರಿದು ಮತ್ತು  ಜಾರಿಕೆಯದು. ಒಮ್ಮೆ ಎಚ್ಚರ ತಪ್ಪಿದರೆ ಸಾಕು ನೇರ ಪ್ರಪಾತವೆ!  ಆದ್ದರಿಂದ ಸಾಧಕನು ತನ್ನೆಲ್ಲ ಮೋಹಭಾವದ ಹೊರೆಯನ್ನು ಕಳಚುತ್ತ ಹೋದರೆ ಭಾರ ಕಡಿಮೆಯಾಗುತ್ತದೆ.  ಹಗುರವಾದಂತೆ ಮೇಲೇರುವುದು ಸುಲಭ".   ಇದನ್ನು ವಿವರಿಸಲು ಶಂಕರರು ಇನ್ನೊಂದು ಉದಾಹರಣೆ ಕೊಡುತ್ತಾರೆ "ಬೆಟ್ಟದ ಮೇಲೆ ನಿಂತು ಮಗು ಚಂಡಿನ  ಆಟ ಅಡುತ್ತಿರುತ್ತದೆ.  ಬಹಳ ಜಾಗರೂಕತೆಯಿಂದ ಆಡುತ್ತದೆ. ಏಕೆಂದರೆ, ಮಗುವಿಗೆ ಗೊತ್ತು,  ಒಮ್ಮೆ ತಪ್ಪು ಮಾಡಿದರೆ ಚಂಡು ಒಂದೇ ಕ್ಷಣದಲ್ಲಿ ಕೆಳಕ್ಕೆ ಬಿದ್ದು ಬಿಡುತ್ತದೆ."  ಹೌದು, ಸಾಧಕನು ಅಹಂಕಾರಕ್ಕೆ ವಶನಾದರೆ ಸತ್ವದ  ಬದಲಿಗೆ ಅಹಂಕಾರ ವೃದ್ಧಿಯಾಗುತ್ತದೆ. ಸತ್ವಗುಣ ಬೆಳೆದಿದೆಯೆಂಬ ಅಹಂಕಾರಕ್ಕೆ ಮೊದಲು ಬೀಳುತ್ತಾನೆ.    "ಅಹಂಕಾರ ಉದಯವಾಗಿದ್ದು ಎಲ್ಲಿಂದ   ಎಂಬುದನ್ನು ಮೊದಲು ಪ್ರಶ್ನೆ ಮಾಡು. ನಾನು ಎಂಬುದೇ ಅಹಂಕಾರದ ಬೀಜ. ಈ  'ನಾನು'  ದೇಹವೋ? ಆತ್ಮವೋ? ಎಂಬುದನ್ನು ವಿಚಾರಮಾಡು. " ಎನ್ನುತ್ತಾರೆ ಭಗವಾನ್ ರಮಣರು.

                  "ಅಹಂಕಾರದ ಮುಕ್ತಿಗಾಗಿ ಬಯಸುವವನು ವರ್ತಮಾನದಲ್ಲಿ ಬದುಕಲು ಪ್ರಾರಂಭಿಸಬೇಕು.  ಅವನಿಗೆ ನಿನ್ನೆಗಳು ಸತ್ತಿವೆ, ನಾಳೆಗಳು ಬೇಕಾಗಿಲ್ಲ.  ಇಂದಿಗೆ ಬದುಕುವವನಿಗೆ ಈ ನಾಳೆಗಳು ಅನಿವಾರ್ಯವಲ್ಲ.  ಇಂದಿಗೆ ಬದುಕಲು ಪ್ರಾರಂಭ ಮಾಡಿದಾಗ ಬೇಕುಗಳು ಕಡಿಮೆಯಾಗುತ್ತವೆ.  ಈ ಬೇಕುಗಳೇ ನಾಳೆಯನ್ನು ಸೃಷ್ಟಿ ಮಾಡುವುದು". ಎನುತ್ತಾರೆ ಡಿ ವಿ ಜಿ .
" ಅಹಂಕಾರ ಖಂಡಿತವಾಗಿಯೂ ನಿನ್ನ ಮಿತ್ರನಲ್ಲ,  ಎಂದಿಗೂ ಅವನು ನಿನ್ನ ಶತ್ರುವೇ! ಈ ಶತ್ರುವನ್ನು  ಬೇರು ಸಮೇತ ಕಿತ್ತುಬಿಡು. ಇದು ವಾಸಿಯಾಗುವ  ರೋಗವಲ್ಲ, ಇದಕ್ಕೆ ಯಾವ ಔಷಧಿಯು ಇಲ್ಲ.   ಶಸ್ತ್ರ ಚಿಕಿತ್ಸೆಯೇ ಆಗಬೇಕು. ಮನದಾಳದಿಂದ ಕಿತ್ತುಬಿಡು." ಎನ್ನುತ್ತಾರೆ ಆಚಾರ್ಯ ರಜನೀಷರು. 

           ತಿಮ್ಮಗುರು ಹೀಗೆ ಹೇಳುತ್ತಾರೆ.

            ದಿವಸದಿಂ ದಿವಸಕ್ಕೆ, ನಿಮಿಷದಿಂ ನಿಮಿಷಕ್ಕೆ|  ಭವಿಷಿಯವ ಚಿಂತಿಸದೆ ಬದುಕ ನೂಕುತಿರು||
            ವಿವರಗಳ ಜೋಡಿಸುವ ಯಜಮಾನ ಬೇರಿಹನು|    ಸವೆಸು ನೀಂ ಜನುಮವನು ಮಂಕುತಿಮ್ಮ||  ೬೮೨ ||

                  ಈ ಕ್ಷಣವೇ ಅತ್ಯಂತ ಮದುರ. ಭಗವಂತ ಈ ಕ್ಷಣದಲ್ಲಿ ಏನೇನು ಕರುಣಿಸಿದ್ದಾನೋ ಅದು ಮಾತ್ರ ನನ್ನ ಪಾಲಿನ ಭಿಕ್ಷೆ, ಇದನ್ನು ಸಂಪೂರ್ಣವಾಗಿ ಆನಂದದಿಂದ ಅನುಭವಿಸುವ, ಅಹಂಕಾರದಿಂದ ಮುಕ್ತನಾಗಿ ದಿನನಿತ್ಯದಲ್ಲಿ  ಬದುಕುವ ಮನಸು ನೀಡಿ ಕರುಣಿಸೋ ಎಂದು ಭಗವಂತನಲ್ಲಿ ಅನನ್ಯ ಪ್ರಾರ್ಥನೆ. 
                   
ಹೆಚ್ ಏನ್ ಪ್ರಕಾಶ್ 
10 02 2012

February 1, 2012

ಶ್ರೀ ರಮಣ ಮಹರ್ಷಿಗಳ ಸಂದೇಶ--ಅನನ್ಯ ಶರಣಾಗತಿ

Courtesy: Mountain Path
ಶ್ರೀ ರಮಣ ಮಹರ್ಷಿಗಳ ಸಂದೇಶ--ಅನನ್ಯ ಶರಣಾಗತಿ 

                             ಸಂಪೂರ್ಣ ಶರಣಾಗತಿಯ ಬಗ್ಗೆ ಹಲವು ರೀತಿಯ ಅಭಿಪ್ರಾಯಗಳಿವೆ. ಅದರಲ್ಲಿ ಕೆಲವು ಮೂಡನಂಬಿಕೆಯು ಸಹ ಸೇರಿದೆ. ಕೆಲವೊಂದು ಸಂಶಯಗಳಿಗೆ ಸರಿಯಾದ ಉತ್ತರ ದೊರೆಯದೆ ಇದ್ದಾಗ ಶರಣಾಗತಿಯ ಬಗ್ಗೆ ಶ್ರದ್ಧೆ ಕಡಿಮೆಯಾಗುತ್ತದೆ ಅಥವಾ ತಪ್ಪು ಗಹಿಕೆಯಿಂದ ಕೂಡಿರುತ್ತದೆ. ಇಂತಹ ಸಂದರ್ಭದಲ್ಲಿ ಒಬ್ಬ ಭಕ್ತರು ಶ್ರೀ ಭಗವಾನರಲ್ಲಿ ಈ ರೀತಿಯಾಗಿ ಪ್ರಶ್ನೆ ಇಟ್ಟರು.

                             "ಭಗವಂತನಲ್ಲಿ ಸಂಪೂರ್ಣ ಶರಣಾಗಿ, ಯಾವುದರ ಬಗ್ಗೆಯು ಚಿಂತಿಸದೆ ಇದ್ದಲ್ಲಿ, ಅಂತಹವರಿಗೆ ಭಗವಂತನಿಂದಲೇ  ಎಲ್ಲವೂ ಸಿಕ್ಕುತ್ತದೆ ಎಂದು ಒಂದು ನಂಬಿಕೆ.  ಒಂದೇ ಕಡೆ ಕೂತು ಭಗವಂತನ ಧ್ಯಾನದಲ್ಲೇ ಸದಾ ಕಾಲ ಮುಳುಗಿ, ಎಲ್ಲ ಯೋಚನೆಗಳನ್ನು ತೊರೆದು ಅಂದರೆ,  ದೇಹ ಪೋಷಣೆಗೆ ಅವಶ್ಯಕವಾಗಿ ಬೇಕಾದ ಅನ್ನಾಹಾರ, ನೀರಿನ ಯೋಚನೆಯನ್ನು ಬಿಟ್ಟು ಕೂತುಬಿಡುವುದೇ?  ದೇಹಾರೋಗ್ಯ ಕೆಟ್ಟು ಹೋದಂತಹ ಸಮಯದಲ್ಲಿ, ಅವಶ್ಯವಿರುವ ಔಷಧಿ ಮತ್ತು ಶಿಶ್ರುಷೆಯ ಬಗ್ಗೆ ಯೋಚಿಸದೆ ಭಗವಂತನಲ್ಲೇ ಚಿಂತಿಸುತ್ತಾ ಕೂರಬೇಕೆ?"

                             "ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಹೇಳುತ್ತಾನೆ: " ಯಾವ ಪುರುಷನು ಎಲ್ಲಾ ಆಶೆ ಆಕಾಂಕ್ಷೆಗಳನ್ನು ತೊರೆದು, ಮಮತಾರಹಿತ, ಅಹಂಕಾರರಹಿತ ಹಾಗು ಇಚ್ಚರಹಿತನಾಗಿ ವರ್ತಿಸುತ್ತಾನೋ ಅವನು ಶಾಂತಿಯನ್ನು ಪಡೆಯುತ್ತಾನೆ".(2 :71 )  ಅಂದರೆ, ಎಲ್ಲಾ ಆಸೆಯನ್ನು ಬಿಡಬೇಕೆಂದು ಹೇಳಿರುತ್ತಾನೆ. ಆದ್ದರಿಂದ ನಾವು ಸಂಪೂರ್ಣವಾಗಿ ಭಗವಂತನ ಧ್ಯಾನದಲ್ಲಿ ಮುಳುಗಿ, ಏನನ್ನು ಕೇಳದೆ, ಭಗವಂತನ ಅನುಗ್ರಹದಲ್ಲಿ ಸಿಗುವಂತಹ ಅನ್ನಾಹಾರ ನೀರು ಮಾತ್ರ ಸೇವಿಸುತ್ತ ಕೂಡಬೇಕೇ? ಅಥವಾ ನಾವು ಈ ಬಗ್ಗೆ ಸ್ವಲ್ಪ ಪ್ರಯತ್ನವನ್ನು ಮಾಡಬೇಕೆ? ಭಗವನ್, ದಯಮಾಡಿ    ಶರಣಾಗತಿಯ    ರಹಸ್ಯವನ್ನು  ತಿಳಿಸಿ  ಕೊಡಬೇಕಾಗಿ  ಪ್ರಾರ್ಥನೆ." 

                               ಭಗವಾನರು ನಸುನಕ್ಕು ಉತ್ತರಿಸುತ್ತಾರೆ :  "ಅನನ್ಯ    ಶರಣಾಗತಿ ಎಂದರೆ  ಯಾವ   ಯೋಚನೆಗಳಿಗೂ   ಅಂಟಿಕೊಳ್ಳದೆ  ಭಗವಂತನಲ್ಲಿ ಧ್ಯಾನಿಸುತ್ತಾ ಇರುವುದು  ಎಂದು  ಅರ್ಥ .  ಇದರಲ್ಲಿ  ಸಂಶಯವೇ  ಇಲ್ಲ. . ಆದರೆ , ದೇಹದ  ಅವಶ್ಯಕತೆಗೆ  ಬೇಕಾಗಿರುವ  ಅನ್ನಾಹಾರ ನೀರುಗಳನ್ನೂ  ತ್ಯಜಿಸಬೇಕು   ಎಂದು  ಅರ್ಥವಲ್ಲ .    ಪ್ರಶ್ನೆ ಮಾಡಿದವರ ಕಡೆಗೆ ಕೈತೋರಿಸಿ, ಈಗ  ಅವರು   ಕೇಳುತ್ತಿದ್ದಾರೆ " ನಾನು  ಏನನ್ನು ದೇವರನ್ನು  ಕೇಳದೆ, ಭಗವಂತ  ಏನನ್ನು ದಯಪಾಲಿಸುತ್ತನೋ  ಅದನ್ನು  ಮಾತ್ರ ತಿನ್ನಬೇಕೆ ?   ಅಥವಾ ನಾನು  ಏನಾದರು  ಪ್ರಯತ್ನ   ಮಾಡಬೇಕೆ?" ಎಂದು. " ಅವರು ಹೇಳಿದಂತೆ ಹಾಗೆಯೇ ಆಗಲಿ, ಈಗ ನಾವೇನು ತಿನ್ನಬೇಕೋ ಅದು ತನ್ನಷ್ಟಕ್ಕೆ ತಾನೇ ಬಂದಿದೆ ಎಂದೇ  ಇಟ್ಟುಕೊಳ್ಳೋಣ. ಆದರೆ, ಆಗಲೂ  ಕೂಡ ಊಟ ಮಾಡುವವರು ಯಾರು?  ಆಯಿತು,  ಯಾರೋ ಬಂದು ನಮ್ಮ ಬಾಯಿಗೆ ತುತ್ತು ಹಾಕುತ್ತಾರೆ ಎಂದುಕೊಂಡರೂ , ಕಡೇಪಕ್ಷ ನಾವು ಅದನ್ನು ನುಂಗಬೇಕಲ್ಲವೇ? ಅಲ್ಲಿ ನಮ್ಮ ಪ್ರಯತ್ನ ಇಲ್ಲವೇ? 

                              ಅವರು ಕೇಳುತ್ತಾರೆ " ನಾನೇನಾದರು ಅನಾರೋಗ್ಯ ಪೀದಿತನಾದರೆ ನಾನು ಔಷದಿ ತೆಗೆದುಕೊಳ್ಳಬೇಕೆ  ಅಥವ ನಾನು ನನ್ನ ಆರೋಗ್ಯ ಮತ್ತು ಅನಾರೋಗ್ಯವನ್ನು ಭಗವಂತನ ಕೈಯಲ್ಲಿ ಹಾಕಿ ಸುಮ್ಮನೆ ಕೂಡಬೇಕೇ?"    ಇದಕ್ಕೆ  ಶ್ರೀ ಶಂಕರರು ಬರೆದಿರುವ ಸಾಧನಾ ಪಂಚಕಂನಲ್ಲಿ, ಶಂಕರರು ಹೇಳುತ್ತಾರೆ, "ಈ ಹಸಿವು ಎನ್ನುವ ರೋಗಕ್ಕೆ ಭಿಕ್ಷೆಯಿಂದ ಬಂದ ಆಹಾರವನ್ನು ಸೇವಿಸಬೇಕು." ಆದರೆ, ಈ ಭಿಕ್ಷೆಯನ್ನು ಪಡೆಯಲಿಕ್ಕಾದರು ಹೊರಗೆ ಹೋಗಬೇಡವೇ? ಇಲ್ಲೂ ಪ್ರಯತ್ನ ಬೇಡವೇ?    ಎಲ್ಲರು ಕಣ್ಣು ಮುಚ್ಚಿ ಕುಳಿತು ತಾನಿರುವಲ್ಲಿಗೆ ಆಹಾರಾದಿಗಳು ಬರಲಿ ಎಂದು ಕಾಯುತ್ತ ಕೂತರೆ ಈ ಪ್ರಪಂಚ ನಡೆಯುವುದಾದರು ಹೇಗೆ?  ಆದ್ದರಿಂದ, ಪ್ರತಿಯೊಬ್ಬರೂ ತಮ್ಮ ಸಂಪ್ರದಾಯಕ್ಕೆ ಬಂದಿರುವ ಕುಲಕಸುಬನ್ನು ಕೈಗೊಳ್ಳಬೇಕು. ಆದರೆ,  ಇದೆಲ್ಲವನ್ನು ನಾನು ಮಾಡುತ್ತಿದ್ದೇನೆಂಬ ಭಾವದಿಂದ ಮುಕ್ತನಾಗಿರಬೇಕು.  ಇಲ್ಲಿ ನಾನು ಮಾಡುತ್ತಿರುವೆ ಎಂಬುದೇ ನಮ್ಮನ್ನು ಕಟ್ಟಿಹಾಕಿ ಬಿಡುವುದು. ಆದ್ದರಿಂದ ಈ ಭಾವದಿಂದ ಹೊರಬರುವಂತಹ ವಿಧಾನವನ್ನು ಅರಿಯುವುದು ಅವಶ್ಯವಾಗಿದೆ.  ಅದನ್ನು ಬಿಟ್ಟು,  ರೋಗಕ್ಕೆ ಔಷದಿ ತೆಗೆದುಕೊಳ್ಳಬೇಕಾ? ಹಸಿವೆಯಾದಾಗ ಊಟ ಮಾಡಬೇಕಾ? ಎಂದೆಲ್ಲ ಸಂಶಯದ ಪ್ರಶ್ನೆಗಳನ್ನು ಕೇಳಬಾರದು. ಈ ರೀತಿಯ ಸಂಶಯದ ಪ್ರಶ್ನೆಗಳು ಬರಲು ಪ್ರಾರಂಭವಾದರೆ  ಅದಕ್ಕೆ ಕೊನೆಮೊದಲಿಲ್ಲ.   ' ನಂಗೆ ನೋವಾದರೆ ನರಳಬೇಕೆ ಬಿಡಬೇಕೇ? ನಾನು ಉಸಿರು ತೆಗೆದುಕೊಂಡ ಮೇಲೆ  ಉಸಿರು ಬಿಡಬೇಕೋ ಹಾಗೆ ಇರಬೇಕೋ?     ಎಂಬೆಲ್ಲ ಪ್ರಶ್ನೆಗಳು ಬಂದು ಆವರಿಸುತ್ತವೆ."

                                   "ಈಶ್ವರನೆಂದು  ಕರೆಯಿರಿ,  ಕರ್ಮವೆಂದು ಕರೆಯಿರಿ, ಕರ್ತನೆಂದು ಕರೆಯಿರಿ, ಏನೆಂದು ಕರೆದರೂ ಅದು ಪ್ರತಿಯೊಬ್ಬರ ಮಾನಸಿಕ ಬೆಳವಣಿಗೆಯಂತೆಯೇ ಈ ಪ್ರಪಂಚದಲ್ಲಿ ಇರುತ್ತದೆ. ನಾವು ನಮ್ಮ ಜವಾಬ್ದಾರಿಗಳನ್ನು ಆ ಉನ್ನತ ಶಕ್ತಿಯ ಮೇಲೆ ಹಾಕಿದರೆ ಅದು ಹೇಗೆ ನಡೆಯಬೇಕೋ ಹಾಗೆ ನಡೆಸಿಕೊಳ್ಳುತ್ತದೆ. ನಾವು ಈ ಭೂಮಿಯ ಮೇಲೆ ನಡೆಯುತ್ತೇವೆ. ಹೀಗೆ ಮಾಡುವಾಗ ನಾವು ಒಂದು ಕಾಲನ್ನು ಎತ್ತುವ ಮುಂಚೆ ಇನ್ನೊಂದು ಕಾಲನ್ನು ಎಲ್ಲಿ ಇಟ್ಟಿರಬೇಕು ಎಂದೆಲ್ಲ ಚಿಂತಿಸಿರುವುದಿಲ್ಲ. ತನ್ನಷ್ಟಕ್ಕೆ ತಾನೇ ಅದು ನಡೆಯುವುದಿಲ್ಲವೆ? ಅದೇ ರೀತಿ ಉಸಿರಾಟವು ಕೂಡ ತನ್ನಷ್ಟಕ್ಕೆ ತಾನೇ ನಡೆಯುತ್ತದೆ.ಇದಕಾಗಿ ಯಾವರೀತಿಯ ವಿಶೇಷ ಪರಿಶ್ರಮವನ್ನು ಹಾಕಬೇಕಿಲ್ಲ. ಇದೆ ರೀತಿಯಲ್ಲಿ ನಮ್ಮ ಜೀವನ ಕೂಡ. ನಾವು ಏನಾದರು ಕೊಡಬೇಕಾದರೆ ಅಥವಾ ಬಿಡಬೇಕಾದರೆ ನಾವಿಷ್ಟಬಂದಂತೆ ಮಾಡಲಾದಿತೆ?  ಈ ಜಗತ್ತಿನಲ್ಲಿ ಹೆಚ್ಚಿನ ಸಂಖ್ಯೆಯ ವಿಚಾರಗಳು ನಮ್ಮ ಗಮನಕ್ಕೆ ಬಾರದ ರೀತಿಯಲ್ಲಿ ನಡೆದು ಹೋಗಿರುತ್ತವೆ. ಭಗವಂತನಲ್ಲಿ ಸಂಪೂರ್ಣ ಶರಣಾಗತಿ ಎಂದರೆ ಎಲ್ಲ ಯೋಚನೆಗಳನ್ನು ಬಿಟ್ಟು ಭಗವಂತನಲ್ಲಿ ಮನಸನ್ನು ಕೇಂದ್ರೀಕರಿಸುವುದು. ನಾವು ನಮ್ಮ ಮನಸನ್ನು ಅವನಲ್ಲಿ ಕೇಂದ್ರೀಕರಿಸಿದರೆ ಬೇರೆ ವಿಚಾರಗಳು ಮಾಯವಾಗಿ ಬಿಡುತ್ತವೆ. ಕಾಯ, ವಾಚ, ಮನಸು ಆ ಭಗವಂತನಲ್ಲಿ ಸೇರಿಹೊದರೆ ನಮ್ಮೆಲ್ಲ ಜೀವನದ ಚಿಂತೆಗಳ ಹೊರೆಯು ಆತನ ಮೇಲಕ್ಕೆ ವರ್ಗಾವಣೆ ಆಗುತ್ತದೆ."

                              "ಆದರೆ , ಇಲ್ಲಿ ಮುಖ್ಯ ತೊಂದರೆ ಏನೆಂದರೆ,  ಮನುಷ್ಯ ತಾನೆ ಎಲ್ಲವನ್ನು ಮಾಡುವವನು ಎಂದು ಯೋಚಿಸುತ್ತಾನೆ. ಇದು ತಪ್ಪು. ಇದೆಲ್ಲವನ್ನು ಅಗೋಚರವಾದ ಅಪಾರ ಚೈತನ್ಯಶಕ್ತಿ ಮಾಡಿಸುತ್ತಿದೆ, ಮನುಷ್ಯ ಕೇವಲ ಆ ಶಕ್ತಿಯ ಉಪಕರಣ. ಇದನ್ನು ಮನುಷ್ಯ ಒಪ್ಪಿಕೊಂಡರೆ ಎಲ್ಲ ತೊಂದರೆಗಳಿಂದ ಮುಕ್ತನಾಗುತ್ತಾನೆ,ಇಲ್ಲವಾದಲ್ಲಿ ಎಲ್ಲವನ್ನು ತಾನೇ ಎದುರಿಸಬೇಕಾಗುತ್ತದೆ.  ನೋಡಿ, ಒಂದು ದೇವಸ್ತಾನದ ಗೋಪುರದ ಕೆಳಭಾಗದ ಕೆತ್ತನೆಯ ಶಿಲ್ಪವನ್ನು ನೋಡುವಾಗ ಆ ಗೋಪುರದ ಎಲ್ಲಭಾರವನ್ನು ಆ ಶಿಲ್ಪದಲ್ಲಿ ಇರುವವನೇ ಹೆಗಲ ಮೇಲೆ ಹೊತ್ತಂತೆ ಭಾಸವಾಗುತ್ತದೆ.  ಶಿಲ್ಪಿಯು ಶಿಲ್ಪದಲ್ಲಿ ಎಲ್ಲ ರೀತಿಯಲ್ಲಿ ಭಾರ ಹೊತ್ತಿ ರು ವವನ ಮುಖಚರ್ಯೆ ಮತ್ತು ಭಂಗಿಯನ್ನು ಅಷ್ಟೇ  ಚಂದವಾಗಿ ಮೂಡಿಸಿರುವ ಕಾರಣ, ನಿಜದಲ್ಲಿ ಕೂಡ ಅದರ ಮೇಲೆ ಭಾರ ಹೊತ್ತಿರುವುದೇನೋ ಎಂಬಂತೆ ಭಾಸವಾಗುತ್ತದೆ.  ಈಗ ಯೋಚಿಸಿನೋಡಿ ಇದು ಸತ್ಯವೇ? ಭೂಮಿಯೊಳಗಿಂದ  ಕಟ್ಟಲಾದ  ಗಟ್ಟಿ ತಳಪಾಯದೊಂದಿಗೆ ಗೋಪುರದತನಕ  ನಿರ್ಮಿತವಾಗಿದೆ ಮತ್ತು ಈ ತಳಪಾಯದ ಮೇಲೆ ಈ ಇಡಿ ಕಟ್ಟಡ ನಿಂತಿದೆ ಎನ್ನುವುದು ಸತ್ಯ.   ಶಿಲ್ಪವೂ ಕೂಡ ಈ ಕಟ್ಟಡದ ಒಂದು ಭಾಗವೇ ಹೊರತು ಬೇರೆಯಲ್ಲ. ಶಿಲ್ಪದಲ್ಲಿ ನೋಡಿದಂತೆ ಇಡೀ ಕಟ್ಟಡದ ಭಾರವನ್ನು ಹೊತ್ತಿದೆಯೆಂದು ಭಾವಿಸಿದರೆ ಅದು ಹಾಸ್ಯಾಸ್ಪದ ಎನಿಸುವುದಿಲ್ಲವೇ? ಇದೆ ರೀತಿ ಮನುಷ್ಯನು ಕೂಡ ಅಪಾರವಾದ ಚೈತನ್ಯ ಶಕ್ತಿಯನ್ನು ಮರೆತು,  ತಾನೇ ಎಲ್ಲವನ್ನು ಮಾಡುತ್ತಿದ್ದೇನೆಂದು ಕೊಳ್ಳುವುದು ಹಾಸ್ಯಾಸ್ಪದ."

01 02 2012                             ಓಂ ನಮೋ ಭಗವತೇ ರಮಣಾಯ.